ಬಾಲಿವುಡ್ ಆ್ಯಕ್ಟರ್ ಅಕ್ಷಯ್ (Bollywood Akshay Kumar)ಕುಮಾರ್ ಈಗೊಂದು ವೀಡಿಯೋ ಶೇರ್ ಮಾಡಿದ್ದಾರೆ. ಇದು ಸರ್ಕಸ್ನ ಆ ದಿನಗಳನ್ನೆ ನೆನಪಿಸುತ್ತದೆ. ಸರ್ಕಸ್ (Akshay Kumar in Circus) ಬಂದು ಅದೆಷ್ಟೋ ದಿನಗಳೇ ಆಗಿವೆ. ಅದೇ ರೀತಿನೇ ಮುಂಬೈನಲ್ಲಿ ಈಗ ಸರ್ಕಸ್ ಬಂದಿದೆ. ಇದನ್ನ ಫ್ಯಾಮಿಲಿ ಜೊತೆಗೇನೆ ಅಕ್ಷಯ್ ಕುಮಾರ್ ವೀಕ್ಷಿಸಿದ್ದಾರೆ. ಆ ಕೂಡಲೇ ಪತ್ನಿ ಟ್ವಿಂಕಲ್ (Twinkle Khanna) ಖನ್ನಾ ವಿಶೇಷ ಆ್ಯಕ್ಟ್ ಒಂದನ್ನ ಕಂಡು ಇದೇನೂ ಅಂತಲೂ ಕುತೂಹಲದಿಂದಲೇ ಕೇಳಿದ್ದಾರೆ. ಆಗ ಅಕ್ಷಯ್ ಕೊಟ್ಟ ಉತ್ತರ ತುಂಬಾ ಫನ್ನಿಯಾಗಿದೆ. ಇದನ್ನ ಕೇಳಿ ಟ್ವಿಂಕಲ್ ಖನ್ನಾ ಆಗ ಏನ್ ಹೇಳಿದರೋ ಏನೋ. ಆದರೆ ವೀಡಿಯೋ (Circus Video Viral) ಮಾತ್ರ ಸಖತ್ ಆಗಿಯೇ ಇದೆ. ಇದರ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಆ್ಯಕ್ಷನ್ ಕಿಂಗ್ ಅಕ್ಷಯ್ ಸರ್ಕಸ್ ಖುಷಿ
ಅಕ್ಷಯ್ ಕುಮಾರ್ ಮೊನ್ನೆ ಸರ್ಕಸ್ ನೋಡೋಕೆ ಹೋಗಿದ್ದರು. ಒಬ್ಬರೇ ಅಲ್ಲ, ಪತ್ನಿ ಮತ್ತು ಮಕ್ಕಳೊಟ್ಟಿಗೆ ಸರ್ಕಸ್ ವೀಕ್ಷಿಸಲು ಆಗಮಿಸಿದ್ದರು. ಆ ಕ್ಷಣನ ಈ ಫ್ಯಾಮಿಲಿಗೆ ಏನೋ ಖುಷಿನೇ ಆಗಿದೆ.
ಅಕ್ಷಯ್ ಕುಮಾರ್ ತಮ್ಮ ಚಿತ್ರ ಜೀವನದಲ್ಲಿ ರಿಯಲ್ ಸ್ಟಂಟ್ಸ್ ಮಾಡಿದ್ದಾರೆ. ಅವುಗಳನ್ನ ಕಂಡ ಸಿನಿಮಾ ಪ್ರೇಮಿಗಳು ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ. ಹಾಗೆ ಅಕ್ಷಯ್ ಕುಮಾರ್ ಸಿನಿಮಾ ಪ್ರೇಮಿಗಳನ್ನ ರಂಜಿಸುತ್ತಲೇ ಬಂದಿದ್ದಾರೆ.
ಅಕ್ಷಯ್ ಕುಮಾರ್ ಸರ್ಕಸ್ ಅನುಭವ ಹೇಗಿತ್ತು?
ಅಕ್ಷಯ್ ಕುಮಾರ್ ಸಾಹಸಗಳು ಭಾರೀ ಫೇಮಸ್ ಆಗಿವೆ. ರಿಯಲ್ ಸ್ಟಂಟ್ಸ್ ಅನ್ನೇ ಮಾಡಿರೋ ಅಕ್ಷಯ್ ಕುಮಾರ್, ಸರ್ಕಸ್ ರಿಯಲ್ ಸ್ಟಂಟ್ಸ್ ಕಣ್ಣಾರೆ ಕಂಡು ಫುಲ್ ಥ್ರಿಲ್ ಆಗಿದ್ದಾರೆ.
ಅದರಲ್ಲೂ ಅಕ್ಷಯ್ ಕುಮಾರ್, ಬೈಕ್ ಸ್ಟಂಟ್ಸ್ ಕಂಡು ತುಂಬಾ ಸಂತೋಷಪಟ್ಟಿದ್ದಾರೆ. ಪತ್ನಿ ಟ್ವಿಂಕಲ್ ಖನ್ನಾ ಕೂಡ ಸರ್ಕಸ್ನ ಆ್ಯಕ್ಟ್ ಕಂಡು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.
ಪತ್ನಿ ಟ್ವಿಂಕಲ್ ಖನ್ನಾ ಪತಿ ಅಕ್ಷಯ್ಗೆ ಕೇಳಿದ್ದೇನು?
ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಇಲ್ಲಿ ಸರ್ಕಸ್ ಕಲಾವಿದರ ಸಾಹಸಗಳನ್ನ ಕಂಡು ಥ್ರಿಲ್ ಏನೋ ಆಗಿದ್ದಾರೆ. ಗೋಲಾಕಾರದ ಕೇಜ್ ನಲ್ಲಿ ಬೈಕ್ ಸ್ಟಂಟ್ಸ್ ನೋಡಿ ಅದೇನೋ ರೋಮಾಂಚನಗೊಂಡಿದ್ದಾರೆ.
ಆದರೆ ಈ ಒಂದು ಆ್ಯಕ್ಟ್ ಬಗ್ಗೆ ಟ್ವಿಂಕಲ್ ಖನ್ನಾ ಅವರಿಗೆ ಅದೇನೋ ಜಾಸ್ತಿನೇ ಕ್ಯೂರಿಯೋಸಿಟಿ ಮೂಡಿದೆ. ಈ ಕಾರಣಕ್ಕೇನೆ ಪಕ್ಕದಲ್ಲಿಯೇ ಇದ್ದ ಪತಿಗೆ ಟ್ವಿಂಕಲ್ ಖನ್ನಾ ಈ ಒಂದು ಪ್ರಶ್ನೆ ಕೇಳಿಯೇ ಬಿಟ್ಟಿದ್ದಾರೆ.
View this post on Instagram
ಪತ್ನಿಯ ಈ ಒಂದು ಮುಗ್ಧ ಪ್ರಶ್ನೆಗೆ ಅಕ್ಷಯ್ ಕುಮಾರ್ ಆ ಕೂಡಲೇ ಉತ್ತರ ಕೊಟ್ಟು ಬಿಟ್ಟಿದ್ದಾರೆ. ಆ ಉತ್ತರ ನಿಜಕ್ಕೂ ಮಜವಾಗಿಯೇ ಇದೆ. ಅದನ್ನ ಕೇಳಿದ್ರೆ ಯಾರೇ ಆದ್ರೂ ಸರಿಯೇ, ಒಂದ್ ಅರೆಕ್ಷಣದಲ್ಲಿ ನಕ್ಕು ಬಿಡ್ತಾರೆ. ಹಂಗಿದೆ ಆ ಉತ್ತರ. ಅದೇನೂ ಅನ್ನೋದು ಇಲ್ಲಿದೆ ನೋಡಿ.
Akshay Kumar Got my family to watch the good old circus yesterday. Wife asked me what this act is called. I wish I could say ‘marriage’ Maut Ka Kuan
ಹೌದು, ಅಕ್ಷಯ್ ಕುಮಾರ್ ಇದೇ ರೀತಿ ಹೇಳೋಕೆ ಬಯಸಿದ್ದರು. ಆದರೆ ಅದು ಸಾಧ್ಯವೇ. ಆಗೋದಿಲ್ಲ ಬಿಡಿ. ಹಾಗಾಗಿಯೇ ಆ ಕ್ಷಣ ಬೈಕ್ ಸ್ಟಂಟ್ಸ್ ನ ಈ ಒಂದು ಆ್ಯಕ್ಟ್ಗೆ ಸಾವಿನ ಬಾವಿ (ಮೌತ್ ಕಾ ಕುವಾ) ಹೇಳುತ್ತಾರೆ ಎಂದು ಪತ್ನಿ ಟ್ವಿಂಕಲ್ ಖನ್ನಾಗೆ ಅಕ್ಷಯ್ ಹೇಳಿದ್ದಾರೆ.
ಇದನ್ನೂ ಓದಿ: Rashmika Mandanna:ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಫೋಟೋ ವೈರಲ್! ಏನಿದರ ಗುಟ್ಟು?
ಆದರೆ ತಮ್ಮ ಮನಸಿನ ಮಾತನ್ನ ವೀಡಿಯೋ ಸಮೇತ ಇನ್ಸ್ಟಾಗ್ರಾಮ್ ನಲ್ಲಿಯೇ ಹೇಳಿಕೊಂಡಿದ್ದಾರೆ. ನನ್ನ ಪತ್ನಿ ಕೇಳಿದಾಗ ಈ ಒಂದು ಮೌತ್ ಕಾ ಕುವಾ ಸಾಹಸವನ್ನ "ಮದುವೆ" ಗೆ ಹೋಲಿಸಿ ಹೇಳಬೇಕು ಅಂದುಕೊಂಡೆ. ಆದರೆ ಅದು ಸಾಧ್ಯವಿಲ್ಲ.
ಅಂದುಕೊಂಡು ಸುಮ್ಮನಾದೆ ಅನ್ನೋ ಅರ್ಥದಲ್ಲಿಯೇ ಬರೆದುಕೊಂಡಿದ್ದಾರೆ.
ಅಕ್ಷಯ್ ಕುಮಾರ್ ತಮ್ಮ ಈ ತಮಾಷೆಯ ಮಾತಿನ ಪೋಸ್ಟ್ ಮೂಲಕ ಈಗ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಮದುವೆ ಬಗ್ಗೆ ಎಲ್ಲರಿಗೂ ಒಂದು ಕಲ್ಪನೆ ಇರುತ್ತದೆ. ಅಕ್ಷಯ್ ಸಾಹಸಕ್ಕೆ ಫೇಮಸ್ ಅಲ್ವೇ? ಅದಕ್ಕೇನೆ ಸಾವಿನ ಬಾವಿಯ ಈ ಸಕರ್ಸ್ ಆಟವನ್ನ ಹೀಗೆ ಮದುವೆಗೆ ಹೋಲಿಸಿ ಮಜಾ ತೆಗೆದುಕೊಂಡಿದ್ದಾರೆ ಅಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ