ರಿಷಬ್​​ ಶೆಟ್ಟಿ ಆ್ಯಕ್ಷನ್​ ಕಟ್​ ಹೇಳುತ್ತಿರುವ ‘ರುದ್ರ ಪ್ರಯಾಗ‘ ಸಿನಿಮಾದಲ್ಲಿ ಬಿಗ್​​ ಬಾಸ್​ ವಿನ್ನರ್​​ ಶೈನ್​ ಶೆಟ್ಟಿ!

Rudraprayag: ರಿಷಬ್​​ ಶೆಟ್ಟಿ ‘ರುದ್ರ ಪ್ರಯಾಗ‘ ಸಿನಿಮಾಕ್ಕಾಗಿ ಕೆಲವು ನಟರನ್ನು ಹುಡುಕಾಡುತ್ತಿದ್ದರು. ಇದೀಗ ಅಂತಿಮವಾಗಿ ಶೈನ್​ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ. ಶೂಟಿಂಗ್​​ ಆರಂಭವಾದ ನಂತರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.

news18-kannada
Updated:May 20, 2020, 5:20 PM IST
ರಿಷಬ್​​ ಶೆಟ್ಟಿ ಆ್ಯಕ್ಷನ್​ ಕಟ್​ ಹೇಳುತ್ತಿರುವ ‘ರುದ್ರ ಪ್ರಯಾಗ‘ ಸಿನಿಮಾದಲ್ಲಿ ಬಿಗ್​​ ಬಾಸ್​ ವಿನ್ನರ್​​ ಶೈನ್​ ಶೆಟ್ಟಿ!
ಶೈನ್​ ಶೆಟ್ಟಿ
  • Share this:
ನಟ ಹಾಗೂ ನಿರ್ದೇಶಕ ರಿಷಬ್​​ ಶೆಟ್ಟಿ ‘ರುದ್ರ ಪ್ರಯಾಗ‘ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಅನಂತ್​ ನಾಗ್​ ಕಾಣಿಸಿಕೊಳ್ಳಿದ್ದಾರೆ. ಇವರ ಜೊತೆಗೆ ಬಿಗ್​ ಬಾಸ್​​ ಸೀಸನ್​ 7 ವಿನ್ನರ್​ ಶೈನ್​ ಶೆಟ್ಟಿ ಕೂಡ ನಟಿಸುತ್ತಿದ್ದಾರೆ.

ಶೈನ್​ ಶೆಟ್ಟಿ ಅವರಿಗೆ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಬಿಗ್​ಬಾಸ್​ ಮನೆಯಲ್ಲಿ ಕೂಡ ಈ ವಿಚಾರವನ್ನು ಹೇಳಿಕೊಂಡಿದ್ದರು. ಆದರೀಗ 'ರುದ್ರ ಪ್ರಯಾಗ' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ಸಿನಿಮಾದ ಜಯಣ್ಣ ಫಿಲ್ಮ್ಸ್​ನಡಿ ನಿರ್ಮಾಣವಾಗುತ್ತಿದೆ.

ರಿಷಬ್​​ ಶೆಟ್ಟಿ ‘ರುದ್ರ ಪ್ರಯಾಗ‘ ಸಿನಿಮಾಕ್ಕಾಗಿ ಕೆಲವು ನಟರನ್ನು ಹುಡುಕಾಡುತ್ತಿದ್ದರು. ಇದೀಗ ಅಂತಿಮವಾಗಿ ಶೈನ್​ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ. ಶೂಟಿಂಗ್​​ ಆರಂಭವಾದ ನಂತರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.

‘ರುದ್ರ ಪ್ರಯಾಗ‘ ರಿಷಬ್​​ ಕೈಗೆತ್ತಿಕೊಂಡಿರುವ 4ನೇ ಪ್ರಾಜೆಕ್ಟ್​. ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದರು. ಇದರಲ್ಲಿ ಅನಂತ್​ ನಾಗ್​ ಅವರು ಅಭಿನಯಿಸಿದ್ದರು. ಇದೀಗ ‘ರುದ್ರ ಪ್ರಯಾಗ‘ ಸಿನಿಮಾದಲ್ಲಿ ಅನಂತ್​ ಅವರ ಜೊತೆಗೆ 2ನೇ ಪ್ರಾಜೆಕ್ಟ್​​ ಮಾಡುತ್ತಿದ್ದಾರೆ.

ಈಗಾಗಲೇ ‘ರುದ್ರ ಪ್ರಯಾಗ‘ ಸಿನಿಮಾದ ಶೂಟಿಂಗ್​ ಆರಂಭವಾಗಬೇಕಿತ್ತು. ಚಿತ್ರತಂಡ ನಿರ್ಧರಿಸಿದಂತೆ ಮಾರ್ಚ್​ ಮೊದಲ ವಾರದಲ್ಲಿ ಶೂಟಿಂಗ್​ ಮಾಡುವ ಯೋಜನೆ ಹಾಕಿಕೊಂಡಿದ್ದರು. ಆದರೀಗ ಲಾಕ್​​​ಡೌನ್​ನಿಂದಾಗಿ ಶೂಟಿಂಗ್ ​ಮುಂದೂಡಲಾಗಿದೆ.

ರಿಷಭ್​ ಶೆಟ್ಟಿ ಅವರೇ ‘ರುದ್ರ ಪ್ರಯಾಗ‘ ಸಿನಿಮಾಗೆ ಕಥೆ ಬರೆದಿದ್ದಾರೆ. ಶ್ರೀಪಾದ ಜೋಶಿ ಮತ್ತು ತ್ರಿಲೋಕ ತಿಮಿಕ್ರಮ ಸಂಭಾಷಣೆ ಬರೆದಿದ್ದಾರೆ. ಅಜನೀಶ್​ ಲೋಕನಾಥ್​ ಸಂಗೀತ ನೀಡಲಿದ್ದಾರೆ.

 ಉದ್ಯಮಿಯೊಬ್ಬರನ್ನು ವಿವಾಹವಾಗುತ್ತಿದ್ದಾರಾ ನಟಿ ವರಲಕ್ಮ್ಷೀ ಶರತ್​ ಕುಮಾರ್?
First published: May 20, 2020, 5:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading