ಕನ್ನಡದ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರ (Kantara) ಅದ್ಬುತ ಯಸ್ಸಿನೊಂದಿಗೆ ಮುನ್ನುಗುತ್ತಿದ್ದು, ಹಲವು ದಾಖಲೆಯನ್ನು ಬ್ರೇಕ್ ಮಾಡಿದೆ. ರಿಷಬ್ ಶೆಟ್ಟಿ (Rishabh Shetty) ನಿರ್ದೇಶನ, ಸಿನಿಮಾ ಮೇಕಿಂಗ್, ನಟನೆ ಬಗ್ಗೆ ವಿವಿಧ ಸಿನಿಮಾ ರಂಗಗಳ ಗಣ್ಯರು ಪ್ರತಿಕ್ರಿಯೆ ನೀಡಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರ ನಟ, ನಟಿಯರು, ನಿರ್ದೇಶಕರು ಚಿತ್ರ ಮೆಚ್ಚಿಕೊಂಡಿದ್ದಾರೆ. ಕಾಂತಾರ ರಿಷಬ್ ರನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಈಗ ಕಾಂತಾರ ನೋಡಿ ನಟ ಹೃತಿಕ್ ರೋಷನ್ (Hrithik Roshan) ಮೆಚ್ಚಿಕೊಂಡಿದ್ದಾರೆ. ಕಾಂತಾರ ಚಿತ್ರ ನೋಡಿ ತುಂಬಾ ಕಲಿತೆ. ಅವರ ಅಸಾಮಾನ್ಯ ನಿರ್ದೇಶನ (Direction) ನನಗೆ ಇಷ್ಟ ಆಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಕಾಂತಾರಕ್ಕೆ ಎಲ್ಲೆಡೆ ಮೆಚ್ಚುಗೆ
ಸೆಪ್ಟೆಂಬರ್ 30 ರಂದು ಕನ್ನಡ, ಅಕ್ಟೋಬರ್ 14 ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿದೆ. ಅದರಲ್ಲೂ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೆಂಬಾಳೆ ಫಿಲ್ಮ್ಸ್ ಭಾರೀ ಹೆಸರನ್ನು ತಂದುಕೊಟ್ಟಿದೆ.
ಬಾಲಿವುಡ್ನಲ್ಲೂ ಕಾಂತಾರ ಸದ್ದ
ಹಿಂದಿಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ಬಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿತ್ತು. ಹಲವು ಸಿನಿಮಾ ವಿಮರ್ಶಕರು ಸಿನಿಮಾ ಬಗ್ಗೆ ನಿರಂತರವಾಗಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಲ್ಲದೇ ಸಿನಿಮಾ ಮೇಕರ್ಸ್ಗೆ ಕಾಂತಾರ ಸಿನಿಮಾ ನೋಡಿ ಕಲಿತುಕೊಳ್ಳುವುದು ಸಾಕಷ್ಟಿದೆ ಎಂದು ಸಲಹೆಗಳನ್ನು ನೀಡುತ್ತಿದ್ದಾರೆ.
ಇದನ್ನೂ ಓದಿ: Rajinikanth Birthday: ಹ್ಯಾಪಿ ಬರ್ತ್ಡೇ ರಜನಿಕಾಂತ್, ಸೂಪರ್ ಸ್ಟಾರ್ ನಟನೆಯ ಐಕಾನಿಕ್ ಚಿತ್ರಗಳ ಪಟ್ಟಿ ಇಲ್ಲಿದೆ
ಹೃತಿಕ್ ರೋಷನ್ ಹೇಳಿದ್ದೇನು?
ಕಾಂತಾರ ನೋಡಿ ತುಂಬಾ ಕಲಿತೆ. ರಿಷಬ್ ಶೆಟ್ಟಿ ಅವರ ಕನ್ವಿಕ್ಷನ್ ಚಲನಚಿತ್ರವು ಅಸಾಮಾನ್ಯವಾಗಿಸುತ್ತದೆ. ಉನ್ನತ ದರ್ಜೆಯ ಕಥೆ ಹೇಳುವಿಕೆ, ನಿರ್ದೇಶನ ಮತ್ತು ನಟನೆ. ಪೀಕ್ ಕ್ಲೈಮ್ಯಾಕ್ಸ್ ರೂಪಾಂತರವು ನನಗೆ ಗೂಸ್ಬಂಪ್ಸ್ ತಂತು. ತಂಡಕ್ಕೆ ನನ್ನ ವಂದನೆ ಮತ್ತು ಗೌರವ ಎಂದು ಹೇಳಿದ್ದಾರೆ. ರಿಷಬ್ ಶೆಟ್ಟಿ ಹೃತಿಕ್ ರೋಷನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Thank you so much sir ❤️❤️❤️ https://t.co/f2b1rNpWU3
— Rishab Shetty (@shetty_rishab) December 11, 2022
ಕಾಂತಾರದ ಬಗ್ಗೆ ರಾಜಮೌಳಿ ಏನ್ ಹೇಳಿದ್ರು?
ಕಾಂತಾರ ಸಿನಿಮಾ ಕುರಿತಂತೆ ಸಂದರ್ಶನವೊಂದರಲ್ಲಿ ರಾಜಮೌಳಿ ಮಾತನಾಡಿದ್ದು, ಬಿಗ್ ಬಜೆಟ್ ಸಿನಿಮಾಗಳ ನಡುವೆ ಏಕಾಏಕಿ ಮುನ್ನುಗ್ಗಿ ಬಂದ ಕಾಂತಾರ ಸಿನಿಮಾ ಉತ್ತಮ ನಂಬರ್ಗಳನ್ನು ಪಡೆದುಕೊಳ್ತು. ಇದು ದೊಡ್ಡ ನಂಬರ್ಗಳನ್ನು ಗಳಿಸಲು ಬಿಗ್ ಸ್ಕೇಲ್ ಸಿನಿಮಾಗಳ ಅಗತ್ಯವಿಲ್ಲ.
ಕಾಂತಾರದಂತಹ ಸಣ್ಣ ಸಿನಿಮಾ ಕೂಡ ಬಿಗ್ ನಂಬರ್ ಮಾಡಬಹುದು ಅಂತ ತೋರಿಸಿಕೊಟ್ಟಿತ್ತು. ಕಾಂತಾರ ಸಿನಿಮಾ ನೋಡಿದ ವೀಕ್ಷಕರು ಉತ್ಸಾಹಗೊಂಡರು. ಆದರೆ ಸಿನಿಮಾ ಮೇಕರ್ಸ್, ನಾವು ಏನು ಮಾಡುತ್ತಿದ್ದೇವೆ ಎಂಬುವುದನ್ನು ಒಮ್ಮೆ ಹಿಂದಿರುಗಿ ನೋಡುವಂತೆ ಮಾಡಿತು ಎಂದು ರಾಜಮೌಳಿ ಹೇಳಿದ್ದರು.
ಕಾಂತಾರ-2 ಸ್ಕ್ರಿಪ್ಟ್ ವರ್ಕ್ ತಯಾರಿ ಆರಂಭಿಸಿದ ರಿಷಬ್
ಕಾಂತಾರ ಸಿನಿಮಾ ಯಸ್ಸಿನ ಹಿನ್ನೆಲೆಯಲ್ಲಿ ಸಿಕ್ವೇಲ್ ಮಾಡುವ ಕಾರ್ಯವನ್ನು ಚಿತ್ರತಂಡ ಆರಂಭಿಸಿದೆ ಎನ್ನಲಾಗಿದೆ. ಈ ನಡುವೆ ನಿರ್ದೇಶಕರ ಮುಂದಿನ ನಡೆ ಏನು ಎಂಬ ಕುತೂಹಲ ಪ್ರೇಕ್ಷಕರನ್ನು ಕಾಡುತ್ತಿದೆ.
ಇದನ್ನೂ ಓದಿ: Olavina Nildana: ಧೀರಜ್ ಜೊತೆ ತಾರಿಣಿ ನಿಶ್ಚಿತಾರ್ಥ, ಸಿದ್ಧಾಂತ್ ಮುಂದಿನ ನಡೆ ಏನು?
ರಿಷಬ್ ಶೆಟ್ಟಿ ಕಾಂತಾರ ಪ್ರಚಾರಕ್ಕಾಗಿ ತೆರಳಿದ ಪ್ರತಿ ಸ್ಥಳದಲ್ಲೂ ಕಾಂತಾರ-2 ಚಿತ್ರದ ಬರುತ್ತಾ ಎಂಬ ಪ್ರಶ್ನೆ ಕೇಳಿ ಬರುತ್ತಲೇ ಇತ್ತು. ಸದ್ಯ ರಿಷಬ್, ಕಾಂತಾರ ಸ್ಕ್ರಿಪ್ಟ್ ವರ್ಕ್ಗೆ ಚಾಲನೆ ನೀಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದಕ್ಕೆ ಬೇಕಾದ ತಯಾರಿಯನ್ನು ನಿರ್ದೇಶಕರು ಈಗಾಗಲೇ ಆರಂಭ ಮಾಡಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ