• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Hrithik Roshan: ಹೃತಿಕ್ ರೋಷನ್ ಹಾಗೂ ಸಬಾ ಆಜಾದ್ ಅವರ ಸಂಬಂಧ ಹೇಗಿದೆ? ಸೆಲೆಬ್ರಿಟಿ ಜ್ಯೋತಿಷಿ ಹೇಳಿದ್ದೇನು ನೋಡಿ

Hrithik Roshan: ಹೃತಿಕ್ ರೋಷನ್ ಹಾಗೂ ಸಬಾ ಆಜಾದ್ ಅವರ ಸಂಬಂಧ ಹೇಗಿದೆ? ಸೆಲೆಬ್ರಿಟಿ ಜ್ಯೋತಿಷಿ ಹೇಳಿದ್ದೇನು ನೋಡಿ

ಬಾಲಿವುಡ್​ ಸ್ಟಾರ್​

ಬಾಲಿವುಡ್​ ಸ್ಟಾರ್​

ಪ್ರತಿಭಾನ್ವಿತ ಗಾಯಕಿಯಾದ ಸಬಾ ಅವರು ಈಗಾಗಲೇ ಹಲವಾರು ಚಲನಚಿತ್ರಗಳು ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದಾರೆ. ಸಂಗೀತ ಮತ್ತು ಫಿಟ್ನೆಸ್ ಮೇಲಿನ ಪ್ರೀತಿ ಸೇರಿದಂತೆ ಹೃತಿಕ್ ಅವರೊಂದಿಗೆ ಸಾಕಷ್ಟು ಸಾಮ್ಯತೆಗಳನ್ನು ಇವರು ಹಂಚಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

  • Share this:

ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಇತ್ತೀಚೆಗೆ ನಟಿ ಮತ್ತು ಗಾಯಕಿ ಸಬಾ ಆಜಾದ್ ಅವರೊಂದಿಗಿನ ಸಂಬಂಧಕ್ಕಾಗಿ ತುಂಬಾನೇ ಸುದ್ದಿಯಲ್ಲಿದ್ದಾರೆ. ತಮ್ಮ ಮೊದಲನೇ ಹೆಂಡತಿಯಿಂದ ದೂರವಾದ ಬಳಿಕ ಈಗ ಸಬಾ ಅವರ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿಗಳು ಹರಿದಾಡುತ್ತಿವೆ. ಇವರಿಬ್ಬರು ಹಲವಾರು ತಿಂಗಳುಗಳಿಂದ ಡೇಟಿಂಗ್ (Dating) ಮಾಡುತ್ತಿದ್ದಾರೆ ಮತ್ತು ಪರಸ್ಪರರ ಬಗ್ಗೆ ಸಾಕಷ್ಟು ಗಂಭೀರವಾಗಿರುವಂತೆ ತೋರುತ್ತದೆ. ಪ್ರತಿಭಾನ್ವಿತ ಗಾಯಕಿಯಾದ ಸಬಾ (Saba Azads) ಅವರು ಈಗಾಗಲೇ ಹಲವಾರು ಚಲನಚಿತ್ರಗಳು ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದಾರೆ. ಸಂಗೀತ ಮತ್ತು ಫಿಟ್ನೆಸ್ ಮೇಲಿನ ಪ್ರೀತಿ ಸೇರಿದಂತೆ ಹೃತಿಕ್ ಅವರೊಂದಿಗೆ ಸಾಕಷ್ಟು ಸಾಮ್ಯತೆಗಳನ್ನು ಇವರು ಹಂಚಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.


ಬಿ-ಟೌನ್ ನಲ್ಲಿ ಈ ಹೊಸ ಜೋಡಿಯ ಬಗ್ಗೆ ತಿಳಿದುಕೊಳ್ಳಲು ಹೃತಿಕ್ ಅವರ ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದಾರೆ ಮತ್ತು ಆದ್ದರಿಂದ, ಈಗ ಈ ಜೋಡಿಯ ಫೋಟೋಗಳನ್ನು ಪ್ರಸಿದ್ಧ ಸೆಲೆಬ್ರಿಟಿ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಅವರಿಗೆ ತೋರಿಸಲಾಗಿದ್ದು ಅವರು ಇವರಿಬ್ಬರ ಸಂಬಂಧವನ್ನು ವಿಶ್ಲೇಷಿಸಿ ಅವರ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಸಹ ಹಂಚಿಕೊಂಡಿದ್ದಾರೆ.


ಇವರಿಬ್ಬರಿಗೆ ತುಂಬಾನೇ ಆತ್ಮವಿಶ್ವಾಸವಿರುತ್ತದೆ


ಫೋಟೋದಲ್ಲಿ, ಹೃತಿಕ್ ರೋಷನ್ ಅವರ ದೇಹದ ಭಂಗಿ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ಅರ್ಥೈಸುತ್ತದೆ. ಅವರು ತುಂಬಾನೇ ನೇರವಾಗಿ ಆತ್ಮವಿಶ್ವಾಸದಿಂದ ನಿಂತಿದ್ದಾರೆ, ತನ್ನ ಎದೆಯನ್ನು ಹೊರಗೆ ಮತ್ತು ಭುಜಗಳನ್ನು ಹಿಂದಕ್ಕೆ ಇರಿಸಿ, ಪ್ರಾಬಲ್ಯದ ಗುಣಗಳನ್ನು ತೋರಿಸುತ್ತಿದ್ದಾರೆ.


ಚಲನಚಿತ್ರೋದ್ಯಮದಲ್ಲಿ ಅವರ ಯಶಸ್ಸು ಮತ್ತು ಖ್ಯಾತಿಗೆ ಅವರ ಈ ಭಂಗಿಯೇ ಕಾರಣವಾಗಿರಬಹುದು, ಅದಕ್ಕೆ ಇವರನ್ನು ಬಾಲಿವುಡ್ ನ ಉನ್ನತ ನಟರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ: ಯುವ ಬರ್ತ್​ಡೇ! ಮನೆಮುಂದೆ ಅಭಿಮಾನಿಗಳ ದಂಡು! ಅಪ್ಪಾಜಿಯ ನೆನಪಿಸಿಕೊಂಡ ರಾಘಣ್ಣ


ಸಬಾ ಆಜಾದ್ ಅವರ ದೇಹದ ಭಂಗಿಯು ಹೆಚ್ಚು ಅಧೀನವಾಗಿದೆ, ಅವರ ಭುಜಗಳನ್ನು ಮುಂದಕ್ಕೆ ಬಾಗಿಸಿ ಮತ್ತು ತಲೆಯನ್ನು ಹೃತಿಕ್ ಕಡೆಗೆ ವಾಲಿಸಿದ್ದಾರೆ. ಭಾವನಾತ್ಮಕ ಬೆಂಬಲಕ್ಕಾಗಿ ಅವಳು ಹೃತಿಕ್ ಮೇಲೆ ಹೆಚ್ಚು ಅವಲಂಬಿತಳಾಗಿದ್ದಾಳೆ.


ಆದಾಗ್ಯೂ, ಅಧೀನ ಭಂಗಿಯು ಆತ್ಮವಿಶ್ವಾಸ ಅಥವಾ ಸ್ವಾತಂತ್ರ್ಯದ ಕೊರತೆಯನ್ನು ಅರ್ಥೈಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ ಎಂದು ಗುರೂಜಿ ವಿವರಿಸಿದರು.


ಪರಸ್ಪರರು ಒಂದು ನಿರ್ದಿಷ್ಟ ಸಾಮೀಪ್ಯವನ್ನು ಹೊಂದಿರುತ್ತಾರೆ


"ಹೃತಿಕ್ ಮತ್ತು ಸಬಾ ಒಬ್ಬರನೊಬ್ಬರು ಹಿಡಿದುಕೊಂಡು ದೈಹಿಕ ನಿಕಟತೆ ಮತ್ತು ವಾತ್ಸಲ್ಯದ ಪ್ರಜ್ಞೆಯನ್ನು ಪ್ರದರ್ಶಿಸುತ್ತಿದ್ದಾರೆ. ಹೃತಿಕ್ ಅವರ ಸೊಂಟವನ್ನು ಹಿಡಿದು, ಕಾಳಜಿ, ಪ್ರೀತಿ ಮತ್ತು ವಾತ್ಸಲ್ಯವನ್ನು ಸೂಚಿಸುವ ಮೂಲಕ ಸಬಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.


ಇದನ್ನೂ ಓದಿ: ಹೊಸ ಸ್ಟೈಲ್, ಶೈನಿ ಲುಕ್: ಹೊಸ ಸೀರಿಯಲ್​ನಲ್ಲಿ ದೀಪಿಕಾ ದಾಸ್!


ಅವರ ದೈಹಿಕ ವಾತ್ಸಲ್ಯದ ಪ್ರದರ್ಶನವು ಯಾವುದೇ ಸಂಬಂಧದ ಒಂದು ಪ್ರಮುಖ ಅಂಶವಾಗಿದೆ. ಆದರೆ ಈ ಸಂದರ್ಭದಲ್ಲಿ, ಸಬಾ ಸ್ವಲ್ಪ ನಾಚಿಕೆಪಡುವಂತೆ ಕಾಣುತ್ತಿದೆ” ಅಂತ ಗುರೂಜಿ ಹೇಳುತ್ತಾರೆ.


ಇಬ್ಬರು ತುಂಬಾನೇ ಒಳ್ಳೆಯ ಸಂಬಂಧವನ್ನು ಹಂಚಿಕೊಳ್ಳುತ್ತಾರೆ!


"ಫೋಟೋದ ಮತ್ತೊಂದು ಆಸಕ್ತಿದಾಯಕ ಅಂಶವೆಂದರೆ ಹೃತಿಕ್ ಮತ್ತು ಸಬಾ ಅವರ ವಿಭಿನ್ನವಾಗಿ ನಿಂತಿರುವುದು. ಎಂದರೆ ಇಬ್ಬರು ತಮ್ಮ ಪಾದಗಳನ್ನು ಇರಿಸಿದ ಸ್ಥಾನ.


ಹೃತಿಕ್ ಅವರ ಪಾದಗಳನ್ನು ನೆಲದ ಮೇಲೆ ಭದ್ರವಾಗಿ ಇಟ್ಟಿದ್ದಾರೆ, ಆದರೆ ಸಬಾ ಅವರ ಪಾದಗಳು ಸ್ವಲ್ಪ ಒಳಕ್ಕೆ ತಿರುಗಿದಂತೆ ಕಾಣುತ್ತವೆ, ಇದು ಹೆಚ್ಚು ತಾತ್ಕಾಲಿಕ ನಿಲುವನ್ನು ಸೂಚಿಸುತ್ತದೆ. ಇದನ್ನು ಹೃತಿಕ್ ಸಂಬಂಧದಲ್ಲಿ ಹೆಚ್ಚು ಆತ್ಮವಿಶ್ವಾಸ ಮತ್ತು ದೃಢವಾಗಿರುತ್ತಾನೆ ಎಂದು ವ್ಯಾಖ್ಯಾನಿಸಬಹುದು, ಆದರೆ ಸಬಾ ಹೆಚ್ಚು ಹಿಂಜರಿಯುತ್ತಾರೆ ಅಥವಾ ಅನಿಶ್ಚಿತರಾಗಿದ್ದಾರೆ" ಎಂದು ಗುರೂಜಿ ಹೇಳಿದರು.




ಆದಾಗ್ಯೂ, ವಿಭಿನ್ನ ಪಾದಗಳ ಸ್ಥಾನಗಳು ಸಂಬಂಧದಲ್ಲಿ ಶಕ್ತಿಯ ಅಸಮತೋಲನವನ್ನು ಸೂಚಿಸುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಅತ್ಯಗತ್ಯವಾಗುತ್ತದೆ. ಇವರಿಬ್ಬರ ವಿಭಿನ್ನ ಪಾದಗಳ ಸ್ಥಾನಗಳು ಅವರ ವೈಯಕ್ತಿಕ ವ್ಯಕ್ತಿತ್ವಗಳು ಮತ್ತು ತಮ್ಮನ್ನು ತಾವು ವ್ಯಕ್ತಪಡಿಸುವ ವಿಧಾನಗಳ ಪ್ರತಿಬಿಂಬವಾಗಿರಬಹುದು ಅಂತ ಹೇಳ್ತಾರೆ ಗುರೂಜಿ.

First published: