• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Anupam Kher: ಕನ್ನಡಕ್ಕೆ ಬರ್ತಿದ್ದಾರೆ ಕಾಶ್ಮೀರ್ ಫೈಲ್ಸ್ ನಟ! ಶಿವಣ್ಣ ಜೊತೆ ಅನುಪಮ್ ಖೇರ್!

Anupam Kher: ಕನ್ನಡಕ್ಕೆ ಬರ್ತಿದ್ದಾರೆ ಕಾಶ್ಮೀರ್ ಫೈಲ್ಸ್ ನಟ! ಶಿವಣ್ಣ ಜೊತೆ ಅನುಪಮ್ ಖೇರ್!

ಘೋಸ್ಟ್ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಡ್ತಿರೋ ಅನುಪಮ್ ಖೇರ್

ಘೋಸ್ಟ್ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಡ್ತಿರೋ ಅನುಪಮ್ ಖೇರ್

ಬಾಲಿವುಡ್​ನ ಅನುಪಮ್ ಖೇರ್ ಕನ್ನಡಕ್ಕೆ ಬರೋದು ಬಹುತೇಕ ಖಚಿತಗೊಂಡಿದೆ. ಘೋಸ್ಟ್ ಚಿತ್ರದ ನಿರ್ದೇಶಕ ಶ್ರೀನಿ ಹೇಳುವಂತೆ, ಈ ವಿಚಾರವಾಗಿ ಇನ್ನೂ ಮಾತುಕತೆ ನಡೆಯುತ್ತಿದೆ. ಸಿನಿಮಾದಲ್ಲಿ ಅನುಪಮ್ ಖೇರ್ ಒಂದು ಸ್ಪೆಷಲ್ ರೋಲ್ ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​​ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ (Shiva Rajkumar) ಅಭಿನಯದ ಘೋಸ್ಟ್ ಚಿತ್ರ (Kannada Ghost Cinema) ತಂಡದಿಂದ ಈಗೊಂದು ಹೊಸ ಸುದ್ದಿ ಹೊರ ಬಿದ್ದಿದೆ. ದೂರದ ಬಾಲಿವುಡ್​ನಿಂದ ಮೊಟ್ಟ ಮೊದಲ ಬಾರಿಗೆ ಈ ಚಿತ್ರದ ಮೂಲಕ ಹೆಸರಾಂತ ನಟರೊಬ್ಬರು ಕನ್ನಡಕ್ಕೆ (Bollywood Actor Anupma Kher) ಕಾಲಿಡುತ್ತಿದ್ದಾರೆ. ಶಿವಣ್ಣನ ಘೋಸ್ಟ್ ಸಿನಿಮಾದಲ್ಲಿ ಈ ಕಲಾವಿದರು ಒಂದು ಸ್ಪೆಷಲ್ ರೋಲ್ ನಿರ್ವಹಿಸುತ್ತಿದ್ದಾರೆ. ಚಿತ್ರದ ನಿರ್ದೇಶಕ ಶ್ರೀನಿ (Director Srini) ಈ ಬಗ್ಗೆ ನ್ಯೂಸ್​-18 ಕನ್ನಡ ಡಿಜಿಟಲ್​ಗೆ ಒಂದಷ್ಟು ಮಾಹಿತಿ ಕೊಟ್ಟಿದ್ದಾರೆ. ವಿಶೇಷವಾಗಿ ಇದೇ ಮೊದಲ ಬಾರಿಗೆ ಬಾಲಿವುಡ್​ನ ನಟ ಅನುಪಮ್ ಖೇರ್ ಕನ್ನಡಕ್ಕೆ ಬರಲು ಒಪ್ಪಿಕೊಂಡಿದ್ದಾರೆ.  ಈ ಮೂಲಕ ಇವರ ಪಾತ್ರ ಈ ಘೋಸ್ಟ್ ಚಿತ್ರದಲ್ಲಿ ಹೇಗಿರುತ್ತದೆ ಅನ್ನೋ ಕುತೂಹಲವು ಈಗ ಮೂಡಿದೆ.


ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್ ಅಭಿನಯ
ಕನ್ನಡದ ಘೋಸ್ಟ್ ಸಿನಿಮಾ ತನ್ನದೇ ರೀತಿಯಲ್ಲಿ ಸದ್ದು ಮಾಡುತ್ತಿದೆ. ಸಿನಿಮಾರಂಗದಲ್ಲಿ ಈ ಚಿತ್ರ ಹೊಸ ಅಲೆ ಎಬ್ಬಿಸೋ ಸಣ್ಣ ಸೂಚನೆ ಕೂಡ ಕೊಡ್ತಾ ಇದೆ. ಸಿನಿಮಾದಲ್ಲಿ ಏನೋ ವಿಶೇಷತೆ ಇದೆ ಅನ್ನುವ ರೀತಿಯಲ್ಲಿಯೇ ಚಿತ್ರದ ಪೋಸ್ಟರ್​ಗಳು ಗಮನಸೆಳೆಯುತ್ತಿವೆ.


Bollywood Actor Anupam Kher going to Act in Ghost movie Soon
ಕಾಂತಾರ ರಿಷಬ್-ಅನುಪಮ್ ಖೇರ್ ಓಪನ್ ಚರ್ಚೆ!


ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರದಲ್ಲಿ ಎರಡು ಶೇಡ್ಸ್ ಇವೆ. ಗ್ಯಾಂಗ್​ಸ್ಟರ್​ ಪಾತ್ರದಲ್ಲಿ ಮಿಂಚುತ್ತಿರೋ ಶಿವರಾಜ್​ ಕುಮಾರ್, ಯಂಗ್ ಮತ್ತು ಮಿಡ್ಲ್ ಏಜ್ ರೋಲ್​ ಅನ್ನು ಇಲ್ಲಿ ನಿಭಾಯಿಸುತ್ತಿದ್ದಾರೆ ಅನ್ನೋ ಮಾಹಿತಿ ಇದೆ.




ಬಾಲಿವುಡ್​ನಿಂದ ಕನ್ನಡಕ್ಕೆ ಬರಲು ಒಪ್ಪಿರೋ ಅನುಪಮ್ ಖೇರ್
ಬಾಲಿವುಡ್ ನಟ ಅನುಪಮ್ ಖೇರ್ ಅದ್ಭುತ ಕಲಾವಿದರೇ ಆಗಿದ್ದಾರೆ. ಇವರ ಅಭಿನಯದ ಸಿನಿಮಾಗಳು ಈಗಲೂ ಗಮನ ಸೆಳೆಯುತ್ತಿವೆ. ಈ ವಯಸ್ಸಿನಲ್ಲೂ ವರ್ಕೌಟ್ ಮಾಡಿ ದೇಹದ ತೂಕ ಇಳಿಸಿಕೊಂಡಿರೋದು ನಟ ಅನುಪಮ್ ಖೇರ್, ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.


ವಿವೇಕ್ ಅಗ್ನಿಹೋತ್ರಿ ಅವರ ದಿ ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ಅನುಪಮ್ ಖೇರ್ ಗಮನಾರ್ಹ ಪಾತ್ರವನ್ನು ನಿರ್ವಹಿಸಿದ್ದರು. ಅದೇ ರೀತಿ ಈ ಹಿಂದೆ ಅನೇಕ ಪಾತ್ರಗಳನ್ನ ಮಾಡಿರೋದು ಅನುಪಮ್ ಖೇರ್ ಅವರ ಮಹಾನ್ ಪ್ರತಿಭೆಗೆ ಹಿಡಿದ ಕೈಗನ್ನಡಿ ಆಗಿದೆ.


ಕನ್ನಡದ ಘೋಸ್ಟ್ ಚಿತ್ರದಲ್ಲಿ ಅನುಪಮ್ ಪಾತ್ರ ಹೇಗಿರುತ್ತದೆ?


ಬಾಲಿವುಡ್​ನ ಅನುಪಮ್ ಖೇರ್ ಕನ್ನಡಕ್ಕೆ ಬರೋದು ಬಹುತೇಕ ಖಚಿತಗೊಂಡಿದೆ. ಘೋಸ್ಟ್ ಚಿತ್ರದ ನಿರ್ದೇಶಕ ಶ್ರೀನಿ ಹೇಳುವಂತೆ, ಈ ವಿಚಾರವಾಗಿ ಇನ್ನೂ ಮಾತುಕತೆ ನಡೆಯುತ್ತಿದೆ. ಸಿನಿಮಾದಲ್ಲಿ ಅನುಪಮ್ ಖೇರ್ ಒಂದು ಸ್ಪೆಷಲ್ ರೋಲ್ ನಿರ್ವಹಿಸುತ್ತಿದ್ದಾರೆ ಎಂದು ಶ್ರೀನಿ ಹೇಳುತ್ತಾರೆ.


ಘೋಸ್ಟ್ ಮೂಲಕ ಅನುಪಮ್ ಖೇರ್ ಕನ್ನಡಕ್ಕೆ ಕಾಲಿಡುತ್ತಿದ್ದು, ಅನುಪಮ್ ಖೇರ್ ಸಿನಿಮಾ ಅಧ್ಯಯನವನ್ನು ಮಾಡುತ್ತಾರೆ. ಎಲ್ಲ ರೀತಿಯ ಸಿನಿಮಾಗಳ ಬಗ್ಗೇನೂ ತಿಳಿದುಕೊಂಡಿದ್ದಾರೆ. ಹಾಗೆ ಕನ್ನಡದ ಕಾಂತಾರ ಬಗ್ಗೆನೂ ಅನುಪಮ್ ತಿಳಿದುಕೊಂಡಿದ್ದಾರೆ.


ಕಾಂತಾರ ರಿಷಬ್-ಅನುಪಮ್ ಖೇರ್ ಓಪನ್ ಚರ್ಚೆ!


ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಈ ಹಿಂದೆ ಒಂದು ಚರ್ಚೆಯಲ್ಲಿ ಭಾಗಿ ಆಗಿದ್ದರು. ಆ ಚರ್ಚೆಯಲ್ಲಿ ಅನುಪಮ್ ಖೇರ್ ಸಹ ಭಾಗವಹಿಸಿದ್ದರು. ಒಂದು ಕಡೆಗೆ ಕಾಂತಾರ ಸಿನಿಮಾದ ಮಾತು ಇದ್ದರೇ, ಇನ್ನೂ ಒಂದು ಕಡೆಗೆ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಚರ್ಚೆ ಇತ್ತು.


Bollywood Actor Anupam Kher going to Act in Ghost movie Soon
ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್ ಅಭಿನಯ


ಹಾಗೆ ಎಲ್ಲ ಭಾಷೆಯ ಚಿತ್ರಗಳ ಬಗ್ಗೆ ತಿಳಿದುಕೊಳ್ಳುವ ಅನುಪಮ್ ಖೇರ್, ಘೊಸ್ಟ್ ಮೂಲಕ ಕನ್ನಡಕ್ಕೆ ಕಾಲಿಡಲು ಮನಸ್ಸು ಮಾಡಿದ್ದಾರೆ. ಇನ್ನೇನಿದ್ದರೂ ಶೀಘ್ರದಲ್ಲಿಯೇ ಇತರ ಮಾಹಿತಿ ಕೂಡ ಹೊರ ಬೀಳುತ್ತದೆ.


ಇದನ್ನೂ ಓದಿ:  Dhananjaya Pan India Movie: ಡಾಲಿ ಧನಂಜಯ್ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ರಿವೀಲ್


ಚಿತ್ರದ ನಿರ್ದೇಶಕ ಶ್ರೀನಿ ಈಗಾಗಲೇ ಅನುಪಮ್ ಖೇರ್ ಅವರನ್ನ ಅಪ್ರೋಚ್ ಮಾಡಿದ್ದಾರೆ. ಅನುಪಮ್ ಖೇರ್ ಕೂಡ ಕನ್ನಡಕ್ಕೆ ಬರಲು ಒಪ್ಪಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನಿತರ ವಿಷಯಗಳ ಮಾತುಕತೆ ನಡೆಯೋದು ಮಾತ್ರ ಬಾಕಿ ಇದೆ.

First published: