• Home
  • »
  • News
  • »
  • entertainment
  • »
  • Amitabh Bachchan: ಅಪ್ಪು ಬಗ್ಗೆ ಅಮಿತಾಭ್ ಬಚ್ಚನ್ ಹೃದಯ ಸ್ಪರ್ಶಿ ಮಾತು,ಮನದುಂಬಿ ಧನ್ಯವಾದ ಅರ್ಪಿಸಿದ ಅಶ್ವಿನಿ ಪುನೀತ್ ರಾಜಕುಮಾರ್

Amitabh Bachchan: ಅಪ್ಪು ಬಗ್ಗೆ ಅಮಿತಾಭ್ ಬಚ್ಚನ್ ಹೃದಯ ಸ್ಪರ್ಶಿ ಮಾತು,ಮನದುಂಬಿ ಧನ್ಯವಾದ ಅರ್ಪಿಸಿದ ಅಶ್ವಿನಿ ಪುನೀತ್ ರಾಜಕುಮಾರ್

ಅಪ್ಪು ಬಗ್ಗೆ ಅಮಿತಾಭ್ ಬಚ್ಚನ್ ಭಾವನಾತ್ಮಕ ಮಾತು

ಅಪ್ಪು ಬಗ್ಗೆ ಅಮಿತಾಭ್ ಬಚ್ಚನ್ ಭಾವನಾತ್ಮಕ ಮಾತು

ಅಪ್ಪು ಬಗ್ಗೆ ಅಮಿತಾಭ್ ಬಚ್ಚನ್ ತುಂಬಾ ಭಾವನಾತ್ಮಕವಾಗಿಯೇ ಮಾತನಾಡಿದ್ದಾರೆ. ಪುನೀತ್ ಬಾಲ್ಯದ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಪುನೀತ್ ಸ್ಮೈಲ್ ಕುರಿತು ಕೊಂಡಾಡಿದ್ದಾರೆ. ಗಂಧದ ಗುಡಿಯ ಶ್ರೀಮಂತಿಕೆಯನ್ನ ವರ್ಣಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಪವರ್ ಸ್ಟಾರ್ ಪುನೀತ್ (Puneeth Rajkumar) ರಾಜಕುಮಾರ್ ಎಲ್ಲರ ಹೃದಯದಲ್ಲಿ ಹಾಗೆ ಇದ್ದಾರೆ. ಅವರ ಮುಗ್ಧ ನಗುವಿನೊಂದಿಗೆ ಎಲ್ಲರ ಮನದಲ್ಲು ಸದಾ ಜೀವಂತವಾಗಿದ್ದಾರೆ. ಬಂಗಾರದ ಮನಸಿನ ಈ (Appu Smile) ನಗುವಿನ ಒಡೆಯನ ಕೊನೆ ಆಸೆ ಈಗಾಗಲೇ ಚಿತ್ರ ರೂಪದಲ್ಲಿ ಬಂದಿದೆ. ಶಾಲೆಯ ಮಕ್ಕಳಾದಿಯಾಗಿ ಎಲ್ಲರೂ ಅಪ್ಪು ಜೀವಿಸಿ ಹೋದ ಕೊನೆಯ ಗಂಧದ ಗುಡಿ ಚಿತ್ರವನ್ನ ಕಣ್ತುಂಬಿಕೊಂಡಿದ್ದಾರೆ. ಬಾಲಿವುಡ್​ನ ಮಹಾನ್ ನಾಯಕ ನಟ ಅಮಿತಾಭ್ (Amitabh Bachchan) ಬಚ್ಚನ್ ಕೂಡ ಅಪ್ಪು ಬಗ್ಗೆ ಮಾತನಾಡಿದ್ದಾರೆ. ಅಪ್ಪು ನಗುವಿನ ಬಗ್ಗೆ ಕೊಂಡಾಡಿದ್ದಾರೆ. ಅವರ ಗಂಧದ ಗುಡಿ ಸಿನಿಮಾ ನೋಡುವ ಮೂಲಕ ಅವರನ್ನ ನಮ್ಮ ಮನದಲ್ಲಿ ಶಾಶ್ವತ ಉಳಿಸಿಕೊಂಡು ಬಿಡೋಣ ಅಂತಲೇ ಅಮಿತಾಭ್ ಮನದುಂಬಿ ಮಾತನಾಡಿದ್ದಾರೆ.


ಅಪ್ಪು ಬಗ್ಗೆ ಅಮಿತಾಭ್ ಬಚ್ಚನ್ ಭಾವನಾತ್ಮಕ ಮಾತು
ನಾನು ಪುನೀತ್ ರಾಜಕುಮಾರ್ ಬಗ್ಗೆ ಮಾತನಾಡಲು ಇಲ್ಲಿ ಕುಳಿತ್ತಿದ್ದೇನೆ. ಅಪ್ಪು ಬಾಲಕನಾಗಿದ್ದಾಗಲೇ ನಾನು ನೋಡಿದ್ದೇನೆ. ಅಪ್ಪು ಸ್ಮೈಲ್ ತುಂಬಾ ವಿಶೇಷವಾಗಿಯೇ ಇತ್ತು. ಎಲ್ಲೆ ಇದ್ದರೂ ಹೇಗೆ ಇದ್ದರೂ ಅಪ್ಪು ನಗ್ತಾ ಇದ್ದರು. ಆ ನಗುವಿನಿಂದಲೇ ಅಪ್ಪು ಎಲ್ಲರ ಹೃದಯ ಗೆಲ್ಲುತ್ತಿದ್ದರು.


ನಾನು ಈಗ ಅಪ್ಪು ಕೊನೆ ಸಿನಿಮಾ ಬಗ್ಗೆ ಮಾತನಾಡುತ್ತೇನೆ. ಅಪ್ಪು ಗಂಧದ ಗುಡಿಯಲ್ಲಿ ಅಭಿನಯಸಿಲ್ಲ. ಅವರು ಜೀವಿಸಿ ಹೋಗಿದ್ದಾರೆ. ಕರ್ನಾಟಕದ ಅರಣ್ಯ ಸಂಪತ್ತಿನ ಮಹತ್ವ ಸಾರುತ್ತಲೇ ನಿಮ್ಮನ್ನ ಬೇರೆ ಜಗತ್ತಿಗೂ ಕರೆದುಕೊಂಡು ಹೋಗುತ್ತಾರೆ.



ಗಂಧದ ಗುಡಿ ಬಗ್ಗೆ ಅಮಿತಾಭ್ ಬಚ್ಚನ್ ಇನ್ನು ಏನ್ ಹೇಳಿದ್ರು
ಅಪ್ಪು ಕೊನೆಯ ಸಿನಿಮಾ ಗಂಧದ ಗುಡಿ ವಿಶೇಷವಾಗಿದೆ. ಈ ಸಿನಿಮಾದಲ್ಲಿ ಅರಣ್ಯ ಸಂಪತ್ತಿನ ಚಿತ್ರಣವೂ ಇದೆ. ಮುಂದಿನ ಪೀಳಿಗೆಗೆ ಇದನ್ನ ಉಳಿಸೋ ಸಣ್ಣ ಜಾಗೃತಿನೂ ಇದೆ. ನಮ್ಮ ಮಕ್ಕಳಿಗಾಗಿಯೇ ಅರಣ್ಯ ಸಂಪತ್ತು ಉಳಿಸಬೇಕು ಅನ್ನೋ ಕಾಳಜಿ ಕೂಡ ಇದೆ ಎಂದು ಅಮಿತಾಭ್ ಬಚ್ಚನ್ ಹೇಳಿದ್ದಾರೆ.


ಗಂಧದ ಗುಡಿ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಅವುಗಳನ್ನ ತೆರೆ ಮೇಲೆ ನೋಡಿ ಅನುಭವಿಸಬೇಕು. ಈಗಾಗಲೇ ಅನೇಕರು ಗಂಧದ ಗುಡಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅಪ್ಪು ಜೀವಂತಿಕೆಯನ್ನ ಕಂಡು ಖುಷಿ ಪಟ್ಟಿದ್ದಾರೆ.


ಗಂಧದ ಗುಡಿ ಚಿತ್ರಕ್ಕೆ ಶುಭ ಹಾರೈಸಿದ ಅಮಿತಾಭ್ ಬಚ್ಚನ್
ಹೌದು, ಅಪ್ಪು ಜೀವಿಸಿ ಹೋದ ಗಂಧದ ಗುಡಿ ಚಿತ್ರಕ್ಕೆ ಅಮಿತಾಭ್ ಬಚ್ಚನ್ ಶುಭ ಹಾರೈಸಿದ್ದಾರೆ. ಬನ್ನಿ, ಅಪ್ಪುವನ್ನ ನಮ್ಮ ನೆನಪಿನಂಗಳದಲ್ಲಿ ಸದಾ ಜೀವಂತವಾಗಿರಿಸೋಣ ಅಂತಲೂ ಅಮಿತಾಭ್ ಬಚ್ಚನ್ ಹೇಳಿದ್ದಾರೆ.


ಇದನ್ನೂ ಓದಿ: Lucky Man: ಟಿವಿಯಲ್ಲಿ ಬರ್ತಿದೆ 'ಲಕ್ಕಿಮ್ಯಾನ್'! ಮನೆಯಲ್ಲೇ ದೇವರ ದರ್ಶನ ಮಾಡಿ


ಅಮಿತಾಭ್ ಬಚ್ಚನ್ ಭಾವನಾತ್ಮಕ ಮಾತಿನ ವೀಡಿಯೋವನ್ನ ಈಗ ನಾವು ಸೋಷಿಯಲ್ ಮೀಡಿಯಾದಲ್ಲೂ ನೋಡಬಹುದು. ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮರ್ ತಮ್ಮ ಟ್ವಿಟರ್ ಪೇಜ್​ ನಲ್ಲಿ ಈ ಒಂದು ವೀಡಿಯೋವನ್ನ ಹಂಚಿಕೊಂಡಿದ್ದಾರೆ


ಅಮಿತಾಭ್ ಬಚ್ಚನ್ ಅವರಿಗೆ ಅಶ್ವಿನಿ ಹೃತ್ಪೂರ್ವಕ ಧನ್ಯವಾದಗಳು
ಅಪ್ಪು ಬಗ್ಗೆ ಅಮಿತಾಭ್ ಬಚ್ಚನ್ ತುಂಬಾ ಭಾವನಾತ್ಮಕವಾಗಿಯೇ ಮಾತನಾಡಿದ್ದಾರೆ. ಪುನೀತ್ ಬಾಲ್ಯದ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಪುನೀತ್ ಸ್ಮೈಲ್ ಕುರಿತು ಕೊಂಡಾಡಿದ್ದಾರೆ. ಗಂಧದ ಗುಡಿಯ ಶ್ರೀಮಂತಿಕೆಯನ್ನ ವರ್ಣಿಸಿದ್ದಾರೆ. ಇಷ್ಟೆಲ್ಲ ಒಂದೇ ವೀಡಿಯೋದಲ್ಲಿಯೇ ಹೇಳಿದ್ದಾರೆ.


ಇದರಿಂದ ತುಂಬಾ ಖುಷಿಯಾಗಿರೋ ಪುನೀತ್ ರಾಜಕುಮಾರ್ ಪತ್ನಿ, ಅಶ್ವಿನಿ ಪುನೀತ್​ ರಾಜಕುಮಾರ್ ಧನ್ಯವಾದ ಅರ್ಪಿಸಿದ್ದಾರೆ. ಅಮಿತಾಭ್ ಅವರ ವೀಡಿಯೋ ಶೇರ್ ಮಾಡಿಕೊಂಡು ಈ ಸಾಲುಗಳುನ್ನೂ ಬರೆದಿದ್ದಾರೆ.


Bollywood Actor Amitabh Bachchan Talk About Puneeth Rajkumar and wish to Gandhada Gudi Film
ಅಮಿತಾಭ್ ಬಚ್ಚನ್ ಅವರಿಗೆ ಅಶ್ವಿನಿ ಹೃತ್ಪೂರ್ವಕ ಧನ್ಯವಾದಗಳು


"ಶ್ರೀ. ಅಮಿತಾಭ್ ಬಚ್ಚನ್ ಅವರೇ, ನಿಮ್ಮ ಈ ಭಾವನಾತ್ಮಕ ಮಾತುಗಳಿಗೆ ಮತ್ತು ವಿಶೇಷ ಸಂದೇಶಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು."


ಕನ್ನಡದ ಗಂಧದ ಗುಡಿ ಸಿನಿಮಾ ಮೊದಲು ಪುನೀತ್ ಅವರ ಸಿನಿಮಾ ಆಗಿತ್ತು. ಈಗ ಅದು ಇಡೀ ನಾಡಿನ ಸಿನಿಮಾ ಆಗಿದೆ. ಮಕ್ಕಳೆಲ್ಲ ಅದನ್ನ ಕಂಡು ನಮ್ಮ ನಾಡಿನ ವನ್ಯ ಸಂಪತನ್ನ ಕಣ್ತುಂಬಿಕೊಳ್ಳಬಹುದು. ಅಷ್ಟು ಅದ್ಭುತವಾದ ಈ ಸಿನಿಮಾವನ್ನ ರಿಯಾಯತಿ ದರದಲ್ಲಿ ಮಕ್ಕಳಿಗೆ ತೋರಲಾಗಿದೆ.


ಇದನ್ನೂ ಓದಿ: Razia Ram Hero Atharva: ಹಾಸನದ ಸಿವಿಲ್ ಇಂಜಿನಿಯರ್ ರಾಮನಾದ ಕಥೆ: ರಜಿಯಾಗೆ ಸಿಕ್ಕ ಹೀರೋನ ರಿಯಲ್ ಸ್ಟೋರಿ ಸಖತ್ ಇಂಟ್ರಸ್ಟಿಂಗ್


ಇನ್ನುಳಿದಂತೆ ಗಂಧದ ಗುಡಿ ಬಗ್ಗೆ ಮನದ ಮಾತನ್ನ ಆಡಿರೋ ಅಮಿತಾಭ್ ಬಚ್ಚನ್ ಅಪ್ಪು ಅಭಿಮಾನಿಗಳ ಮನಸ್ಸಿನಲ್ಲೂ ಈಗ ಜಾಗ ಮಾಡಿಕೊಂಡಿದ್ದಾರೆ. ಅಪ್ಪು ಕೊನೆ ಸಿನಿಮಾ ಗಂಧದ ಗುಡಿ ಚಿತ್ರವನ್ನ ನೋಡಿ ಎಂದು ತಮ್ಮದೇ ರೀತಿಯಲ್ಲಿಯೇ ಎಲ್ಲರಿಗೂ ಹೇಳಿದ್ದಾರೆ.

First published: