Sonali Phogat Passes Away: ಬಿಜೆಪಿ ನಾಯಕಿ, ಟಿಕ್​ಟಾಕ್ ಸ್ಟಾರ್ ಸೋನಾಲಿ ಫೋಗಟ್ ಇನ್ನಿಲ್ಲ

BJP Leader Sonali Phogat Passes away: ಬಿಜೆಪಿ ನಾಯಕಿ, ನಟಿ, ಟಿಕ್​ಟಾಕ್ ಸ್ಟಾರ್ ಸೋನಾಲಿ ಫೋಗಟ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸೋನಾಲಿ ಫೋಗಟ್

ಸೋನಾಲಿ ಫೋಗಟ್

  • Share this:
ಬಿಜೆಪಿ ನಾಯಕಿ, ಟಿಕ್ ಟಾಕ್ ಸ್ಟಾರ್, ನಟಿ ಸೋನಾಲಿ ಫೋಗಟ್ (Sonali Phogat) ಅವರು ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಆಗಸ್ಟ್ 22ರಂದು ಸೋಮವಾರ ರಾತ್ರಿ ನಟಿ (Actress) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ತನ್ನ ಕೆಲವು ಸಿಬ್ಬಂದಿಗಳೊಂದಿಗೆ ನಟಿ ಗೋವಾದಲ್ಲಿರುವಾಗ (Goa) ಹೃದಯಾಘಾತ ಸಂಭವಿಸಿದೆ. ಸೋನಾಲಿ ಫೋಗಟ್ ಅವರು ಕೊನೆಯಬಾರಿ ಖ್ಯಾತ ಹಿಂದಿ ರಿಯಾಲಿಟಿ ಶೋ (Reality Show) ಬಿಗ್​ ಬಾಸ್ ಸೀಸನ್ 14ರಲ್ಲಿ (Bigg Boss Season 14) ಕಾಣಿಸಿಕೊಂಡಿದ್ದರು. ಶೋನಲ್ಲಿ ವೈಲ್ಡ್ ಕಾರ್ಡ್ (Wild Card) ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಸೋನಾಲಿ ಈ ಮೂಲಕ ಭಾರೀ ಫೇಮಸ್ ಆಗಿದ್ದರು. ಬಿಗ್ ಬಾಸ್ ಸೀಸನ್ 14 ನಟಿಗೆ ಹೆಚ್ಚಿನ ಖ್ಯಾತಿಯನ್ನು ತಂದುಕೊಟ್ಟಿತ್ತು. ನಟಿಗೆ ಒಬ್ಬ ಮಗಳು ಕೂಡಾ ಇದ್ದಾರೆ. ಸೋನಾಲಿ ನಟಿ, ಟಿಕ್​ ಟಾಕ್ ಸ್ಟಾರ್ (TikTok Star) ಆಗಿ ಮಾತ್ರವಲ್ಲದೆ ಬಿಜೆಪಿ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಸೋನಾಲಿ

ಅವರು 2019 ರ ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಪಡೆದು ಆದಂಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇತ್ತೀಚೆಗೆ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬದಲಾದ ಕುಲದೀಪ್ ಬಿಷ್ಣೋಯ್ ವಿರುದ್ಧ ಅವರು ಅಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸೋನಾಲಿ ಟಿಕ್‌ಟಾಕ್‌ನಲ್ಲಿ ಕೂಡ ಬಹಳ ಜನಪ್ರಿಯರಾಗಿದ್ದರು.






ಟಿವಿ ಸೀರಿಯಲ್ ಹಾಗೂ ಪ್ರಸಿದ್ಧ ಶೋಗಳು

ಸೋನಾಲ್ ಫೋಗಟ್ 2016 ರಲ್ಲಿ ಟಿವಿ ಧಾರಾವಾಹಿ ಏಕ್ ಮಾ ಜೋ ಲಾಖೋಂ ಕೆ ಲಿಯೇ ಬನಿ ಮೂಲಕ ತನ್ನ ನಟನೆಯನ್ನು ಪ್ರಾರಂಭಿಸಿದರು. ನಂತರ ಅವರು ಹರ್ಯಾನ್ವಿ ಸಿನಿಮಾ ಛೋರಿಯನ್ ಛೋರೋನ್ ಎಸ್ ಕಾಮ್ ನಹಿ ಹೋತಿಯಲ್ಲಿ ಕಾಣಿಸಿಕೊಂಡರು. ಅವರು ಹಲವಾರು ಪಂಜಾಬಿ ಮತ್ತು ಹರ್ಯಾನ್ವಿ ಮ್ಯೂಸಿಕ್ ವೀಡಿಯೊಗಳ ಭಾಗವಾಗಿದ್ದಾರೆ. ಆಕೆ ಕೊನೆಯದಾಗಿ ದಿ ಸ್ಟೋರಿ ಆಫ್ ಬದ್ಮಾಶ್‌ಗಢ್ (2019) ಎಂಬ ವೆಬ್ ಸಿರೀಸ್​ನಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Heart Attack Symptoms: ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ!

ಸೋನಾಲಿ ಅವರ ಖಾಸಗಿ ಬದುಕು

ಡಿಸೆಂಬರ್ 2016 ರಲ್ಲಿ, ಅವರು ತಮ್ಮ ಪತಿ ಸಂಜಯ್ ಫೋಗಟ್ ಅವರನ್ನು ಕಳೆದುಕೊಂಡು ವಿಧವೆಯಾದ ನಟಿ ನಂತರ ವೃತ್ತಿ ಜೀವನದಲ್ಲಿ ಗಮನ ಕೇಂದ್ರೀಕರಿಸಿದರು. ಆಕೆಯ ಪತಿ 42 ನೇ ವಯಸ್ಸಿನಲ್ಲಿ ತನ್ನ ತೋಟದ ಮನೆಯಲ್ಲಿ ನಿಗೂಢ ಪರಿಸ್ಥಿತಿಯಲ್ಲಿ ನಿಧನರಾದರು. ಇವರಿಗೆ ಯಶೋಧರ ಫೋಗಟ್ ಎಂಬ ಮಗಳಿದ್ದಾಳೆ.
Published by:Divya D
First published: