• Home
  • »
  • News
  • »
  • entertainment
  • »
  • Kabir Bedi: ಕನ್ನಡದ ಹಂಟರ್ ಚಿತ್ರದಲ್ಲಿ ಹಾಲಿವುಡ್ ನಟ ಕಬೀರ್ ಬೇಡಿ

Kabir Bedi: ಕನ್ನಡದ ಹಂಟರ್ ಚಿತ್ರದಲ್ಲಿ ಹಾಲಿವುಡ್ ನಟ ಕಬೀರ್ ಬೇಡಿ

ಕನ್ನಡದ ಹಂಟರ್ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಕಬೀರ್ ಬೇಡಿ

ಕನ್ನಡದ ಹಂಟರ್ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಕಬೀರ್ ಬೇಡಿ

ಇದೇ ಕಬೀರ್ ಬೇಡಿ ಇದೇ ತ್ರಿವಿಕ್ರಮ ಸಾಪಲ್ಯ ಅವರ ನಿರ್ಮಾಣದ ಪಿರಿಯೋಡಿಕಲ್ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. 800 ವರ್ಷಗಳ ಹಿಂದಿನ ಕಥೆ ಆಧರಿಸಿದ ಈ ಸಿನಿಮಾ ಮುಂದಿನ ತಿಂಗಳು 7 ರಿಂದಲೇ ಚಿತ್ರೀಕರಣ ಆರಂಭಗೊಳ್ಳಲಿದೆ.

  • Share this:

ಬಾಲಿವುಡ್​ ನಲ್ಲಿ (Bollywood Actor) ಒಬ್ಬ ನಟರಿದ್ದಾರೆ. ಇವರ ಧ್ವನಿ ಕೇಳಿದ್ರೆ ಎಂತಹ ವ್ಯಕ್ತಿನೂ ರೋಮಾಂಚನಗೊಳ್ತಾರೆ. ಅಮಿತಾಭ್ ಬಚ್ಚನ್ ಗಿಂತಲೂ (Amitabh Bachchan) ಗ್ರೇಟ್ ಧ್ವನಿಯೇ ಅನ್ನೋ ಅಂತ ಕೇಳಿದ್ರೆ, ಹೌದು, ಬಚ್ಚನ್ ಧ್ವನಿಗಿಂತಲೂ ತುಂಬಾ ಗಟ್ಟಿ ಧ್ವನಿಯ ನಟ ಈ ಕಬೀರ್ ಬೇಡಿ ಅಂತಲೇ ಹೇಳಬಹುದು. ಇಂತಹ ಈ ಕಲಾಕಾರ್​ನನ್ನ (Kannada Film) ಕನ್ನಡಕ್ಕೆ ತರೋ ಪ್ರಯತ್ನಗಳೂ ಇಲ್ಲಿವರೆಗೂ ನಡೆದಿರಲೇ ಇಲ್ಲ. ಆದರೆ ಈಗ ಕನ್ನಡದ ಹಂಟರ್ (Hunter) ಸಿನಿಮಾದಲ್ಲಿ ಆ ಒಂದು ಪ್ರಯತ್ನ ಆಗಿದೆ. ಆ ಪ್ರಯತ್ನ ಈಗಾಗಲೇ ಕಾರ್ಯರೂಪಕ್ಕೂ ಬಂದಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಚಿತ್ರೀಕರಣ ಕೂಡ ಮಾಡಲಾಗಿದೆ. ಈಗಾಗಲೇ ಈ ಚಿತ್ರದಲ್ಲಿ ಅಭಿನಯಿಸಿ ಹೋಗಿರೋ ಕಬೀರ್ ಬೇಡಿಯ ಒಂದಷ್ಟು ಫೋಟೋಗಳನ್ನ, ವೀಡಿಯೋಗಳನ್ನ ಸಿನಿಮಾ ತಂಡ ಬಿಟ್ಟುಕೊಟ್ಟಿದೆ.


ಕನ್ನಡಕ್ಕೆ ಬಂದು ಹೋದ ಬಾಲಿವುಡ್-ಹಾಲಿವುಡ್ ಕಬೀರ್ ಬೇಡಿ
ಕಬೀರ್ ಬೇಡಿ ತಮ್ಮ ವಿಶೇಷ ಕಂಠಸಿರಿಯಿಂದಲೇ ಬಾಲಿವುಡ್​ನಲ್ಲಿ ಹೆಸರುವಾಸಿ. ತಮ್ಮ ಹಾಲಿವುಡ್ ನಟರ ಲುಕ್ ನಿಂದಲೂ ಕಬೀರ್ ಬೇಡಿ ಗಮನ ಸೆಳೆದವರು.
ಹಾಗಂತ ಕೇವಲ ಬಾಲಿವುಡ್​ಗೆ ಮಾತ್ರ ಕಬೀರ್ ಬೇಡಿ ಸೀಮಿತವಾದವರಲ್ಲ. ಆ ಕಾಲದಲ್ಲಿಯೇ ಇಂಗ್ಲೀಷ್ ಸಿನಿಮಾಗಳಲ್ಲೂ ನಟಿಸಿದವರು. ಜೇಮ್ಸ್ ಬಾಂಡ್, ಮೈಕಲ್ ಕೇನ್ ರಂತಹ ನಟರ ಜೊತೆಗೂ ಅಭಿನಯಿಸಿದ್ದಾರೆ.


Bollywood Actor Kabir Bedi Acted in Kannada Film Hunter
ಬಾಲಿವುಡ್-ಹಾಲಿವುಡ್ ನಟ ಕಬೀರ್ ಬೇಡಿ


ಸಂದೋಕನ್ ಸೀರಿಸ್ ಮೂಲಕ ಯುರೋಪ್​ನಲ್ಲಿ ಕಬೀರ್ ಬೇಡಿ ಸಂಚಲನ
ಯುರೋಪ್​ ನಲ್ಲಿ ಭಾರೀ ಸಂಚಲನ ಮೂಡಿಸಿದ್ದ ಟಿ.ವಿ. ಸೀರಿಸ್ ಸಂದೋಕನ್ ನಲ್ಲೂ ಕಬೀರ್ ಬೇಡಿ ಅಭಿನಯಿಸಿದ್ದಾರೆ. ಇತ್ತೀಚಿಗೆ ಇವರಿಗೆ ಇಟಲಿಯಲ್ಲಿ ಲೈಫ್ ಟೈಮ್ ಅಚೀವ್​ಮೆಂಟ್ ಪ್ರಶಸ್ತಿ ಕೂಡ ಬಂದಿದೆ.




ಇದನ್ನೂ ಓದಿ: Ayushmann Khuranna: 25ರಿಂದ 15 ಕೋಟಿಗೆ ಸಂಭಾವನೆ ಇಳಿಸಿಕೊಂಡ ಆಯುಷ್ಮಾನ್! ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ?


ಹಾಲಿವುಡ್ ಮತ್ತು ಬಾಲಿವುಡ್​ ನಲ್ಲಿ ಮಿಂಚಿರೋ ಕಬೀರ್ ಬೇಡಿ, ಡಾಕ್ಯೂಮೆಂಟ್ರಿಗಳಿಗೂ ಧ್ವನಿ ಕೊಟ್ಟಿರೋದು ಇದೆ. ಜಾಹೀರಾತಿಲ್ಲೂ ಇವರ ವಾಯ್ಸ್ ಕೇಳಿ ಬರುತ್ತದೆ.


ಹಂಟರ್ ಮೂಲಕ ಕನ್ನಡಕ್ಕೆ ಬಂದ ವಿಶಿಷ್ಟ ಕಂಠಸಿರಿಯ ಕಬೀರ್ ಬೇಡಿ
ಇಷ್ಟಲ್ಲ ಕೆಲಸಗಳನ್ನ ಮಾಡುತ್ತಲೇ ಬಂದಿರೋ ಕಬೀರ್ ಬೇಡಿ, ಹಂಟರ್ ಸಿನಿಮಾ ಮೂಲಕ ಕನ್ನಡಕ್ಕೆ ಫಸ್ಟ್ ಟೈಮ್ ಬಂದಿದ್ದಾರೆ. ನಿರ್ಮಾಪಕ ತ್ರಿವಿಕ್ರಮ ಸಾಪಲ್ಯ ನಿರ್ಮಾಣದ ಈ ಚಿತ್ರದಲ್ಲಿ ಕಬೀರ್ ಒಂದು ಪ್ರಮುಖ ಪಾತ್ರವನ್ನೇ ಮಾಡಿದ್ದಾರೆ.




ಹಂಟರ್ ಚಿತ್ರ ನಿರ್ಮಾಪಕ ಜತೆ ಕಬೀರ್ ಬೇಡಿ ಮತ್ತೊಂದು ಸಿನಿಮಾ
ಇದೇ ಕಬೀರ್ ಬೇಡಿ ಇದೇ ತ್ರಿವಿಕ್ರಮ ಸಾಪಲ್ಯ ಅವರ ನಿರ್ಮಾಣದ ಪಿರಿಯೋಡಿಕಲ್ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. 800 ವರ್ಷಗಳ ಹಿಂದಿನ ಕಥೆ ಆಧರಿಸಿದ ಈ ಸಿನಿಮಾ ಮುಂದಿನ ತಿಂಗಳು 7 ರಿಂದಲೇ ಚಿತ್ರೀಕರಣ ಆರಂಭಗೊಳ್ಳಲಿದೆ.


Bollywood Actor Kabir Bedi Acted in Kannada Film Hunter
ಹಂಟರ್ ಚಿತ್ರದ ನಿರ್ಮಾಪಕ ತ್ರಿವಿಕ್ರಮ್ ಸಾಪಲ್ಯ ಜತೆ ಕಬೀರ್ ಬೇಡಿ


ಈ ಚಿತ್ರದಲ್ಲಿ ಕನ್ನಡದ ನಟಿಯರಾದ ಶೃತಿ, ಭವ್ಯ ಕೂಡ ಪ್ರಮುಖ ಪಾತ್ರದಲ್ಲಿಯೇ ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ ನಟ ಕಬೀರ್ ಬೇಡಿ ಈಗ ಹಂಟರ್ ಸಿನಿಮಾದ ಚಿತ್ರೀಕರಣ ಮುಗಿಸಿ ವಾಪಸ್ ಹೋಗಿದ್ದಾರೆ.


ರಿಯಲ್ ಸ್ಟಾರ್ ಉಪೇಂದ್ರ ಅಣ್ಣ ಮಗ ನಿರಂಜನ್ ಈ ಸಿನಿಮಾದ ನಾಯಕ ನಟರಾಗಿದ್ದಾರೆ.  ನಟಿ ಸೌಮ್ಯ ಮೆನನ್ ಈ ಚಿತ್ರದಲ್ಲಿ ನಿರಂಜನ್ ಗೆ ಜೋಡಿ ಆಗಿದ್ದಾರೆ.  ಇತರ ತಾರಾ ಬಳಗದಲ್ಲಿ ಪ್ರಕಾಶ್ ರಾಜ್, ನಾಜರ್, ಸುಮನ್ ಕೂಡ ಇದ್ದಾರೆ.


ಇದನ್ನೂ ಓದಿ:Anushka Shetty Marriage: ಶುಭಯೋಗ ಕೂಡಿ ಬಂತಮ್ಮ, ಅನುಷ್ಕಾ ಶೆಟ್ಟಿ ಮದ್ವೆಯಂತಮ್ಮ! ಕನ್ನಡತಿ ಕೈ ಹಿಡಿಯೋ ವರ ಇವರೇ!


ಕನ್ನಡದ ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ನಿರ್ಮಾಪಕರಾದ ತ್ರಿ ವಿಕ್ರಮ ಸಾಪಲ್ಯ ಈಗಾಗಲೇ ಪ್ಯಾನ್ ಇಂಡಿಯಾ ರಿಲೀಸ್​ನ ಪ್ಲಾನಿಂಗ್ ಆರಂಭಿಸಿದ್ದಾರೆ. ಈ ಮೂಲಕ ಕನ್ನಡದ ಈ ಸಿನಿಮಾ ಕೂಡ  ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗೋ ಮತ್ತೊಂದು ಸಿನಿಮಾ ಆಗಿದೆ.

First published: