• Home
  • »
  • News
  • »
  • entertainment
  • »
  • ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡಲಿದ್ದಾರೆ ಬಾಲಿವುಡ್​ ನಟ ಗೋವಿಂದ

ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡಲಿದ್ದಾರೆ ಬಾಲಿವುಡ್​ ನಟ ಗೋವಿಂದ

ನಟ ಗೋವಿಂದ

ನಟ ಗೋವಿಂದ

ಪ್ರಜ್ವಲ್ ದೇವರಾಜ್​ ಅವರು ಇತ್ತೀಚೆಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿರುವ ಹೊಸ ಸಿನಿಮಾದಲ್ಲಿ ಬಾಲಿವುಡ್​ ನಟ ಗೋವಿಂದ ಅವರು ನಟಿಸೋದು ಬಹುತೇಕ ಖಚಿತವಾಗಿದೆಯಂತೆ.

  • Share this:

ಹಿಂದಿ ಸಿನಿಮಾಗಳಲ್ಲಿ ಗೋವಿಂದ  (Govinda) ತಮ್ಮ ನಟನೆ,ಹಾಸ್ಯ ಹಾಗೂ ನೃತ್ಯದ ಮೂಲಕ ಮನೆ ಮಾತಾಗಿರುವ ನಟ. ಕಾಮಿಡಿ ಹಾಗೂ ರೊಮ್ಯಾಂಟಿಕ್​ ಸಿನಿಮಾಗಳ ಮೂಲಕ ಒಂದು ಕಾಲದಲ್ಲಿ ಬಾಲಿವುಡ್​ನಲ್ಲಿ (Bollywood) ರಾಜ್ಯಭಾರ ಮಾಡಿದ್ದರು. ಸಿನಿರಂಗದಲ್ಲಿ ಕಳೆದ 35 ವರ್ಷಗಳಿಂದ ಸಕ್ರಿಯವಾಗಿರುವ ಗೋವಿಂದ ಅವರು ಈಗ ಸ್ಯಾಂಡಲ್​ವುಡ್​  (Sandalwood) ಎಂಟ್ರಿಗೆ ಸಿದ್ಧವಾಗುತ್ತಿದ್ದಾರಂತೆ. ಹಿಂದಿಯ ಜೊತೆಗೆ ಒಂದು ತಮಿಳು ಹಾಗೂ ಒಂದು ಬಂಗಾಳಿ ಚಿತ್ರದಲ್ಲೂ ನಟಿಸಿದ್ದಾರೆ. ಇನ್ನು ಆಗಾಗ ಕನ್ನಡದ ಹಾಡು (Kannada Song) ಹಾಡುವ ಮೂಲಕ ಕನ್ನಡ ಸಿನಿಪ್ರಿಯರ ಮನ ಗೆಲ್ಲುತ್ತಿರುವ ಹಾಸ್ಯ ನಟ ಗೋವಿಂದ ಈಗ ಕನ್ನಡ ಸಿನಿಮಾ ಮೂಲಕವೇ ರಂಜಿಸಲು ಬರಲಿದ್ದಾರೆ. ಹೌದು, ಕನ್ನಡ ಸಿನಿಮಾಗಾಗಿ ಗೋವಿಂದ ಅವರನ್ನು ಕರೆ ತರುವ ಪ್ರಯತ್ನ ನಡೆಯುತ್ತಿದೆಯಂತೆ.


ಈಗಾಗಲೇ ಬಾಲಿವುಡ್​ ಸೇರಿದಂತೆ ಇತರೆ ಭಾಷೆಯ ಸಾಕಷ್ಟು ಮಂದಿ ನಟ-ನಟಿಯರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುನೀಲ್ ಶೆಟ್ಟಿ, ಅಮಿತಾಭ್​ ಬಚ್ಚನ್​, ಅಕ್ಷಯ್​ ಕುಮಾರ್​, ಅನಿಲ್ ಕಪೂರ್​, ಜೂಹಿ ಚಾವ್ಲಾ, ಅರುಣಾ ಇರಾನಿ, ಮುನ್​ಮುನ್ ​ಸೇನ್​ ಹೀಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದಾರೆ. ಈಗ ಗೋವಿಂದ ಅವರೂ ಸಹ ಕನ್ನಡ ಸಿನಿಪ್ರಿಯರ ಮುಂದೆ ಬರಲಿದ್ದಾರೆ.


ನಟ ಗೋವಿಂದ


ಡೈನಾಮಿಕ್ ಪ್ರಿನ್ಸ್​ ಪ್ರಜ್ವಲ್ ದೇವರಾಜ್​ ಅವರು ಸಾಲು ಸಾಲು ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ಅಭಿನಯದ ಅರ್ಜುನ್ ಗೌಡ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ವೀರಂ ಸಿನಿಮಾದ ಜೊತೆ ಗುರುದತ್ ಗಾಣಿಗ ನಿರ್ದೇಶನ ಮಾಫಿಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇವುಗಳ ಜೊತಗೆ ಮತ್ತೊಂದು ಹೊಸ ಸಿನಿಮಾವನ್ನೂ ಪ್ರಜ್ವಲ್ ದೇವರಾಜ್​ ಒಪ್ಪಿಕೊಂಡಿದ್ದಾರಂತೆ.


ಇದನ್ನೂ ಓದಿ: ಮಗಳನ್ನು ನೆಟ್ಟಿಗರಿಗೆ ಪರಿಚಯಿಸಿದ ರಾಧಾ ಕಲ್ಯಾಣ ಧಾರಾವಾಹಿ ನಟಿ ಚೈತ್ರಾ ರೈ


ಪ್ರಜ್ವಲ್ ದೇವರಾಜ್​ ಅವರು ಇತ್ತೀಚೆಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿರುವ ಹೊಸ ಸಿನಿಮಾದಲ್ಲಿ ಬಾಲಿವುಡ್​ ನಟ ಗೋವಿಂದ ಅವರು ನಟಿಸೋದು ಬಹುತೇಕ ಖಚಿತವಾಗಿದೆಯಂತೆ. ನವ ನಿರ್ದೇಶಕ ಕಿರಣ್ ವಿಶ್ವನಾಥ್​ ಅವರು ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರಂತೆ. ಈ ಕುರಿತಾಗಿ ಮಾಧ್ಯಮಗಳ ಜತೆ ಮಾತನಾಡಿರುವ ನಿರ್ದೇಶಕ ಕಿರಣ್​ ವಿಶ್ವನಾಥ್​, ಗೋವಿಂದ ಅವರ ಜೊತೆ ಮಾತುಕತೆ ನಡೆಸಿರುವುದು ನಿಜ. ನಿರ್ಮಾಪಕರಾದ ನವೀನ್​ ಕುಮಾರ್​ ಸಹ ಗೋವಿಂದ ಬಳಿ ಚರ್ಚಿಸಿದ್ದಾರೆ. ಅವರಕಡೆಯಿಂದ ಅಧಿಕೃತವಾಗಿ ಒಪ್ಪಿಗೆ ಸಿಕ್ಕ ಕೂಡಲೇ ಈ ವಿಷಯವನ್ನು ಪ್ರಕಟಿಸುತ್ತೇವೆ ಎಂದಿದ್ದಾರೆ.


ಕನ್ನಡದ ಹಾಡು ಹಾಡಿದ್ದ ಗೋವಿಂದ


ಬಾಲಿವುಡ್​ ನಟ ಗೋವಿಂದ ಡಾ. ರಾಜ್​ಕುಮಾರ್​ ಅವರ ಎರಡು ಕನಸು ಸಿನಿಮಾದ ಹಾಡನ್ನು ಹಾಡುವ ಮೂಲಕ ಈ ಹಿಂದೆ ಸದ್ದು ಮಾಡಿದ್ದರು. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ಎಂದು ಸಖತ್​ ಕ್ಯೂಟ್​ ಆಗಿ ಹಾಡಿದ್ದಾರೆ. ಅವರು ಹಾಡಿರುವ ವಿಡಿಯೋ ಸಖತ್ ವೈರಲ್ ಆಗಿತ್ತು. ಗೋವಿಂದ ಅವರು ಕನ್ನಡ ಹಾಡನ್ನು ಹರ್ಷಿಕಾ ಪೂಣಚ್ಚ ಅವರ ಜೊತೆ ಹಾಡಿ ಸುದ್ದಿಯಾಗಿದ್ದರು. ಗೋವಿಂದ ಅವರು ಈ ಹಾಡನ್ನು ಹಾಡಿರುವುದು ಇದೇ ಮೊದಲೇನಲ್ಲ. ಬಹಳ ಹಿಂದೆಯೂ ಹಿಂದಿಯ ರಿಯಾಲಿಟಿ ಶೋ ಒಂದರಲ್ಲೂ ಇದೇ ಹಾಡನ್ನು ಹಾಡಿದ್ದರು. ಅದು ಹಿಂದಿಯ ಆ ಕಾರ್ಯಕ್ರಮದಲ್ಲಿ ಕರ್ನಾಟಕದ ಹುಡುಗಿಯೊಬ್ಬರು ಸ್ಪರ್ಧಿಯಾಗಿ ಹೋಗಿದ್ದರು. ಆಗ ಗೋವಿಂದ ಕಾರ್ಯಕ್ರಮದ ಜಡ್ಜ್​ ಆಗಿದ್ದರು. ಗೋವಿಂದ ಅವರ ಈ ಹಳೇ ವಿಡಿಯೋ ಸಹ ಸಖತ್​ ವೈರಲ್​ ಆಗಿತ್ತು. ಆಗ ಅವರು ಹಾಡಿದ್ದ ವಿಡಿಯೋ ಇಲ್ಲಿದೆ ನೋಡಿ.
ಕಹಿ ಘಟನೆಗಳನ್ನು ಹಂಚಿಕೊಂಡಿದ್ದ ನಟ


ಯಶಸ್ಸಿನ ಉತ್ತುಂಗವೇರಿದ್ದ ನಟ ಗೋವಿಂದ. ಬಾಲಿವುಡ್​ನ ಈ ನಟ ಇತ್ತೀಚೆಗಷ್ಟೆ ತಮಗೆ ತಮ್ಮ ವೃತ್ತಿ ಜೀವನದಲ್ಲಿ ಎದುರಾಗಿದ್ದ ಕೆಲವು ಕಹಿ ಘಟನೆಗಳು ಹಿರಿಯ ನಟನನ್ನು ಕೆಲ ಬಾಲಿವುಡ್​ ಮಂದಿ ನಡೆಸಿಕೊಂಡ ರೀತಿ ಎಲ್ಲವನ್ನೂ ಬೇಸರದಿಂದ ನೆನಪಿಸಿಕೊಂಡಿದ್ದರು. ಅಲ್ಲದೆ ಬಾಲಿವುಡ್​ನಲ್ಲಿ ಹೇಗೆ ಅವರಿಗೆ ಅವಕಾಶಗಳನ್ನು ನೀಡದೆ ಮೂಲೆಗುಂಪು ಮಾಡಲಾಯಿತು ಎಂದು ಆರೋಪಿಸಿದ್ದರು.


ಇದನ್ನೂ ಓದಿ: ಕಡಲ ತೀರದಲ್ಲಿ ತುಂಡುಡುಗೆಯಲ್ಲಿ Shwetha Srivatsav: ಟೀಕಿಸಿದವರ ಕಿವಿ ಹಿಂಡಿದ ಅಭಿಮಾನಿಗಳು..!


ಕಳೆದ 14 - 15 ವರ್ಷಗಳಲ್ಲಿ ಅವರು ಸುಮಾರು 16 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿರುವುದಾಗಿಯೂ ಹೇಳಿಕೊಂಡಿದ್ದರು. ಚಿತ್ರರಂಗದವರೂ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ತನ್ನ ಸಿನಿಮಾಗಳಿಗೆ ಥಿಯೇಟರ್ ಕೊಡದೆ ಸಿನಿ ಜೀವನವನ್ನು ಬೀಳಿಸುವ ಯತ್ನಗಳೂ ನಡೆದಿವೆ. ತನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಅಂತನ್ನಿಸುತ್ತೆ. ನಮ್ಮವರೂ ಪರವಾಗಿಬಿಡುತ್ತಾರೆ. ಅದೃಷ್ಟ ಕೈಕೊಟ್ಟರೆ ನಿಮ್ಮವರೂ ನಿಮ್ಮ ವಿರುದ್ಧ ತಿರುಗಿಬಿಡುತ್ತಾರೆ ಎಂದು ತಮ್ಮ ಅಸಮಾಧಾನ ಬಿಚ್ಚಿಡುವ ಮೂಲಕ ನಟ ಗೋವಿಂದ ಸುದ್ದಿಯಲ್ಲಿದ್ದರು.

Published by:Anitha E
First published: