Shivarajkumar: ಎಂಥಾ ಮುಟ್ಟಾಳ ಕೆಲಸ! ರಿಷಬ್ ಶೆಟ್ರನ್ನು ಅವಮಾನಿಸಿದ್ರಾ ಬಾಲಿವುಡ್ ನಟ?

ರಿಷಬ್ ಶೆಟ್ಟಿ ಅವರನ್ನು ಅವಮಾನಿಸಿದ್ರಾ ಅನುಪಮ್ ಖೇರ್?

ರಿಷಬ್ ಶೆಟ್ಟಿ ಅವರನ್ನು ಅವಮಾನಿಸಿದ್ರಾ ಅನುಪಮ್ ಖೇರ್?

ಎಂತಹ ಮುಟ್ಟಾಳ ಕೆಲಸ ಎಂದು ಬಾಲಿವುಡ್ ಹಿರಿಯ ನಟ ರಿಷಬ್ ಶೆಟ್ಟಿ ಅವರಿಗೆ ಹೇಳಿದ್ದೇಕೆ? ಅಸಲಿಗೆ ಬೆಂಗಳೂರಿನಲ್ಲಿ ಆಗಿದ್ದೇನು?

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:
  • published by :

ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ (Ghost Movie Updates) ಅಭಿನಯದ ಘೋಸ್ಟ್ ಸಿನಿಮಾ ಎರಡು ಭಾಗದಲ್ಲಿ ಬರ್ತಿದೆ. ಅಧಿಕೃತವಾಗಿಯೇ ಚಿತ್ರ ತಂಡ ಇದನ್ನ ಹೇಳಿಕೊಂಡಿದೆ. ಅನುಪಮ್ ಖೇರ್ ಅವರನ್ನ ಬಾಲಿವುಡ್‌ನಿಂದ ಕರೆತಂದ ಹಿನ್ನೆಲೆಯಲ್ಲಿ ಸಿನಿಮಾ ಟೀಮ್ ಒಂದು ಪ್ರೆಸ್‌ ಮೀಟ್ ಅರೇಂಜ್ ಮಾಡಿತ್ತು. ಆ ಸಮಯದಲ್ಲಿ (Anupam Kher in Ghost Movie) ಇಡೀ ಸಿನಿಮಾ ತಂಡ ಸಾಕಷ್ಟು ಇಂಟ್ರಸ್ಟಿಂಗ್ ವಿಷಯಗಳನ್ನ ಹೇಳಿಕೊಂಡಿದೆ. ವಿಶೇಷವಾಗಿಯೇ ಇದೇ ವೇಳೆ ರಿಷಬ್ ಶೆಟ್ರಿಗೆ ಕನ್ನಡದಲ್ಲಿಯೇ ಅನುಪಮ್ ಖೇರ್ ಪ್ರಾಂಕ್‌ (Shiva Rajkumar Ghost Updates) ಮಾಡಿರೋ ವಿಷಯ ಕೂಡ ರಿವೀಲ್ ಆಗಿದೆ. ಈ ಫ್ರಾಂಕ್‌ಲ್ಲಿ ಶಿವಣ್ಣ ಕೂಡ ಇರೋದು ವಿಶೇಷ. ಇದು ಸೇರಿದಂತೆ ಘೋಸ್ಟ್ ಸಿನಿಮಾದ ಒಂದಷ್ಟು (Shivanna Movie Updates) ಮಾಹಿತಿ ಇಲ್ಲಿದೆ ಓದಿ.


ರಿಷಬ್ ಶೆಟ್ರಿಗೆ ಪ್ರಾಂಕ್ ಮಾಡಿದ ಅನುಪಮ್ ಖೇರ್ !


ಘೋಸ್ಟ್ ಸಿನಿಮಾದ ಪ್ರೆಸ್‌ ಮೀಟ್‌ನಲ್ಲಿ ಕಾಂತಾರ ಚಿತ್ರದ ವಿಷಯ ಕೂಡ ಬಂತು. ರಿಷಬ್ ಶೆಟ್ರ ಪ್ರಾಂಕ್ ಕಥೆ ಕೂಡ ರಿವೀಲ್ ಆಯಿತು. ನಿಜ, ಘೋಸ್ಟ್ ಪ್ರೆಸ್ ಮೀಟ್ ನಡೆಯೋ ಸಮಯದಲ್ಲಿ ಅನುಪಮ್ ಖೇರ್ ಮಾತನಾಡೋ ವೇಳೆ ಒಂದು ಪ್ರಶ್ನೆ ಕೂಡ ಪತ್ರಕರ್ತರಿಂದ ತೂರಿ ಬಂತು.


Kannada Actor Shiva Rajkumar Acted Ghost Movie Latest Updates
ನಾನು ಕಾಂತಾರ ನೋಡಿದ್ದೇನೆ-ಅನುಪಮ್ ಖೇರ್


ನಾನು ಕಾಂತಾರ ನೋಡಿದ್ದೇನೆ-ಅನುಪಮ್ ಖೇರ್


ಇತ್ತೀಚಿಗೆ ನೀವು ನೋಡಿದ ಕನ್ನಡ ಸಿನಿಮಾ ಯಾವುದು? ಈ ಒಂದು ಪ್ರಶ್ನೆಗೆ ಅನುಪಮ್ ಖೇರ್ ಉತ್ತರ ಕೊಟ್ಟರು. ನಾನು ಇತ್ತೀಚಿಗೆ ನೋಡಿದ ಕನ್ನಡ ಸಿನಿಮಾ ಬೇರೆ ಯಾರೋದು ಅಲ್ಲ. ಅದು ಕಾಂತಾರ ಚಿತ್ರ ಆಗಿದೆ ಅಂತಲೇ ಅನುಪಮ್ ಖೇರ್ ಹೇಳಿದರು.




ಇದೇ ಸಮಯದಲ್ಲಿ ಅನುಪಮ್ ಖೇರ್ ಇನ್ನೂ ಒಂದು ವಿಷಯ ರಿವೀಲ್ ಮಾಡಿದರು. ಬೆಂಗಳೂರಿಗೆ ಬಂದ್ಮೇಲೆ ನಾನು ರಿಷಬ್‌ಗೆ ಸಂದೇಶ ಕಳಿಸಿದೆ. ನಾನು ಬೆಂಗಳೂರಿಗೆ ಬಂದಿದ್ದೇನೆ. ಯಾವಾಗ ನಾನು ನಿಮ್ಮನ್ನ ಭೇಟಿ ಆಗಬಹುದು ಅಂತ ಎಸ್‌ಎಮ್‌ಎಸ್ ಕಳಿಸಿದ್ದೆ. ಆಗ ರಿಷಬ್ ರಿಪ್ಲೈ ಮಾಡಿದರು. ನಾನು ನನ್ನ ಊರು ಕುಂದಾಪುರದಲ್ಲಿದ್ದೇನೆ ಅಂತ ಹೇಳಿದರು.


ಕಾಂತಾರ ರಿಷಬ್ ಶೆಟ್ರಿಗೆ ಪ್ರಾಂಕ್- ಶಿವಣ್ಣ ಸಾಥ್


ಆ ಒಂದು ಸಮಯದಲ್ಲಿಯ ಅನುಪಮ್ ಖೇರ್ ಒಂದು ಐಡಿಯಾ ಮಾಡಿದ್ದರು. ಕನ್ನಡದಲ್ಲಿಯೇ ರಿಷಬ್‌ ಶೆಟ್ಟಿಗೆ ಸಂದೇಶ ಕಳಿಸಬೇಕು ಅಂತ ಪ್ಲಾನ್ ಮಾಡಿದರು. ಪಕ್ಕದಲ್ಲಿಯೇ ಇದ್ದ ಶಿವರಾಜ್ ಕುಮಾರ್ ಅವರಿಗೆ ಕನ್ನಡದಲ್ಲಿಯೇ ಒಂದು ಸಂದೇಶ ಬರೆದುಕೊಡಿ ಅಂತ ಹೇಳಿದರು. ಆ ಸಂದೇಶ ಹೀಗಿದೆ.


Kannada Actor Shiva Rajkumar Acted Ghost Movie Latest Updates
ರಿಷಬ್ ಶೆಟ್ರಿಗೆ ಪ್ರಾಂಕ್ ಮಾಡಿದ ಅನುಪಮ್ ಖೇರ್ !


ಎಂತಹ ಮುಟ್ಟಾಳ ಕೆಲಸ. ನೀನು ಇಲ್ಲಿ ಇರಬೇಕಿತ್ತು ನನ್ನ ವೆಲ್‌ ಕಮ್‌ ಮಾಡೋದಕ್ಕೆ. ಹೀಗೆ ಕನ್ನಡದಲ್ಲಿಯೇ ಅನುಪಮ್ ಖೇರ್, ರಿಷಬ್ ಶೆಟ್ಟಿಗೆ ಸಂದೇಶ ಕಳಿಸಿದ್ದರು. ಆಗ ಅದನ್ನ ಓದಿದ ರಿಷಬ್ ಶಾಕ್ ಆದರು. ಆ ಕೂಡಲೇ ನನಗೆ ಕಾಲ್ ಮಾಡಿದರು. ಯಾರು ನಿಮಗೆ ಇದನ್ನ ಬರೆದುಕೊಟ್ಟದ್ದು ಎಂದು ಕೇಳಿದರು ಅಂತ ಅನುಪಮ್ ಕೇರ್ ಪ್ರೆಸ್ ಮೀಟ್‌ಲ್ಲಿ ಹೇಳಿದರು.


ಅನುಪಮ್ ಖೇರ್ ಬರೋ ವಿಷಯ ರಿವೀಲ್ ಮಾಡಿದ್ಯಾರು ಗೊತ್ತೇ?


ಕನ್ನಡಕ್ಕೆ ಅನುಪಮ್ ಖೇರ್ ಬರ್ತಿದ್ದಾರೆ ಅನ್ನೋ ವಿಷಯ ಗೌಪ್ಯವಾಗಿಯೇ ಇತ್ತು. ಆದರೆ ಅದನ್ನ ಚಿತ್ರದ ನಿರ್ಮಾಪಕ ಸಂದೇಶ ನಾಗರಾಜ್ ಬೈ ಮಿಸ್ಟೇಕ್ ರಿವೀಲ್ ಮಾಡಿದ್ದರು. ಅದೇ ರೀತಿನೇ ಘೋಸ್ಟ್ ಪ್ರೆಸ್ ಮೀಟ್‌ನಲ್ಲಿ ಸಂದೇಶ ಇನ್ನೂ ಒಂದು ವಿಷಯವನ್ನ ಮಾತನಾಡುತ್ತಲೇ ಖುಷಿಯಲ್ಲಿ ಹೇಳಿಯೇ ಬಿಟ್ಟರು.


ಹೌದು, ಘೋಸ್ಟ್ ಸಿನಿಮಾ ಎರಡು ಭಾಗದಲ್ಲಿ ತಯಾರಾಗುತ್ತದೆ. ಘೋಸ್ಟ್ ಸಿನಿಮಾ ಡೈರೆಕ್ಟರ್ ಶ್ರೀನಿ ಈ ವಿಷಯವನ್ನ ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೂ ಶೇರ್ ಮಾಡಿದ್ದರು. ಆದರೆ ಇದೀಗ ಪ್ರೆಸ್ ಮೀಟ್ ಅಲ್ಲಿಯೇ ಚಿತ್ರದ ನಿರ್ಮಾಪಕ ಸಂದೇಶ ನಾಗರಾಜ್ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.


Kannada Actor Shiva Rajkumar Acted Ghost Movie Latest Updates
ಕಾಂತಾರ ರಿಷಬ್ ಶೆಟ್ರಿಗೆ ಪ್ರಾಂಕ್- ಶಿವಣ್ಣ ಸಾಥ್


ಘೋಸ್ಟ್-2 ಸಿನಿಮಾ ಮಾಹಿತಿ ಕೊಟ್ಟ ನಿರ್ಮಾಪಕ ಸಂದೇಶ


ನಿರ್ದೇಶಕರು ಸಿನಿಮಾ ಬಗ್ಗೆ ಏನೂ ಹೇಳಬೇಡಿ ಅಂತಲೇ ತಿಳಿಸಿದ್ದಾರೆ. ಆದರೆ ಈಗ ಸಿಕ್ಕಾಪಟ್ಟೆ ಖುಷಿ ಆಗಿದೆ. ಅದಕ್ಕೇನೆ ಮನಸ್ಸಿನಲ್ಲಿರೋದು ಹೇಳಬೇಕು ಅನಿಸುತ್ತಿದೆ. ಅದನ್ನ ಹೇಳಿಯೇ ಬಿಡ್ತಿನಿ. ನಮ್ಮ ಘೋಸ್ಟ್ ಚಿತ್ರದ ಭಾಗ ಎರಡು ಬರ್ತಿದೆ ಎಂದು ಸಂದೇಶ ನಾಗರಾಜ್ ಹೇಳಿದರು.


Kannada Actor Shiva Rajkumar Acted Ghost Movie Latest Updates
ರಿಷಬ್ ಶೆಟ್ರಿಗೆ ಅನುಪಮ್ ಖೇರ್ ಪ್ರಾಂಕ್-ಶಿವಣ್ಣ ಕೂಡ ಸಾಥ್


ಇದನ್ನೂ ಓದಿ: Prabhu Deva: ಸಾಧಕರ ಸೀಟ್ ಮೇಲೆ ಇಂಡಿಯನ್ ಮೈಕಲ್ ಜಾಕ್ಸನ್!

top videos


    ಏಪ್ರಿಲ್-15 ರ ನಂತರ ಮುಂದಿನ ಸ್ಕೆಡ್ಯೂಲ್ ಶೂಟಿಂಗ್ ಶುರು ಆಗುತ್ತದೆ. ಸದ್ಯಕ್ಕೆ ಇಂದಿನಿಂದ ಬಾಲಿವುಡ್ ನಟ ಅನುಪಮ್ ಖೇರ್ ನಮ್ಮ ತಂಡವನ್ನ ಜಾಯಿನ್ ಆಗಿದ್ದಾರೆ ಎಂದು ಸಂದೇಶ ನಾಗರಾಜ್ ಅಧಿಕೃತವಾಗಿಯೇ ಮಾಹಿತಿ ಕೊಟ್ಟಿದ್ದಾರೆ.

    First published: