ನಿಜ ಜೀವನದಲ್ಲೂ ವಿಲನ್​ ಆದ ಖಳನಟ: ಅಶ್ಲೀಲ ಫೋಟೋ ತೋರಿಸಿ ಬ್ಲಾಕ್​ಮೇಲ್​ ಮಾಡುತ್ತಿದ್ದ!

news18
Updated:July 31, 2018, 7:43 PM IST
ನಿಜ ಜೀವನದಲ್ಲೂ ವಿಲನ್​ ಆದ ಖಳನಟ: ಅಶ್ಲೀಲ ಫೋಟೋ ತೋರಿಸಿ ಬ್ಲಾಕ್​ಮೇಲ್​ ಮಾಡುತ್ತಿದ್ದ!
news18
Updated: July 31, 2018, 7:43 PM IST
-ನ್ಯೂಸ್​ 18 ಕನ್ನಡ

ಬೆಂಗಳೂರು,(ಜು.31): ಆತ ಕನ್ನಡ ಚಿತ್ರರಂಗದಲ್ಲಿ ಎಲ್ಲರಿಗೂ ಚಿರಪರಿಚಿತ.  ಪೊಲೀಸ್ ಪಾತ್ರಕ್ಕೂ ಸಿದ್ಧ, ರೌಡಿ ಪಾತ್ರಕ್ಕೂ ಒಕೆಯಾಗಿದ್ದ. ಒಳ್ಳೆಯ ಸಿನಿಮಾ ಮಾಡಿ ಕೈತುಂಬಾ ಹಣ ಕೂಡ ಸಂಪಾದನೆ ಮಾಡಿದ್ದ. ಆದರೆ ಆ ನಟನಿಗೆ ಮಹಿಳೆಯರ ಅಶ್ಲೀಲ ಫೋಟೋ ತೆಗೆಯೋ ಚಟ ಇತ್ತು. ಅಶ್ಲೀಲ ಫೋಟೋ ತೆಗೆದು ಹಣ ಕೊಡುವಂತೆ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ಈತನ ವಿರುದ್ಧ ದೂರು ದಾಖಲಾಗಿದೆ.

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಧರ್ಮ ಮಹಿಳೆಯ ಅಶ್ಲೀಲ ವಿಡಿಯೋ ಮಾಡಿ, ಬೆದರಿಸುತ್ತಿದ್ದ. ಧರ್ಮ 3 ತಿಂಗಳ ಹಿಂದೆ ಸಿನಿಮಾದಲ್ಲಿ ಅವಕಾಶ​ ಕೊಡಿಸುವುದಾಗಿ ಮಹಿಳೆಯೊಬ್ಬರಿಗೆ ವಂಚಿಸಿದ್ದ. ತನ್ನ ಕಾರು ಚಾಲಕ ನವೀನ್​ ಮೂಲಕ ಆ ಮಹಿಳೆಯನ್ನು ಬೆಂಗಳೂರಿನ ಆರ್.ಆರ್​.ನಗರಕ್ಕೆ ಕರೆಸಿಕೊಂಡು, ಚಿತ್ರೀಕರಣ​ ಕ್ಯಾನ್ಸಲ್​ ಆಗಿದೆ ಎಂದು ಹೋಟೆಲ್​ಗೆ ಕರೆದೊಯ್ದಿದ್ದ.

ಹೋಟೆಲ್​ನಲ್ಲಿ ಊಟ ಮಾಡುವಾಗ ಮತ್ತು ಬರುವ ಔಷಧಿ ಹಾಕಿ ಅಶ್ಲೀಲ ವಿಡಿಯೋ ಮಾಡಿ, ಆ ವಿಡಿಯೋವನ್ನು ಅದೇ ಮಹಿಳೆಗೆ ತೋರಿಸಿ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೆ  ಮಹಿಳೆಯ ಮನೆಯಲ್ಲಿ ಹೇಳುವುದಾಗಿ ಸಹ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ.

ವಿಡಿಯೋ ಲೀಕ್​ ಮಾಡಬಾರದೆಂದರೆ ಹಣ ಕೊಡಬೇಕು ಎಂದು ಆ ಮಹಿಳೆಗೆ ತಾಕೀತು ಮಾಡಿದ್ದಾನೆ. ಬ್ಲ್ಯಾಕ್​ಮೇಲ್ ಮಾಡಿ ಮಹಿಳೆಯಿಂದ 14 ಲಕ್ಷ  ಸಹ ವಸೂಲಿ ಮಾಡಿದ್ದಾನೆ. ಹಣ ಕೊಟ್ಟು ಬೇಸತ್ತ ಮಹಿಳೆ  ಬೇಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆ ಮಹಿಳೆ ಒಂದೂವರೆ ತಿಂಗಳ ಹಿಂದೆಯೇ ದೂರು ಕೊಟ್ಟಿದ್ದರು. ಇಷ್ಟು ದಿನಗಳಾದರೂ ಪೊಲೀಸರು ಧರ್ಮನನ್ನು ಬಂಧಿಸಿಲ್ಲ. ಧರ್ಮನಿಗೆ ಸಾಥ್ ನೀಡಿದ ಚಾಲಕನ ಬಂಧನವೂ ಆಗಿಲ್ಲ. ದೂರು ದಾಖಲಾಗುತ್ತಿದ್ದಂತೆ ಧರ್ಮ ತಲೆಮರೆಸಿಕೊಂಡಿದ್ದಾನೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಲಧರ್ಮ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ಸುಮ್ಮನಿರುವುದು ವಿಪರ್ಯಾಸವೇ ಸರಿ.
First published:July 31, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ