• Home
  • »
  • News
  • »
  • entertainment
  • »
  • Puneeth Rajkumar: ಪುನೀತ್ ರಾಜ್​ಕುಮಾರ್ ಖಾತೆಗೆ ಮರಳಿದ ನೀಲಿ ಟಿಕ್, ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಟ್ವಿಟರ್!

Puneeth Rajkumar: ಪುನೀತ್ ರಾಜ್​ಕುಮಾರ್ ಖಾತೆಗೆ ಮರಳಿದ ನೀಲಿ ಟಿಕ್, ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಟ್ವಿಟರ್!

ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್

Puneeth Rajkumar: ಕಳೆದ ಕೆಲ ದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ಅವರ ಟ್ವಿಟರ್ ಖಾತೆಯಿಂದ ಬ್ಯೂ ಟಿಕ್ ಅನ್ನು ಟ್ಟಿಟರ್ ತೆಗೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದಕ್ಕೆ ಟ್ವಿಟರ್ ವಿರುದ್ಧ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಗರಂ ಆಗಿದ್ದರು.

  • Share this:

ರಾಜರತ್ನ ಪುನೀತ್ ರಾಜ್​ಕುಮಾರ್ (Puneeth Rajkumar) ನಮ್ಮನ್ನಗಲಿ ಸುಮಾರು 9 ತಿಂಗಳು ಕಳೆದಿದೆ. ಆದರೆ ಅಭಿಮಾನಿಗಳು (Fans) ಮಾತ್ರ ಎಂದಿಗೂ ಅವರನ್ನು ಮರೆತಿಲ್ಲ. ಅವರ ಹೆಸರಿನಲ್ಲಿ ದಿನಕ್ಕೊಂದು ಸಾಮಾಜಿಕ ಕಾರ್ಯಗಳು ನಡೆಯುತ್ತದೆ. ಕನ್ನಡಿಗರು, ಅದರಲ್ಲೂ ಅವರ ಅಭಿಮಾನಿಗಳು (Fans) ಒಂದೇ ಒಂದು ಕ್ಷಣ ಅವರನ್ನು ಮರೆತಿಲ್ಲ, ಮರೆಯುವುದೂ ಇಲ್ಲ. ಕನ್ನಡಿಗರ ಎದೆಯಲ್ಲಿ ಅಪ್ಪು (Appu) ಎಂದಿಗೂ ಜೀವಂತ. ದೊಡ್ಮನೆ ರಾಜಕುಮಾರ ದೈಹಿಕವಾಗಿ ಇಲ್ಲದಿದ್ದರೂ, ಅವರ ನೆನಪುಗಳ (memories) ಜೊತೆ ಫ್ಯಾನ್ಸ್ ಹೇಗೋ ಜೀವನ ಮಾಡ್ತಿದ್ದಾರೆ. ಅವರು ನಮ್ಮೊಡನಿಲ್ಲ ಅಂತ ಅಭಿಮಾನಿಗಳು ಅಂದುಕೊಂಡೇ ಇಲ್ಲ. ಈ ನಡುವೆ ಕಳೆದ ಕೆಲ ದಿನಗಳ ಹಿಂದೆ ಟ್ವಿಟರ್​ ಒಂಡು ಎಡವಟ್ಟು ಮಾಡಿತ್ತು. ಟ್ವಿಟರ್​​ ಕಂಪನಿ ಮಾಡಿದ ಆ ಒಂದು ಕೆಲಸ ಅಪ್ಪು ಅಭಿಮಾನಿಗಳನ್ನು ಕೆರಳಿಸಿತ್ತು. ಆದರೆ ಇದೀಗ ಆ ತಪ್ಪನ್ನು ಕಂಪನಿ ಸರಿ ಮಾಡಿದೆ.  


ನೀಲಿ ಟಿಕ್ ವಾಪಸ್​ 


ಹೌದು, ಕಳೆದ ಕೆಲ ದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ಅವರ ಟ್ವಿಟರ್ ಖಾತೆಯಿಂದ ಬ್ಯೂ ಟಿಕ್ ಅನ್ನು ಟ್ಟಿಟರ್ ತೆಗೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದಕ್ಕೆ ಟ್ವಿಟರ್ ವಿರುದ್ಧ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಗರಂ ಆಗಿದ್ದರು. ಆದರೆ ಇದೀಗ ನೀಲಿ ಟಿಕ್​ ಮರಳಿ ಬಂದಿದೆ.  ನೀಲಿ ಟಿಕ್ ಮರಳಿ ನೀಡುವಂತೆ ಸಿನಿಮಾರಂಗದ ಹಲವರು ಟ್ವಿಟರ್​ಗೆ ಮನವಿ ಮಾಡಿದ್ದರು. ಈ ಬಗ್ಗೆ ನಡೆದ ಅಭಿಯಾನದ ಭಾಗ ಸಹ ಆಗಿದ್ದರು. ಈಗ ಅವರೆಲ್ಲಾ ಟ್ವಿಟರ್​ಗೆ ನೀಲಿ ಟಿಕ್ ಮರಳಿ ನೀಡಿದ್ದಕ್ಕೆ ಧನ್ಯವಾದ ತಿಳಿಸುತ್ತಿದ್ದಾರೆ.



ಇದನ್ನೂ ಓದಿ: ಸೋನಮ್ ಸೀಮಂತ ರದ್ದು! ಅರೇ, ಕಪೂರ್‌ ಮನೆಮಗಳಿಗೆ ಇದೇನಾಯ್ತಪ್ಪಾ?


ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್‌ಗಳನ್ನ ಮಾತನಾಡಿಸಲು ಕೊಂಡಿ ಆಗಿರೋದೇ ಈ ಸೋಷಿಯಲ್ ಮೀಡಿಯಾ, ಸ್ಟಾರ್‌ಗಳ ಅಕೌಂಟ್‌ನ ಕಿಡಿಗೇಡಿಗಳು ನಕಲು ಮಾಡಬಾರದು ಎಂಬ ಕಾರಣದಿಂದ ನಟ ನಟಿಯರ ಖಾತೆಗೆ ನೀಲಿ ಟಿಕ್ ಅನ್ನು ನೀಡಿರುತ್ತಾರೆ. ಹೀಗಿರುವಾಗ ಟ್ವಿಟರ್‌ನಲ್ಲಿರುವ ಪುನೀತ್ ಖಾತೆಯ ನೀಲಿ ಟಿಕ್ ಅನ್ನು ಟ್ವಿಟರ್ ಸಂಸ್ಥೆ ತೆಗೆದು ಹಾಕಿದ್ದು, ಈ ನಡೆ ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.


twitter has removed the blue tick of Puneeth Rajkumars account


ಪುನೀತ್ ಖಾತೆಯಿಂದ ನೀಲಿ ಟಿಕ್ ಮಾಯವಾಗುತ್ತಿದ್ದಂತೆ ಅಭಿಮಾನಿಗಳು ಸಹ ಸಿನಿಮಾ ರಂಗದ ಹಲವಾರು ಜನರು ಟ್ವಿಟರ್​ನಲ್ಲಿ ಅಭಿಯಾನ ಆರಂಭಿಸಿದ್ದರು. #ReverifyPuneethRajkumarTwitter ಎನ್ನುವ ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ಮಾಡಲಾಗಿತ್ತು. ಟ್ವಿಟರ್​ನಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆರಂಭವಾಗಿತ್ತು. ಈ ಅಭಿಯಾನಕ್ಕೆ ಯುವರಾಜ್ ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಪವನ್ ಒಡೆಯರ್, ಕೆ.ಪಿ ಶ್ರೀಕಾಂತ್ ಸೇರಿದಂತೆ ಹಲವರು ಜನರು ಸಾಥ್ ನೀಡಿದ್ದರು.


Puneeth Rajkumar pass away is 8 months old today and first time shivarajkumar movie release without appu


ಇದನ್ನೂ ಓದಿ: ಇಲಿಯಾನಾ ಹೊಸ ಲವ್ ಸ್ಟೋರಿ, ಸ್ಟಾರ್ ಹೀರೋಯಿನ್ ಅಣ್ಣನ ಜೊತೆ ಸೀಕ್ರೆಟ್ ಡೇಟಿಂಗ್​?


ಅಕೌಂಟ್ ಆಕ್ಟೀವ್ ಇಲ್ಲ ಅಂತ ನೀಲಿ ಟಿಕ್​ ತೆಗೆದ ಕಂಪನಿ


ಪುನೀತ್ ರಾಜ್‌ಕುಮಾರ್ ಮೃತಪಟ್ಟು ಸುಮಾರು 9 ತಿಂಗಳು ಆಗುತ್ತಾ ಬಂತು. ಹೀಗಾಗಿ ಅವರು ಅಗಲಿದ ಬಳಿಕ ಅವರ ಟ್ವಿಟ್ಟರ್ ಅಕೌಂಟ್ ಅಧಿಕೃತ ಖಾತೆಯಾಗಿ ಉಳಿದಿಲ್ಲ. ಜೊತೆಗೆ ಕಳೆದ 8 ತಿಂಗಳಿಂದ ಅವರ ಖಾತೆ ಆಕ್ಟೀವ್ ಆಗಿಲ್ಲ ಎಂಬ ಕಾರಣಕ್ಕೆ ನೀಲ್ ಟಿಕ್ ಅನ್ನು ತೆಗೆದು ಹಾಕಲಾಗಿದೆ ಎನ್ನಲಾಗುತ್ತಿದೆ. ಆದರೆ ಈಗಾಗಲೇ ಮೃತಪಟ್ಟಿರುವ ನಟ ಸಿದ್ಧಾರ್ಥ್ ಶುಕ್ಲಾ ಅವರ ಟ್ವಿಟರ್ ಖಾತೆಯ ನೀಲಿ ಟಿಕ್ ಇನ್ನೂ ಹಾಗೆ ಇದೆ. ಆದರೆ ಅಪ್ಪು ಖಾತೆಯ ನೀಲಿ ಟಿಕ್ ತೆಗೆದಿದ್ದು, ಯಾಕೆ ಅಂತಾ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಟ್ವಿಟರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದೀಗ ನೀಲಿ ಟಿಕ್​ ಮರಳಿ ಕೊಟ್ಟಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

Published by:Sandhya M
First published: