news18-kannada Updated:September 12, 2020, 8:41 AM IST
ಜಾನ್ ಅಬ್ರಾಹಂ
ಬಾಲಿವುಡ್ ಖ್ಯಾತ ನಟ ಜಾನ್ ಅಬ್ರಾಹಂ ಸಿನಿಮಾದ ಜೊತೆಗೆ ಕಾರು, ಬೈಕ್ಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿರುವ ವಿಚಾರ ಅನೇಕರಿಗೆ ಗೊತ್ತು. ಅವರ ಮನೆಯಲ್ಲಿ ದುಬಾರಿ ಕಾರು, ಬೈಕ್ಗಳನ್ನು ಸಂಗ್ರಹವಿದೆ. ಆಗಾಗ ಜಾನ್ ಅಬ್ರಾಹಂ ಬೈಕ್ ಅಥವಾ ಕಾರನ್ನು ಓಡಿಸಿಕೊಂಡು ಮುಂಬೈ ರಸ್ತೆಯಲ್ಲಿ ಓಡಡಾಡುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೀಗ ಅವರ ಕಾರು ಕಲ್ಷೆಕನ್ನಲ್ಲಿದ್ದ ಒಂದು ಕಾರನ್ನು ಪ್ರಾಣಿ ದಯಾ ಸಂಘಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಆ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೊದಲೇ ಹೇಳಿದಂತೆ ಪೋರ್ಶೆ, ಆಡಿ, ಬೇಂಜ್ ಲಕ್ಸುರಿ ಕಾರನ್ನು ಜಾನ್ ಅಬ್ರಾಹಂ ಹೊಂದಿದ್ದಾರೆ. ಅದರಂತೆ ಅದರಲ್ಲಿ ಹಳೆಯ ವಾಹನಗಳು ಕೂಡ ಇವೆ. ಇದೀಗ ಅನಿಮಲ್ ಮ್ಯಾಟರ್ ಟು ಮಿ ಹೆಸರಿನ ಪ್ರಾಣಿ ದಯಾ ಸಂಘಕ್ಕೆ ತನ್ನೊಂದಿಗಿದ್ದ ಹಳೆಯ ಮಾರುತಿ ಸುಜುಕಿ ಕಂಪನಿಯ ಜಿಪ್ಸಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಮೂಲಕ ಅಭಿಮಾನಿಗಳೆದುರಿಗೆ ಮತ್ತೊಮ್ಮೆ ಹೀರೋ ಎನಿಸಿಕೊಂಡಿದ್ದಾರೆ.
ಅನಿಮಲ್ ಮ್ಯಾಟರ್ ಟು ಮಿ ಸಂಸ್ಥೆ ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಅಬ್ರಾಹಂ ಮಾಡಿರುವ ಉಪಕಾರದ ಬಗ್ಗೆ ಬರೆದುಕೊಂಡಿದೆ. ‘ಕಳೆದ 5 ವರ್ಷಗಳಿಂದ ಜಾನ್ ಅಬ್ರಾಹಂ ನಮ್ಮ ಕೋಲಾಡ್ ಪ್ರಾಣಿಧಾಮದ ಜೊತೆಗೆ ಗಟ್ಟಿಯಾದ ಸಂಬಂಧವನ್ನು ಬೆಳೆಸಿದ್ದಾರೆ. ಅವರ ಸಂಪೂರ್ಣ ಬೆಂಬಲ ಹೀಗೆ ಮುಂದುವರಿಯಲಿ ಎಂದಿದೆ.
ಅವರು ನೀಡಿರುವ ಜಿಪ್ಸಿ ವಾಹನವನ್ನು ಪ್ರಾಣಿಗಳನ್ನು ಕಾಪಾಡಲು, ಚಿಕಿತ್ಸೆಗಾಗಿ ಮುಂಬೈನಿಂದ ಕೋಲಾಡ್ ವರೆಗೆ ಚಲಿಸಲು ಬಳಸುತ್ತೇವೆ. ಅಬ್ರಾಹಂ ನೀಡಿರುವ ಉಡುಗೊರೆಗಾಗಿ ಕೃತಜ್ಞರಾಗಿರುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಅನಿಮಲ್ ಮ್ಯಾಟರ್ ಟು ಮಿ ಸಂಸ್ಥೆಯನ್ನು ಮುಂಬೈ ಮೂಲದ ಗಣೇಶ್ ನಾಯಕ್ ಸ್ಥಾಪಿಸಿದ್ದಾರೆ. ಇದರ ಮೂಲಕ ಬೀದಿನಾಯಿ, ಪ್ರಾಣಿ, ಪಕ್ಷಿಗಳನ್ನು ಕಾಪಾಡುವುದು ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಆರೈಕೆ ಮಾಡುವ ಕೆಲಸವನ್ನು ಮಾಡುತ್ತಾ ಬಂದಿದೆ.
Published by:
Harshith AS
First published:
September 12, 2020, 7:16 AM IST