ಕೆಜಿಎಫ್ 2 ಸಿನಿಮಾ ನಂತ್ರ ರಾಕಿಂಗ್ ಸ್ಟಾರ್ ಯಶ್ ಅಂತರಾಷ್ಟ್ರೀಯ ಮಟ್ಟದಲ್ಲಿ ಬಂದು ನಿಂತಿದ್ದಾರೆ ಎಂದರೂ ತಪ್ಪಾಗಲಾರದು. ಕನ್ನಡದ (Kannada) ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಸಿನಿಮಾ (Cinema) ಅಬ್ಬರಕ್ಕೆ ಇಡೀ ಭಾರತೀಯ ಚಿತ್ರರಂಗವೇ (Indian Film Industry) ಒಮ್ಮೆ ತಿರುಗಿ ನೋಡಿದೆ. ಅಲ್ಲದೇ ಬಾಲಿವುಡ್ ದಾಖಲೆಗಳನ್ನು (Bollywood Records) ‘ರಾಕಿ ಭಾಯ್’ ಅಳಿಸಿಹಾಕಿದ್ದಾನೆ. ಇಡೀ ವಿಶ್ವದಲ್ಲೇ ರಾಕಿಂಗ್ ಸ್ಟಾರ್ ಯಶ್ (Rocking Star Yash) ಹೆಸರು ಫೇಮಸ್ ಆಗಿದೆ. ಇದರ ನಡುವೆ ಹಿಂದಿಯ ಸ್ಟಾರ್ ಹೀರೋ ಅಮೀರ್ ಖಾನ್ ಅವರ ಬಹಿನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಸಿನಿಮಾ ಸಹ ಕೆಜಿಎಫ್ 2 ಜೊತೆ ತೆರೆ ಕಾಣುವುದಾಗಿ ಘೋಷಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅದನ್ನು ಮುಂದೂಡಿತು. ಇದಕ್ಕೆ ಕೆಜಿಎಫ್ 2 ಚಿತ್ರದ ಭಯವೇ ಕಾರಣ ಎಂದು ಇದೀಗ ಸ್ವತಃ ಅಮೀರ್ ಒಪ್ಪಿಕೊಂಡಿದ್ದಾರೆ.
ನಾವು ಬದುಕಿದೆವಯು ಎಂದ ಅಮೀರ್:
ಹೌದು, ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಕೆಜಿಎಫ್ 2 ಚಿತ್ರದ ಜೊತೆ ತೆರೆಕಾಣಬೇಕಿತ್ತು. 1994ರಲ್ಲಿ ಬಂದ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ‘ಲಾಲ್ ಸಿಂಗ್ ಚಡ್ಡಾ’. ಆದರೆ, ಅಂತಿಮ ಕ್ಷಣದಲ್ಲಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವಿಳಂಬ ಎಂಬ ಕಾರಣ ನೀಡಿ ಸಿನಿಮಾವನ್ನು ಆಗಸ್ಟ್ 11ಕ್ಕೆ ಮುಂದೂಡಿತು. ಆದರೆ ಇದೀಗ ಅಮಿರ್ ಖಾನ್ ಈ ಕುರಿತು ಮಾತನಾದ್ದು, ‘ಕೆಜಿಎಫ್ 2 ಸಿನಿಮಾದ ಕುರಿತು ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಕೇವಲ ಪ್ರೇಕ್ಷಕರಲ್ಲದೇ ನನ್ನ ಗೆಳೆಯರ ಬಳಗದವರು ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.
ಲಾಲ್ ಸಿಂಗ್ ಚಡ್ಡಾ ಏಪ್ರಿಲ್ 14ರಂದು ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರದ ವಿಎಫ್ಎಕ್ಸ್ ಕೆಲಸ ವಿಳಂಬ ಮಾಡಿದರು. ಅದು ನಮ್ಮ ಅದೃಷ್ಟ. ನಾವು ಬದುಕಿದೆವು. ಇಲ್ಲವಾದರೆ ನಾವು ಕೆಜಿಎಫ್ 2 ಎದುರು ಸ್ಪರ್ಧಿಸಬೇಕಿತ್ತು’ ಎಂದು ಆಮಿರ್ ಖಾನ್ ಹೇಳಿದ್ದಾರೆ. ಈ ಮೂಲಕ ಬಾಲಿವುಡ್ನ ಮಿಸ್ಟರ್ ಫರ್ಫೆಕ್ಟ್ ಸಹ ಹೆದರಿದ್ದಾಗಿ ಮತ್ತೊಮ್ಮೆ ಸಾಭೀತಾಗಿದೆ.
ಇದನ್ನೂ ಓದಿ: Yash-Radhika Pandit: ಯಶ್-ರಾಧಿಕಾ ಯಾವ ದೇಶಕ್ಕೆ ಹೋಗಿದ್ದಾರೆ? ಕೊನೆಗೂ ರಿವೀಲ್ ಆಯ್ತು ಗುಟ್ಟು
ಶಾರೂಖ್ ಸಿನಿಮಾ ಸಹ ಸೋತಿತ್ತು:
ಇನ್ನು, ಇದೂ ಕೇವಲ ಒಂದು ಬಾಲಿವುಡ್ ಸಿನಿಮಾದ ಕಥೆಯಲ್ಲ. ಕೆಜಿಎಫ್ ಮೊದಲ ಭಾಗ ಬಂದಾಗ ಸಹ ಬಾಲಿವುಡ್ ಕಿಂಗ್ ಶಾರೂಖ್ ಖಾನ್ ಅಭಿನಯದ ಝೀರೋ ಸಿನಿಮಾ ಸಹ ಮಕಾಡೆ ಮಲಗಿತ್ತು. ಇದರ ಜೊತೆಗೆ ಮತ್ತೊಂದು ಬಾಲಿವುಡ್ನ ಆನೆಯನ್ನು ಹೊಡೆಯಲು ಸಿದ್ದವಾಗಿದ್ದ ರಾಕಿ ಭಾಯ್ಗೆ ಹೆದರಿ ಅಮೀರ್ ಖಾನ್ ಹಿಂದೆ ಸರಿದ್ದಿದ್ದರು. ಇದನ್ನು ಸ್ವತಃ ಇದೀಗ ಅವರೇ ಒಪ್ಪಿಕೊಂಡಿದ್ದು, ಮತ್ತೊಮ್ಮೆ ಯಶ್ ಅವರ ತಾಕತ್ತು ಏನೆಂದು ತಿಳಿದಂತಾಗಿದೆ.
ಇದನ್ನೂ ಓದಿ: Yash-Radhika Pandit: ಜಾಲಿ ಮೂಡ್‌ನಲ್ಲಿ ಸ್ಯಾಂಡಲ್ವುಡ್ ಕ್ಯೂಟ್ ಕಪಲ್, ವಿದೇಶದ ಬೀದಿಗಳಲ್ಲಿ ಯಶ್-ರಾಧಿಕಾ ಸುತ್ತಾಟ
100 ದಿನ ಪೂರೈಸಿದ ಕೆಜಿಎಫ್ 2:
ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮೂರು ತಿಂಗಳು ಕಳೆದರೂ, ಕೆಜಿಎಫ್ 2 ಕ್ರೇಜ್ ಇನ್ನೂ ಇದೆ. ಈ ಸಿನಿಮಾ ವಿಶ್ವದಾದ್ಯಂತ 1250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಪ್ರಸ್ತುತ ಎಲ್ಲರ ಮನಗೆದ್ದು, ಪ್ರಪಂಚದಾದ್ಯಂತ ಸಂಚಲನ ಮೂಡಿಸಿದೆ. ಕೆಜಿಎಫ್ 1 ಮತ್ತು 2ನೇ ಭಾಗವು ಚಿತ್ರ ತಂಡದ ಪ್ರತಿಯೊಬ್ಬರಿಗೂ ಬಿಗ್ ಹಿಟ್ ನೀಡಿದ್ದು, ನಟ ಯಶ್ ತೂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ