Vidyuth Jamwal:ಬಾಲಿವುಡ್ ನ ಪವರ್ ಫುಲ್ ಆಕ್ಷನ್ ಹೀರೋ ಮಾಡೋ ಸಾಹಸಗಳೆಲ್ಲ ರಿಯಲ್ ರಿಯಲ್ !

ಇದೇ ಬಾಲಿವುಡ್​ ನಲ್ಲಿ ಇನ್ನೂ ಒಬ್ಬ ಹೀರೋ ಇದ್ದಾರೆ. ಅವರೇ ಮಿಸ್ಟರ್ Vidyuth Jamwal ವಿದ್ಯುತ್ ಜಾಮ್ವಾಲ್. ಈ ನಟನ ಆಕ್ಷನ್​ಗೆ ಕಳೆದು ಹೋಗದವ್ರೇ ಇಲ್ಲ. ಮಾಡೋ ಪ್ರತಿ ಸಾಹಸವೂ ರಿಯಲ್ ಆಗಿಯೇ ಇರುತ್ತವೆ.

ವಿದ್ಯುತ್ ಜಮ್ವಾಲ್

ವಿದ್ಯುತ್ ಜಮ್ವಾಲ್

  • Share this:
ಬಾಲಿವುಡ್ ನಲ್ಲಿ ರಿಯಲ್ ಆಕ್ಷನ್ (Action) ಹೀರೋ ಒಬ್ಬರೇ, ಅದು ಅಕ್ಷಯ್ ಕುಮಾರ್ (Akshay Kumar) ಅಂತಲೇ ಹೇಳಬೇಕಿಲ್ಲ. ಆದರೆ, ಇದೇ ಬಾಲಿವುಡ್​ ನಲ್ಲಿ ಇನ್ನೂ ಒಬ್ಬ ಹೀರೋ ಇದ್ದಾರೆ. ಅವರೇ ಮಿಸ್ಟರ್ (Vidyuth Jamwal) ವಿದ್ಯುತ್ ಜಾಮ್ವಾಲ್. ಈ ನಟನ ಆಕ್ಷನ್​ಗೆ ಕಳೆದು ಹೋಗದವ್ರೇ ಇಲ್ಲ. ಮಾಡೋ ಪ್ರತಿ ಸಾಹಸವೂ ರಿಯಲ್ ಆಗಿಯೇ ಇರುತ್ತವೆ.ಕಮಾಂಡೋ ಹೆಸರಿನ ಸರಣಿ ಸಿನಿಮಾದಲ್ಲಿ ವಿದ್ಯುತ್ ಮಾಡಿರೋ ಸಾಹಸಗಳು ರೋಮಾಂಚನಗೊಳಿಸುತ್ತದೆ. ಅಂತಹ ಈ ಆಕ್ಷನ್ ಹೀರೋ ಮಾರ್ಷಲ್ ಆರ್ಟ್ ನಲ್ಲಿ ರಿಯಲ್ ಮಾಸ್ಟರ್ ಆಗಿದ್ದಾರೆ. ಅದನ್ನೆ ಅಷ್ಟೇ ವಿಶೇಷವಾಗಿಯೇ ಪ್ರಾಕ್ಟೀಸ್ ಮಾಡೋ ವಿದ್ಯುತ್ ಜಾಮ್ವಾಲ್ ಕೊರೆಯೋ ಚಳಿಯಲ್ಲಿ ಐಸ್ ಅನ್ನ ಮೈ ಮೇಲೆ ಹಾಕಿಕೊಂಡು ಧ್ಯಾನ ಮಾಡಿದ್ದಾರೆ. ಅದನ್ನ ನೋಡೋಕೆನೆ ಭಯವಾಗುತ್ತದೆ. ಅಂತಹದ್ರದಲ್ಲಿ ಮೈಮೇಲೆ ಬಟ್ಟೆಗಳೇ ಇಲ್ಲದೇ ವಿದ್ಯುತ್ ಜಾಮ್ವಾಲ್ ಧ್ಯಾನ ಮಾಡಿದ್ದಾರೆ.

ವಿದ್ಯುತ್ ಜಾಮ್ವಾಲ್ ಪಕ್ಕಾ ಆಕ್ಷನ್ ಹೀರೋ ಅಂದ್ರೆ ಎಲ್ಲರೂ ಒಪ್ಪಿಕೊಳ್ಳಲೇಕು. ರೋಪ್-ಡ್ಯೂಪ್ ಎರಡೂ ಇಲ್ಲದೇನೇ ರೋಮಾಂಚನಗೊಳಿಸೋ ಆಕ್ಷನ್​ಗಳನ್ನ ವಿದ್ಯುತ್ ಜಾಮ್ವಾಲ್ ಮಾಡ್ತಾನೇ ಬಂದಿದ್ದಾರೆ. ತೆರೆ ಮೇಲಿನ ಇವರ ಸಾಹಸ ಹಿಂದಿನ ಸತ್ಯ ಕಠಿಣ ಅಭ್ಯಾಸ ಅಂತ ಹೇಳಲಿಕ್ಕೆ ಸಾಕಷ್ಟು ಉದಾಹರಣೆಗಳೂ ಇವೆ.ನಿತ್ಯವೂ ಮಾರ್ಷಲ್ ಆರ್ಟ್ ಸಂಬಂಧಿಸಿದ ಪ್ರ್ಯಾಕ್ಟಿಸ್ ಮಾಡೋ ವಿದ್ಯುತ್ ಜಾಮ್ವಾಲ್ ತಮ್ಮ ದೇಹವನ್ನ ದಂಡಿಸಿ ಕಲ್ಲಿನಂತೆ ಮಾಡಿಕೊಂಡಿದ್ದಾರೆ. ಕಲ್ಲಿನಂತಹ ಈ ದೇಹಕ್ಕೆ ಧ್ಯಾನದ ಸ್ಪರ್ಶವೂ ಇದೆ. ಆಗಾಗ ಯೋಗವನ್ನೂ ವಿದ್ಯುತ್ ಜಾಮ್ವಾಲ್ ಪ್ರ್ಯಾಕ್ಟಿಸ್ ಮಾಡ್ತಾನೇ ಇರುತ್ತದೆ.

ಐಸ್ ಮೈಮೇಲೆ ಹಾಕಿಕೊಂಡು ಧ್ಯಾನಕ್ಕೆ ಕುಳಿತ ವಿದ್ಯುತ್ ಜಾಮ್ವಾಲ್ 
ವಿದ್ಯುತ್ ಜಾಮ್ವಾಲ್ ತಮ್ಮ ಅಧಿಕೃತ ಫೇಸ್ ಬುಕ್ ಪೇಜ್​ ನಲ್ಲಿ ಒಂದಷ್ಟು ಫೋಟೋಗಳನ್ನ ಹಂಚಿಕೊಂಡಿದ್ದಾರೆ.ಇವರು ನಿಜಕ್ಕೂ ಶಾಕ್ ಕೊಡುತ್ತವೆ. ಸುಮ್ನೆ ಐಸ್ ಕೈಯಲ್ಲಿ ಹಿಡಿದ್ರೇನೆ ರಕ್ತ ಹೆಪ್ಪುಗಟ್ಟುತ್ತದೆ. ಆದರೆ, ಈ ಮನುಷ್ಯ ಬಟ್ಟೆಯನ್ನೇ ಧರಿಸದೇ ಮೈಮೇಲೆ ಐಸ್ ಹಾಕಿಕೊಂಡು ಧ್ಯಾನ ಬೇರೆ ಮಾಡಿದ್ದಾರೆ.

ಬಾಲಿವುಡ್ ವಿದ್ಯುತ್ ಜಾಮ್ವಾಲ್ ಯಾಕೆ ಹಿಂಗೆ 
ವಿದ್ಯುತ್ ಮಾಡೋ ಸಾಹಸ ಯಾವ ಹಾಲಿವುಡ್ ಸಿನಿಮಾ ಸಾಹಸಕ್ಕೂ ಕಡಿಮೆ ಇರೋದೇ ಇಲ್ಲ.ಹಾಲಿವುಡ್ ಕಮಾಂಡೋ ಚಿತ್ರದ ನಾಯಕರನ್ನೇ ನೋಡಿದಂತೇನೆ ಆಗುತ್ತದೆ.ಅಂತಹ ಈ ನಾಯಕ ನಟ ಬಾಲಿವುಡ್​ ನಲ್ಲಿ ತಮ್ಮದೇ ಒಂದು ಸ್ಥಾನವನ್ನ ಕ್ರಿಯೇಟ್ ಮಾಡಿದ್ದಾರೆ. ತಮ್ಮದೇ ಒಂದು ಛಾಪು ಮೂಡಿಸಿದ್ದಾರೆ. ಆದರೆ, ಇದು ತೆರೆ ಮೇಲಿನ ಕಥೆಯಾಯಿತು. ಆದರೆ ತೆರೆ ಹಿಂದೆನೂ ವಿದ್ಯುತ್ ಸಾಹಸ ಪ್ರಿಯರೇ ಆಗಿದ್ದಾರೆ. ಇದಕ್ಕೂ ಒಂದಷ್ಟು ಉದಾಹರಣೆಗಳಿವೆ.

ಬಾಲಿವುಡ್ ಆಕ್ಷನ್ ಹೀರೋಗೆ ಕಳರಿಪಯಟ್ಟು ಗೊತ್ತಿದೆ 
ವಿದ್ಯುತ್ ಜಾಮ್ವಾಲ್ ಗೆ ಕೇರಳದ ಕಳರಿಪಯಟ್ಟು ಕೂಡ ಗೊತ್ತಿದೆ. ಕೇರಳದಲ್ಲಿ ಇವರ ತಾಯಿನೇ ನಡೆಸೋ ಕಳರಿಪಯಟ್ಟು ಟ್ರೈನಿಂಗ್ ಸೆಂಟರ್ ಇದೆ. ಅಲ್ಲಿಯೇ ವಿದ್ಯುತ್ ಜಾಮ್ವಾಲ್ ಟ್ರೈನಿಂಗ್ ಮಾಡಿಕೊಂಡಿದ್ದಾರೆ. ಇವರು ತಂದೆ ಆರ್ಮಿಯಲ್ಲಿಯೇ ಆಫೀಸರ್ ಆಗಿದ್ದವರು. ಮೂವರು ಮಕ್ಕಳಲ್ಲಿ ವಿದ್ಯುತ್ ಜಾಮ್ವಾಲ್ ಕೂಡ ಒಬ್ಬರು.ಇಂತಹ ವಿದ್ಯುತ್ ಜಾಮ್ವಾಲ್ ಐಸ್ ನಲ್ಲಿ ಕುಳಿತು ದೇಹವನ್ನ ಇನ್ನಷ್ಟು ಮತ್ತಷ್ಟು ಗಟ್ಟಿಮಾಡಿಕೊಳ್ತಾನೇ ಇರ್ತಾರೆ.

ಹೀಗೆ ಸಾಹಸ ಪ್ರವೃತ್ತಿಯ ವಿದ್ಯುತ್ ಜಾಮ್ವಾಲ್ ಕಮಾಂಡೋ ಹೆಸರಿನಲ್ಲಿ ಸರಣಿ ಸಿನಿಮಾ ಮಾಡಿದ್ದಾರೆ. ಈಗ ಶೇರ್ ಸಿಂಗ್ ರಾಣಾ ಹೆಸರಿನ ಚಿತ್ರದಲ್ಲೂ ಅಭಿನಯಸಿದ್ದಾರೆ. ಇಷ್ಟು ಬಿಟ್ಟರೇ ಈ ನಾಯಕ ತಮ್ಮ ರೂಪ ಮತ್ತು ಸಾಹಸಗಳಿಂದಲೂ ಎಲ್ಲರ ಹೃದಯ ಗೆಲ್ಲುತ್ತಲೇ ಇದ್ದಾರೆ.
First published: