• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Radhika Apte: ಸಿನಿಮಾದಲ್ಲಿ ಹಿಂಗೆಲ್ಲ ಆಗುತ್ತಾ? ಬಾಲಿವುಡ್​ನ 'ನಗ್ನ' ಸತ್ಯ ತೆರೆದಿಟ್ಟ ರಾಧಿಕಾ ಆಪ್ಟೆ

Radhika Apte: ಸಿನಿಮಾದಲ್ಲಿ ಹಿಂಗೆಲ್ಲ ಆಗುತ್ತಾ? ಬಾಲಿವುಡ್​ನ 'ನಗ್ನ' ಸತ್ಯ ತೆರೆದಿಟ್ಟ ರಾಧಿಕಾ ಆಪ್ಟೆ

ರಾಧಿಕಾ ಆಪ್ಟೆ

ರಾಧಿಕಾ ಆಪ್ಟೆ

ಸಾಮಾನ್ಯ ಜನರಿಗೆ ಸಿನಿಮಾರಂಗ ಎಂದಾಕ್ಷಣ ಒಂದು ಕಲರ್ ಫುಲ್ ಲೋಕ ಎಂಬ ಭಾವನೆ ಇರುತ್ತದೆ. ಆದರೆ ಅದರಲ್ಲಿಯೂ ಅನೇಕ ಕರಾಳ ಮುಖಗಳಿವೆ ಎಂದು ಅನೇಕರಿಗೆ ತಿಳಿದಿರುವುದಿಲ್ಲ. ಅದರಲ್ಲಿಯೂ ಬಾಲಿವುಡ್​ ಚಿತ್ರರಂಗದಲ್ಲಿ ಈ ರೀತಿಯ ವಿವಾದಗಳು ಹೆಚ್ಚಿರುತ್ತದೆ.

  • Share this:

ಸಾಮಾನ್ಯ ಜನರಿಗೆ ಸಿನಿಮಾ ರಂಗ ಎಂದಾಕ್ಷಣ ಒಂದು ಕಲರ್ ಫುಲ್ ಲೋಕ ಎಂಬ ಭಾವನೆ ಇರುತ್ತದೆ. ಆದರೆ ಅದರಲ್ಲಿಯೂ ಅನೇಕ ಕರಾಳ ಮುಖಗಳಿವೆ ಎಂದು ಅನೇಕರಿಗೆ ತಿಳಿದಿರುವುದಿಲ್ಲ. ಅದರಲ್ಲಿಯೂ ಬಾಲಿವುಡ್​ ಚಿತ್ರರಂಗದಲ್ಲಿ ಈ ರೀತಿಯ ವಿವಾದಗಳು ಹೆಚ್ಚಿರುತ್ತದೆ. ಯುವ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ಬೆನ್ನಲ್ಲೇ ಬಾಲಿವುಡ್ ವಲಯದಲ್ಲಿ ನೆಪೋಟಿಸಂ (Nepotism) ಎಂಬ ಮಾತುಗಳು ಹೆಚ್ಚು ಕೇಳಿಬಂದಿತ್ತು. ಅದೇ ರೀತಿ ಇದೀಗ ಮತ್ತೊಂದು ಕಟು ಸತ್ಯವು ಹೊರಬಂದಿದೆ. ಹೌದು, ನಟನೆ ಹಾಗೂ ವಿವಾದಗಳಿಂದ ಸುದ್ದಿಯಲ್ಲಿರುವ ಬಾಲಿವುಡ್ (Bollywood) ನಟಿ ರಾಧಿಕಾ ಆಪ್ಟೆ (Radhika Apte) ಸದ್ಯ ಮತ್ತೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.


ಈ ಬಾರಿ ಆಪ್ಟೆ ಬಾಲಿವುಡ್​ ಅಂಗಳದ ಕರಾಳ ಸತ್ಯವೊಂದನ್ನು ತಿಳಿಸಿದ್ದು, ಬಾಲಿವುಡ್​ ಚಿತ್ರರಂಗ ತಲೆ ತಗ್ಗಿಸುವಂತೆ ಆಗಿದೆ. ತಮ್ಮ ಚಿತ್ರಂಗದ ಆರಂಭದ ದಿನಗಳಲ್ಲಿ ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದು, ಫಿಲ್ಮ್ ಇಂಡಸ್ಟ್ರಿಯಲ್ಲಿ (Film industry) ಉಳಿಯಲು ಏನೆಲ್ಲಾ ಮಾಡಬೇಕೆಂದು ಒತ್ತಡ ಹೇರಲಾಗುತ್ತದೆ ಎಂಬ ಸತ್ಯವನ್ನು ಬಯಲಿಗೆಳೆದಿದ್ದಾರೆ.


ಬಾಲಿವುಡ್​ನ ಕರಾಳ ಸತ್ಯ ತಿಳಿಸಿದ ಆಫ್ಟೆ:


ಇನ್ನು, ಬಾಲಿವುಡ್​ನ ಕರಾಳ ಮುಖವನ್ನು ಬಯಲಿಗೆಳೆದ ರಾಧಿಕಾ ಆಫ್ಟೆ, ಸ್ತನ, ಮೂಗು, ಕಾಲು ಸೇರಿದಂತೆ ದೇಹದ ಭಾಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವಂತೆ ಅನೇಕರು ಹೇಳಿದ್ದರು ಎಂದು ತಿಳಿಸಿದ್ದಾರೆ. ಬಾಲಿವುಡ್​ ನಲ್ಲಿ ಹೆಣ್ಣುಮಕ್ಕಳನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ. ಸೌಂದರ್ಯದ ಹೆಸರಿನಲ್ಲಿ ನಟಿಯರ ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದ್ದಾರೆ.


ಇದನ್ನೂ ಓದಿ: Rashmika Mandanna: ರಶ್ಮಿಕಾಗೆ ರಣಬೀರ್ ಕಪೂರ್ ಏನಂತ ಕರೀತಾರಂತೆ ಗೊತ್ತಾ? ಈ ಬಗ್ಗೆ ಶ್ರೀವಲ್ಲಿಯೇ ಹೇಳ್ತಾರೆ ಕೇಳಿ


ಸ್ತನಗಳ ಸರ್ಜರಿ ಮಾಡಿಸಿಕೊಳ್ಳುವಂತೆ ಹೇಳಿದ್ದರು:


ಬಾಲಿವುಡ್​ ನಲ್ಲಿನ ಕೆಲ ಕೆಟ್ಟ ವಿಚಾರಗಳನ್ನು ತಿಳಿಸಿರುವ ರಾಧಿಕಾ ಆಪ್ಟೆ, ತಮಗಾಗಿರುವ ಮುಜುಗರದ ಅನುಭವಗಳನ್ನು ತೊಡಿಕೊಂಡಿದ್ದಾರೆ. ಅದರಂತೆ, ‘ತಾನು ಮೊದಲು ಚಿತ್ರರಂಗಕ್ಕೆ ಬಂದಾಗ ನನ್ನ ಸೌದರ್ಯದ ಬಗ್ಗೆ ತೀರಾ ಕಳಪೆಯಾಗಿ ಮಾತನಾಡುತ್ತಿದ್ದರು. ಅಲ್ಲದೇ ನನ್ನ ಮೇಳೆ ಸಾಕಷ್ಟು ಒತ್ತಡಗಳನ್ನೂ ಹಾಕಲಾಗಿತ್ತು. ನನ್ನ ದೇಹದ ಅನೇಕ ಭಾಗಗಳಿಗೆ ಸರ್ಜರಿ ಮಾಡಿಸಿಕೊಳ್ಳುವಂತೆ ಹೇಳಿದ್ದರು.


ಮೊದಲ ಬಾರಿ ನನ್ನ ಮೂಗನ್ನು ಬದಲಾಯಿಸಿಕೊಳ್ಳುವಂತೆ ಹೇಳಿದ್ದರು. ನಂತರದಲ್ಲಿ ಸ್ತನಗಳ ಸರ್ಜರಿ ಮಾಡಿಸಿಕೊಳ್ಳುವಂತೆ ಹಾಗೂ ಕಾಲು, ದವಡೆ, ಮುಖ ಸೇರಿದಂತೆ ದೇಹದ ಅನೇಕ ಭಾಗಗಳನ್ನು ಸರ್ಜರಿಗೆ ಒಳಪಡಿಸುವಂತೆ ಒತ್ತಡ ಹೇರಿದ್ದರು‘ ಎಂದು ತಮಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Sai Pallavi: 23ಕ್ಕೆ ವಿವಾಹ, 30ಕ್ಕೆ ಮಕ್ಕಳು ಅಂದುಕೊಂಡಿದ್ರಂತೆ ಇವ್ರು! ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಸಾಯಿ ಪಲ್ಲವಿ


ಆಪ್ಟೆ ನಗ್ನ ವಿಡಿಯೋ ಲೀಕ್ ನಿಂದ ವಿವಾದ:


ರಾಧಿಕಾ ಆಪ್ಟೆ ಅವರ ಮೊದಲ ಸಿನಿಮಾ (Radhika Apte Debut) 2005ರಲ್ಲಿ ವಾಹ್​ ಲೈಸ್​ ಹೋ ತೋ ಐಸಿ ಮೂಲಕ ಬಾಲಿವುಡ್​ ಎಂಟ್ರಿ ಆಯಿತು. 2016ರಲ್ಲಿ ರಿಲೀಸ್​ ಆದ ಪಾರ್ಡ್ಚ್​ ಸಿನಿಮಾದಿಂದ ಅವರ ನಗ್ನ ವಿಡಿಯೋ ಲೀಕ್​ ಆಗಿ ವಿವಾದಕ್ಕೀಡಾಗಿದ್ದರು. ಇನ್ನು,  2017ರಲ್ಲಿ ಕ್ಲೀನ್ ಶೇವ್​ ಸಿನಿಮಾದ ವಿಡಿಯೋ ಸಹ ಲೀಕ್​ ಆಗಿತ್ತು. ಈ ವಿಡಿಯೋದಲ್ಲಿರುವುದು ತಾನಲ್ಲ ಎಂದು ಹೇಳಿದ್ದ ರಾಧಿಕಾ, ಇತ್ತೀಚೆಗೆ ಗ್ರಾಜಿಯಾ ನಿಯತಕಾಲಿಕೆಗೆ ನೀಡಿದ್ದ ಸಂದರ್ಶನದಲ್ಲೂ ಇದನ್ನೇ ಹೇಳಿದ್ದರು.


ಫಾರನ್ಸಿಕ್ ಚಿತ್ರದಲ್ಲಿ ಬ್ಯೂಸಿ:


ಇನ್ನು, ರಾಧಿಕಾ ಆಪ್ಟೆ ಸದ್ಯ ಫಾರನ್ಸಿಕ್ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಚಿತ್ರವು ಜೂನ್ 23ರಂದು ಜಿ5 ಓಟಿಟಿ ಅಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪ್ರಾಚಿ ಸಾವಂತ್ ಸಹ ನಟಿಸಿದ್ದಾರೆ.

Published by:shrikrishna bhat
First published: