• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • RRR Movie: ಬಾಲಿವುಡ್​ ಸಿಂಗಂ ತೆಲುಗಿನತ್ತ: ಟಾಲಿವುಡ್​ನಲ್ಲಿ ಘರ್ಜಿಸಲಿದ್ದಾರೆ ಅಜಯ್​ ದೇವಗನ್​..!

RRR Movie: ಬಾಲಿವುಡ್​ ಸಿಂಗಂ ತೆಲುಗಿನತ್ತ: ಟಾಲಿವುಡ್​ನಲ್ಲಿ ಘರ್ಜಿಸಲಿದ್ದಾರೆ ಅಜಯ್​ ದೇವಗನ್​..!

ಟಾಲಿವುಡ್​ 'RRR' ಸಿನಿಮಾದಲ್ಲಿ ಬಾಲಿವುಡ್​ ಸ್ಟಾರ್​ ನಟ-ನಟಿಯರು

ಟಾಲಿವುಡ್​ 'RRR' ಸಿನಿಮಾದಲ್ಲಿ ಬಾಲಿವುಡ್​ ಸ್ಟಾರ್​ ನಟ-ನಟಿಯರು

'ಬಾಹುಬಲಿ' ನಂತರ ನಿರ್ದೇಶಕ ರಾಜಮೌಳಿ ಅವರ ಬಹು ನಿರೀಕ್ಷಿತ ಸಿನಿಮಾ 'RRR'. ಮುಂದಿನ ವರ್ಷ ಜುಲೈನಲ್ಲಿ ತೆರೆಗಪ್ಪಳಿಸಲಿರುವ ಈ ಸಿನಿಮಾದಲ್ಲಿ ಬಾಲಿವುಡ್​ನ ಸ್ಟಾರ್ ನಟ-ನಟಿಯರೂ ಇದ್ದಾರೆ.

  • News18
  • 2-MIN READ
  • Last Updated :
  • Share this:

ಭಾರತೀಯ ಸಿನಿರಂಗಕ್ಕೆ 'ಬಾಹುಬಲಿ'ಯಂತಹ ಮಹಾಕಾವ್ಯವನ್ನುಕೊಟ್ಟ ನಿರ್ದೇಶಕ ರಾಜಮೌಳಿ. ಅವರ ನಿರ್ದೇಶನದ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಅತಿಥಿ ಪಾತ್ರದಲ್ಲಿ ಅಭಿನಯಿಸಲು ಯಾವ ಸ್ಟಾರ್​ ನಟನಾದರೂ ಹಿಂದೆ ಸರಿಯುವುದಿಲ್ಲ.

ಇದನ್ನೂ ಓದಿ: #Karthi19: ಕಾಲಿವುಡ್​ಗೆ ಕಾಲಿಟ್ಟ ಕಿರಿಕ್​ ಹುಡುಗಿ: ಸೆಟ್ಟೇರಿತು ಕಾರ್ತಿ-ರಶ್ಮಿಕಾರ ತಮಿಳು ಸಿನಿಮಾ

ನಿರ್ದೇಶಕ ರಾಜಮೌಳಿ ತೆಲುಗಿನಲ್ಲಿ ರಾಮ್​ಚರಣ್​ ತೇಜ, ಜೂನಿಯರ್​ ಎನ್​ಟಿಆರ್​ ಜತೆ  'RRR' ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಈ ಇಬ್ಬರು ಸ್ಟಾರ್​ ನಟರ ಜತೆಗೆ ಈಗ ಮತ್ತೊಬ್ಬ ಖ್ಯಾತ ನಟನ ಹೆಸರೂ ಸೇರಿಕೊಮಡಿದೆ.



ಹೌದು, 'RRR' ಸಿನಿಮಾದಲ್ಲಿ ಬಾಲಿವುಡ್​ ಸಿಂಗಂ ಅಜಯ್​ ದೇವಗನ್​ ಸಹ ಅಭಿನಯಿಸಿದ್ದಾರೆ. ಈ ವಿಷಯವನ್ನು ಖುದ್ದು ನಿರ್ದೇಶಕ ರಾಜಮೌಳಿ ಅವರೇ ಪತ್ರಿಕಾಗೋಷ್ಠಿಯಲ್ಲಿ ಬಹಿರಗಂಪಡಿಸಿದ್ದಾರೆ. ಈ ಸಿನಿಮಾದಲ್ಲಿ ಅಜಯ್​ ದೇವಗನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.




ಈ ಸಿನಿಮಾದಲ್ಲಿ ನಾಯಕಿಯರಾಗಿ ಅಲಿಯಾ ಭಟ್​, ಡೈಸಿ ಎಡ್ಗರ್​ ಜೋನ್ಸ್​ ಅಭಿನಯಿಸುತ್ತಿದ್ದು, ಅಲಿಯಾ ರಾಮ್​ ಚರಣ್​ ತೇಜಾಗೆ ಹಾಗೂ ಡೈಸಿ ಜೂನಿಯರ್​ ಎನ್​ಟಿಆರ್​ ಅವರಿಗೆ ಜೊತೆಯಾಗಲಿದ್ದಾರೆ. ಈ ಬಗ್ಗೆ 'RRR' ಸಿನಿಮಾ ತಂಡ ಮಾಡಿರುವ ಟ್ವೀಟ್​ ಇಲ್ಲಿದೆ.


R... R... R... 💥🤘🏻

ಇನ್ನೂ 1920ರಿಂದ 'RRR' ಸಿನಿಮಾ ಕತೆ ಆರಂಭವಾಗುವ ಕಾರಣದಿಂದ ಸರಿಯಾಗಿ ನೂರು ವರ್ಷಕ್ಕೆ ಅಂದರೆ 2020ರಲ್ಲಿ ಈ ಚಿತ್ರವನ್ನು ತೆರೆಗೆ ತರಲು ಚಿತ್ರ ತಂಡ ನಿರ್ಧರಿಸಿದೆ. ಅದು ಜುಲೈ 30ಕ್ಕೆ ರಾಜಮೌಳಿ ಅವರ 'RRR' ತೆರೆಗಪ್ಪಳಿಸಲಿದೆ.


ಅಂದಾಜು 350 ರಿಂದ 400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ  ಈ ಸಿನಿಮಾದಲ್ಲಿ ಅಲ್ಲುರಿ ಸೀತಾರಾಮರಾಜು ಅಂತಹವರನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಈ ಸಿನಿಮಾ ಕತೆ ಬರೆಯಲಾಗಿದೆಯಂತೆ. ಅಲ್ಲದೆ ನೂರಕ್ಕೆ ನೂರರಷ್ಟು ಇದು ಸೀಕ್ವಲ್​ ಇಲ್ಲದ ಸಿಂಗಲ್​ ಚಿತ್ರವೆಂದು ರಾಜಮೌಳಿ ಹೇಳಿದ್ದಾರೆ.

ರಾಜಮೌಳಿ ಅವರ ಸಿನಿಮಾಗಳಲ್ಲಿ ಅತಿ ಹೆಚ್ಚು ಚಿತ್ರಗಳು ಜುಲೈನಲ್ಲೇ ತೆರೆಕಂಡಿದ್ದು, ಅದು ಅವರಿಗೆ ಅದೃಷ್ಟದ ತಿಂಗಳು ಎಂಬ ನಂಬಿಕೆ ಇದೆಯಂತೆ. ಅದಕ್ಕಾಗಿಯೇ 'RRR' ಸಿನಿಮಾನೂ ನಿರೀಕ್ಷೆ ಮಾಡಿದಷ್ಟು ಸದ್ದು ಮಾಡಲಿದೆಯಾ ಎಂದು ಕಾದು ನೋಡಬೇಕಿದೆ.

PHOTOS: ತಮಿಳು ನಟ ಕಾರ್ತಿಗೆ #Karthi19 ಸಿನಿಮಾ ಸೆಟ್​ನಲ್ಲಿ ಜೊತೆಯಾದ ರಶ್ಮಿಕಾ ಮಂದಣ್ಣ..!

First published: