Bipin Rawat: 30 ವರ್ಷಗಳಿಂದ ಸಿನಿಮಾನೇ ನೋಡಿರಲಿಲ್ವಂತೆ ಬಿಪಿನ್​ ರಾವತ್​!

ಶ್ರಿಯೊಮ್ ಕಶ್ಯಪ್ ಎಂಬ ಬಾಲಕ ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಬಿಪಿನ್ ರಾವತ್ ‘ನನಗೆ ಕಳೆದ 30 ವರ್ಷಗಳಿಂದ ಮೂರು ಗಂಟೆ ಒಂದೇ ಕಡೆ ಕೂತು ಸಿನಿಮಾ ನೋಡಲು ಸಮಯವೇ ಸಿಕ್ಕಿಲ್ಲವೆಂದು ಹೇಳಿದ್ದರು

ಬಿಪಿನ್​ ರಾವತ್​

ಬಿಪಿನ್​ ರಾವತ್​

  • Share this:
ಯಾರೂ ಉಹಿಸಲಾಗದಂತ ಅತ್ಯಂತ ಕೆಟ್ಟ ದುರ್ವಿಧಿಯಲ್ಲಿ ದೇಶ ರಕ್ಷಣಾ ಮುಖ್ಯಸ್ಥ ಬಿಪಿನ್​ ರಾವತ್ ಸೇರಿದಂತೆ 12 ಮಂದಿಯನ್ನು ಕಳೆದುಕೊಂಡಿದೆ. ಸಾವನ್ನಪ್ಪಿದ 13 ಮಂದಿಗೆ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಗುರುವಾರ ರಾತ್ರಿ ಅಂತಿಮ ಗೌರವ (Last Tribute by PM Modi) ಸಲ್ಲಿಸಿದರು. C130-J ಸೂಪರ್ ಹರ್ಕ್ಯುಲಸ್ ವಿಮಾನದ ಮೂಲಕ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಸಿಡಿಎಸ್(CDS)​ ಸೇರಿದಂತೆ 13 ಜನರ ಮೃತ ದೇಹದ ಪೆಟ್ಟಿಗೆ ತರಲಾಯಿತು. ಇದಕ್ಕೆ ಮುನ್ನ ತಮಿಳುನಾಡಿನಲ್ಲೂ ಮೃತರಿಗೆ ಗೌರವ ನಮನ ಸಲ್ಲಿಸಲಾಯಿತು. ನಿನ್ನೆ ಮಧ್ಯಾಹ್ನ 1. 30ರ ನಂತರ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ನಡೆಸಲಾಯಿತು.  ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ರಾವತ್ ಸೇನಾ ಅಂತ್ಯಕ್ರಿಯೆಯಲ್ಲಿ ಒಟ್ಟು 800 ಸೇವಾ ಸಿಬ್ಬಂದಿ ಪಾಲ್ಗೊಂಡರು. ಇದಾದ ಬಳಿಕ ಅಂತ್ಯಕ್ರಿಯೆ ನೇರವೇರಿಸಲಾಯ್ತು. ಇದೇ ವೇಳೆ ಬಿಪಿನ್​ ರಾವತ್​(Bipin Rawat) ಅವರ ಹಳೇ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​(Viral) ಆಗುತ್ತಿದೆ. ಮೂರು ದಶಕಗಳಿಂದ ತಾನು ಸಿನಿಮಾ(Movie)ವನ್ನೇ ನೋಡಿಲ್ಲವೆಂದು 3 ವರ್ಷಗಳ ಹಿಂದೆ ಜನರಲ್ ಹೇಳಿದ್ದರು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. 

‘3 ದಶಕಗಳಿಂದ ಸಿನಿಮಾ ನೋಡಲು ಸಮಯ ಸಿಕ್ಕಿಲ್ಲ’

2018ರಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದ (Indian Army chief) ಬಿಪಿನ್ ರಾವತ್ ಛತ್ತಿಸ್‌ಗಢಕ್ಕೆ ಭೇಟಿ ನೀಡಿದ್ದರು. ಈ ವೇಳೆ ರಾಯ್‌ಪುರದ ದೆಲ್ಲಿ ಪಬ್ಲಿಕ್ ಶಾಲೆಯ ಮಕ್ಕಳೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದರು. ಈ ವೇಳೆ ಶಾಲಾ ಮಕ್ಕಳು ಅಂದಿನ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ದರು. ಈ ವೇಳೆ ಶ್ರಿಯೊಮ್ ಕಶ್ಯಪ್ ಎಂಬ ಬಾಲಕ ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಬಿಪಿನ್ ರಾವತ್ ‘ನನಗೆ ಕಳೆದ 30 ವರ್ಷಗಳಿಂದ ಮೂರು ಗಂಟೆ ಒಂದೇ ಕಡೆ ಕೂತು ಸಿನಿಮಾ ನೋಡಲು ಸಮಯವೇ ಸಿಕ್ಕಿಲ್ಲವೆಂದು ಹೇಳಿದ್ದರು’. ಮೂರು ವರ್ಷಗಳ ಹಿಂದೆ ಜನರಲ್ ಬಿಪಿನ್ ರಾವತ್ ಹೇಳಿದ ಇದೇ ಹೇಳಿಕೆ ಈಗ ವೈರಲ್ ಆಗುತ್ತಿದೆ.

ಇದನ್ನು ಓದಿ : ಮತ್ತೊಂದು ಹೊಸ ದಾಖಲೆ ಬರೆದ `ಅಖಂಡ’: ಬಾಲಯ್ಯನ ಫ್ಯಾನ್ಸ್​ ಫುಲ್​ ದಿಲ್​ಖುಷ್​!

ಅಂದು ಹಾರ್ಡ್​ ವರ್ಕ್​ ಮಾಡಿ ಎಂದಿದ್ದ ಬಿಪಿನ್​ ರಾವತ್​!

ಅಂದು  ಮಕ್ಕಳೊಂದಿಗೆ ನಡೆದಿದ್ದ ಸಂವಾದದಲ್ಲಿ ಜನರಲ್ ಬಿಪಿನ್ ರಾವತ್ ಕೂಡ ಮಕ್ಕಳಿಗೆ ಹುರುಪು ತುಂಬಿದ್ದರು. ‘ಶಾಲೆಯ ಕೋಣೆಯೊಳಗಾಗಲಿ ಅಥವಾ ಜೀವನದಲ್ಲಿ ಆಗಲಿ ಸೋಲನ್ನು ಕಂಡರೆ ನಂಬಿಕೆ ಕಳೆದುಕೊಳ್ಳಬೇಡಿ. ಕಠಿಣ ಪರಿಶ್ರಮ ಮಾಡಿ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ನೀವು ಈ ದೇಶದ ಭವಿಷ್ಯ. ಪ್ರತಿಬಾರಿ ಸೋತಾಗಲೂ ಮತ್ತಷ್ಟು ಹಾರ್ಡ್ ವರ್ಕ್ ಮಾಡಿ. ಯಶಸ್ಸು ಸಿಗುವುದು ಕೇವಲ ಹಾರ್ಡ್ ಮಾತ್ರ ಸಾಧ್ಯವೆಂದು" ಜನರಲ್ ಬಿಪಿನ್ ರಾವತ್ ಹೇಳಿದ್ದರು. ಈ ಹೇಳಿಕೆ ವಿಡಿಯೋಗಳು ಕೂಡ ಸಖತ್​ ವೈರಲ್​ ಆಗುತ್ತಿವೆ. ‘

ಇದನ್ನು ಓದಿ: ಹೆಲಿಕಾಪ್ಟರ್​ ಅಪಘಾತಕ್ಕೆ ಅಸಲಿ ಕಾರಣ ಇದು: ವಿಡಿಯೋ ಸಮೇತ ಸಾಕ್ಷಿ ಇಲ್ಲಿದೆ!

7  ರಿಂದ  10 ದಿನದಲ್ಲಿ ನೂತನ CDS ನೇಮಕ

ಮಿಲಿಟರಿ ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್  ಅವರು ಹಠಾತ್ ಮತ್ತು ದುರದೃಷ್ಟಕರ ಪರಿಸ್ಥಿತಿಯಲ್ಲಿ ನಿಧನವಾಗಿದ್ದು, ಇದು ದೇಶದ ಜನರಿಗೆ ತುಂಬಾನೇ ಆಘಾತಕಾರಿ ಸುದ್ದಿಯಾಗಿದೆ.ಇವರ ನಿಧನದ ನಂತರ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್) ಪ್ರಮುಖ ಹುದ್ದೆ ಈಗ ಖಾಲಿಯಾಗಿದ್ದು, ಇವರ ಸ್ಥಾನಕ್ಕೆ ಹೊಸ ಅಧಿಕಾರಿಯನ್ನು ನೇಮಿಸುವುದು ಕೇಂದ್ರ ಸರಕಾರಕ್ಕೆ ತುಂಬಾನೇ ದೊಡ್ಡ ಸವಾಲಿನ ಕೆಲಸ ಎಂದರೆ ತಪ್ಪಾಗುವುದಿಲ್ಲ. ಉನ್ನತ ಮೂಲಗಳ ಪ್ರಕಾರ, ಮುಂದಿನ ಏಳರಿಂದ ಹತ್ತು ದಿನಗಳಲ್ಲಿ ಹೊಸ ಸಿಡಿಎಸ್ ಅನ್ನು ನೇಮಕ ಮಾಡುವ ಬಗ್ಗೆ ಮೋದಿ ಸರ್ಕಾರವು ಯೋಚಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
Published by:Vasudeva M
First published: