Dharmendra: ಬಾಲಿವುಡ್​ ಹಿರಿಯ ನಟ ಧರ್ಮೇಂದ್ರ ಆರೋಗ್ಯದಲ್ಲಿಏರುಪೇರು, ಏನ್​ ಹೇಳ್ತಿದ್ದಾರೆ ವೈದ್ಯರು?

ಬಾಲಿವುಡ್ (Bollywood) ಹಿರಿಯ ನಟ ಧರ್ಮೇಂದ್ರ ಕಳೆದ ನಾಲ್ಕು ದಿನಗಳ ಹಿಂದೆ ಬೆನ್ನು ನೋವು (Back Pain) ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ಚೇತರಿಸಿಕೊಂಡ ಅವರು ನಿನ್ನೆ ಡಿಸ್ಚಾರ್ಜ್ (Discharge) ಆಗಿದ್ದಾರೆ.

ನಟ ಧರ್ಮೇಂದ್ರ

ನಟ ಧರ್ಮೇಂದ್ರ

  • Share this:
ಹಿರಿಯ ನಟ ಧರ್ಮೇಂದ್ರ (Senior Actor Dharmendra) ಅವರು 'ಸಾಮಾನ್ಯ ತಪಾಸಣೆ'(General Checkup) ಗಾಗಿ ನಗರದ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಎಂದಿನಂತೆ ಸಹಜ ತಪಾಸಣೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಟೈಮ್ಸ್ ನೌ ವರದಿಯ ಪ್ರಕಾರ, ಧರ್ಮೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಸುಮಾರು ನಾಲ್ಕು ದಿನಗಳ ಕಾಲ ತೀವ್ರ ನಿಗಾ ಘಟಕ(ICU) ದಲ್ಲಿ ಇರಿಸಲಾಗಿತ್ತು. ಬಾಲಿವುಡ್ (Bollywood) ಹಿರಿಯ ನಟ ಧರ್ಮೇಂದ್ರ ಕಳೆದ ನಾಲ್ಕು ದಿನಗಳ ಹಿಂದೆ ಬೆನ್ನು ನೋವು (Back Pain) ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ಚೇತರಿಸಿಕೊಂಡ ಅವರು ನಿನ್ನೆ ಡಿಸ್ಚಾರ್ಜ್ (Discharge) ಆಗಿದ್ದಾರೆ.

ವ್ಯಾಯಮ ಮಾಡುತ್ತಿರುವಾಗ ಬೆನ್ನು ನೋವು!

ಮೂಲಗಳ ಪ್ರಕಾರ, ಧರ್ಮೇಂದ್ರ ಅವರು ವ್ಯಾಯಾಮ ಮಾಡುತ್ತಿರುವಾಗ ಬೆನ್ನು ನೋವು ಕಾಣಿಸಿಕೊಂಡಿತ್ತು. ಈ ಕಾರಣದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ. ಇನ್ನೂ, ಈ ಬಗ್ಗೆ ಟ್ವೀಟ್‌ ಮಾಡಿ, ಸ್ನೇಹಿತರೇ ನಾನು ಹುಷಾರಾಗಿದ್ದೇನೆ. ಕಳೆದ ನಾಲ್ಕು ದಿನಗಳಿಂದ ಬೆನ್ನ ಹಿಂಭಾಗದಲ್ಲಿ ದೊಡ್ಡ ಸ್ನಾಯು ಎಳೆತದ ಕಾರಣ ನೋವನ್ನು ಅನುಭವಿಸಿದ್ದೇನೆ. ಹೀಗಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಾಯಿತು. ನಾನು ನಿಮ್ಮ ಶುಭ ಹಾರೈಕೆ ಮತ್ತು ಆಶೀರ್ವಾದದೊಂದಿಗೆ ಹಿಂತಿರುಗಿದ್ದೇನೆ. ಆದ್ದರಿಂದ, ಚಿಂತಿಸಬೇಡಿ. ಈಗ ನಾನು ಬಹಳ ಎಚ್ಚರಿಕೆಯಿಂದ ಇರುತ್ತೇನೆʼ ಎಂದು ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ರಾಜಕೀಯಕ್ಕೆ ಬರ್ತಾರಂತೆ ರಾಕಿ ಭಾಯ್​! ಜೊತೆಗೆ 'ಆ' ನಟನನ್ನು ಮೀರಿಸ್ತಾರಂತೆ ಯಶ್​

ಬಾಲಿವುಡ್​ನ ದಂತಕಥೆ ನಟ ಧರ್ಮೇಂದ್ರ!

ಭಾರತೀಯ ಚಿತ್ರರಂಗದ ದೊಡ್ಡ ತಾರೆಗಳಲ್ಲಿ ಒಬ್ಬರಾದ ಧರ್ಮೇಂದ್ರ, 1960 ರಲ್ಲಿ ಅರ್ಜುನ್ ಹಿಂಗೋರಾಣಿ ಅವರ “ದಿಲ್ ಭಿ ತೇರಾ ಹಮ್ ಭಿ ತೇರೆ” ಯೊಂದಿಗೆ ಚಲನಚಿತ್ರಗಳಿಗೆ ಪ್ರವೇಶಿಸಿದರು. ಕರಣ್ ಜೋಹರ್ ನಿರ್ದೇಶನದ “ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ” ಚಿತ್ರದಲ್ಲಿ ಧರ್ಮೇಂದ್ರ ಅವರು ಜಯಾ ಬಚ್ಚನ್, ಶಬಾನಾ ಅಜ್ಮಿ, ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ನಟಿ ಛವಿ ಮಿತ್ತಲ್ ಗೆ ಸ್ತನ ಕ್ಯಾನ್ಸರ್, ಶಸ್ತ್ರಚಿಕಿತ್ಸೆಗೂ ಮೊದಲು ವಿಡಿಯೋ ಹಂಚಿಕೊಂಡ ನಟಿ

ಹೇಮಾ ಮಾಲಿನಿ - ಧರ್ಮೇಂದ್ರ ಹಿಟ್​ ಜೋಡಿ!

ಧರ್ಮೇಂದ್ರ ಹಾಗೂ 'ಡ್ರೀಮ್‌ ಗರ್ಲ್' ಎಂದೇ ಖ್ಯಾತಿಗೊಳಗಾಗಿದ್ದ ಹೇಮಾ ಮಾಲಿನಿ ಜತೆಯಾಗಿ ರಾಜಾ ಜಾನಿ, ಸೀತಾ ಔರ್ ಗೀತಾ, ಶರಾಫತ್, ಶೋಲೇ ಹಾಗೂ ನಯಾ ಜಮಾನಾ ಸೇರಿ ಹಲವು ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ ಇಶಾ ಹಾಗೂ ಅಹಾನಾ ಎಂಬ ಇಬ್ಬರು ಪುತ್ರಿಯರು ಸಹ ಇದ್ದಾರೆ.
Published by:Vasudeva M
First published: