ಅಭಿಷೇಕ್ ಬಚ್ಚನ್! ಅಮಿತಾಬ್ ಬಚ್ಚನ್ ಅವರ ಪುತ್ರ, ವಿಶ್ವಸುಂದರಿ ಬಾಲಿವುಡ್ ನಟಿ ಐಶ್ವರ್ಯ ರೈ ಪತಿ ಮತ್ತು ಬಾಲಿವುಡ್ ನಟ. ಎಸ್! ಬಹುತೇಕ ಬಾರಿ ಅಭಿಷೇಕ್ ಬಚ್ಚನ್ ಅವರ ಸ್ವಂತ ಐಡೆಂಟಿಟಿ ಕಡೆಯಲ್ಲಿ ಬರುತ್ತದೆ. ಈ ಕಾರಣಕ್ಕಾಗಿ ರಾಯಲ್ ಫ್ಯಾಮಿಲಿ ಮ್ಯಾನ್ ಅಭಿ ಸಿಕ್ಕಾಪಟ್ಟೆ ವೇದನೆ ಅನುಭವಿಸಿದ್ದೂ ಇದೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಹಂಚಿಕೊಳ್ಳುವುದು ನಡೆಯುತ್ತಿರುತ್ತದೆ. ಇದೇ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ಅಭಿಷೇಕ್ ಬಚ್ಚನ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಕೂಡ ಇದೆ. ಹಾಗಂತ ಅಭಿಷೇಕ್ ಸುಮ್ಮನೇ ಟ್ರೋಲ್ಗಳನ್ನು ನಿರ್ಲಕ್ಷಿಸುವವರು ಅಲ್ಲ. ಪ್ರತಿ ಬಾರಿ ತಮ್ಮನ್ನು ತಾವು ಡಿಫೆಂಡ್ ಮಾಡೋದನ್ನು ಮರೆಯೋದೂ ಇಲ್ಲ. ಆದರೆ ಇದೆಲ್ಲರ ಆಚೆಗೂ ಅಭಿಷೇಕ್ ಬಚ್ಚನ್ ಬಾಲಿವುಡ್ ಇಂಡಸ್ಟ್ರಿಯಲ್ಲಿ ಯಶಸ್ವಿಯಾಗದೇ ಇರೋ ಕಾರಣಕ್ಕೆ ಎಷ್ಟೋ ಬಾರಿ ಒಳಗೊಳಗೆ ಸಂಕಟಪಟ್ಟಿದ್ದೂ ಇದೆ. ಇದೇ ಕಾರಣಕ್ಕೆ ಸಿನಿಮಾ ಇಂಡಸ್ಟ್ರಿ ತೊರೆಯುವ ನಿರ್ಧಾರಕ್ಕೂ ಬಂದಿದ್ದಿದೆ.
ಗುರು ಸಿನಿಮಾದಲ್ಲಿ ವಂಡರ್ ಕ್ರಿಯೇಟ್ ಮಾಡಿದ್ದ ಅಭಿಷೇಕ್ ಬಗ್ಗೆ ಇದ್ದ ನಿರೀಕ್ಷೆಗಳು ಈಡೇರದೇ ಇದ್ದಾಗ ಅಭಿಷೇಕ್ ಸಿನಿಮಾ ಕ್ಷೇತ್ರ ತನ್ನದಲ್ಲ ಎಂದು ಗಿವ್ ಅಪ್ ಮಾಡುವ ಮನಸ್ಸು ಕೂಡ ಮಾಡಿದ್ದರಂತೆ. ಇತ್ತೀಚೆಗೆ ಈ ಬಗ್ಗೆ ಆರ್ ಜೆ ಸಿದ್ಧಾರ್ಥ್ ಕರಣ್ ಅವರೊಟ್ಟಿಗೆ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. 'ನಾನು ನಿರಂತರ ಸೋಲಿನಿಂದ ಕಂಗೆಟ್ಟಿದ್ದೆ. ಒಂದು ಸಮಯದಲ್ಲಿ ನಾನು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ನನ್ನ ತಪ್ಪು ನಿರ್ಧಾರ ಎಂದುಕೊಂಡಿದ್ದೆ. ಆದರೂ ನಾನು ಗೆಲ್ಲುವ ಪ್ರಯತ್ನದಲ್ಲಿದ್ದೆ. ಪರಿಸ್ಥಿತಿಯಂತೂ ಏನೂ ಬದಲಾಗಲಿಲ್ಲ. ಆಗ ನನ್ನ ತಂದೆ ಬಳಿ ಹೋಗಿ ನಾನು ಈ ಇಂಡಸ್ಟ್ರಿಗೆ ಹೊಂದುವವನಲ್ಲ ಎಂದು ಹೇಳಿಕೊಂಡೆ' ಎಂದು ಅಭಿ ಹೇಳಿದ್ದಾರೆ.
ಆದರೆ ಅಭಿಷೇಕ್ ಬಚ್ಚನ್ ಅವರ ಈ ನಿರ್ಧಾರವನ್ನು ಅಮಿತಾಬ್ ಬಚ್ಚನ್ ಎಂದಿಗೂ ಒಪ್ಪಲಿಲ್ಲವಂತೆ. ಅಲ್ಲದೇ ಅಭಿಷೇಕ್ ಬಚ್ಚನ್ ಅವರಲ್ಲಿ ಮನೋಸ್ಥೈರ್ಯ ತುಂಬಿದ ಬಾಲಿವುಡ್ ಬಿಗ್ ಬಿ 'ನಾನು ನಿನ್ನನ್ನು ಅಷ್ಟು ಸುಲಭವಾಗಿ ಸೋಲನ್ನು ಒಪ್ಪಿಕೊಂಡು ಹಿಡಿದ ಕೆಲಸ ಕೈ ಬಿಡುವಂತೆ ಬೆಳೆಸಲಿಲ್ಲ. ಅಲ್ಲದೇ ಒಬ್ಬ ಮನುಷ್ಯ ಪ್ರತಿದಿನ ಮುಂಜಾನೆ ಎದ್ದೇಳಬೇಕು. ಸೂರ್ಯನ ಕೆಳಗೆ ತನ್ನ ಸ್ಥಾನಕ್ಕಾಗಿ ಆತ ಹೋರಾಡಬೇಕು ಎಂದರಂತೆ. ಜೊತೆಯಲ್ಲಿ ನಿನ್ನ ಬಳಿಗೆ ಬರುವ ಎಲ್ಲಾ ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡು ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ಮಾಡು. ಪ್ರತಿ ಪಾತ್ರಕ್ಕೂ ನ್ಯಾಯ ನೀಡು' ಎಂದು ಧೈರ್ಯ ತುಂಬಿದರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ