ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಹಾಗೂ ನಟ ವಿಕ್ಕಿ ಕೌಶಲ್ (Vicky Kaushal) ಇಂದು ಮೊದಲ ವಿವಾಹ ವಾರ್ಷಿಕೋತ್ಸವದ (Wedding Anniversary) ಸಂಭ್ರಮಾಚರಣೆಯಲ್ಲಿದ್ದಾರೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕಳೆದ ವರ್ಷ ಡಿಸೆಂಬರ್ 9 ರಂದು ಅದ್ದೂರಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ ರಾಜಸ್ಥಾನದ (Rajasthan) ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ಸಪ್ತಪದಿ ತುಳಿದಿದ್ದರು. ಈ ಜೋಡಿಯ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು.
ಪ್ರಕೃತಿ ಸೌಂದರ್ಯ ನಡುವೆ ಕತ್ರಿನಾ, ವಿಕ್ಕಿ ವಿವಾ ವಾರ್ಷಿಕೋತ್ಸವ ಆಚರಣೆ
ಸದ್ಯ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸುಮಧುರಗೊಳಿಸಲು ಈ ಜೋಡಿ ಪರ್ವತದ ಮಧ್ಯೆ ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತಾ ಆಚರಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕತ್ರಿನಾ ಹಾಗೂ ವಿಕ್ಕಿ ಕೌಶಲ್ ನಡುವೆ 5 ವರ್ಷ ವಯಸ್ಸಿನ ಅಂತರವಿದೆ. ಕತ್ರಿನಾಗೆ 38 ವರ್ಷ ಹಾಗೂ ವಿಕ್ಕಿ 33 ವರ್ಷವಾಗಿದ್ದರೂ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಎಂಬುವುದನ್ನು ಪ್ರೂವ್ ಮಾಡಿದರು.
100 ಕೋಟಿಗೆ ಸೇಲ್ ಆಗಿತ್ತು ಕತ್ರಿನಾ, ವಿಕ್ಕಿ ಮದುವೆ ವೀಡಿಯೋ
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ವೀಡಿಯೋಗಳನ್ನು ಖ್ಯಾತ ಓಟಿಟಿ ಸಂಸ್ಥೆಯೊಂದಕ್ಕೆ ಬರೋಬ್ಬರಿ 100 ಕೋಟಿ ರೂ. ಮೊತ್ತಕ್ಕೆ ಮಾರಾಟ ಮಾಡಲಾಗಿತ್ತು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು. ಅಲ್ಲದೇ ಈ ಮದುವೆಯನ್ನು ಗುಟ್ಟಾಗಿ ನೆರವೇರಿಸಲಾಗಿತ್ತು.
ಸಾಮಾನ್ಯವಾಗಿ ಒಂದೇ ಸಿನಿಮಾದಲ್ಲಿ ನಟಿಸಿದ್ದ ನಟ ಹಾಗೂ ನಟಿಯರು ಮದುವೆಯಾಗಿರುವುದನ್ನು ನೋಡಿದ್ದೇವೆ. ಆದರೆ ಕತ್ರಿನಾ ಹಾಗೂ ವಿಕ್ಕಿ ಇಬ್ಬರೂ ಯಾವುದೇ ಸಿನಿಮಾದಲ್ಲಿ ಅಭಿನಯಿಸಿರಲಿಲ್ಲ. ಪ್ರೀತಿ ಯಾರಿಗೆ ಯಾವಾಗ ಹೇಗೆ ಶುರುವಾಗುತ್ತೆ ಎಂದು ಗೊತ್ತಾಗುವುದಿಲ್ಲ. ಹೀಗಿರುವಾಗ ಇವರಿಬ್ಬರ ನಡುವೆ ಪ್ರೀತಿ ಚಿಗುರಲು ಕಾರಣ ಒಂದು ರಿಯಾಲಿಟಿ ಶೋ…
ಕಾಫಿ ವಿಥ್ ಕರಣ್ ಶೋಯಿಂದ ಶುರುವಾಗಿತ್ತು ವಿಕ್ಕಿ-ಕತ್ರಿನಾ ನಡುವೆ ಪ್ರೀತಿ
ಹೌದು, 2019ರಲ್ಲಿ ಬಾಲಿವುಡ್ ಪ್ರಖ್ಯಾತ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುತ್ತಿದ್ದ ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕತ್ರಿನಾ ಕೈಫ್ ಭಾಗವಹಿಸಿದ್ದರು. ಈ ವೇಳೆ ನೀವು ಮುಂದಿನ ಸಿನಿಮಾದಲ್ಲಿ ಯಾರ ಜೊತೆಗೆ ಅಭಿನಯಿಸುತ್ತೀರಾ ಎಂದು ಕೇಳಿದ ಕರಣ್ ಪ್ರಶ್ನೆಗೆ, ಒಂದು ಚೂರು ಯೋಚಿಸದೇ ಕತ್ರಿನಾ ವಿಕ್ಕಿ ಕೌಶಲ್ ಹೆಸರು ಹೇಳಿ, ನಾವಿಬ್ಬರು ಜೋಡಿಯಾಗಿ ಅಭಿನಯಿಸಿದರೆ ಚೆನ್ನಾಗಿ ಕಾಣಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ನಂತರ ಇದೇ ರಿಯಾಲಿಟಿ ಶೋಗೆ ಅತಿಥಿಯಾಗಿ ಆಗಮಿಸಿದ್ದ ವಿಕ್ಕಿ ಕೌಶಲ್ಗೆ, ಹಲವು ದಿನಗಳ ಹಿಂದೆ ನಮ್ಮ ಕಾರ್ಯಕ್ರಮಕ್ಕೆ ಕತ್ರಿನಾ ಬಂದಿದ್ದರು. ಈ ವೇಳೆ ತಮ್ಮ ಮುಂದಿನ ಸಿನಿಮಾವನ್ನು ಯಾರೊಂದಿಗೆ ಅಭಿನಯಿಸುತ್ತೀರಾ ಎಂದಾಗ, ನಿಮ್ಮ ಜೊತೆ ಅಭಿನಯಿಸಲು ಇಷ್ಟ ಪಡುತ್ತೇನೆ ಎಂದು ಕತ್ರಿನಾ ಹೇಳಿರುವುದಾಗಿ ವಿಕ್ಕಿಗೆ ತಿಳಿಸಿದ್ದರು. ಈ ಮಾತು ಕೇಳಿ ಕೆಲ ಕಾಲ ತಬ್ಬಿಬ್ಬಾದ ವಿಕ್ಕಿ, ಬಹಳ ಸಂತಸದಿಂದ ನಾನು ಕೂಡ ಕತ್ರಿನಾ ಜೊತೆಗೆ ಅಭಿನಯಿಸಲು ಇಚ್ಛಿಸುತ್ತೇನೆ ಎಂದು ಅನಿಸಿಕೆ ತಿಳಿಸಿದ್ದರು.
ಇದನ್ನೂ ಓದಿ: Katrina Kaif: ವಿಕ್ಕಿ-ಕತ್ರಿನಾ ಮದುವೆಯಲ್ಲಿ ಚಪ್ಪಲಿ ಜಗಳ! ನಡೆದಿದ್ದೇನು?
ಹೀಗೆ ಮತ್ತೊಂದು ಚಾಟ್ ಶೋನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ, ಆ ವೇಳೆ ತಮ್ಮಿಬ್ಬರ ವೈಯಕ್ತಿಕ ಜೀವನ, ಇಷ್ಟ-ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಅಲ್ಲಿಂದ ಇಬ್ಬರ ನಡುವೆ ಲವ್ವಿ-ಡವ್ವಿ ಶುರುವಾಗಿತ್ತು.
ನಂತರ ಇಬ್ಬರು ಡೇಟಿಂಗ್ ಮಾಡಲು ಆರಂಭಿಸಿದರು. ಸ್ನೇಹಿತರೊಬ್ಬರು ಏರ್ಪಡಿಸಿದ್ದ ಪಾರ್ಟಿಯಲ್ಲಿ ವಿಕ್ಕಿ ಮತ್ತು ಕತ್ರಿನಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಬಳಿಕ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ಶೇರ್ಷಾ ಸಿನಿಮಾದ ಪ್ರೀಮಿಯರ್ ಶೋಗೆ ಇಬ್ಬರು ಒಟ್ಟಿಗೆ ಆಗಮಿಸಿದ್ದರು. ಹೀಗೆ ಸಭೆ, ಸಮಾರಂಭದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ