• Home
  • »
  • News
  • »
  • entertainment
  • »
  • Kantara Movie: ಬಿಹಾರಿ ಯುವಕನ ಧ್ವನಿಯಲ್ಲಿ ಸಿಂಗಾರ ಸಿರಿಯೇ ಹಾಡು! ವೈರಲ್ ಆಯ್ತು ವಿಡಿಯೋ

Kantara Movie: ಬಿಹಾರಿ ಯುವಕನ ಧ್ವನಿಯಲ್ಲಿ ಸಿಂಗಾರ ಸಿರಿಯೇ ಹಾಡು! ವೈರಲ್ ಆಯ್ತು ವಿಡಿಯೋ

ರಿಷಬ್ ಶೆಟ್ಟಿ-ಸಪ್ತಮಿ ಗೌಡ

ರಿಷಬ್ ಶೆಟ್ಟಿ-ಸಪ್ತಮಿ ಗೌಡ

Kantara Movie: ಬೆಂಗಾಲಿ ಯುವಕನೊಬ್ಬ ಕಾಂತಾರ ಸಿನಿಮಾದ ರೊಮ್ಯಾಂಟಿಕ್ ಹಾಡು ಸಿಂಗಾರ ಸಿರಿಯೇ ಹಾಡನ್ನು ಹಾಡಿದ್ದಾನೆ. ಆತ ಹಾಡುವ ರೀತಿ ನೋಡಿ ಕನ್ನಡಿಗರೇ ಅಚ್ಚರಿಪಟ್ಟಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಕಾಂತಾರ (Kantara) ಸಿನಿಮಾ ಎಷ್ಟು ಹಿಟ್ ಆಗಿದೆಯೋ ಅದರ ಹಾಡುಗಳೂ  (Song) ಕೂಡಾ ಅಷ್ಟೇ ಸೂಪರ್ ಹಿಟ್ ಆಗಿದೆ. ಸಿಂಗಾರ ಸಿರಿಯೇ (Singara siriye),  ವರಾಹ ರೂಪಂ (varaha roopam) ಹಾಡುಗಳನ್ನು ಕನ್ನಡಿಗರಷ್ಟೇ ಅಲ್ಲ ಬೇರೆ ಭಾಷೆಯ ಜನರು ಕೂಡಾ ಮೆಚ್ಚಿಕೊಂಡಿದ್ದಾರೆ. ದೇಶಾದ್ಯಂತ ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗು ತಂದುಕೊಟ್ಟ ರಿಷಬ್ ಶೆಟ್ಟಿ (Rishab shetty) ಅವರ ಈ ಸಿನಿಮಾ ಕಥೆ, ನಿರ್ದೇಶನ, ಹಾಡುಗಳು ಹೀಗೆ ಎಲ್ಲಾ ಬಗೆಯಲ್ಲಿಯೂ ವ್ಯಾಪಕ ಪ್ರಶಂಸೆಯನ್ನು ಪಡೆದಿದೆ. ಬಾಹುಬಲಿ ನಟ ಪ್ರಭಾಸ್ (Prabhas)​ ಅವರಿಂದ ತೊಡಗಿ ಸೌತ್​ನಲ್ಲಿ ತಲೈವಾ ತನಕ ಎಲ್ಲರಿಂದ ಬೇಷ್ ಎನ್ನಿಸಲ್ಪಟ್ಟಿದೆ.


ವೈರಲ್ ಆದ ಸಿಂಗಾರ ಸಿರಿಯೇ ಹಾಡು


ಗ್ರಾಮೀಣ ಸೊಗಡನ್ನು ಹೊಂದಿಕೊಂಡಿರುವ ಈ ಸಿಂಗಾರ ಸಿರಿಯೇ ಹಾಡು ಸೂಪರ್ ಹಿಟ್ ಆಗಿರುವುದು ಎಲ್ಲರಿಗೂ ಗೊತ್ತು. ಇದೊಂದು ಗ್ರಾಮೀಣ ಸೊಗಡಿನ ಗಂಧ ಇರುವಂತಹ ಸುಂದರವಾದ ಪ್ರೇಮಗೀತೆ.
ಬಿಹಾರಿ ಯುವಕನ ಸಿಂಗಾರ ಸಿರಿಯೇ ಮೋಡಿ


ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಂಗಾರ ಸಿರಿಯೇ ಹಾಡು ವೈರಲ್ ಆಗಿದ್ದು ಇದು ಒರಿಜಿನಲ್ ಹಾಡು ಅಲ್ಲ. ಬಿಹಾರಿ ಯುವಕನೊಬ್ಬ ನಗು ನಗುತ್ತಾ ಸಿಂಗಾರ ಸಿರಿಯೇ ಹಾಡನ್ನು ಸುಮಧುರವಾಗಿ ಹಾಡುತ್ತಾನೆ. ಇದನ್ನು ವಿಡಿಯೋ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಲಾಗಿದೆ.


ಸಪ್ತಮಿ ಸ್ಟೋರಿಯಲ್ಲಿ ಬಿಹಾರಿ ಯುವಕ


ವೈರಲ್ ಆಗಿರುವ ವಿಡಿಯೋವನ್ನು ನಟಿ ಸಪ್ತಮಿ ಗೌಡ ಅವರು ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡ ನಂತರ ಇದು ಇನ್ನಷ್ಟು ವೈರಲ್ ಆಗಿದೆ. ಸಿಂಗಾರ ಸಿರಿಯೇ ಎನ್ನುವ ಕನ್ನಡ ಹಾಡನ್ನು ಬೆಂಗಾಲಿ ಹುಡುಗ ಇಷ್ಟು ಸುಂದರವಾಗಿ ಹಾಡಿದ್ದು ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ.
ಇದನ್ನೂ ಓದಿ: Singara Siriye Secret: ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು ಬರೆದ ಪ್ರಮೋದ್ ಆ ವೀಡಿಯೋ ಹಂಚಿಕೊಂಡಿದ್ಯಾಕೆ?


ಬಿಹಾರ್ ಹುಡುಗನ ಕನ್ನಡ ಪ್ರೇಮ ಎಂದು ಕ್ಯಾಪ್ಶನ್ ಕೊಟ್ಟು ಈ ವಿಡಿಯೋವನ್ನು ಗೌಡ್ರು ಎನ್ನುವ ಇನ್​ಸ್ಟಾಗ್ರಾಮ್ ಖಾತೆಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದ್ದು 50 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ನೆಟ್ಟಿಗರೆಲ್ಲ ಕನ್ನಡಿಗರೇ ಇಲ್ಲಿ ನೋಡಿ ಎಂದು ಕಾಮೆಂಟ್ ಬಾಕ್ಸ್​ನಲ್ಲಿ ಬರೆಯುತ್ತಿದ್ದಾರೆ.
ರಶ್ಮಿಕಾಗೆ ಕಳಿಸಿ ಎಂದ ಜನರು


ಇನ್ನೊಬ್ಬರು ಬಿಹಾರಣ್ಣನಿಗೆ ಒಂದು ಚಪ್ಪಾಳೆ ಎಂದು ಪ್ರೋತ್ಸಾಹ ಕೊಟ್ಟಿದ್ದಾರೆ. ಈ ವಿಡಿಯೋ ಸ್ವಲ್ಪ ರಶ್ಮಿಕಾಗೆ ಕಳಿಸಿ ಎಂದಿದ್ದಾರೆ ಇನ್ನೊಬ್ಬರು. ಮತ್ತೊಬ್ಬರು ಕಾಮೆಂಟ್ ಮಾಡಿ ಮೊದಲೇ ನೀನು ಶೆಟ್ಟರಿಗೆ ಸಿಕ್ಕಿದೆ ಅಂದ್ರೆ ನಿನ್ನಿಂದ ಈ ಸಾಂಗ್ ಹಾಡಿಸ್ತಿದ್ದರು ಎಂದು ಬರೆದಿದ್ದಾರೆ. ಅಂತೂ ಯುವಕ ಮಾತ್ರ ದಿಢೀರ್ ವೈರಲ್ ಆಗಿಬಿಟ್ಟಿದ್ದಾನೆ.
ರಿಷಬ್ ಶೆಟ್ಟರ ಮಗನೂ ಹಾಡ್ತಾನೆ ಈ ಹಾಡು


ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಅವರ ಪುತ್ರ ರಣ್ವಿತ್ ಶೆಟ್ಟಿ ಈ ಹಾಡನ್ನು ಪೂರ್ತಿಯಾಗಿ ಹಾಡುತ್ತಾನೆ. ಸಿಂಗಾರ ಸಿರಿಯೇ ಸಾಂಗ್ ಅನ್ನು ಪೂರ್ತಿಯಾಗಿ ಹಾಡೋ ರಣ್ವಿತ್​ಗೆ ತಂದೆಯ ಸಿನಿಮಾದ ರೊಮ್ಯಾಂಟಿಕ್ ಹಾಡು ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಎಂದು ಪ್ರಗತಿ ಶೆಟ್ಟಿ ಅವರೇ ರಿವೀಲ್ ಮಾಡಿದ್ದರು.
ಸಿಂಗಾರ ಸಿರಿಯೇ ಹಾಡು


ಸಿಂಗಾರ ಸಿರಿಯೇ ಹಾಡು ಸೂಪರ್ ಹಿಟ್ ಆಗಿದೆ. ಶಿವ ಹಾಗೂ ಲೀಲಾ ನಡುವಿನ ಪ್ರೇಮ ಸಂಬಂಧವನ್ನು ತಿಳಿಸೋ ಈ ಹಾಡಿಗೆ ಎಲ್ಲರಿಂದ ಮೆಚ್ಚುಗೆ ಲಭಿಸಿದೆ. ಶಿವ ಮತ್ತು ಲೀಲಾ ನಡುವೆ ಸುಂದರ ಪ್ರೇಮ ಅರಳುವುದನ್ನು ಈ ಹಾಡಿನ ಮೂಲಕ ತೋರಿಸಲಾಗಿದೆ.
ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅಭಿನಯದ "ಕಾಂತಾರ ಮೊದಲ ಸಿಂಗಲ್ - ಸಿಂಗಾರ ಸಿರಿಯೆ" ವಿಡಿಯೋ ಸಾಂಗ್ ಇದಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯವನ್ನು ರಚಿಸಿದ್ದು ಬಿ ಅಜನೀಶ್ ಲೋಕನಾಥ್ ಮತ್ತು ಹಾಡಿಗೆ ಜೀವ ತುಂಬಿದ್ದಾರೆ. ವಿಜಯ್ ಪ್ರಕಾಶ್, ಅನನ್ಯ ಭಟ್ ಮತ್ತು ನಾಗರಾಜ ಪಾಣಾರ್ ವಾಲ್ತೂರ್ ಜಾನಪದ ಕುಂದಾಪುರ ಜಾನಪದದ ಸಾರದೊಂದಿಗೆ ಧ್ವನಿ ನೀಡಿದ್ದಾರೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು