Ajay Devagn: ತಮಿಳಿನ ಸೂಪರ್​ ಹಿಟ್​ ಸಿನಿಮಾದ ರಿಮೇಕ್​​ನಲ್ಲಿ ಅಜಯ್​, ಬಾಲಿವುಡ್​ನಲ್ಲಿ ವರ್ಕೌಟ್​ ಆಗುತ್ತಾ `ಆ’ ಸ್ಟೋರಿ?

ಅಜಯ್ ದೇವಗನ್ ಸೌತ್ ರಿಮೇಕ್‌ಗಳ ರಾಜ ಎಂದು ಕರೆದರೆ ತಪ್ಪಾಗುವುದಿಲ್ಲ, ಏಕೆಂದರೆ ಇವರು ಈಗಾಗಲೇ 9 ದಕ್ಷಿಣ ಭಾರತ ಚಿತ್ರಗಳ ರೀಮೇಕ್‌ಗಳನ್ನು ಮಾಡಿದ್ದಾರೆ. ಮತ್ತು ಅವರ 10 ನೇ ರೀಮೇಕ್ ಚಿತ್ರ 'ಕೈತಿ' ಆಗಿದೆ.

ಕಾರ್ತಿ, ಅಜಯ್​ ದೇವಗನ್​

ಕಾರ್ತಿ, ಅಜಯ್​ ದೇವಗನ್​

  • Share this:
ಅಜಯ್ ದೇವಗನ್(Ajay Devagn) ಬಾಲಿವುಡ್‌(Bollywood)ನ ಅತ್ಯಂತ ಬ್ಯುಸಿ ನಟ(Busy Actor)ರಲ್ಲಿ ಒಬ್ಬರು. ಅಜಯ್ ಅಭಿನಯದ ಹಲವು ಸಾಲು ಸಾಲು ಚಿತ್ರಗಳು ಈ ವರ್ಷ ತೆರೆಗೆ ಬರಲು ಸಜ್ಜಾಗಿ ನಿಂತಿವೆ. ಪ್ರಸ್ತುತ ಅಜಯ್ ತಮಿಳಿ(Tamil)ನ ಕೈತಿಯ ರೀಮೇಕ್(Kaithi Remake)ಚಿತ್ರದ ಸಿನಿಮಾದ ಶೂಟಿಂಗನ್ನು ಈ ವಾರದಿಂದ ಶುರು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಜಯ್ ದೇವಗನ್ ಎಸ್‌.ಎಸ್ ರಾಜಮೌಳಿ(S.S Rajamouli)ಯ ಆರ್‌ಆರ್‌ಆರ್(RRR), ಅಮಿತ್ ರವೀಂದ್ರನಾಥ್ ಶರ್ಮಾ ಅವರ ಮೈದಾನ್‌, ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಾಥೈವಾಡಿ, ರಾಜೇಶ್ ಮಾಪುಸ್ಕರ್ ಅವರ ರುದ್ರ: ದಿ ಎಡ್ಜ್ ಆಫ್ ಡಾರ್ಕ್‌ನೆಸ್, ಮತ್ತು ಅಜಯ್ ಅವರ ಸ್ವಂತ ನಿರ್ದೇಶನದ ಅಮಿತಾಭ್ ಬಚ್ಚನ್​, ರಾಕುಲ್ ಪ್ರೀತ್ ಸಿಂಗ್ ಅಭಿನಯದ ರನ್‌ವೇ 34 ಸೇರಿದಂತೆ ಇನ್ನೂ ಹಲವು ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ.

ಕೈತಿ ರಿಮೇಕ್​ನಲ್ಲಿ ಬಾಲಿವುಡ್​ ಸ್ಟಾರ್​ ಅಜಯ್​ ದೇವಗನ್​!

ಅಜಯ್ ದೇವಗನ್ ಚಿತ್ರದ ಮತ್ತೊಂದು ಅಪ್ಡೇಟ್ ಏನೆಂದರೆ ಟಬು ಜೊತೆಗೆ ಅಭಿನಯಿಸುತ್ತಿರುವ, ಧರ್ಮೇಂದ್ರ ಶರ್ಮಾ ಅವರ ತಮಿಳಿನ ಕೈಥಿಯ ಚಿತ್ರದ ಹಿಂದಿ ರಿಮೇಕ್‌ನ ಚಿತ್ರೀಕರಣ ಈ ವಾರದಿಂದ ಆರಂಭವಾಗುತ್ತದೆ ಎಂದು ಮೂಲಗಳು ಹೇಳಿವೆ.ಬಹು ನೀರಿಕ್ಷಿತ ಸಿನಿಮಾ “ದೃಶ್ಯಂ 2 ರ ಮೊದಲ ಶೆಡ್ಯೂಲ್‌ನ ಚಿತ್ರೀಕರಣ ಮುಗಿದ ನಂತರ, ಅಜಯ್ ದೇವಗನ್ ನೇರವಾಗಿ ಕೈತಿ ರಿಮೇಕ್‌ನಲ್ಲಿ ಬ್ಯುಸಿ ಆಗಲಿದ್ದಾರೆ. ಇದೊಂದು ಚಿಕ್ಕ ಶೆಡ್ಯೂಲ್ ಆಗಿದ್ದು, ನವಿ ಮುಂಬೈನಲ್ಲಿ ಚಿತ್ರೀಕರಣ ನಡೆಯಲಿದೆ.

ದೃಶ್ಯಂ 2 ಶೂಟಿಂಗ್​ ಬಳಿಕ ಕೈತಿ ಚಿತ್ರೀಕರಣ!

ನಾಯಕಿ ಟಬು ಕೂಡ ಅಜಯ್ ದೇವಗನ್ ಜೊತೆ ಈ ಶೆಡ್ಯೂಲ್‌ನಲ್ಲಿ ಭಾಗಿ ಆಗಲಿದ್ದಾರೆ. ಸದ್ಯಕ್ಕೆ ಇಬ್ಬರು ನಟರು ದೃಶ್ಯಂ 2 ಮತ್ತು ಕೈತಿ ರೀಮೇಕ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಲಿದ್ದಾರೆ. ಕೆಲವು ಅಧಿಕೃತ ಮೂಲಗಳ ಪ್ರಕಾರ ಕೈತಿ ರೀಮೇಕ್‌ನ ಸ್ವಲ್ಪ ಭಾಗವನ್ನು ಜನವರಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಇನ್ನೂ 2019ರ ಕೈತಿ ತಮಿಳು ಭಾಷೆಯ ಆ್ಯಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ಲೋಕೇಶ್ ಕನಕರಾಜ್ ಬರೆದು ನಿರ್ದೇಶಿಸಿದ್ದರು. ಚಿತ್ರದಲ್ಲಿ ಕಾರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ನರೇನ್, ಅರ್ಜುನ್ ದಾಸ್, ಹರೀಶ್ ಉತ್ತಮನ್, ಜಾರ್ಜ್ ಮೇರಿಯನ್ ಮತ್ತು ಧೀನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಇದನ್ನೂ ಓದಿ: ಯಶಸ್ವಿ ವೃತ್ತಿ ಜೀವನದ ಜೊತೆಗೆ ಬಾಲಿವುಡ್ ನ ಹೆಮ್ಮೆಯ ಸಿಂಗಲ್ ಡ್ಯಾಡಿ ಇವರು!

ರೀಮೇಕ್​ ರಾಜ ಅಜಯ್​ ದೇವಗನ್ ಎಂದ ನೆಟ್ಟಿಗರು!

ಅಜಯ್ ದೇವಗನ್ ಸೌತ್ ರಿಮೇಕ್‌ಗಳ ರಾಜ ಎಂದು ಕರೆದರೆ ತಪ್ಪಾಗುವುದಿಲ್ಲ, ಏಕೆಂದರೆ ಇವರು ಈಗಾಗಲೇ 9 ದಕ್ಷಿಣ ಭಾರತ ಚಿತ್ರಗಳ ರಿಮೇಕ್‌ಗಳನ್ನು ಮಾಡಿದ್ದಾರೆ. ಮತ್ತು ಅವರ 10 ನೇ ರಿಮೇಕ್ ಚಿತ್ರ 'ಕೈತಿ' ಆಗಿದೆ. ದೃಶ್ಯಂ, ಆ್ಯಕ್ಷನ್ ಜಾಕ್ಸನ್, ಹಿಮ್ಮತ್‌ವಾಲಾ, ಸನ್ ಆಫ್‌ ಸರ್ದಾರ್, ಸಿಂಗಂ ಸೇರಿ ಅನೇಕ ಸೌತ್ ಚಿತ್ರಗಳ ಹಿಂದಿ ಅವತರಣಿಕೆಯಲ್ಲಿ ಅಜಯ್ ಅಭಿನಯಿಸಿ ಚಿತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಶಿವನೇ ಶಂಭುಲಿಂಗ.. ಒಂದ್​ ಸಿನಿಮಾಗೆ ಈ ಪಾಟಿನಾ ದುಡ್ಡು ತಗೋಳೋದು ಈ ನಟಿಮಣಿಯರು?

ಇದರ ಮಧ್ಯೆ ದೃಶ್ಯಂ 2 ಕುರಿತು ಮಾತನಾಡಿದ ನಟ, “ದೃಶ್ಯಂ ಸಿನಿಮಾಕ್ಕೆ ರೆಸ್ಪಾನ್ಸ್ ಅದ್ಭುತವಾಗಿತ್ತು, ಈ ಚಿತ್ರ ಒಂದು ದಂತಕಥೆಯಾಗಿದೆ. ಮತ್ತೆ ದೃಶ್ಯಂ 2 ಚಿತ್ರದಲ್ಲಿ ಅಭಿನಯಿಸುತ್ತಿರುವುದು ನನಗೆ ಖುಷಿ ಕೊಟ್ಟಿದೆ ಎಂದಿದ್ದಾರೆ. ಚಿತ್ರದಲ್ಲಿ ವಿಜಯ್ ಎಂಬ ಬಹು ಆಯಾಮದ ಪಾತ್ರ ತೆರೆಯ ಮೇಲೆ ಮ್ಯಾಜಿಕ್ ಮಾಡುತ್ತದೆ. ಅಭಿಷೇಕ್ ಪಾಠಕ್ (ನಿರ್ದೇಶಕ) ಈ ಚಿತ್ರವನ್ನು ಅಚ್ಚುಕಟ್ಟಾಗಿ ಹೆಣೆದಿದ್ದಾರೆ. ನಾನು ದೃಶ್ಯಂ ಭಾಗ 2 ಗಾಗಿ ತೀವ್ರವಾಗಿ ಎದುರು ನೋಡುತ್ತಿದ್ದೇನೆ ಎಂದು ದೇವಗನ್ ತಿಳಿಸಿದ್ದಾರೆ.
Published by:Vasudeva M
First published: