ಬಾಲಿವುಡ್ (Bollywood) ಸಿನಿಮಾ ಅಂದ್ರೆ ಒಂದು ಕ್ರೇಜ್ ಇರ್ತಾ ಇತ್ತು. ಆ ರೀತಿ ಸಿನಿಮಾ ಯಾರು ತೆಗೆಯೋಕೆ ಸಾಧ್ಯವಿಲ್ಲ ಎನ್ನುವ ಮಾತುಗಳು ಇರ್ತಾ ಇದ್ದವು. ಆದ್ರೆ ಈಗ ಎಲ್ಲಾ ಭಾಷೆಗಳಲ್ಲೂ ಒಳ್ಳೆ ಒಳ್ಳೆಯ ಸಿನಿಮಾಗಳು ಬರ್ತಾ ಇವೆ. ಸಿನಿಮಾ ಚೆನ್ನಾಗಿದ್ರೆ ಬೇರೆ ಭಾಷೆಗಳಲ್ಲೂ ಓಡುತ್ತವೆ. ಬಾಲಿವುಡ್ ಕೆಲ ಸಿನಿಮಾಗಳು ಮಾತ್ರ ಹಿಟ್ ಆಗುತ್ತಿವೆ. ಎಲ್ಲಾ ಸಿನಿಮಾಗಳು ಜನರನ್ನು ರಂಚಿಸುವಲ್ಲಿ ವಿಫಲವಾಗುತ್ತಿವೆ. ಅದಕ್ಕೆ ಬಾಲಿವುಡ್ ನಟರು ಒಬ್ಬರಿಗೊಬ್ಬರು ಸಹಾಯ ಮಾಡ್ತಾ ಇದ್ದಾರೆ. ತಮ್ಮ ಸಿನಿಮಾ ರಂಗವನ್ನು ಮತ್ತಷ್ಟು ಮೇಲಕ್ಕೆತ್ತಲು ಪ್ರಯತ್ನ ಮಾಡ್ತಾ ಇದ್ದಾರೆ. ಅಕ್ಷಯ್ ಕುಮಾರ್ (Akshay Kumar ) ಸಿನಿಮಾ ಸೆಲ್ಫಿ (Selfie) ಬಿಡುಗಡೆಗೆ ಸಿದ್ಧವಾಗಿದೆ. ಅದಕ್ಕೆ ಸಲ್ಮಾನ್ ಖಾನ್ (Salman Khan) ಅಕ್ಷಯ್ ಕುಮಾರ್ ಜೊತೆ ರೀಲ್ಸ್ (Reels)ನಲ್ಲಿ ಕಾಣಿಸಿಕೊಂಡು ವಿಶ್ ಮಾಡಿದ್ದಾರೆ.
ಪಠಾಣ್ ಸಿನಿಮಾಕ್ಕೂ ಸಹಾಯ
ಬಾಲಿವುಡ್ ನಟ ಸಲ್ಮಾನ್ ಖಾನ್ ಶಾರುಖ್ ಖಾನ್ ಅಭಿನಯುದ ಪಠಾಣ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಇದು ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದೆಯಂತೆ. ಅಲ್ಲದೇ ಸಿನಿಮಾ ಸೂಪರ್ ಹಿಟ್ ಆಗ್ತಿದೆ. ದಿನೇ ದಿನ ಕಲೆಕ್ಷನ್ ಹೆಚ್ಚಿಗೆ ಮಾಡಿಕೊಳ್ತಾ ಇದೆ. ಇದೇ ಕ್ರಮವನ್ನು ಅನುಸರಿಸಲು ಅಕ್ಷಯ್ ಕುಮಾರ್ ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ.
ಸೆಲ್ಫಿ ಸಿನಿಮಾಗಾಗಿ ಇದೆಲ್ಲಾ?
ಅಕ್ಷಯ್ ಕುಮಾರ್ ಅಭಿನಯದ ಸೆಲ್ಫಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೇ ತಿಂಗಳು 24ರಂದು ರಿಲೀಸ್ ಆಗಲಿದೆ. ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದು ಹಾಸ್ಯ ಭರಿತ ಸಿನಿಮಾವಾಗಿದೆ. ರಾಜ್ ಮೆಹ್ತಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಪ್ರಮೋಶನ್ ಗಾಗಿ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಸಖತ್ ಡ್ಯಾನ್ಸ್ ಮಾಡಿದ್ದಾರೆ.
ಅಕ್ಷಯ್-ಸಲ್ಲು ಭರ್ಜರಿ ಡ್ಯಾನ್ಸ್
ಅಕ್ಷಯ್ ಕುಮಾರ್ ಅವರು ರೀಲ್ಸ್ ವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಅಕ್ಷಯ್ ಕುಮಾರ್ ಅವರ ಸಿನಿಮಾವೊಂದರ ಮೇ ಕಿಲಾಡಿ ಹಾಡಿಗೆ ಇಬ್ಬರು ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಮತ್ತೆ ಈ ಸಿನಿಮಾದಲ್ಲೆ ರಿಮೇಕ್ ಮಾಡಲಿದ್ದಾರಂತೆ.
View this post on Instagram
ಜನರನ್ನು ತಲುಪುವ ಪ್ರಯತ್ನ
ಪಠಾಣ್ ಈಗ ಬಿರುಗಾಳಿಯಂತೆ ಮುನ್ನುಗ್ಗತ್ತಿದೆ. ಅದಕ್ಕೆ ಬಾಲಿವುಡ್ ಸಿನಿ ತಾರೆಯರು ಸಾಥ್ ನೀಡಿದ್ದಾರೆ. ಅದಕ್ಕೆ ಬಲಿವುಡ್ ಸಿನಿಮಾ ಕ್ರೇಜ್ ಹೆಚ್ಚಿಸಲು ಈ ರೀತಿಯ ರೀಲ್ಸ್ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಈ ರೀತಿ ರೀಲ್ಸ್ ಮೂಲಕ ಬೇಗ ಜನರನ್ನು ತಲುಪುವ ಉದ್ದೇಶವಿದಾಗಿದೆ.
ಇದನ್ನೂ ಓದಿ: Kabzaa Song: ಅಬ್ಬರಿಸಿ ಬಂದ 'ಕಬ್ಜ'! ಉಪ್ಪಿ ಸಿನಿಮಾದ ಟೈಟಲ್ ಸಾಂಗ್ ಹೇಗಿದೆ ಗೊತ್ತಾ?
ಈ ರೀಲ್ಸ್ ನಿಂದ ಇಬ್ಬರು ನಟಿರಿಗೆ ಮತ್ತಷ್ಟು ಅಭಿಮಾನಿಗಳು ಹೆಚ್ಚಿದ್ದಾರೆ. ಮತ್ತೆ ಮತ್ತೆ ಈ ರೀತಿಯ ರೀಲ್ಸ್ ಮಾಡಿ ಎಂದು ಹೇಳಿದ್ದಾರೆ. ಅಕ್ಷಯ್ ಕುಮಾರ್ ಸಿನಿಮಾ ಸೆಲ್ಫಿ ಬಿಡುಗಡೆಗೆ ಸಿದ್ಧವಾಗಿದೆ. ಅದಕ್ಕೆ ಸಲ್ಮಾನ್ ಖಾನ್ ಅಕ್ಷಯ್ ಕುಮಾರ್ ಜೊತೆ ರೀಲ್ಸ್ ನಲ್ಲಿ ಕಾಣಿಸಿಕೊಂಡು ವಿಶ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ