Bimbisara Movie ನೋಡಿ ವಿಮರ್ಶಕರು ಏನಂದ್ರು? ಇವರ ಪ್ರಕಾರ ಸಿನೆಮಾ ಹೇಗಿದ್ಯಂತೆ?

ತೆಲುಗು ಭಾಷೆಯಲ್ಲಿ ನಿರ್ಮಿತವಾದ ಈ ಚಿತ್ರವು ಸಾಮಾನ್ಯವಾಗಿ ತೆಲುಗುವಿನಲ್ಲಿ ಈ ಹಿಂದೆಯೂ ಕಂಡುಬಂದ ಯಮಧರ್ಮರಾಜನಂತಹ ಚಿತ್ರಗಳನ್ನು ನೆನಪಿಸುವಂತಿದೆ. ಅಂತಹ ಚಿತ್ರಗಳ ಹಲವು ಆಸಕ್ತಿಕರ ವಿಷಯಗಳನ್ನು ಗುತ್ತಿಗೆ ಪಡೆದು ವಸಿಷ್ಠ ಅವರು ತಮ್ಮ ಬಿಂಬಿಸಾರ ಚಿತ್ರದಲ್ಲಿ ಜಾಣ್ಮೆಯಿಂದ ಹೆಣೆದಿರುವುದನ್ನು ಗಮನಿಸಬಹುದಾಗಿದೆ.

ಬಿಂಬಿಸಾರ ಸಿನೆಮಾ

ಬಿಂಬಿಸಾರ ಸಿನೆಮಾ

  • Share this:
ತ್ರಿಗರ್ತಲಾ ಎಂಬ ರಾಜ್ಯ. ಆ ರಾಜ್ಯವನ್ನು ಪಾಲಿಸುತ್ತಿದ್ದ ಬಿಂಬಿಸಾರ (Bimbisara) ಎಂಬ ರಾಜ (King) ಬಹು ಕ್ರೂರಿ ಹಾಗೂ ನಿರ್ದಯಿಯಾಗಿದ್ದ. ಅವನಿಗೆ ದೇವದತ್ತನೆಂಬ ಸಹೋದರನಿದ್ದ. ಆದರೆ, ದೇವದತ್ತ ಮಾತ್ರ ಗುಣದಲ್ಲಿ ತನ್ನ ಅಣ್ಣನ (Brother) ತದ್ವಿರುದ್ಧನಾಗಿದ್ದ. ಒಂದೊಮ್ಮೆ ಇಬ್ಬರು ಸಹೋದರರ ಮಧ್ಯೆ ಕಾಳಗ ನಡೆಯುತ್ತದೆ, ಈ ಸಂದರ್ಭದಲ್ಲಿ ಬಿಂಬಿಸಾರ ಯಾವುದೋ ಒಂದು ಮಾಯೆಯ ಪರಿಣಾಮದಿಂದಾಗಿ ಪ್ರಸ್ತುತ ಸಮಯಕ್ಕೆ ಅಂದರೆ ಇಂದಿನ ವರ್ತಮಾನ ಕಾಲಕ್ಕೆ ಬರುತ್ತಾನೆ. ಈಗ ಅವನು ಈ ವರ್ತಮಾನದ ಸಮಯದಲ್ಲಿ ಏನೆಲ್ಲ ಅನುಭವಿಸುತ್ತಾನೆ? ಅವನಲ್ಲಿ ಏನಾದರೂ ಬದಲಾವಣೆಗಳಾಗುತ್ತದೆಯೇ? ಇತ್ಯಾದಿ ವಿಷಯವನ್ನು ನಿರೂಪಿಸುವ ಕಾಲ್ಪನಿಕ ಚಿತ್ರ (Fictional Film) ಇದಾಗಿದೆ ಎಂದು ಹೇಳಬಹುದು.

ಒನ್ ಮ್ಯಾನ್ ಶೋ
ಬಿಂಬಿಸಾರ ಹಾಗೂ ದೇವದತ್ತ ಈ ಎರಡೂ ಪಾತ್ರಗಳಲ್ಲಿ ನಟ ಕಲ್ಯಾಣ ರಾಮ ಅಭಿನಯಿಸಿದ್ದು ಈ ಪೂರ್ಣ ಚಿತ್ರ ಒನ್ ಮ್ಯಾನ್ ಶೋ ಎಂದರೂ ತಪ್ಪಾಗದು. ಈ ಚಿತ್ರದ ಮೂಲಕ ಪ್ರಥಮ ಬಾರಿ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿರುವ ವಸಿಷ್ಠ ಅವರು ತಮ್ಮ ಚೊಚ್ಚಲ ಚಿತ್ರದಲ್ಲೇ ಸಾಕಷ್ಟು ಭರವಸೆಯನ್ನು ಮೂಡಿಸುವಲ್ಲಿ ಸಫಲರಾಗಿದ್ದಾರೆಂದರೆ ತಪ್ಪಾಗದು. ತಮ್ಮ ಮೊದಲ ಪ್ರಯತ್ನದಲ್ಲೆ ವಸಿಷ್ಠ ಅವರು ಆಸಕ್ತಿ ಮೂಡಿಸುವಂತಹ ಒಂದು ಜಾನಪದ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದು ಸಹ ಕುತೂಹಲಕಾರಿಯಾಗಿದೆ.

ಬಿಂಬಿಸಾರ ಸಿನೆಮಾದ ಕಥೆ ಏನು 
ತೆಲುಗು ಭಾಷೆಯಲ್ಲಿ ನಿರ್ಮಿತವಾದ ಈ ಚಿತ್ರವು ಸಾಮಾನ್ಯವಾಗಿ ತೆಲುಗುವಿನಲ್ಲಿ ಈ ಹಿಂದೆಯೂ ಕಂಡುಬಂದ ಯಮಧರ್ಮರಾಜನಂತಹ ಚಿತ್ರಗಳನ್ನು ನೆನಪಿಸುವಂತಿದೆ. ಅಂತಹ ಚಿತ್ರಗಳ ಹಲವು ಆಸಕ್ತಿಕರ ವಿಷಯಗಳನ್ನು ಗುತ್ತಿಗೆ ಪಡೆದು ವಸಿಷ್ಠ ಅವರು ತಮ್ಮ ಬಿಂಬಿಸಾರ ಚಿತ್ರದಲ್ಲಿ ಜಾಣ್ಮೆಯಿಂದ ಹೆಣೆದಿರುವುದನ್ನು ಗಮನಿಸಬಹುದಾಗಿದೆ. ಈ ಚಿತ್ರದಲ್ಲಿ ಯಮನ ಆ ಆಸಕ್ತಿಕರ ಅಂಶಗಳನ್ನು ಕ್ರೂರ ದೊರೆ ಬಿಂಬಿಸಾರನೊಂದಿಗೆ ಅಳವಡಿಸಿಕೊಂಡಿರುವುದೇ ಈ ಚಿತ್ರದ ಒಂದು ಪ್ಲಸ್ ಪಾಯಿಂಟ್ ಎನ್ನಬಹುದು.

ಚಿತ್ರದ ಬಗ್ಗೆ ವಿಮರ್ಶಕರು ಏನು ಹೇಳಿದ್ದಾರೆ 
ಬಿಂಬಿಸಾರದ ಸ್ಕ್ರೀನ್ ಪ್ಲೇ ಸಾಕಷ್ಟು ಮೃದುವಾಗಿದ್ದು ಸರಳವಾಗಿ ಕಥೆಯನ್ನು ಕೊಂಡೊಯ್ಯುವುದರಿಂದ ಪ್ರೇಕ್ಷಕರು ತಮ್ಮ ಆಸನಗಳನ್ನು ಬಿಟ್ಟು ಏಳದಂತೆ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಕಥೆಯ ಕಂಟೆಂಟ್ ಮತ್ತು ಅದನ್ನು ತೋರ್ಪಡಿಸುವ ರೀತಿಯಲ್ಲಿ ಕೆಲ ಕೊರತೆಗಳು ಕಂಡುಬರುವುದಾದರೂ ಅದನ್ನು ಚಿತ್ರದ ಮೊದಲ ಅರ್ಧ ಭಾಗದಲ್ಲಷ್ಟೇ ಕಾಣಬಹುದು. ನಂತರದ ಕೊನೆಯ ಅರ್ಧದಲ್ಲಿ ಚಿತ್ರವು ಉತ್ತಮ ತಿರುವನ್ನು ಪಡೆಯುತ್ತದೆ. ಈ ಸಂದರ್ಭದಲ್ಲಿ ಭೂತ ಹಾಗೂ ಭವಿಷ್ಯ ಕಾಲದ ಕನೆಕ್ಟಿವಿಟಿ ಒಂದು ರೀತಿಯ ಕುತೂಹಲ ಕೆರಳಿಸುತ್ತದೆ.

ಇದನ್ನೂ ಓದಿ: Alia Bhatt: ಸೋಶಿಯಲ್ ಮೀಡಿಯಾ ಪೋಸ್ಟ್​ಗೆ ಆಲಿಯಾ ಪಡೆಯುವ ಸಂಭಾವನೆ ಕೇಳಿ ಶಾಕ್ ಆದ ಬಾಲಿವುಡ್​

ಆ ನಂತರ ಹಲವು ಆಸಕ್ತಿಕರ ಪ್ರಸಂಗಗಳು ನೋಡುಗರನ್ನು ಸೆಳೆಯುತ್ತವೆ. ಕೆಲವು ಅತಿಶಯ ಅಥವಾ ಲಾಜಿಕ್ ಇಲ್ಲದ ಸನ್ನಿವೇಶಗಳಿದ್ದರೂ ಕೊನೆಯ ಅರ್ಧ ನೋಡಲು ಯೋಗ್ಯಕರವಾಗಿದೆ. ಅಷ್ಟಕ್ಕೂ ಈ ಚಿತ್ರದಲ್ಲಿ ಒಬ್ಬ ಬಲಶಾಲಿಯಾದಂತಹ ಖಳನ ಪ್ರಭಾವ ಇರಬೇಕೆನಿಸುತ್ತದೆಯಾದರೂ ಒಂದೊಮ್ಮೆ ಚಿತ್ರ ನೋಡಲು ಯೋಗ್ಯವಾಗಿದ್ದು ಸಮಾಧಾನಕರ ಅನಿಸಿಕೆ ಪ್ರೇಕ್ಷಕರಲ್ಲಿ ಮೂಡಿಸುತ್ತದೆ ಎಂದು ಹೇಳಬಹುದಾಗಿದೆ. ನೀವು ಜಾನಪದದ ಕಥೆಗಳಲ್ಲಿ ಆಸಕ್ತಿ ಹೊಂದಿರುವವರಾಗಿದ್ದರೆ ಈ ಚಿತ್ರವನ್ನು ಒಮ್ಮೆ ಖಂಡಿತ ನೋಡಬಹುದು.

ಚಿತ್ರದಲ್ಲಿ ಯಾರ‍್ಯಾರು ಅಭಿನಯಿಸಿದ್ದಾರೆ
ಇನ್ನು ನಟನೆಯ ಬಗ್ಗೆ ಹೇಳುವುದಾದರೆ ಕಲ್ಯಾಣ ರಾಮ್ ಅವರ ಅಭಿನಯ ಸಾಕಷ್ಟು ಚೆನ್ನಾಗಿ ಮೂಡಿಬಂದಿದ್ದು ಚಿತ್ರದ ನಂತರವೂ ಅವರ ಪಾತ್ರದ ನೆನಪುಗಳು ಬರುವಂತಿವೆ. ಮಿಕ್ಕಂತೆ ಈ ಚಿತ್ರದಲ್ಲಿ ಪ್ರಕಾಶ್ ರಾಜ್, ತನಿಕೆಲ್ಲಾ ಭರಣಿ ಬಣ್ಣ ಹಚ್ಚಿದ್ದು ಅವರ ಪಾತ್ರಗಳು ಅಷ್ಟೊಂದು ದಟ್ಟ ಪ್ರಭಾವ ಬೀರುವುದಿಲ್ಲ. ಶ್ರೀನಿವಾಸ್ ರೆಡ್ಡಿ ಹಾಸ್ಯಕಲಾವಿದನಾಗಿ ಓಕೆ ಎನ್ನಬಹುದಷ್ಟೆ ಮತ್ತು ವೆನಿಲ್ಲಾ ಕಿಶೋರ್ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂಬಂತಿದೆ. ಬ್ರಹ್ಮಾಜೀ ಅವರ ಅಭಿನಯವೂ ಸಮಾಧಾನಕರವಾಗಿದೆ.

ಇದನ್ನೂ ಓದಿ: Ranbir and Alia: ರಣಬೀರ್ ಕಪೂರ್ ಸೆಟ್‌ನಲ್ಲಿ ಹೇಗಿರ್ತಾರೆ? ಈ ಬಗ್ಗೆ ಖುದ್ದು ಆಲಿಯಾ ಏನು ಹೇಳಿದ್ದಾರೆ ಗೊತ್ತಾ?

ಚಿತ್ರಕ್ಕೆ ಸಂಗೀತವನ್ನು ಎಂಎಂ ಕೀರವಾಣಿಯವರು ನೀಡಿದ್ದು ಜಾನಪದ ಅಂಶ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ತಕ್ಕುದಾದ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತದಲ್ಲೂ ಅವರ ಪ್ರತಿಭೆ ಉತ್ತಮವಾಗಿರುವುದನ್ನು ಗಮನಿಸಬಹುದು. ಇನ್ನು, ಹಾಡುಗಳನ್ನು ಆಲಿಸಿದರೆ ಅವು ಇನ್ನೂ ಉತ್ತಮವಾಗಬಹುದಿತ್ತೇನೋ ಎಂಬ ಭಾವ ಬಂದರೂ ಬರಬಹುದು. ಚೋಟಾ ಕೆ ನಾಯ್ಡು ಅವರ ಛಾಯಾಚಿತ್ರಗ್ರಹಣ ಸಮಾಧಾನಕರವಾಗಿದೆ. ತಮ್ಮಿ ರಾಜು ಅವರ ಸಂಕಲನ ಉತ್ತಮವಾಗಿದೆ.
Published by:Ashwini Prabhu
First published: