ಮಾಂಸ ಕತ್ತರಿಸುವವರ ಕೆಂಗಣ್ಣಿಗೆ ಗುರಿಯಾದ ವಿಜಯ್ ನಟನೆಯ ಬಿಗಿಲ್

Bigil in trouble: ಟೈಟಲ್ ಮೂಲಕವೇ ಭಾರೀ ಕುತೂಹಲ ಹುಟ್ಟುಹಾಕಿರುವ ನಿರ್ದೇಶಕ ಅಟ್ಲಿ ತಂಡಕ್ಕೆ ಈಗ ವಿವಾದದ ಬಿಸಿ ತಟ್ಟಿದೆ. ವಿಜಯ್ ಚಿತ್ರಗಳು ಯಾವಾಗ್ಲೂ ಹೊಸತನದಿಂದ ಕೂಡಿರುತ್ತದೆ. ಅಂತಹದೊಂದು ಹೊಸ ಟಚ್ ನೀಡಲು ಮಾಡಿರುವ ಪೋಸ್ಟರ್ ಈಗ ವಿವಾದದ ಕಿಡಿ ಹೊತ್ತಿಸಿದೆ.

zahir | news18-kannada
Updated:September 25, 2019, 5:28 PM IST
ಮಾಂಸ ಕತ್ತರಿಸುವವರ ಕೆಂಗಣ್ಣಿಗೆ ಗುರಿಯಾದ ವಿಜಯ್ ನಟನೆಯ ಬಿಗಿಲ್
vijay
  • Share this:
ಚಿತ್ರರಂಗದಲ್ಲಿ ವಿವಾದಗಳು ಹೊಸತೇನಲ್ಲ. ಆದರೆ ಕಾಲಿವುಡ್ ನಟ ವಿಜಯ್ ಚಿತ್ರಗಳಿಗೂ ವಿವಾದಕ್ಕೂ ಅದೇನೋ ನಂಟು ಇದ್ದಂತಿದೆ. ಯಾಕಂದ್ರೆ ಇಳಯ ದಳಪತಿ ಅಭಿನಯದ ಬ್ಯಾಕ್ ಟು ಬ್ಯಾಕ್ ಚಿತ್ರಗಳು ವಿವಾದ ಸೃಷ್ಟಿಸಿದೆ. ಈ ಹಿಂದೆ ತೆರೆಕಂಡಿದ್ದ 'ತಲೈವಾ', 'ಮೆರ್ಸಲ್' ಚಿತ್ರಗಳು ತಮಿಳುನಾಡಿನಾದ್ಯಂತ ಭಾರೀ ಕೋಲಾಹಲವನ್ನು ಉಂಟು ಮಾಡಿತ್ತು. ಈ ಪಟ್ಟಿಗೆ ಹೊಸ ಸೇರ್ಪಡೆ 'ಬಿಗಿಲ್'.

ಟೈಟಲ್ ಮೂಲಕವೇ ಭಾರೀ ಕುತೂಹಲ ಹುಟ್ಟುಹಾಕಿರುವ ನಿರ್ದೇಶಕ ಅಟ್ಲಿ ತಂಡಕ್ಕೆ ಈಗ ವಿವಾದದ ಬಿಸಿ ತಟ್ಟಿದೆ. ವಿಜಯ್ ಚಿತ್ರಗಳು ಯಾವಾಗ್ಲೂ ಹೊಸತನದಿಂದ ಕೂಡಿರುತ್ತದೆ. ಅಂತಹದೊಂದು ಹೊಸ ಟಚ್ ನೀಡಲು ಮಾಡಿರುವ ಪೋಸ್ಟರ್ ಈಗ ವಿವಾದದ ಕಿಡಿ ಹೊತ್ತಿಸಿದೆ. ಚಿತ್ರದ ಪ್ರಮುಖ ಪೋಸ್ಟರ್​ನಲ್ಲಿ ವಿಜಯ್ ಮಾಂಸ ಕತ್ತರಿಸುವ ಕತ್ತಿಯೊಂದಿಗೆ ಪೋಸ್ ಕೊಟ್ಟಿದ್ದರು. ರಗಡ್ ಲುಕ್​ನಲ್ಲಿ ಮಾಂಸ ಕಡಿಯುವ ಮರದ ದಿಣ್ಣೆ ಮೇಲೆ ಕಾಲಿಟ್ಟು ಖಡಕ್ ಪೋಸ್ ನೀಡಿದ್ದರು.

ಬಿಗಿಲ್ ಪೋಸ್ಟರ್


ಈ ನೋಟ ಈಗ ಮಾಂಸ ಮಾರಾಟಗಾರರ ಕಣ್ಣು ಕೆಂಪಾಗಿಸಿದೆ. ಹೌದು, ವಿಜಯ್ ಮಾಂಸ ಮಾರಾಟಗಾರನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಕ್ರೂರವಾಗಿ ಕಾಣಿಸಿಕೊಳ್ಳುವ ಮೂಲಕ ಮಾಂಸ ಕತ್ತರಿಸುವವರನ್ನು ಕೆಟ್ಟದಾಗಿ ಚಿತ್ರಿಸುವ ಪ್ರಯತ್ನ ಮಾಡಲಾಗಿದೆ ಎಂದು ಮಾಂಸ ಮಾರಾಟಗಾರರು ಆರೋಪಿಸಿದ್ದಾರೆ.

ಇದನ್ನೂ ಓದಿ: ಧೋನಿ ನಿವೃತ್ತಿ ಘೋಷಿಸದಿರಲು ಟೀಂ ಇಂಡಿಯಾದ ಈ ಆಟಗಾರನೇ ಕಾರಣ..!

ಈ ಸಂಬಂಧ ಕೊಯಂಬತ್ತೂರ್​​​ನ ಗೋಪಾಲ್ ಎಂಬ ಮಾಂಸ ಕತ್ತರಿಸುವಾತ 'ಬಿಗಿಲ್'​ ಚಿತ್ರದ ಪೋಸ್ಟರ್​ ಹಿಡಿದು ಉಕ್ಕಡಂ ಪೊಲೀಸ್ ಠಾಣೆ ತೆರಳಿ ಅದನ್ನು ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ದೃಶ್ಯ ಮಾಂಸ ಮಾರಾಟಗಾರರ ಮತ್ತು ಕತ್ತರಿಸುವವರ ಭಾವನೆ ಧಕ್ಕೆಯನ್ನುಂಟು ಮಾಡುತ್ತಿದ್ದು, ಹೀಗಾಗಿ ಚಿತ್ರದಲ್ಲಿನ ಈ ಸನ್ನಿವೇಶವನ್ನು ತೆಗೆದು ಹಾಕುವಂತೆ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

'ಬಿಗಿಲ್' ಚಿತ್ರವು ದೀಪಾವಳಿ 2019 ಕ್ಕೆ ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿ ವಿಜಯ್​ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಇನ್ನು ಕಾಮಿಡಿ ಪಂಚ್​ಗೆ ಯೋಗಿ ಬಾಬು ಚಿತ್ರದಲ್ಲಿದ್ದು, ಮತ್ತೊಂದು ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ಜಾಕಿ ಶ್ರಾಫ್ ಬಣ್ಣ ಹಚ್ಚಿದ್ದಾರೆ. ಇನ್ನು ಈ ಚಿತ್ರಕ್ಕೆ ಎ.ಆರ್.ರೆಹಮಾನ್ ರಾಗ ಸಂಯೋಜಿಸಿದ್ದು, ಚಿತ್ರದ ಗೀತೆಗಳು ಈಗಾಗಲೇ ಸೂಪರ್ ಹಿಟ್ ಎನಿಸಿಕೊಂಡಿದೆ.ಇದನ್ನೂ ಓದಿ: ನಟ ಧ್ರುವ ಸರ್ಜಾರ ಹೃದಯ ಕದ್ದ ಚೋರಿ ಯಾರು ಗೊತ್ತೆ?
First published:September 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading