Deepika Padukone: ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು! ಖಾಸಗಿ ಆಸ್ಪತ್ರೆಯಲ್ಲಿ ಖ್ಯಾತ ನಟಿಗೆ ಚಿಕಿತ್ಸೆ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಶೂಟಿಂಗ್ ವೇಳೆ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಹೀಗಾಗಿ ಅವರನ್ನು ತಕ್ಷಣವೇ ಆಸ್ಪತ್ರೆಗೆ (Hospitals) ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

  • Share this:
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಶೂಟಿಂಗ್ ವೇಳೆ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಹೀಗಾಗಿ ಅವರನ್ನು ತಕ್ಷಣವೇ ಆಸ್ಪತ್ರೆಗೆ (Hospitals) ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದೀಪಿಕಾ ಅವರು ಇಂದು ಶೂಟಿಂಗ್ ಗಾಗಿ (Shooting)​ ಹೈದರಾಬಾದಿನಲ್ಲಿ (Hyderabad) ತಂಗಿದ್ದರು. ಆದರೆ ಶೂಟಿಂಗ್ ವೇಳೆ ಹೃದಯ ಬಡಿತ (Heart Beat) ಹೆಚ್ಚಳವಾದ ಕಾರಣ ಹೈದರಾಬಾದ್‌ನ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಂತರ ಚೇತರಿಸಿಕೊಂಡ ದೀಪಿಕಾ ಅವರು ನಂತರ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲದೇ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ದೀಪಿಕಾ ಪಡುಕೋಣೆ ಅವರು ಮುಂದಿನ ಚಿತ್ರದ ಶೂಟಿಂಗ್ ಹೈದರಾಬಾದಿನಲ್ಲಿ ನಡೆಯುತ್ತಿದ್ದು, ಆಸ್ಪತ್ರೆಯಿಂದ ಚಿಕಿತ್ಸೆ ಪಡೆದ ನಂತರ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.

ಶೂಟಿಂಗ್ ಸಮಯದಲ್ಲಿ ಒತ್ತಡದಿಂದ ಕೊಂಚ ಹೃದಯ ಬಡಿತ ಹೆಚ್ಚಾಗಿ, ಸುಸ್ತಾಗಿತ್ತು ಎಂದು ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಪ್ರಭಾಸ್ ಅಭಿನಯಿಸುತ್ತಿದ್ದಾರೆ.

ಪ್ರಾಜೆಕ್ಟ್ ಕೆ ಶೂಟಿಂಗ್​ನಲ್ಲಿ ದೀಪಿಕಾ:

`ಪ್ರಾಜೆಕ್ಟ್ ಕೆ’ ಶೂಟಿಂಗ್ ವೇಳೆಯಲ್ಲಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ತಕ್ಷಣ ಅವರನ್ನು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ನಂತರ ಚೇತರಿಸಿಕೊಂಡಿರುವ ದೀಪಿಕಾ ಅವರು ಶೂಟಿಂಗ್​ ನಲ್ಲಿ ಪಾಲ್ಗೊಂಡಿರುವುದಾಗಿ ತಿಳಿದುಬಂದಿದೆ. ಇನ್ನು, ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್ ನಾಯಕನರಾಗಿ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಅಮಿತಾಭ್​ ಬಚ್ಚನ್ ಕೂಡ ಪ್ರಸ್ತುತ ವೇಳಾಪಟ್ಟಿಯ ಭಾಗವಾಗಿದ್ದಾರೆ ಎಂದು ಹೇಳಲಾಗಿದೆ. ಚಿತ್ರದ ಶೂಟಿಂಗ್ ವೇಳಾಪಟ್ಟಿಯಲ್ಲಿ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಒಟ್ಟಿಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ: Ranveer Singh: ದೀಪಿಕಾಳಿಂದಾಗಿ ರಣವೀರ್ ಸಿಂಗ್ ಬೇಗ ಏಳುತ್ತಿಲ್ಲವಂತೆ; ಅಯ್ಯೋ ಅಂತದ್ದೇನು ಮಾಡ್ತಾರೆ ಡಿಪ್ಪಿ

ಇದೊಂದು ಪ್ಯಾನ್​ ಇಂಡಿಯಾ ಚಿತ್ರ:

ಪ್ಯಾನ್-ಇಂಡಿಯಾ ವೈಜ್ಞಾನಿಕ ಚಿತ್ರದಲ್ಲಿ ಸಹಜವಾಗಿಯೇ ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್ ಬ್ಯೂಟಿ ದೀಪಿಕಾ ನಡುವಿನ ಕೆಮಿಸ್ಟ್ರಿಯನ್ನು ತೆರೆ ಮೇಲೆ ನೋಡಲು ಇಬ್ಬರ ಅಭಿಮಾನಿಗಳು ಕಾಯುತ್ತಿದ್ದಾರೆ. ಅತ್ಯಂತ ದುಬಾರಿ ಭಾರತೀಯ ಸಿನಿಮಾಗಳನ್ನು ಮಾಡಿದ ಹೆಸರಾಂತ ನಿರ್ದೇಶಕರಲ್ಲಿ ನಾಗ್ ಅಶ್ವಿನ್ ಕೂಡ ಒಬ್ಬರಾಗಿದ್ದು 'ಪ್ರಾಜೆಕ್ಟ್ ಕೆ' ಚಿತ್ರ ಅಂದಾಜು 450 ರಿಂದ 500 ಕೋಟಿ ರೂಪಾಯಿಯ ಬಜೆಟ್‌ನಲ್ಲಿ ತಯಾರಾಗುತ್ತಿದೆ.


View this post on Instagram


A post shared by Prabhas (@actorprabhas)


ಕ್ಯಾನ್ ಸಿನಿಮೋತ್ಸವದಲ್ಲಿ ಜ್ಯೂರಿಯಾಗಿದ್ದ ದೀಪಿಕಾ:

ದೀಪಿಕಾ ಪಡುಕೋಟೆ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್​ ನಲ್ಲಿ ಸಹ ತಮ್ಮ ಛಾಪು ಮೂಡಿಸಿದವರು. ಕನ್ನಡದ ಐಶ್ವರ್ಯ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ದೀಪಿಕಾ ಈಗ ಜಾಗತಿಕ ತಾರೆ.  ತಮ್ಮ ಅದ್ಬುತ ನಟನೆಯ ಮೂಲಕ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ದೀಪಿಕಾ ಪ್ರಪಂಚದ ಪ್ರತಿಷ್ಟಿತ ಅವಾರ್ಡ್ ಕ್ಯಾನ್ ಸಿನಿಮೋತ್ಸವದಲ್ಲಿ ಜ್ಯೂರಿಯಾಗಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Deepika Padukone: ಕ್ಯಾನ್​​ ಫಿಲ್ಮ್ ಫೆಸ್ಟಿವಲ್​ನ ಜ್ಯೂರಿಯಾಗಿ ಬಾಲಿವುಡ್​ ಬೆಡಗಿ - ದೀಪಿಕಾ ಡ್ರೆಸ್​ ನೋಡಿ ಅಭಿಮಾನಿಗಳು ಫಿದಾ

ಸಾಲು ಸಾಲು ಚಿತ್ರಗಳಲ್ಲಿ ಡಿಪ್ಪಿ ಬ್ಯುಸಿ:

ಇನ್ನು, ದೀಪಿಕಾ ಪಡುಕೋಣೆ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಖಾನ್ ಮತ್ತು ಜಾನ್​ ಅಬ್ರಹಾಂ ಅವರ ಚಿತ್ರವಾದ ಪಠಾಣ್ ಚಿತ್ರದಲಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಹೃತಿಕ್ ರೋಷನ್ ಅವರ ಫೈಟರ್ ಮತ್ತು ಅಮಿತಾಬ್ ಬಚ್ಚನ್ ಅವರ ದಿ ಇಂಟರ್ನ್ ಚಿತ್ರಗಳಲ್ಲಿ ನಟಿಸುತ್ತಿದ್ದು, ಇದರ ನಡುವೆ ಪ್ರಾಜೆಕ್ಟ್ ಕೆ ಅಲ್ಲಿಯೂ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ.
Published by:shrikrishna bhat
First published: