ಬಾಲಿವುಡ್ನ ಹಿಟ್ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಅಕ್ಷಯ್ ಕುಮಾರ್ ಇದೀಗ ಮರಾಠಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮಹೇಶ್ ಮಂಜ್ರೇಕರ್ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಮರಾಠಿ ನೆಲದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಶಿವಾಜಿ ಮಹಾರಾಜರ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ಅಕ್ಷಯ್ ಬಣ್ಣ ಹಚ್ಚುತ್ತಿದ್ದು ಮರಾಠಿ ಚಿತ್ರದ ಆರಂಭ ತುಂಬಾ ಅದ್ಭುತವಾಗಿದೆ. ಮತ್ತುನನ್ನ ಕನಸು ನನಸಾಗುವ ಸಮಯ ಇದಾಗಿದೆ ನಟ ಹೇಳಿಕೊಂಡಿದ್ದಾರೆ. ಆದ್ರೆ ಅಕ್ಷಯ್ ಕುಮಾರ್ ಅವರು ವಿಡಿಯೋ ಈಗ ಟ್ರೋಲ್ ಆಗುತ್ತಿದೆ. ಶಿವಾಜಿ ಮಹಾರಾಜರ ಕಾಲದಲ್ಲಿ ಬಲ್ಬ್ ಎಲ್ಲಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಶಿವಾಜಿ ಮಹಾರಾಜ್ ಪಾತ್ರದಲ್ಲಿ ಅಕ್ಷಯ್ ಕುಮಾರ್
ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರ ಮರಾಠಿ ಸಿನಿಮಾ 'ವೇದತ್ ಮರಾಠೆ ವೀರ್ ದೌಡ್ಲೆ ಸಾತ್' ನಲ್ಲಿ ಅಕ್ಷಯ್ ಕುಮಾರ್ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈಗಾಗಲೇ ಚಿತ್ರೀಕರಣದ ಮೊದಲ ಭಾಗ ಮುಂಬೈನಲ್ಲಿ ಪ್ರಾರಂಭವಾಗಿದೆ. ಚಿತ್ರ ತಂಡ ಫಸ್ಟ್ ಲುಕ್ ಟೀಸರ್ ಅನ್ನು ಹಂಚಿಕೊಂಡಿದೆ. ಚಿತ್ರದ ಚಿತ್ರೀಕರಣದ ಕುರಿತಾಗಿ ಅಕ್ಷಯ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಬಲ್ಬ್ ಎಲ್ಲಿತ್ತು ಎಂದು ಟ್ರೋಲ್
ಅಕ್ಷಯ್ ಕುಮಾರ್ ಹಾಕಿದ ವಿಡಿಯೋ ನೋಡಿ ಜನ್ ಟ್ರೋಲ್ ಮಾಡ್ತಾ ಇದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರು 1630 ರಿಂದ 1680 ರ ನಡುವೆ ಜೀವಿಸಿದ್ದರು. ಎಲೆಕ್ಟ್ರಿಕ್ ಬಲ್ಬ್ ಬಂದಿದ್ದು, ಸುಮಾರು ಇನ್ನೂರು ವರ್ಷಗಳ ನಂತರ. ಚಿತ್ರದಲ್ಲಿ ಏಕೆ ಬಲ್ಬ್ ಇದೆ ಎಂದು ಕೇಳುತ್ತಿದ್ದಾರೆ. ಥಾಮಸ್ ಎಡಿಸನ್ ಬಲ್ಬ್ ಕಂಡು ಹಿಡಿದಿದ್ದು 1880 ರಲ್ಲಿ ಎಂದು ಟ್ರೋಲರ್ಗಳು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ: Akshay Kumar: ಮರಾಠಿ ಸಿನಿಮಾದಲ್ಲಿ ಶಿವಾಜಿ ಪಾತ್ರ ಮಾಡ್ತಿದ್ದಾರೆ ಅಕ್ಷಯ್ ಕುಮಾರ್
ಕೊನೆಯಲ್ಲಿ ಕಾಣಿಸಿರುವ ಬಲ್ಬ್
ಅಕ್ಷಯ್ ಕುಮಾರ್ ಅವರು ಶೇರ್ ಮಾಡಿರುವ ವಿಡಿಯೋದಲ್ಲಿ, ಅವರು ಶಿವಜಿ ಪಾತ್ರದಲ್ಲಿ ಎದ್ದು ಬರುತ್ತಾರೆ. ಜೈ ಶಿವಾಜಿ, ಜೈ ಭವಾನಿ ಎಂದು ಘೋಷಣೆಗಳು ಕೇಳುತ್ತಿವೆ. ಕೊನೆಯಲ್ಲಿ ಬಲ್ಬ್ ಕಾಣಿಸಿದೆ. ಜನ ಅದನ್ನೇ ಪ್ರಶ್ನೆ ಮಾಡ್ತಾ ಇದ್ದಾರೆ. ಇದು ಬೇಕಾ ಬಿಟ್ಟಿ ಚಿತ್ರೀಕರಣ ಎಂದು ಹೇಳುತ್ತಿದ್ದಾರೆ.
View this post on Instagram
2023 ರ ದೀಪಾವಳಿಗೆ ಚಿತ್ರ ಬಿಡುಗಡೆ
ಚಲನಚಿತ್ರದಲ್ಲಿ ಜಯ್ ದುಧಾನೆ, ಉತ್ಕರ್ಷ ಶಿಂಧೆ, ವಿಶಾಲ್ ನಿಕಮ್, ವಿರಾಟ್ ಮಡ್ಕೆ, ಹಾರ್ದಿಕ್ ಜೋಶಿ, ಸತ್ಯ, ಅಕ್ಷಯ್, ನವಾಬ್ ಖಾನ್ ಮತ್ತು ಪ್ರವೀಣ್ ತಾರ್ಡೆ ಮೊದಲಾದವರು ಬಣ್ಣ ಹಚ್ಚಲಿದ್ದಾರೆ. ವೇದತ್ ಮರಾಠೆ ವೀರ್ ದೌಡ್ಲೆ ಸಾತ್ ಅನ್ನು ವಸೀಮ್ ಖುರೇಷಿ ನಿರ್ಮಿಸಿದ್ದಾರೆ. ಮಹೇಶ್ ಮಂಜ್ರೇಕರ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರವು ಮರಾಠಿ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿದ್ದು 2023 ರ ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರವು ಕೇವಲ ಒಂದು ಕಥೆ ಹಾಗೂ ಯುದ್ಧದ ದನಿಯಾಗಿರದೇ ಹಿಂದವಿ ಸ್ವರಾಜ್ಯದ ಯಶೋಗಾಥೆ ಮತ್ತು ಅದ್ಬುತವಾದ ನಿಸ್ವಾರ್ಥ ತ್ಯಾಗದ ಕಥೆಯಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಇದನ್ನೂ ಓದಿ: Bigg Boss Kannada: ಮಿತಿ ಮೀರಿದ ಸಲುಗೆ, ರೂಪೇಶ್ ರಾಜಣ್ಣ-ಆರ್ಯವರ್ಧನ್ ನಡುವೆ ಗಲಾಟೆ!
ಮೊದಲ ಬಾರಿಗೆ ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರೊಂದಿಗೆ ಕೆಲಸ ಮಾಡುತ್ತಿರುವುದಾಗಿ ಅಕ್ಷಯ್ ತಿಳಿಸಿದ್ದಾರೆ. ಶಿವಾಜಿ ಮಹಾರಾಜರ ಜೀವನದಿಂದ ಸ್ಫೂರ್ತಿ ಪಡೆದುಕೊಂಡು ಹಾಗೂ ತಾಯಿ ಜೀಜಾ ಅವರ ಆಶೀರ್ವಾದದಿಂದ ಪಾತ್ರಕ್ಕೆ ನನ್ನ ಕೈಲಾದಷ್ಟು ನ್ಯಾಯ ಸಲ್ಲಿಸುತ್ತೇನೆ ಎಂದು ಅಕ್ಷಯ್ ಹೃದಯಸ್ಪರ್ಶಿಯಾಗಿ ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ