RIP Mohit Baghel: ಕ್ಯಾನ್ಸರ್​ನಿಂದಾಗಿ 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಬಾಲಿವುಡ್​ ನಟ..!

Bollywood Comedian Mohit Baghel: ಮೋಹಿತ್​ ಬಘೆಲ್​ ಬಾಲ ಕಲಾವಿದನಾಗಿ ಎಂಟ್ರಿ ಕೊಟ್ಟ ಹಾಸ್ಯ ನಟ. ಸಲ್ಮಾನ್​ ಖಾನ್​ ಅಭಿನಯದ ರೆಡಿ ಸಿನಿಮಾದ ಮೂಲಕವೇ ಬಣ್ಣದ ಲೋಕಕ್ಕೆ ಹಾಸ್ಯ ನಟನಾಗಿ ಪರಿಚಯವಾದವರು. ಸಲ್ಮಾನ್​ ಖಾನ್​ ಸಿನಿಮಾದಲ್ಲಿ ಶಾಲಾ ಬಾಲಕನ ಪಾತ್ರದಲ್ಲಿ ಉದ್ದುದ್ದ ಕೂದಲು ಬಿಟ್ಟು ರಂಜಿಸಿದ್ದ ನಟ ಮೋಹಿತ್​.

Anitha E | news18-kannada
Updated:May 23, 2020, 7:55 PM IST
RIP Mohit Baghel: ಕ್ಯಾನ್ಸರ್​ನಿಂದಾಗಿ 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಬಾಲಿವುಡ್​ ನಟ..!
ಸಲ್ಮಾನ್​ ಖಾನ್​ ಹಾಗೂ ಮೋಹಿತ್​ ಬಘೆಲ್​
  • Share this:
ಕ್ಯಾನ್ಸರ್​ನಿಂದಾಗಿ ಕೆಲವೇ ದಿನಗಳ ಹಿಂದೆಯಷ್ಟೆ ಹಿರಿಯ ನಟರಾದ ರಿಷಿ ಕಪೂರ್​ ಹಾಗೂ ಇರ್ಫಾನ್ ಖಾನ್​ ಅವರನ್ನು ಕಳೆದುಕೊಂಡ ಸಿನಿರಂಗ ಇನ್ನೂ ಆ ನೋವಿನಿಂದ ಹೊರಬಂದಿಲ್ಲ. ಆಗಲೇ ಮತ್ತೋರ್ವ ನಟ ಕ್ಯಾನ್ಸರ್​ಗೆ ಬಲಿಯಾಗಿದ್ದಾರೆ.

ಮೋಹಿತ್​ ಬಘೆಲ್​ ಬಾಲ ಕಲಾವಿದನಾಗಿ ಎಂಟ್ರಿ ಕೊಟ್ಟ ಹಾಸ್ಯ ನಟ. ಸಲ್ಮಾನ್​ ಖಾನ್​ ಅಭಿನಯದ 'ರೆಡಿ' ಸಿನಿಮಾದ ಮೂಲಕವೇ ಬಣ್ಣದ ಲೋಕಕ್ಕೆ ಹಾಸ್ಯ ನಟನಾಗಿ ಪರಿಚಯವಾದವರು. ಸಲ್ಮಾನ್​ ಖಾನ್​ ಜೊತೆ ಸಿನಿಮಾದಲ್ಲಿ ಶಾಲಾ ಬಾಲಕನ ಪಾತ್ರದಲ್ಲಿ ಉದ್ದುದ್ದ ಕೂದಲು ಬಿಟ್ಟು ರಂಜಿಸಿದ್ದ ನಟ ಮೋಹಿತ್​.

Bollywood actor Mohit Baghel Succumbs to Cancer at the Age of 26
ಮೋಹಿತ್​ ಬಘೆಲ್​


ಹಂತ ಹಂತವಾಗಿ ಬೆಳೆದು ಬಂದ ಮೋಹಿತ್​ ಕಷ್ಟಪಟ್ಟು ಕಿರುತೆರೆ ಹಾಗೂ ಬೆಳ್ಳಿಪರದೆ ಮೇಲೆ ಮಿಂಚಿದ್ದರು. ಕಿರುತೆರೆಯಲ್ಲಿ ಕಾಮಿಡಿ ಶೋಗಳಲ್ಲಿ ಗುರುತಿಸಿಕೊಂಡ ನಂತರ ಸಿನಿಮಾಗೆ ಬಂದಿದ್ದರು. ಆದರೆ ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್​ನಿಂದ ಬಳಲುತ್ತಿದ್ದರು.

ಇದನ್ನೂ ಓದಿ: HBD Suhana Khan: ತನ್ನ ವಯಸ್ಸಿನ ಬಗ್ಗೆ ಬರೆದುಕೊಂಡ ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ ವಿಡಿಯೋ ವೈರಲ್​..!

ಉತ್ತರ ಪ್ರದೇಶದ ಮಥುರಾದಿಂದ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ಮುಂಬೈಗೆ ಬಂದಿದ್ದ ಮೋಹಿತ್​ ಲಾಕ್​ಡೌನ್​ನಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗುತ್ತಿದೆ. ನೋಯ್ಡಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೋಹಿತ್​ ಕೆಲ ಸಮಯದಿಂದ ಮಥುರಾದಲ್ಲಿರುವ ಮನೆಯಲ್ಲೇ ಇದ್ದರಂತೆ.

ಇಂದು ಬೆಳಿಗ್ಗೆ 10ಕ್ಕೆ ಅವರ ಆರೋಗ್ಯದ್ಲಲಿ ಏರುಪೇರಾಗಿದೆ. ಮನೆಯವರು ಆಗ ಹತ್ತಿರವಿದ್ದ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಿದ್ದಾರಂತೆ. ಆದರೆ ಆಸ್ಪತ್ರೆಯವರು ಮೋಹಿತ್​ಗೆ ಚಿಕಿತ್ಸೆ ನೀಡುವುದು ಹೋಗಲಿ, ಅವರನ್ನು ಆಸ್ಪತ್ರೆ ಒಳಗೂ ಹೋಗಲು ಬಿಡಲಿಲ್ಲವಂತೆ. ಇರಿಂದಾಗಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟು ಸಾವನ್ನಪ್ಪಿದ್ದಾರೆ ಎಂದೂ ಹೇಳಲಾಗುತ್ತಿದೆ.ಇದನ್ನೂ ಓದಿ: Tamannaah Bhatia: ಫಲಭರಿತ ವರ್ಕೌಟ್​ ಮಾಡುವುದು ಹೇಗೆಂದು ತೋರಿಸಿ ಕೊಟ್ಟ ತಮನ್ನಾ ..!

ಹಾಸ್ಯ ನಟನ ಅಗಲಿಕೆಯಿಂದ ಬಿ-ಟೌನ್​ ಮತ್ತೆ ಶೋಕ ಸಾಗರದಲ್ಲಿ ಮುಳುಗಿದ್ದು, ಹಲವಾರು ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

मोहित मेरे भाई इतनी जल्दी क्या थी जाने की?







ಗಲಿ ಗಲಿ ಶೋರ್​ ಹೈ, ರೆಡಿ, ಜಬರಿಯಾ ಜೋಡಿ ಸಿನಿಮಾ ಸೇರಿದಂತೆ 7ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಮೋಹಿತ್​. ಇನ್ನು ಬಂಟಿ ಔರ್​ ಬಬ್ಲಿ 2 ಸಿನಿಮಾದಲ್ಲೂ ಅಭಿನಯಿಸುತ್ತಿದ್ದು, ಲಾಕ್​​ಡೌನ್​ನಿಂದಾಗಿ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿಲ್ಲ. ಈ ಸಿನಿಮಾ ಚಿತ್ರೀಕರಣ ಮುಗಿಯುವ ಮೊದಲೇ ಅಗಲಿದ್ದಾರೆ.

Adah Sharma: ಹೊಸ ಚಾಲೆಂಜ್​ ಕೊಟ್ಟ ಅದಾ ಶರ್ಮಾ: ಹಾಟ್​ ಫೋಟೋಗಳು ವೈರಲ್​..!

First published: May 23, 2020, 7:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading