Deepika Padukone: ಕೇನ್ಸ್ ಫಿಲ್ಮ್ ಫೆಸ್ಟಿವಲ್ ಜ್ಯೂರಿಯಾಗಿ ದೀಪಿಕಾ ಪಡುಕೋಣೆ, ಇವರ ರೆಡ್ ಕಾರ್ಪೆಟ್ ಲುಕ್‌ಗೆ ಅಭಿಮಾನಿಗಳು ಫಿದಾ!

ಪ್ರತಿಷ್ಠಿತ ಚಲನಚಿತ್ರ ವೇದಿಕೆಗಳಲ್ಲಿ ಒಂದಾಗಿರುವ ಕೇನ್ಸ್ ಚಲನಚಿತ್ರೋತ್ಸವಕ್ಕೆ ಈ ವರ್ಷ ತೀರ್ಪುಗಾರ ಪಟ್ಟಿಯಲ್ಲಿ ಒಬ್ಬರಾಗಿ ಬಾಲಿವುಡ್ ಸ್ಟಾರ್‌ ನಟಿ ದೀಪಿಕಾ ಪಡುಕೋಣೆ ಅವರ ಹೆಸರು ಇದ್ದು, ಭಾರತವನ್ನು ಪ್ರತಿನಿಧಿಸಲಿದ್ದಾರೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

  • Share this:
ನೀವು ಬಾಲಿವುಡ್ (Bollywood) ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ದೊಡ್ಡ ಅಭಿಮಾನಿಯಾಗಿದ್ದರೆ, ನಿಮಗೆ ಇತ್ತೀಚೆಗೆ ಬಂದ ಸುದ್ದಿ ತಿಳಿದೇ ಇರುತ್ತದೆ. ಹೌದು, ಪ್ರತಿಷ್ಠಿತ ಚಲನಚಿತ್ರ ವೇದಿಕೆಗಳಲ್ಲಿ ಒಂದಾಗಿರುವ ಕೇನ್ಸ್ ಚಲನಚಿತ್ರೋತ್ಸವಕ್ಕೆ (Cannes Film Festival) ಈ ವರ್ಷ ತೀರ್ಪುಗಾರ ಪಟ್ಟಿಯಲ್ಲಿ ಒಬ್ಬರಾಗಿ ಬಾಲಿವುಡ್ ಸ್ಟಾರ್‌ ನಟಿ ದೀಪಿಕಾ ಪಡುಕೋಣೆ ಅವರ ಹೆಸರು ಇದ್ದು, ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಬಾರಿಯ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟಿ ದೀಪಿಕಾ ಪಡುಕೋಣೆ ಮುಖ್ಯ ತೀರ್ಪುಗಾರರ ಭಾಗವಾಗಲಿದ್ದಾರೆ. ಫೆಸ್ಟಿವಲ್ ಡಿ ಕೇನ್ಸ್‌ನ ಅಧಿಕೃತ ಟ್ವಿಟ್ಟರ್‌ ಖಾತೆಯು ಈ ಸುದ್ದಿಯನ್ನು ತಮ್ಮ ಅಧಿಕೃತ ಟ್ವಿಟ್ಟರ್‌ (Twitter) ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, 8 ತೀರ್ಪುಗಾರರ ಸದಸ್ಯರೊಂದಿಗೆ 75ನೇ ಫೆಸ್ಟಿವಲ್ ಡಿ ಕೇನ್ಸ್‌ನ ತೀರ್ಪುಗಾರರ ಅಧ್ಯಕ್ಷರಾಗಿ ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಅವರನ್ನು ಘೋಷಿಸಿದ್ದಾರೆ.

ದೀಪಿಕಾ ಅವರಲ್ಲದೆ, ತೀರ್ಪುಗಾರರಲ್ಲಿ ರೆಬೆಕಾ ಹಾಲ್, ಅಸ್ಗರ್ ಫರ್ಹಾದಿ, ಲಾಡ್ಜ್ ಲೈ, ಜೆಫ್ ನಿಕೋಲ್ಸ್, ಜೋಕಿಮ್ ಟ್ರೈಯರ್, ನೂಮಿ ರಾಪೇಸ್ ಮತ್ತು ಜಾಸ್ಮಿನ್ ಟ್ರಿಂಕಾ ಇದ್ದಾರೆ. ಈ ಉತ್ಸವವು ಮೇ 17 ರಿಂದ 26 ರವರೆಗೆ ಫ್ರೆಂಚ್ ರಿವೇರಾದಲ್ಲಿ ನಡೆಯಲಿದೆ.

ಈ ಸುದ್ದಿ ಆನ್‌ಲೈನ್‌ನಲ್ಲಿ ಪ್ರಕಟವಾದ ನಂತರ, ದೀಪಿಕಾ ಅವರ ಅಭಿಮಾನಿಗಳು ತುಂಬಾನೇ ಖುಷಿ ಪಟ್ಟಿದ್ದಾರೆ ಮತ್ತು ಪ್ರತಿಷ್ಠಿತ ಫೆಸ್ಟಿವಲ್ ಡಿ ಕೇನ್ಸ್‌ ತೀರ್ಪುಗಾರರಲ್ಲಿ ಅವರ ಸೇರ್ಪಡೆಯನ್ನು ಆಚರಿಸಿದ್ದಾರೆ. ಈ ತಾರೆಯು ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ ಮತ್ತು ಪ್ರತಿ ಬಾರಿಯ ಲುಕ್ ಆನ್‌ಲೈನ್‌ನಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದುವರೆಗೆ ಕೇನ್ಸ್ ಚಲನಚಿತ್ರೋತ್ಸವದಲ್ಲಿ ದೀಪಿಕಾ ಅವರು ಹಾಕಿದಂತಹ ಎಲ್ಲಾ ಉಡುಪುಗಳ ಒಂದು ನೋಟ ಇಲ್ಲಿದೆ ನೋಡಿ.

ಇದನ್ನೂ ಓದಿ: KGF 2 ಅಬ್ಬರಕ್ಕೆ ಬಾಲಿವುಡ್ ಶೇಕ್, ಬಾಕ್ಸ್ ಆಫೀಸ್ ಸುಲ್ತಾನನಾದ ರಾಕಿ ಬಾಯ್!​

ಬಹುಶಃ ಕೇನ್ಸ್ ಚಲನಚಿತ್ರೋತ್ಸವದಲ್ಲಿ ದೀಪಿಕಾ ಪಡುಕೋಣೆ ಅವರ ಅತ್ಯಂತ ಸ್ಮರಣೀಯ ಲುಕ್‌ಗಳಲ್ಲಿ ಒಂದು ಗಿಯಾಂಬಾಟಿಸ್ಟಾ ವಲ್ಲಿ ಗೌನ್ ಆಗಿರಬೇಕು. ಜಿಯಾಂಬಟಿಸ್ಟಾ ವಲ್ಲಿಯಿಂದ ಆಡಂಬರದ ಹಸಿರು ಬಣ್ಣದ ಉಡುಪು ಒಟಿಟಿ ರಫಲ್ಸ್, ಹೈ-ಲೋ ಹೆಮ್ ಮತ್ತು ಬಿಲ್ಲಿನಾಕಾರದ ನೆಕ್‌ಲೈನ್ ಅನ್ನು ಒಳಗೊಂಡಿತ್ತು. ಅವರು ತಮ್ಮ ಕೂದಲಿಗೆ ಗುಲಾಬಿ ಚಿನ್ನದ ಹೂವಿನ ಹೆಡ್ ವ್ರಾಪ್ ಅನ್ನು ಹಾಕಿದ್ದರು.

1. ಆಶಿ ಸ್ಟುಡಿಯೋ ಫುಚ್ಸಿಯಾ ಪಿಂಕ್ ಗೌನ್:

ದೀಪಿಕಾ ಅವರ ಮತ್ತೊಂದು ಆಕರ್ಷಕ ಲುಕ್ ಎಂದರೆ ಅವರ ಸ್ಪ್ರಿಂಗ್ ಮತ್ತು ಸಮ್ಮರ್ '18 ಕಲೆಕ್ಷನ್‌ನಲ್ಲಿರುವ ಈ ಆಶಿ ಸ್ಟುಡಿಯೋ ಉಡುಗೆ ಅಂತಾನೆ ಹೇಳಬಹುದು. ನಿಯೋನ್ಸ್ ಕೂಡ ನಂತರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅದೇ ಉಡುಪನ್ನು ಧರಿಸಿದ್ದರು. ಎಕ್ಸ್ಎಕ್ಸ್ಎಲ್ ಪವರ್ ಭುಜಗಳು ಮತ್ತು ರಫಲ್‌ಗಳೊಂದಿಗೆ ಹೈ ಆಕ್ಟೇನ್ ಡ್ರಾಮಾದ ಬಗ್ಗೆ ದೀಪಿಕಾ ಉಡುಗೆಯಲ್ಲಿ ತುಂಬಾನೇ ಚೆನ್ನಾಗಿ ಕಾಣುತ್ತಿದರು. ಪಚ್ಚೆ ಹನಿ ಕಿವಿಯೋಲೆಗಳು ಮತ್ತು ಬೋಲ್ಡ್ ಮೇಕಪ್ ಲುಕ್ ಸಹ ಇದರಲ್ಲಿ ನೋಡಬಹುದಾಗಿತ್ತು.

2. ಜುಹೈರ್ ಮುರಾದ್ ಡ್ರೆಸ್:

ಇಷ್ಟೇ ಅಲ್ಲದೆ 2018 ರಲ್ಲಿ, ದೀಪಿಕಾ ಪಡುಕೋಣೆ ಕನಸಿನ ಜುಹೈರ್ ಮುರಾದ್ ಸೃಷ್ಟಿಯನ್ನು ಧರಿಸಿ ಕೇನ್ಸ್ ರೆಡ್ ಕಾರ್ಪೆಟ್‌ನ ಮೇಲೆ ನಡೆದರು. ಅವಳ ಗೌನ್ ಆಕರ್ಷಕ ಕಸೂತಿ ಮಾಡಿದ ಕೇಪ್ ಮತ್ತು ಸಂಪೂರ್ಣ ಬಾಡಿಕಾನ್ ಓವರ್ ಲೇಯೊಂದಿಗೆ ಸೂಕ್ಷ್ಮವಾದ ಫಿಶ್ ಟೇಲ್ ಸಿಲ್ಹೌಟ್ ಅನ್ನು ಹೊಂದಿತ್ತು. ಸರಳ ಗ್ಲಾಮ್ ಮತ್ತು ವಜ್ರದ ಆಭರಣಗಳು ಈ ಮನಮೋಹಕ ಕ್ಷಣಕ್ಕೆ ಕಾಲ್ಪನಿಕ ಕಥೆಯಂತಹ ಅನುಭವವನ್ನು ನೀಡಿದವು ಎಂದು ಹೇಳಬಹುದು.

ಇದನ್ನೂ ಓದಿ: Priyanka Chopra: ಮಿರರ್​ ಸೆಲ್ಫಿ ಶೇರ್​ ಮಾಡಿಕೊಂಡ ಪಿಗ್ಗಿ! ನೀವೇ ಒಂದ್​ ಶೂ ರೂಂ ಇಡ್ಬಹುದು ಎಂದಿದ್ಯಾಕೆ ನೆಟ್ಟಿಗರು?

3. ದಿ ಡುಂಡಾಸ್ ಮೋನೋಕ್ರೋಮ್ ಲುಕ್:

ನಟಿ ದೀಪಿಕಾ 2019 ರಲ್ಲಿ ಪೀಟರ್ ಡುಂಡಾಸ್ ರಚಿಸಿದ ಮತ್ತೊಂದು ಬೆರಗುಗೊಳಿಸುವ ಉಡುಪನ್ನು ಧರಿಸಿ ಕೇನ್ಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ನಡೆದರು. ಉದ್ದದ ಉಡುಪು, ಮುಂಭಾಗದಲ್ಲಿ ಉತ್ಪ್ರೇಕ್ಷಿತ ಕಪ್ಪು ಬಿಲ್ಲು, ಬದಿಯಲ್ಲಿ ತೊಡೆ-ಎತ್ತರದವರೆಗೆ ಆ ಉಡುಪು ತೆರೆದುಕೊಂಡಿದ್ದು ಮತ್ತು ಒಟಿಟಿ ಉಬ್ಬಿದ ಭುಜಗಳನ್ನು ಒಳಗೊಂಡ ಕಪ್ಪು ಮತ್ತು ಬಿಳುಪು ಡುಂಡಾಸ್ ಉಡುಪಿನಲ್ಲಿ ಅವರು ರಾಕೆಟ್‌ಮ್ಯಾನ್ ಪ್ರೀಮಿಯರ್‌ನಲ್ಲಿ ಭಾಗವಹಿಸಿದ್ದರು. ಅವಳ ಎತ್ತರದ ಪೋನಿಟೇಲ್ ಮತ್ತು ರೆಕ್ಕೆಯ ಐಲೈನರ್ ಅವರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿತ್ತು ಎಂದು ಹೇಳಬಹುದು.

4. ವಿಕ್ಟೋರಿಯಾ ಹೇಯ್ಸ್ ಪ್ಯಾಂಟ್ ಸೂಟ್:

2018 ರ ಕೇನ್ಸ್ ಚಲನಚಿತ್ರೋತ್ಸವದ ಪತ್ರಿಕಾ ದಿನದ ಆವೃತ್ತಿಯಲ್ಲಿ ದೀಪಿಕಾ ಪಡುಕೋಣೆ ಬಾಸ್ ಬೇಬ್ ಆಗಿ ಬದಲಾದರು. ಬೆರಗುಗೊಳಿಸುವ ವಿಕ್ಟೋರಿಯಾ ಹೇಯ್ಸ್ ನೇರಳೆ ಪವರ್ ಸೂಟ್‌ನಲ್ಲಿ ತಾರೆ ಶರ್ಟ್ ಲೆಸ್ ಆಗಿ ಹೋದರು, ಈ ಪ್ಯಾಂಟ್ ಸೂಟ್‌ನಲ್ಲಿ ಅವರ ಉದ್ದವಾದ ಕಾಲುಗಳನ್ನು ಪ್ರದರ್ಶಿಸಿತು. ಚಿನ್ನದ ಆಭರಣಗಳು, ಅವಳ ಸಿಗ್ನೇಚರ್ ಕೇಶವಿನ್ಯಾಸ ಮತ್ತು ಬೋಲ್ಡ್ ಮೇಕಪ್‌ನೊಂದಿಗೆ ಜೋಡಿಸಲಾದ ಟೈಲರ್ಡ್ ಬ್ಲೇಜರ್ ಮತ್ತು ಫ್ಲೇರ್ಡ್ ಪ್ಯಾಂಟ್‌ಗಳನ್ನು ಸಹ ಈ ಲುಕ್ ಒಳಗೊಂಡಿತ್ತು.

5. ದಿ ಶೀರ್ ಮಾರ್ಚೆಸಾ ಮೊಮೆಂಟ್:

2017 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟಿ ದೀಪಿಕಾ ಅವರ ಮತ್ತೊಂದು ಸುಂದರವಾದ ಲುಕ್ ಎಂದರೆ ಅದು ಅವರು ಈ ಮಾರ್ಚೆಸಾ ಗೌನ್‌ನಲ್ಲಿ ಕಾಣಿಸಿ ಕೊಂಡಿದ್ದು ಎಂದು ಹೇಳಬಹುದು. ಒಂದು-ಭುಜದ ಮಾರ್ಸಲಾ-ಹ್ಯೂಡ್‌ನಿಂದ ಅಲಂಕೃತವಾದ ಉದ್ದನೆಯ ಡ್ರೆಸ್ ಇದಾಗಿತ್ತು. ಸೀ-ಥ್ರೂ ಪದರಗಳು ಈ ಬಟ್ಟೆಗೆ ಮಾದಕತೆಯ ಟಚ್ ನೀಡಿದ್ದು ನಾವು ನೋಡಬಹುದು.

6. ಆಲ್ಬರ್ಟಾ ಫೆರೆಟ್ಟಿಯಲ್ಲಿ ದೀಪಿಕಾ ಲುಕ್:

2018 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ದೀಪಿಕಾ ಧರಿಸಿದ್ದ ಬೆಳ್ಳಿಯ ಆಲ್ಬರ್ಟಾ ಫೆರೆಟ್ಟಿ ಉಡುಗೆ ಈ ಪಟ್ಟಿಯಲ್ಲಿ ದೀಪಿಕಾ ಅವರ ಕೊನೆಯ ಮತ್ತು ನೆಚ್ಚಿನ ಲುಕ್‌ನಲ್ಲಿ ಒಂದಾಗಿದೆ. ಮಿನುಗುವ ನೆಕ್‌ಲೈನ್ ಮತ್ತು ಸ್ಕರ್ಟ್ ಅನ್ನು ಒಳಗೊಂಡ ಈ ಉಡುಪು ಗ್ಲಾಮ್ ಆಗಿತ್ತು ಎಂದು ಹೇಳಬಹುದು. ಬಂಗಾರದ ಗಾತ್ರದ ಹೂಪ್‌ಗಳು, ಇವರ ಕೂದಲು ಮತ್ತು ಕೆಂಪು ತುಟಿಗಳು ಇವರ ಈ ಲುಕ್‌ಗೆ ಇನ್ನಷ್ಟು ಮೆರಗನ್ನು ತಂದುಕೊಟ್ಟಿತ್ತು.
Published by:shrikrishna bhat
First published: