• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Pallavi Anupallavi: ಬಾಲಿವುಡ್ ನಟ ಅನಿಲ್ ಕಪೂರ್ ಕನ್ನಡದ ಡೈಲಾಗ್ ಯಾವ ಭಾಷೆಯಲ್ಲಿ ಬರೆದುಕೊಳ್ಳುತ್ತಿದ್ದರು?

Pallavi Anupallavi: ಬಾಲಿವುಡ್ ನಟ ಅನಿಲ್ ಕಪೂರ್ ಕನ್ನಡದ ಡೈಲಾಗ್ ಯಾವ ಭಾಷೆಯಲ್ಲಿ ಬರೆದುಕೊಳ್ಳುತ್ತಿದ್ದರು?

ಪಲ್ಲವಿ ಅನುಪಲ್ಲವಿ ಸಿನಿಮಾಕ್ಕೆ ಅನಿಲ್ ಕಪೂರ್ ಹೀರೋ

ಪಲ್ಲವಿ ಅನುಪಲ್ಲವಿ ಸಿನಿಮಾಕ್ಕೆ ಅನಿಲ್ ಕಪೂರ್ ಹೀರೋ

ಅನಿಲ್ ಕಪೂರ್ ಕನ್ನಡವನ್ನ ಸೆಟ್​ ಹುಡುಗರಿಂದ ಕಲಿತರೋ ಇಲ್ಲವೇ ಇಲ್ಲಿ ಜೊತೆಯಾಗಿದ್ದ ಗೆಳೆಯರಿಂದ ಕಲಿತರೋ ಏನೋ. ಆ ಕಾಲದಲ್ಲಿ ಬಾಲಿವುಡ್​ನಿಂದ ಬಂದ ನಟರು-ನಟಿಯರು ತಮ್ಮ ಭಾಷೆಯಲ್ಲಿಯೇ ಕನ್ನಡದ ಡೈಲಾಗ್ ಬರೆದುಕೊಳ್ಳುತ್ತಿದ್ದರು.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ದಕ್ಷಿಣ ಭಾರತದ ಮಹಾನ್ ನಿರ್ದೇಶಕ ಮಣಿರತ್ನಂ (Mani Ratnam) ಅವರು ಕನ್ನಡದಿಂದಲೇ ತಮ್ಮ ನಿರ್ದೇಶನದ ಕರೀಯರ್ ಆರಂಭಿಸಿದ್ದರು. ಇಳೆಯರಾಜಾ (Ilaiyaraaja) ಅವರ ಸಂಗೀತದ ಮೂಲಕ ಮಣಿರತ್ನಂ ಅವರ ಮೊದಲ ಸಿನಿಮಾ ತುಂಬಾ ಶ್ರೀಮಂತವಾಗಿ ಮೂಡಿ ಬಂದಿತ್ತು. 1983 ರಲ್ಲಿ ಆ ಚಿತ್ರ ತೆರೆಗೂ ಬಂದಿತ್ತು. ಆ ದಿನಗಳಲ್ಲಿಯೇ (Movie Review) ವಿಮರ್ಶಕರು ಈ ಒಂದು ಚಿತ್ರವನ್ನ ಮೆಚ್ಚಿಕೊಂಡಿದ್ದರು. ಆದರೆ ಕಲೆಕ್ಷನ್ ಲೆಕ್ಕ ತೆಗೆದುಕೊಂಡ್ರೆ ಈ ಚಿತ್ರ ಅಂದು ಎವರೇಜ್ ಕಲೆಕ್ಷನ್ ಸಿನಿಮಾ ಆಗಿತ್ತು. ಅದರಲ್ಲೂ ಈ ಚಿತ್ರ ನಗರಗಳಲ್ಲಿ ಮಾತ್ರ ಓಡಿತ್ತು. ಸಣ್ಣ ಊರುಗಳು, ಹಳ್ಳಿಗಳಲ್ಲಿ ಈ ಚಿತ್ರಕ್ಕೆ ಅಂತಹ ವಿಶೇಷ (Good Review) ರೆಸ್ಪಾನ್ಸ್ ಏನೂ ಸಿಕ್ಕಿರಲಿಲ್ಲ. ಆದರೂ ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂದಿದ್ದವು.


ಅಂತಹ ಈ ಚಿತ್ರದ ಹೀರೋ ಯಾರು ಗೊತ್ತೇ? ಈ ಹೀರೋಗೆ ಕನ್ನಡ ಕಲಿಸಿದ್ದು ಯಾರು ಗೊತ್ತೇ? ಎಲ್ಲ ಇಂಟ್ರಸ್ಟಿಂಗ್ ಮಾಹಿತಿ ಈ ಸ್ಟೋರಿಯಲ್ಲಿದೆ ಓದಿ.


Bollywood Actor Anil Kapoor First Kannada Movie Unknown Facts
ಅನಿಲ್ ಕಪೂರ್ ಕನ್ನಡ ಡೈಲಾಗ್ ಹೇಗೆ ಹೇಳ್ತಿದ್ದರು?


ಪಲ್ಲವಿ ಅನುಪಲ್ಲವಿ ಮಣಿರತ್ನಂ ನಿರ್ದೇಶನದ ಪ್ರಥಮ ಚಿತ್ರ
ದಕ್ಷಿಣದ ಭಾರತದಲ್ಲಿ ಅನೇಕ ಮಹಾನ್ ನಿರ್ದೇಶಕರಿದ್ದಾರೆ. ಇವರಲ್ಲಿ ಮಣಿರತ್ನಂ ಕೂಡ ಒಬ್ಬರು ಇವರ ಸಿನಿಮಾಗಳು ಇಂದಿಗೂ ಓಡುತ್ತವೆ. ಪೊನ್ನಿಯನ್ ಸೆಲ್ವನ್ ಇದಕ್ಕೆ ತಾಜಾ ಉದಾಹರಣೆ ಆಗಿದೆ. ತಮಿಳಿನಲ್ಲಿಯೇ ಹೆಚ್ಚು ಗುರುತಿಸಿಕೊಂಡ ಮಣಿರತ್ನಂ ಅವರು ತಮ್ಮ ನಿರ್ದೇಶನದ ಕರೀಯರ್ ಆರಂಭಿಸಿರೋದು ಮಾತ್ರ ಕನ್ನಡದಲ್ಲಿಯೇ ಅನ್ನೋದು ಬಹುತೇಕರಿಗೆ ತಿಳಿದಿದೆ.




ಪಲ್ಲವಿ ಅನುಪಲ್ಲವಿ ಅನ್ನೋ ಚಿತ್ರದ ಮೂಲಕ ಕನ್ನಡದಲ್ಲಿಯೇ ಮಣಿರತ್ನಂ ಅವರು ತಮ್ಮ ನಿರ್ದೇಶನದ ಕರೀಯರ್ ಆರಂಭಿಸಿದ್ದರು. ಈ ಚಿತ್ರದ ಮೂಲಕ ಇನ್ನೂ ಒಂದು ವಿಶೇಷವೂ ಜರುಗಿತ್ತು. ಆ ವಿಶೇಷ ಬಾಲಿವುಡ್​​ನಿಂದಲೇ ಸಾಧ್ಯವಾಗಿತ್ತು.


ಪಲ್ಲವಿ ಅನುಪಲ್ಲವಿ ಚಿತ್ರದ ಹೀರೋ ಯಾರು ಗೊತ್ತೇ?
ಪಲ್ಲವಿ ಅನು ಪಲ್ಲವಿ ಒಂದು ರೋಮ್ಯಾಂಟಿಕ್ ಕಥೆಯುಳ್ಳ ಸಿನಿಮಾ ಆಗಿತ್ತು. ಈ ಚಿತ್ರಕ್ಕೆ ಇಳಯರಾಜಾ ಅವರ ಅದ್ಭುತ ಸಂಗೀತದ ಸ್ಪರ್ಶ ಕೂಡ ಇತ್ತು. ಬಾಲು ಮಹೇಂದರ್ ಚಿತ್ರಕ್ಕೆ ಕ್ಯಾಮೆರಾಮನ್​ ಆಗಿದ್ದರು. ಮಣಿರತ್ನಂ ಅವರು ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿಕೊಂಡು ಡೈರೆಕ್ಷನ್ ಕೂಡ ಮಾಡಿದ್ದರು.


ಆದರೆ ಮಣಿರತ್ನಂ ಅವರು ತಮ್ಮ ಮೊದಲ ಚಿತ್ರಕ್ಕೆ ದೂರದ ಬಾಲಿವುಡ್​ನ ನಟನನ್ನೆ ಆಯ್ಕೆ ಮಾಡಿಕೊಂಡಿದ್ದರು. ಚೆಂಬೂರ್ ಮೂಲದ ಅನಿಲ್ ಕಪೂರ್ ಪಲ್ಲವಿ ಅನುಪಲ್ಲವಿ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟರು.


ಪಲ್ಲವಿ ಅನುಪಲ್ಲವಿ ಸಿನಿಮಾಕ್ಕೆ ಅನಿಲ್ ಕಪೂರ್ ಹೀರೋ
ಅನಿಲ್ ಕಪೂರ್ ಅವರಿಗೆ ಒಂದಕ್ಷರ ಕನ್ನಡ ಬರ್ತಿರಲಿಲ್ಲ. ಆದರೆ ಒಳ್ಳೆ ಕಲಾವಿದ ಅನ್ನೋ ನಂಬಿಕೆ ಮಣಿರತ್ನಂ ಅವರಿಗೆ ಇತ್ತು. ಆ ನಂಬಿಕೆ ಸುಳ್ಳಾಗಲಿಲ್ಲ ಅನಿಸುತ್ತದೆ. ಚಿತ್ರದಲ್ಲಿ ಅನಿಲ್ ಕಪೂರ್ ಒಳ್ಳೆ ಅಭಿನಯ ಪ್ರದರ್ಶಿಸಿದ್ದರು.


ಅನಿಲ್ ಕಪೂರ್ ಕನ್ನಡ ಡೈಲಾಗ್ ಹೇಗೆ ಹೇಳ್ತಿದ್ದರು?
ಆದರೆ ಕನ್ನಡದ ಡೈಲಾಗ್​ನ್ನ ಹೇಗೆ ಹೇಳುತ್ತಿದ್ದರು ಅನ್ನೋ ಕುತೂಹಲ ಇತ್ತು ಅಲ್ವೇ? ಹೌದು, ಇಲ್ಲಿ ಭಾಷೆಗಿಂತಲೂ ಹಾವ-ಭಾವ ಮುಖ್ಯ ಆಗಿರುತ್ತಿತ್ತು. ಲಕ್ಷ್ಮೀ ಅವರಂತಹ ನಟಿಯ ಜೊತೆಗೆ ನಟಿಸೋಕೆ ಅಷ್ಟು ಇಲ್ಲದೇ ಇದ್ದರೇ ಹೇಗೆ?


ಹಾಗಾಗಿಯೇ ಅನಿಲ್ ಕಪೂರ್ ಕನ್ನಡವನ್ನ ಸೆಟ್​ ಹುಡುಗರಿಂದ ಕಲಿತರೋ ಇಲ್ಲವೇ ಇಲ್ಲಿ ಜೊತೆಯಾಗಿದ್ದ ಗೆಳೆಯರಿಂದ ಕಲಿತರೋ ಗೊತ್ತಿಲ್ಲ. ಆ ಕಾಲದಲ್ಲಿ ಬಾಲಿವುಡ್​ನಿಂದ ಬಂದ ನಟರು-ನಟಿಯರು ತಮ್ಮ ಭಾಷೆಯಲ್ಲಿಯೇ ಕನ್ನಡದ ಡೈಲಾಗ್ ಬರೆದುಕೊಳ್ಳುತ್ತಿದ್ದರು.


ಅದಕ್ಕೆ ಉದಾಹರಣೆ ಬಾಲಿವುಡ್​ನ ನಟಿ ಅರುಣಾ ಇರಾನಿ ಅಂತಲೇ ಹೇಳಬಹುದು. ರವಿಚಂದ್ರನ್ ಅಭಿನಯದ ಅಣ್ಣಯ್ಯ ಚಿತ್ರದಲ್ಲಿ ಅರುಣಾ ಇರಾನಿ ಅಭಿನಯಿಸಿದ್ದರು. ಅವರು ಕನ್ನಡದ ಡೈಲಾಗ್​ಗಳನ್ನ ಹಿಂದಿಯಲ್ಲಿ ಬರೆದುಕೊಂಡು ಕ್ಯಾಮೆರಾ ಮುಂದೆ ಹೇಳುತ್ತಿದ್ದರು.


Bollywood Actor Anil Kapoor First Kannada Movie Unknown Facts
ಕನ್ನಡದ ಡೈಲಾಗ್​ನ್ನ ಹಿಂದಿಯಲ್ಲಿ ಬರೆದುಕೊಳ್ತಿದ್ದರಂತೆ!


ಕನ್ನಡದ ಡೈಲಾಗ್​ನ್ನ ಹಿಂದಿಯಲ್ಲಿ ಬರೆದುಕೊಳ್ತಿದ್ದರಂತೆ!
ಪಲ್ಲವಿ ಅನುಪಲ್ಲವಿ ಚಿತ್ರದ ಕನ್ನಡದ ಡೈಲಾಗ್​ಗಳನ್ನ ಅನಿಲ್ ಕಪೂರ್ ತಮಗೆ ಗೊತ್ತಿದ್ದ ಹಿಂದಿ ಭಾಷೆಯಲ್ಲಿ ಬರೆದುಕೊಳ್ಳುತ್ತಿದ್ದರು. ಭಾಷೆ ಹಿಂದಿ ಕನ್ನಡದ ಭಾವ ಹೀಗೆ ಎರಡೂ ಮ್ಯಾನೇಜ್ ಮಾಡಿ ಅನಿಲ್ ಕಪೂರ್ ಕನ್ನಡದ ತಮ್ಮ ಮೊದಲ ಚಿತ್ರದ ಚಿತ್ರೀಕರಣ ಮಾಡಿಕೊಟ್ಟಿದ್ದರು.


ಇದನ್ನೂ ಓದಿ: Kareena Kapoor: ಮಗಳೇ ಎಂದು ಬಾಯ್ತುಂಬ ಕರೆದವನ ಮೇಲೆಯೇ ಲವ್ ಆಯ್ತು! ಅಮೃತಾ ಸಿಂಗ್ ಸಂಸಾರ ಒಡೆಯಿತು


ಹೀಗೆ ಕನ್ನಡದ ಡೈಲಾಗ್ ಹೇಳಿದ ಅನಿಲ್ ಕಪೂರ್ ಮೊದಲ ಚಿತ್ರದಲ್ಲಿಯೇ ಗಮನ ಸೆಳೆದರು. ವಿಮರ್ಶಕರೂ ಈ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈ ಚಿತ್ರ ನಗರದಲ್ಲಿ ಮಾತ್ರ ಓಡಿದೆ ಅನ್ನೋದು ಮಾತ್ರ ಇತಿಹಾಸ ಪುಟದಲ್ಲಿರೋ ಸತ್ಯ ಅಂತಲೇ ಹೇಳಬಹುದು.

First published: