Hrithik Roshan: ಆರೋಗ್ಯದ ರಹಸ್ಯ ಬಿಚ್ಚಿಟ್ಟ ಬಾಲಿವುಡ್ ನಟ; ಪಾಲನೆ ಮಾಡ್ತಾರೆ ಮೂರು ಸೂತ್ರ

ಹೃತಿಕ್ ರೋಷನ್, ಬಾಲಿವುಡ್ ನಟ

ಹೃತಿಕ್ ರೋಷನ್, ಬಾಲಿವುಡ್ ನಟ

ಈ ಮಂತ್ರಗಳನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸುವುದು ಸುಲಭವಾಗಿದ್ದರೂ ನಿಮ್ಮಿಂದ ಏಕೆ ಸಾಧ್ಯವಾಗುತ್ತಿಲ್ಲ ಅದಕ್ಕೆ ಕಾರಣ ಇದಕ್ಕಾಗಿ ಶಾಂತ ಮನಸ್ಸು ಹಾಗೂ ಸ್ವಯಂ ಶಿಸ್ತಿನ ಅವಶ್ಯಕತೆ ಇದೆ ಎಂದು ಹೃತಿಕ ಸಲಹೆ ನೀಡಿದ್ದಾರೆ.

  • Share this:

ನೀವು ಆರೋಗ್ಯಕರ ಜೀವನವನ್ನು (Healthy Wife) ನಡೆಸಬೇಕು ಎಂದರೆ ಮೂರು ಮಂತ್ರಗಳಾದ ಧ್ಯಾನ (Meditation), ಆಹಾರ (Diet Food), ನಿದ್ರೆ (Sleeping) ಇವುಗಳಿಗೆ ಮೊದಲು ಆದ್ಯತೆ ನೀಡಿ ಎಂಬುದಾಗಿ ಬಾಲಿವುಡ್‌ನ ಫಿಟ್‌ನೆಸ್‌  (fitness) ಫ್ರೀಕ್‌ ನಟರಲ್ಲಿ ಒಬ್ಬರಾದ ಹೃತಿಕ್ ರೋಷನ್ (Bollywood Actor Hrithik Roshan)ಸಲಹೆ ನೀಡಿದ್ದಾರೆ. ಈ ಮೂರು ಮಂತ್ರವನ್ನು ಜೀವನದಲ್ಲಿ ಸಮತೋಲಗೊಳಿಸಿದರೆ ಆರೋಗ್ಯಕರವಾಗಿರುವುದು ಹೆಚ್ಚು ಕಷ್ಟಕರವಲ್ಲ ಎಂದು ಹೃತಿಕ್ ತಿಳಿಸಿದ್ದಾರೆ. ಈ ಮೂರು ಅಂಶಗಳಿಗೆ ಏಕೆ ಮಹತ್ವವನ್ನು ನೀಡಬೇಕು ಹಾಗೂ ಆರೋಗ್ಯದ ವಿಷಯದಲ್ಲಿ ಇವುಗಳ ಪಾತ್ರವೇನು ಎಂಬುದನ್ನು ನಟ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸ್ವತಃ ತಮ್ಮ ಬೈಸಪ್ಸ್‌ಗಳನ್ನು ತೋರಿಸಿರುವ ಹೃತಿಕ್ ಟ್ವಿಟರ್‌ನಲ್ಲಿ ಆರೋಗ್ಯದ ಮಹತ್ವನ್ನು ಸಾರಿದ್ದಾರೆ. ನಿದ್ದೆ ಹಾಗೂ ಆಹಾರ ನಿಮ್ಮ ಹಿಡಿತದಲ್ಲಿದ್ದರೆ ಇದು ನಿಜಕ್ಕೂ ಅತ್ಯುತ್ತಮಾದುದು.


ಈ ಮಂತ್ರವನ್ನು 2022 ನವೆಂಬರ್‌ನಿಂದ ಪಾಲಿಸುತ್ತಿರುವೆ. ಮಕ್ಕಳ ರಜಾದಿನಗಳ ಸಮಯದಲ್ಲಿ ಕೂಡ ಇದರಿಂದ ವಿಚಲಿತರಾಗಬೇಡಿ ಎಂಬ ಸಂದೇಶವನ್ನು ಹೃತಿಕ್ ರವಾನಿಸಿದ್ದಾರೆ.


ನಿದ್ದೆ ಹಾಗೂ ಆಹಾರದ ಮೇಲಿನ ನಿಯಂತ್ರಣ ಅತ್ಯಂತ ಸುಲಭವಾದ ಅಂಶವಾಗಿದ್ದರೂ ಹೆಚ್ಚಿನವರು ಇದರ ಮೇಲೆ ಮುತುವರ್ಜಿ ವಹಿಸುವಲ್ಲೇ ಸೋಲುತ್ತಾರೆ ಇದೊಂದು ರೀತಿ ತಮಾಷೆಯಾದುದು ಎಂಬುದಾಗಿ ಹೃತಿಕ್ ತಿಳಿಸಿದ್ದಾರೆ. ಯಾವುದು ಸುಲಭವೋ ಅದನ್ನು ಅನುಕರಿಸುವಲ್ಲಿ ಜನರು ಕಷ್ಟಪಡುತ್ತಿದ್ದಾರೆ ಎಂಬುದಾಗಿ ಹೃತಿಕ್ ಸೂಚಿಸಿದ್ದಾರೆ.


ಶಿಸ್ತು ಹಾಗೂ ಶಾಂತ ಮನಸ್ಸು ಏಕೆ ಅಗತ್ಯ?


ಈ ಮಂತ್ರಗಳನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸುವುದು ಸುಲಭವಾಗಿದ್ದರೂ ನಿಮ್ಮಿಂದ ಏಕೆ ಸಾಧ್ಯವಾಗುತ್ತಿಲ್ಲ ಅದಕ್ಕೆ ಕಾರಣ ಇದಕ್ಕಾಗಿ ಶಾಂತ ಮನಸ್ಸು ಹಾಗೂ ಸ್ವಯಂ ಶಿಸ್ತಿನ ಅವಶ್ಯಕತೆ ಇದೆ ಎಂದು ಹೃತಿಕ ಸಲಹೆ ನೀಡಿದ್ದಾರೆ.


Bollywood actor Hrithik Roshan shares three health tips stg mrq
ಹೃತಿಕ್ ರೋಷನ್


ತರಬೇತಿ ಹಾಗೂ ಜಿಮ್‌ನಲ್ಲಿ ದೇಹ ದಂಡಿಸುವುದು ಸರಳವಾಗಿದ್ದರೂ ಇದಕ್ಕಾಗಿ ಆಕ್ರಮಣಶೀಲತೆ ಅಗತ್ಯವಾಗಿದೆ ಇದಕ್ಕಾಗಿ ನಿಮ್ಮಲ್ಲಿ ಶಾಂತತರ ಹಾಗೂ ವರ್ಕೌಟ್ ಅನ್ನು ಆನಂದಿಸುವ ಮನಸ್ಸಿರಬೇಕು ಎಂದು ಕಹೋ ನ ಪ್ಯಾರ್ ಹೇ ನಟ ಕಿವಿಮಾತು ನೀಡಿದ್ದಾರೆ.


ನಿದ್ದೆ ಹಾಗೂ ಡಯೆಟ್‌ನೊಂದಿಗೆ ತಮ್ಮ ಜೀವನದಲ್ಲಿ ಹೆಚ್ಚು ಪರಿಣಾಮ ಬೀರಿದ ಇನ್ನೊಂದು ಅಂಶ ಧ್ಯಾನ ಎಂಬುದಾಗಿ ಹೃತಿಕ್ ಅಂಗೀಕರಿಸಿದ್ದಾರೆ. ನಾನು ಹೋಗುತ್ತಿದ್ದ ದಾರಿಯನ್ನು ಬದಲಾಯಿಸಲು ಹಾಗೂ ನನ್ನ ಖುಷಿಯನ್ನು ಇಮ್ಮಡಿಗೊಳಿಸಲು ಸಹಕಾರಿಯಾಗಿದ್ದು ಧ್ಯಾನ ಎಂದು ಹೃತಿಕ್ ತಿಳಿಸಿದ್ದಾರೆ.ಒಂದು ಗಂಟೆಗೂ ಅಧಿಕ ಕಾಲ ಧ್ಯಾನ


ನಿಮಗಾಗಿ ನೀವು ಸಾಕಷ್ಟು ಸಮಯ ನೀಡಿದರೆ ನಿಮಗೆ ಗೊತ್ತಿಲ್ಲದಂತೆ ಹಲವಾರು ಪವಾಡಗಳು ನಡೆಯುತ್ತವೆ ಎಂದು ಹೃತಿಕ್ ತಿಳಿಸಿದ್ದಾರೆ.


ವರ್ಷಗಳ ಹಿಂದೆ ಧ್ಯಾನಕ್ಕಾಗಿ 10 ನಿಮಿಷಗಳ ಕಾಲ ಮೀಸಲಾಗಿಟ್ಟೆ. ಇದೀಗ ಒಂದು ಗಂಟೆ ಕೂಡ ಕಡಿಮೆ ಎಂಬ ಭಾವನೆ ತೋರುತ್ತಿದೆ ಎಂದು ಹೃತಿಕ್ ಧ್ಯಾನದ ಪರಿಣಾಮವನ್ನು ತಿಳಿಸಿದ್ದಾರೆ.


ಸಂಪೂರ್ಣ ಆರೋಗ್ಯಕ್ಕೆ ಮುಖ್ಯ


ಕ್ಷೇಮವನದ ಮುಖ್ಯ ಸ್ವಾಸ್ಥ್ಯ ಅಧಿಕಾರಿ ಡಾ.ನರೇಂದ್ರ ಶೆಟ್ಟಿ ತಿಳಿಸಿರುವಂತೆ ಆಹಾರ, ನಿದ್ರೆ ಹಾಗೂ ಧ್ಯಾನ ನಮ್ಮ ಸಂಪೂರ್ಣ ಯೋಗಕ್ಷೇಮವನ್ನು ಬೆಂಬಲಿಸುವ ಪ್ರಮುಖ ಅಂಶಗಳಾಗಿವೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Healthy Life Style: ಬೆಳಗ್ಗೆ ಟೈಮ್ ಸಿಗ್ತಿಲ್ವಾ? ಡೋಂಟ್​​ವರಿ ರಾತ್ರಿ ಧ್ಯಾನ ಮಾಡಿ; ಈ 5 ಆರೋಗ್ಯಗಳ ಲಾಭ ಪಡೆಯಿರಿ!


ನಾವು ತಿನ್ನುವ ಆಹಾರವು ನಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಹೃದ್ರೋಗ, ಮಧುಮೇಹ ಮತ್ತು ಕೆಲವು ಕ್ಯಾನ್ಸರ್‌ಗಳಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದು ಮೆದುಳಿನ ಅತ್ಯುತ್ತಮ ಕಾರ್ಯನಿರ್ವಹಣೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಮೂಲಕ ಮಾನಸಿಕ ಆರೋಗ್ಯವನ್ನು ಬೆಂಬಲಿಸುತ್ತದೆ ಎಂದು ನರೇಂದ್ರ ಶೆಟ್ಟಿ ತಿಳಿಸಿದ್ದಾರೆ.
ಸೇವಿಸುವ ಆಹಾರದ ಮೇಲೆ ಮುತುವರ್ಜಿ ಅಗತ್ಯ


ಪೌಷ್ಟಿಕತಜ್ಞ ಮುಗ್ಧ ಪ್ರಧಾನ್ ನಾವು ಸೇವಿಸುವ ಆಹಾರದಿಂದಲೇ ನಮ್ಮ ದೇಹ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ. ನಾವು ಸೇವಿಸುವ ಆಹಾರ ದೇಹದ ಅಂಗಾಂಶಗಳಲ್ಲಿನ ಹಳೆಯ ಕೋಶಗಳನ್ನು ಬದಲಿಸಲು ಬಳಸಲಾಗುತ್ತದೆ ಹಾಗಾಗಿ ಸೇವಿಸುವ ಆಹಾರದ ಮೇಲೆ ಹೆಚ್ಚಿನ ಮುತುವರ್ಜಿ ವಹಿಸಿ ಎಂದು ಸಲಹೆ ನೀಡಿದ್ದಾರೆ.

Published by:Mahmadrafik K
First published: