ಕೋರೋನಾ ವೈರಸ್ ಭೀತಿಯಿಂದಾಗಿ ಮನೆಯಲ್ಲಿಯೇ ವಾಸವಾಗಿರುವ ನಟಿ ಕತ್ರಿನಾ ಕೈಫ್ ಇತ್ತೀಚೆಗೆ ಪಾತ್ರೆ ತೊಳೆಯುತ್ತಿರುವ ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಗಮನಿಸಿದ ಬಾಲಿವುಡ್ ನಟ ಅರ್ಜುನ್ ಕಫೂರ್, ಕತ್ರಿನಾರ ಕಾಲೆಳೆದಿದ್ದಾರೆ.
ಕೊರೋನಾದಿಂದಾಗಿ ದೇಶವೇ ಸಂಫೂರ್ಣ ಲಾಕ್ ಡೌನ್ ಆಗಿದೆ. ಜನಸಾಮಾನ್ಯರಿಂದ ಹಿಡಿದು, ಸೆಲೆಬ್ರಿಟಿಗಳು ಕೂಡ ಮನೆಯಲ್ಲಿ ಕುಳಿತು ಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಮನೆಯಲ್ಲಿ ಮಾಡುತ್ತಿರುವ ಕೆಲಗಳನ್ನು, ದೈನಂದಿನ ದಿನಚರಿಗಳನ್ನು ಸಾಮಾಜಿಕ ತಾಣದಲ್ಲಿ ವಿಡಿಯೋ ಮಾಡುವ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ಅದಂರಂತೆ ನಟಿ ಕತ್ರಿನಾ ಕೂಡ ಮನೆಯಲ್ಲಿ ಪಾತ್ರ ತೊಳೆಯುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿ ಅನೇಕರು ಕಾಮೆಂಟ್ ಬರೆದಿದ್ದಾರೆ. ನಟ ಅರ್ಜುನ್ ಕಪೂರ್ ಕೂಟ ಕತ್ರಿನಾ ಮಾಡುತ್ತಿರುವ ಕೆಲಸ ನೋಡಿ ‘ನಮ್ಮ ಮನೆಗೆ ನಿಮಗೆ ಆಹ್ವಾನ ಕೊಡುತ್ತಿದ್ದೇನೆ ಕಾಂತಾಬಾಯಿ 2.0‘ ಎಂದು ತಮಾಷೆಯ ಕಾಮೆಂಟ್ ಬರೆಯುವ ಮೂಲಕ ನಟಿಯ ಕಾಲೆಳೆದಿದ್ದಾರೆ.
ಮಾಹಾಮಾರಿ ಕೊರೋನಾ ಹಾವಳಿಯಿಂದಾಗಿ ಜನರು ಹೊರಬಾರದೆ ಮನೆಯಲ್ಲಿ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಸ್ಟಾರ್ ನಟ-ನಟಿಯರು ಕೂಡ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಕೊರೋನಾ ವೈರಸ್ ದೇಶದಾದ್ಯಂತ ಭೀತಿಯನ್ನು ತಂದೊಡ್ಡಿದೆ.
ಇದನ್ನೂ ಓದಿ: Coron Effect: ರಿಯಲ್ಮಿ ನೋರ್ಜೊ ಸ್ಮಾರ್ಟ್ಫೋನ್ ಬಿಡುಗಡೆ ದಿನಾಂಕ ಮುಂದೂಡಿಕೆ
ಇದನ್ನೂ ಓದಿ: ನನ್ನನ್ನು ಮದುವೆ ಆಗುವವನು ಎಲ್ಲಿ ಸಿಗುತ್ತಾನೆ?; ‘ದಬಾಂಗ್‘ ಬೆಡಗಿ ಹೀಗೇಕೆ ಹೇಳಿದರು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ