KK Birth Anniversary: ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ

ಸಂಗೀತ ಮಾಂತ್ರಿಕ, ಬಾಲಿವುಡ್ ನಲ್ಲಿ ಕೆಕೆ ಎಂದೇ ಖ್ಯಾತರಾಗಿದ್ದ ದಿವಂಗತ ಗಾಯಕ ಕೃಷ್ಣ ಕುಮಾರ್ ಕುನ್ನತ್ ಅವರ ಜನ್ಮದಿನವನ್ನು ಅಭಿಮಾನಿಗಳು ಆಚರಿಸಿದ್ದಾರೆ. ಅಗಲಿದ ಗಾಯಕನನ್ನ ನೆನೆದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರು ಹಾಡಿದಂತಹ ಹಾಡನ್ನು ಹಂಚಿಕೊಳ್ಳುವ ಮೂಲಕ ಮರೆಯಾದ ಸಂಗೀತ ಗಣಿಗೆ ಜನ್ಮ ದಿನದ ಶುಭಾಶಯ ಕೋರುತ್ತಿದ್ದಾರೆ.

ಗಾಯಕ ಕೆಕೆ

ಗಾಯಕ ಕೆಕೆ

  • Share this:
ಸಂಗೀತ ಮಾಂತ್ರಿಕ, ಬಾಲಿವುಡ್ ನಲ್ಲಿ ಕೆಕೆ (KK) ಎಂದೇ ಖ್ಯಾತರಾಗಿದ್ದ ದಿವಂಗತ ಗಾಯಕ ಕೃಷ್ಣ ಕುಮಾರ್ ಕುನ್ನತ್ ಅವರ ಜನ್ಮವನ್ನು ಅಭಿಮಾನಿಗಳು ಆಚರಿಸಿದ್ದಾರೆ. ಅಗಲಿದ ಗಾಯಕನನ್ನ (Singer) ನೆನೆದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರು ಹಾಡಿದಂತಹ ಹಾಡನ್ನು ಹಂಚಿಕೊಳ್ಳುವ ಮೂಲಕ ಮರೆಯಾದ ಸಂಗೀತ ಗಣಿಗೆ ಜನ್ಮ ದಿನದ ಶುಭಾಶಯ ಕೋರುತ್ತಿದ್ದಾರೆ. 53 ವರ್ಷದ ಗಾಯಕ ಮೇ 31ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಸಾವಿನ (Death) ಬಳಿಕವೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಕೆಕೆ, ಅವರ ಹಾಡುಗಳಿಂದ (Songs) ಇನ್ನೂ ಸಹ ಜೀವಂತವಾಗಿದ್ದಾರೆ. ಕೆಕೆ ಹಾಡಿದ ಹಾಡುಗಳಿಂದಲೇ ಈ ದಿನವನ್ನು ಸಂಭ್ರಮಮಿಸುತ್ತಿರುವ ಅಭಿಮಾನಿಗಳು (Fans) ಹಾಡಿನ ಮಳೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸುರಿಸಿದ್ದಾರೆ.

ಗಾಯಕ ಕೆಕೆ ಯವರ ಪರಿಚಯ
ಮೂಲತಃ ಕೇರಳದವರಾದ ಕೆಕೆ ಹುಟ್ಟಿ ಬೆಳೆದಿದ್ದು ದೆಹಲಿಯಲ್ಲಿ. ಬಾಲಿವುಡ್ ಸಿನಿಮಾ ಮೂಲಕ ಹಿನ್ನಲೆ ಗಾಯಕರಾಗಿ ವೃತ್ತಿ ಜೀವ ಪ್ರಾರಂಭಿಸಿದ್ದ ಕೆಕೆ ಬಳಿಕ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿದರು. ಕೇವಲ ಬಾಲಿವುಡ್ ಮಾತ್ರವಲ್ಲದೇ ಕೆಕೆ ಬೇರೆ ಬೇರೆ ಭಾಷೆಯಲ್ಲೂ ಹಾಡುಗಳನ್ನು ಹಾಡಿ ಸೈ ಎನಿಸಿಕೊಂಡಿದ್ದರು. ಎಲ್ಲಾ ವಯಸ್ಸಿನವರಿಗೂ ಕೆಕೆ ಹಾಡು ಎಂದರೆ ಪಂಚಪ್ರಾಣ. ಯಾವುದೇ ಕಾರ್ಯಕ್ರಮಗಳಿಗೂ ಸರಿಹೊಂದುವ ಹಾಡುಗಳ ಪಟ್ಟಿಯಲ್ಲಿ ಬಾಲಿವುಡ್ ನ ಗಾಯಕ ಕೆಕೆ ಅವರ ಹೆಸರು ಇದ್ದೇ ಇರುತ್ತದೆ.

ಕೆಕೆ 1996 ರಲ್ಲಿ ಗುಲ್ಜಾರ್ ಅವರ ಕ್ಲಾಸಿಕ್ 'ಮಾಚಿಸ್' ನಲ್ಲಿ 'ಚೋಡ್ ಆಯೆ ಹಮ್' ನೊಂದಿಗೆ ಪಾದಾರ್ಪಣೆ ಮಾಡಿದರು. 1999 ರಲ್ಲಿ, ಅವರು ತಮ್ಮ ಮೊದಲ ಆಲ್ಬಂ 'ಪಲ್' ಮೂಲಕ ಜನಪ್ರಿಯರಾದರು. ನಂತರ ಹಾಡಿನ ಪ್ರಯಾಣ ಮುಂದುವರಿಸಿದ ಕೆಕೆ ಹಿಂದಿ ಚಿತ್ರರಂಗದಲ್ಲಿ ಹಿನ್ನೆಲೆ ಗಾಯನದಲ್ಲಿ ವೃತ್ತಿಜೀವನವನ್ನು ಆರಂಭಿಸಿದರು. ತಮ್ಮ ಸಂಗೀತದ ಜರ್ನಿಯಲ್ಲಿ ಬರೋಬ್ಬರಿ 500ಕ್ಕಿಂತ ಹೆಚ್ಚು ಹಿಂದಿ ಹಾಡು ಹಾಡಿರುವ ಕೆಕೆ, ಸುಮಾರು 200 ಹಾಡುಗಳನ್ನು ಇತರೆ ಭಾಷೆಗಳಾದ ತೆಲುಗು, ಬಂಗಾಳಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಹಾಡಿದ್ದಾರೆ. ಭಜರಂಗಿ ಭಾಯಿಜಾನ ಚಿತ್ರದ ತು ಜೋ ಮಿಲಾ, ಓಂ ಶಾಂತಿ ಓಂ ಚಿತ್ರದ ಆಂಖೊಸೆ ತೇರಿ, ದೇವ್ ದಾಸ್ ನ ಢೋಲಾರೆ ಹೀಗೆ ಹಲವಾರು ಹಾಡುಗಳಿಗೆ ಧ್ವನಿಯಾಗಿದ್ದರು ಕೆಕೆ.

ಇದನ್ನೂ ಓದಿ: Alia Bhatt: ನಿಮಗೆ ನಾನು ಇಷ್ಟವಿಲ್ಲದಿದ್ರೆ, ನನ್ನನ್ನು ನೋಡ್ಬೇಡಿ; ಆಲಿಯಾ ಭಟ್ ಹೇಳಿಕೆಗೆ ನೆಟ್ಟಿಗರು ಗರಂ

ಕನ್ನಡದಲ್ಲೂ ಕೆಕೆ ಕಮಾಲ್
ಕನ್ನಡದಲ್ಲಿ ಪರಿಚಯ, ಮನಸಾರೆ, ಸಂಚಾರಿ, ಮಳೆ ಬರಲಿ ಮಂಜು ಇರಲಿ, ಲವ್, ಬಹುಪರಾಕ್, ಯೋಗಿ, ಮದನ, ನೀನ್ಯಾರೆ, ಕ್ಷಣಕ್ಷಣ, ರೌಡಿ ಅಳಿಯ ಸೇರಿದಂತೆ ಅನೇಕ ಸಿನಿಮಾಗಳಿಗಾಗಿ ಕೆಕೆ ಹಾಡಿದ್ದಾರೆ. ಅದ್ಬುತ ಹಾಡುಗಳ ಜೊತೆ ಅವರು ಹಲವಾರು ಪ್ರಶಸ್ತಿಗಳನ್ನು ಸಹ ತಮ್ಮದಾಗಿಸಿಕೊಂಡಿದ್ದು, ಫಿಲ್ಮ್ಫೇರ್ ಸೌತ್ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಕೆ ಹಾಡುಗಳ ಮೆಲುಕು
ಇನ್ನೂ ಸಹ ಸಂಗೀತ ಕ್ಷೇತ್ರಕ್ಕೆ ಕೆಕೆಯ ಅವರ ಕೊಡುಗೆ ಬೇಕಾಗಿತ್ತು, ಆದರೆ ದುರುಂತ ಎನ್ನುವಂತೆ ತುಂಬು ಜೀವನ ನಡೆಸದ ಕೆಕೆಯ ಮರಣ ಸಂಗೀತ ಲೋಕಕ್ಕೆ ಭರಿಸಲಾರದ ನಷ್ಟ. ಇಂದು ಅವರ ಜನ್ಮದಿನದ ಸಂದರ್ಭದಲ್ಲಿ, ಅವರ ಅಭಿಮಾನಿಗಳು ಅಪ್ರತಿಮ ಗಾಯಕನಿಗೆ ಗೌರವ ಸಲ್ಲಿಸುವ ಮೂಲಕ ಅವರ ಸುಮಧುರ ಹಾಡುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮೆಲುಕು ಹಾಕಿದ್ದಾರೆ.

ಹ್ಯಾಪಿ ಬರ್ತ್ ಡೇ ಕೆಕೆ
ಇನ್ ಸ್ಟಾಗ್ರಾಮ್, ಟ್ವಿಟ್ಟರ್ ಸೇರಿ ಎಲ್ಲೆಡೆ ಕೆಕೆ ಅವರ ಫೋಟೋ, ಅವರ ಶೋ , ಲೈವ್ ಕಾರ್ಯಕ್ರಮಗಳಲ್ಲಿ ಹಾಡಿದ ಹಾಡು, ಅವರೇ ಹಾಡಿದ ಹಾಡಿನ ತುಣುಕುಗಳನ್ನು ಹಂಚಿಕೊಂಡು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇಂದು ಯಾವುದೇ ಸಾಮಾಜಿಕ ಜಾಲತಾಣ ತೆರೆದರೂ ಕೂಡ ದಿವಂಗತ ಗಾಯಕ ಕೆಕೆ ಮತ್ತು ಅವರ ಹಾಡುಗಳು ರಾರಾಜಿಸುತ್ತಿವೆ.

ಇದನ್ನೂ ಓದಿ:  Sonam Kapoor Baby: ಅಕ್ಕ ಸೋನಂ ಕಪೂರ್ ಮಗುವನ್ನು ನೋಡಿ ರಿಯಾ ಕಪೂರ್ ಭಾವುಕ

ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳ ಬಳಗ ಹೊಂದಿದ್ದ ಕೆಕೆ ಅಭಿಮಾನಿಗಳಲ್ಲಿ ಹಾಡುಗಳ ಮೂಲಕ ಜೀವಂತವಾಗಿದ್ದು, ಪ್ರತಿದಿನ ಸಂಗೀತದ ರಸದೌತಣ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಕಲಾವಿದನಿಗೆ ಎಂದಿಗೂ ಸಾವಿಲ್ಲ ಎನ್ನುವಂತೆ ಕೆಕೆ ಅವರು ತಮ್ಮ ಹಾಡುಗಳ ಮೂಲಕ ಸದಾ ಜೀವಂತವಾಗಿರುತ್ತಾರೆ ಎನ್ನಬಹುದು.
Published by:Ashwini Prabhu
First published: