ಸಿನಿಮಾ ಮತ್ತು ಟಿವಿ ಶೋಗಳಲ್ಲಿ ಮಿಂಚಿರುವ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. 1984ರ ಫೆಬ್ರುವರಿ 11 ರಂದು ಜನಿಸಿದ ಈ ಮಾದಕ ಚೆಲುವೆ ಗುರುವಾರ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಭಾರತೀಯ ಚಿತ್ರಗಳ ಮೂಲಕ ವೃತ್ತಿ ಜೀವನಕ್ಕೆ ಕಾಲಿಟ್ಟ ಶೆರ್ಲಿನ್ ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ದೊಡ್ಡ ಪರದೆಯ ಜೊತೆಗೆ ಸಣ್ಣ ಪರದೆಯೊಂದಿಗೂ ಕೂಡ ಅತ್ಯಂತ ಖುಷಿಯಿಂದ ಆಚರಿಸುತ್ತಿದ್ದಾರೆ. ವಿಶೇಷವೆಂದರೆ ಬಾಲಿವುಡ್ ಜಗತ್ತು ಪ್ರವೇಶಿಸುವ ಮುನ್ನ ಶೆರ್ಲಿನ್ ಬಿಗ್ ಬಾಸ್ ಸೀಸನ್ 3ರಲ್ಲಿ ಮಿಂಚುವ ಮೂಲಕ ಹೆಚ್ಚು ಸುದ್ದಿಯಾಗಿದ್ದರು.
ಅಚ್ಚರಿಯ ಸಂಗತಿ ಎಂದರೆ ಶೆರ್ಲಿನ್ ಅವರ ಹೆಸರು ಬಾಲಿವುಡ್ ನ ಫೇಮಸ್ ನಟಿಯರ ಪಟ್ಟಿಗೆ ಸೇರುತ್ತದೆ. ತಮ್ಮ ಬೋಲ್ಡ್ ಫೋಟೋಗಳ ಮೂಲಕ ಶೆರ್ಲಿನ್ ಯಾವಾಗಲೂ ಸುದ್ದಿಮಾಧ್ಯಮಗಳ ಹೆಡ್ ಲೈನ್ ಗಳಲ್ಲಿ ಸದಾ ಮಿಂಚುತ್ತಿರುತ್ತಾರೆ. ಇತ್ತೀಚಿಗೆ ಬಾಲಿವುಡ್ ಸಿನಿಮಾಗಳಿಂದ ದೂರವಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. 2012ರಲ್ಲಿ ಪ್ರಸಿದ್ಧ ನಿಯತಕಾಲಿಕೆ ಪ್ಲೇಬಾಯ್ ಗಾಗಿ ಶೆರ್ಲಿನ್ ಚೋಪ್ರಾ ನ್ಯೂಡ್ ಫೋಟೋಶೂಟ್ ಮಾಡಿ ಸಖತ್ ಸುದ್ದಿಯಾಗಿದ್ದಳು.
ಆ ಮೂಲಕ ಪ್ಲೇಬಾಯ್ ನಿಯತಕಾಲಿಕೆಯಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಮಹಿಳೆ ಎನ್ನುವ ಹೆಗ್ಗಳಿಕೆಯನ್ನು ಶೆರ್ಲಿನ್ ಹೊಂದಿದ್ದಾರೆ. ಕಾಮಸೂತ್ರ 3ಡಿ ಹೆಸರಿನ ಸಿನಿಮಾದಲ್ಲಿಯೂ ಅವರು ಕಾಣಿಸಿಕೊಂಡು ಸದ್ದು ಮಾಡಿದ್ದರು. ಈ ಚಿತ್ರದ ಪಾತ್ರಕ್ಕಾಗಿ ಅವರು ಬೆತ್ತಲಾಗಿದ್ದರು. ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡು ಬೋಲ್ಡ್ ಆಗಿ ನಟಿಸಿದ್ದ ಶೆರ್ಲಿನ್ ಚಿತ್ರರಂಗದಲ್ಲಿ ತಮ್ಮದೇ ಹವಾ ಸೃಷ್ಟಿಸಿದ್ದಾರೆ.
ಶೆರ್ಲಿನ್ ಜನ್ಮದಿನದಂದು ನಾವು ನಿಮಗಾಗಿ ಅವರ ಕೆಲವು ಫೋಟೋಗಳನ್ನು ಇಲ್ಲಿ ನೀಡಿದ್ದೇವೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶೆರ್ಲಿನ್ ಪ್ರತಿದಿನ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅಭಿಮಾನಿಗಳೊಂದಿಗೆ ಹೆಚ್ಚು ಕಾಲ ಕಳೆಯುತ್ತಾರೆ. ಅವರ ಬೋಲ್ಡ್ ಫೋಟೋಗಳಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೆಲ ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ಶೆರ್ಲಿನ್ ಅಭಿಮಾನಿಗಳ ಹೃದಯವನ್ನು ಸೆರೆಹಿಡಿದಿದ್ದಾರೆ.
ಇದನ್ನೂ ಓದಿ: Ragini Dwivedi: ಇನ್ಸ್ಟಾಗ್ರಾಂ ಲೈವ್ನಲ್ಲಿ ಕಣ್ಣೀರಿಟ್ಟ ರಾಗಿಣಿ ದ್ವಿವೇದಿ..!
ಕೆಲ ಮಾಧ್ಯಮ ವರದಿಗಳ ಪ್ರಕಾರ, ಶೆರ್ಲಿನ್ ಚೋಪ್ರಾ ವಿಭಿನ್ನ ಬಣ್ಣದ ಉಡುಪುಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಾರೆ. ಅವರ ಅಭಿಮಾನಿಗಳು ಈ ಚಿತ್ರಗಳ ಬಗ್ಗೆ ಅನೇಕ ಕಾಮೆಂಟ್ ಗಳನ್ನು ಮಾಡಿದ್ದಾರೆ. ಅವರ ಸೌಂದರ್ಯಕ್ಕೆ ಮಾರುಹೋಗಿರುವ ಲಕ್ಷಾಂತರ ಅಭಿಮಾನಿಗಳು ಶೆರ್ಲಿನ್ ಹುಟ್ಟುಹಬ್ಬ ಬಂದರೆ ಸಾಕು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ