ಬಾಲಿವುಡ್ ನಟರು ಕನ್ನಡ ಸಿನಿ (Bollywood Actor Anupam Kher) ಪತ್ರಕರ್ತರಿಗೆ ಸಿಗೋದೇ ಕಷ್ಟ. ಅವರೆಲ್ಲ ಬೆಂಗಳೂರಿಗೆ ಹಾಗೆ ಬಂದು ಹೀಗೆ ಹೋಗಿ ಬಿಡ್ತಾರೆ. ಆದರೆ ಲಕ್ ಇದ್ರೇ ಏನೆಲ್ಲ ಆಗ್ತದೆ ಅನ್ನೋದಕ್ಕೆ ಇಲ್ಲೊಂದು ಕಥೆ ಇದೆ. ಅದು ಬೇಬಿ (Bollywood Baby Movie) ಸಿನಿಮಾದ ಮೂಲಕವೇ ನನಗೆ ಒದಗಿ ಬಂದಿತ್ತು. ಸಿನಿಮಾ ಪತ್ರಕರ್ತನಾಗಿಯೇ ಇದ್ದದ್ದಕ್ಕೆ ಅದು ಸಾಧ್ಯವಾಗಿತ್ತು. 2015ರ ಜನವರಿ 23ಕ್ಕೆ ಬೇಬಿ (Bollywood Baby Cinema) ಸಿನಿಮಾ ರಿಲೀಸ್ ಆಗೋದಿತ್ತು. ಅದಕ್ಕಾಗಿಯೇ ಬೇಬಿ ಸಿನಿಮಾ ತಂಡ ಒಂದು ಪಕ್ಕಾ ಐಡಿಯಾ (Bollywood Actor Akshya kumar) ಮಾಡಿತ್ತು. ಸಿನಿಮಾ ನಟರನ್ನೆ ಎಲ್ಲಾ ಊರಿಗೆ ಕರೆದುಕೊಂಡು ಹೋಗುವ ಬದಲು, ಎಲ್ಲ ಊರಿನ ಪತ್ರಕರ್ತನ್ನ ಮುಂಬೈಗೆ ಕರೆಸಿದ್ರೇ ಹೇಗೆ ಅಂತ ಯೋಚನೆ ಮಾಡಿ ಅದನ್ನ ಕಾರ್ಯರೂಪಕ್ಕೂ ತಂದಿದ್ದರು.
ಅದಕ್ಕೇನೆ ನನಗೂ ಮುಂಬೈಗೆ ಹೋಗುವ ಚಾನ್ಸ್ ಸಿಕ್ಕಿಯೇ ಬಿಡ್ತು ನೋಡಿ.
ಬಾಲಿವುಡ್ ನಟರು ತುಂಬಾ ಹಂಬಲ್-ಮಾತು ಆಡ್ತಾನೇ ಹೋದ್ರು
ಬಾಲಿವುಡ್ನ ಬೇಬಿ ಸಿನಿಮಾದಲ್ಲಿ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಇದ್ದರು. ತಾಪ್ಸಿ ಪನ್ನು ಕೂಡ ಈ ಚಿತ್ರದ ನಾಯಕಿನೇ ಆಗಿದ್ದರು. ದಕ್ಷಿಣದ ರಾಣಾ ದಗ್ಗುಬಾಟಿ ಕೂಡ ಈ ಸಿನಿಮಾದ ಒನ್ ಆಫ್ ದಿ ಹೀರೋನೇ ಆಗಿದ್ದರು.
ಇವರು ತಮ್ಮ ಚಿತ್ರ ಪ್ರಚಾರಕ್ಕೆ ಮುಂಬೈಯಲ್ಲಿಯೇ ಇದ್ದರು. 2015 ಜನವರಿ-23ಕ್ಕೆ ಸಿನಿಮಾ ರಿಲೀಸ್ ಆಗೋದಿತ್ತು. ಅದಕ್ಕಾಗಿಯೇ ಮುಂಬೈನ ಹೆಸರಾಂತ ಹೋಟೆಲ್ನಲ್ಲಿಯೇ ಇವರೆಲ್ಲ ಒಬ್ಬೊಬ್ಬರಾಗಿಯೇ ರೂಮ್ನಿಂದ ಹೊರ ಬಂದ್ರು, ಪತ್ರಕರ್ತರ ಎದರು ಕುಳಿತು ಮಾತನಾಡಿದ್ರು.
ದೂರದ ಬೆಂಗಳೂರಿನಿಂದ, ಹೈದ್ರಾಬಾದ್ನಿಂದ, ತಮಿಳುನಾಡಿನಿಂದ ಹೀಗೆ ಎಲ್ಲ ರಾಜ್ಯದಿಂದಲೂ ಬಂದ ಪತ್ರಕರ್ತರ ಜೊತೆಗೆ ಇವರೆಲ್ಲ ಮಾತಾಡಿದ್ರು. ಬೇಸರ ಏನೂ ಮಾಡಿಕೊಳ್ಳದೇನೆ ಸಿನಿಮಾ ಬಗ್ಗೆ ಎಲ್ಲರಿಗೂ ಮಾಹಿತಿ ಕೊಟ್ಟರು.
ಅಕ್ಷಯ್ ಕುಮಾರ್ ಸಾಹಸಿಂಹ ವಿಷ್ಣು ನೆನದರು
ಹೌದು, ಅಕ್ಷಯ್ ಕುಮಾರ್ ನಮ್ಮ ಜೊತೆಗೂ ಮಾತನಾಡಿದರು. ಕನ್ನಡ ಮೀಡಿಯಾ ಅಂತ ಏನೂ ಕೆಟ್ಟದಾಗಿ ನಡೆದುಕೊಳ್ಳಲಿಲ್ಲ. ಕೇಳಿದ ಪ್ರಶ್ನೆಗೆ ಕೂಲ್ ಆಗಿಯೇ ಉತ್ತರ ಕೊಟ್ಟರು. ಅಕ್ಷಯ್ ಅವರಿಗೆ ಕನ್ನಡ ಸಿನಿಮಾಗಳ ಬಗ್ಗೆ ಒಂಚೂರು ತಿಳಿದಿತ್ತು. ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆನೂ ಗೊತ್ತಿತ್ತು.
ಯಾಕೆಂದ್ರೆ, ವಿಷ್ಣುವರ್ಧನ್ ಅವರ ಜೊತೆಗೆ ವಿಷ್ಣು-ವಿಜಯ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದರು. ಕೇಶು ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೂಡ ಪ್ರಮುಖ ಪಾತ್ರವನ್ನೆ ಮಾಡಿದ್ದರು. ಆ ಹಿನ್ನೆಲೆಯಲ್ಲಿಯೇ ಅಕ್ಷಯ್ ಕುಮಾರ್ ವಿಷ್ಣುವರ್ಧನ್ ಅವರ ಬಗ್ಗೆ ಕೇಳಿದಾಗ, ತಟ್ ಅಂತಲೇ ನೆನಪಿಸಿಕೊಂಡರು.
ಪಕ್ಕದಲ್ಲಿಯೇ ಇದ್ದ ಚಿತ್ರದ ಇನ್ನೂ ಒಬ್ಬ ಕಲಾವಿದರು, ನೀವು ಕನ್ನಡ ಸಿನಿಮಾನೂ ಮಾಡಿದ್ರಾ ಅಂತಲೇ ಕೇಳಿದ್ರು, ಆಗ ಹೌದು, ಸುಮಾರು ಹಿಂದೆ ವಿಷ್ಣುವರ್ಧನ್ ಜೊತೆಗೆ ವಿಷ್ಣು ವಿಜಯ್ ಸಿನಿಮಾ ಮಾಡಿದ್ದೇನೆ. ವಿಷ್ಣುವರ್ಧನ್ ನಿಜಕ್ಕೂ ಗ್ರೇಟ್ ಆರ್ಟಿಸ್ಟ್ ಅಂತಲೇ ಅಕ್ಷಯ್ ಕುಮಾರ್ ಮನದುಂಬಿ ಹೊಗಳಿದರು.
ಅನುಪಮ್ ಖೇರ್-ರಾಣಾ ದಗ್ಗುಬಾಟಿ ಒಟ್ಟಿಗೆ ಸಿಕ್ಕೇ ಬಿಟ್ಟರು
ಅನುಪಮ್ ಖೇರ್ ಮತ್ತು ರಾಣಾ ದಗ್ಗುಬಾಟಿ ಒಟ್ಟಿಗೆ ಮಾತಿಗೆ ಸಿಕ್ಕರು. ಆಗಲೇ ನೋಡಿ ಮಜವಾದ ಇಂಟರ್ವ್ಯೂವ್ ಆಗಿರೋದು. ನಿಜಕ್ಕೂ ಆ ಕ್ಷಣ ಅನುಪಮ್ ಖೇರ್ ನನಗೆ ಒಬ್ಬ ಗ್ರೇಟ್ ಕಲಾವಿದ ಅನ್ನೋದು ತಿಳಿದು ಹೋಯಿತು.
ಒಂದೇ ಜಾಗದಲ್ಲಿ ನಾವು ಮೂರು ಭಾಷೆಯ ಜನ ಇದ್ದೇವೆ. ನೀವು ಕನ್ನಡ ಮಾತನಾಡುತ್ತೀರಾ. ರಾಣಾ ದಗ್ಗುಬಾಟಿಯದ್ದು ತೆಲುಗು ಭಾಷೆನೇ ಆಗಿದೆ. ನನ್ನದು ಹಿಂದಿ ಭಾಷೆ ಆಗಿದೆ. ಎಂತಹ ಅದ್ಭುತ ಕ್ಷಣ ಅಲ್ವೇ? ಮೂರು ಭಾಷೆಯ ಜನರ ಸಂಗಮವೇ ಆಗಿದೆ ಅಲ್ವೇ?
ಹೀಗೆ ಹೇಳಿದ ಅನುಪಮ್ ಖೇರ್ ನಾವೆಲ್ಲ ಒಂದೇ ಅಲ್ವೇ? ಅಂತಲೂ ಕೇಳಿದರು.
ಅವರ ಈ ಮಾತು ನನಗೆ ತುಂಬಾ ಖುಷಿ ತಂದಿತ್ತು. ನನಗೆ ಅಂದು ಬೇಕಿದ್ದ ಕಂಟೆಂಟ್ ಕೂಡ ಸಿಕ್ಕಿತ್ತು. ಜಾಲಿ ಜಾಲಿಯಾಗಿಯೇ ಇಡೀ ಇಂಟರವ್ಯೂವ್ ಮುಗಿಸಿದ್ದು ಆಯಿತು.
ಇದನ್ನೂ ಓದಿ: BBK Deepika Das: ಬ್ಯಾಕ್ ಟು ಬ್ಯಾಕ್ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ದೀಪಿಕಾ ದಾಸ್!
ಬೇಬಿ ಸಿನಿಮಾದಿಂದಲೇ ನಾನು ಫಸ್ಟ್ ಟೈಮ್ ಮುಂಬೈಗೆ ಹೋಗೋಕೆ ಸಾಧ್ಯವಾಯಿತು. ಫಸ್ಟ್ ಟೈಮ್ ವಿಮಾನ ಹತ್ತಲು ಕೂಡ ಸಾಧ್ಯವಾಯಿತು. ಇಷ್ಟೆಲ್ಲ ಸಾಧ್ಯತೆಗಳನ್ನ ಮಾಡಿಕೊಟ್ಟ ಬಾಲಿವುಡ್ನ ಬೇಬಿ ಸಿನಿಮಾ ನನ್ನ ಲೈಫ್ನ ವಿಶೇಷ ಚಿತ್ರವೇ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ