Seema.RSeema.R
|
news18-kannada Updated:September 26, 2020, 7:43 PM IST
ಶೈನ್ ಶೆಟ್ಟಿ ಕೈ ಹಿಡಿದಿರುವ ಚಿತ್ರ
ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಬದುಕಿನಲ್ಲಿ ಹೊಸ ಅಧ್ಯಾಯ ಶುರುವಾಗುತ್ತಿದೆ. ಇತ್ತೀಚೆಗೆ ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುಳಿವು ನೀಡಿದ್ದರು. ಕಾಫಿ ಶಾಪ್ ಒಂದರಲ್ಲಿ ಹುಡುಗಿಯೊಬ್ಬಳ ಕೈ ಹಿಡಿದಿದ್ದ ವಿಡಿಯೋ ಅವರು ಮದುವೆಯಾಗಲಿರುವ ಹುಡುಗಿಯಾ ಎಂಬ ಅನುಮಾನ ಮೂಡಿಸಿತು. ಇದರ ಜೊತೆಗೆ ಕೇಳಿ ಬರುತ್ತಿದ್ದ' ಬಾನಲಿ ಬದಲಾಗುವ ಬಣ್ಣ ಹಾಡು' ಇದಕ್ಕೆ ಪುಷ್ಠಿ ನೀಡಿತ್ತು. ಇದರಿಂದ ಅವರು ತಮ್ಮ ಸಂಗಾತಿ ಕುರಿತು ಶೀಘ್ರದಲ್ಲಿಯೇ ಪ್ರಕಟಿಸುತ್ತಾರಾ ಎಂಬ ಪ್ರಶ್ನೆ ಕಾಡುವುದರ ಜೊತೆ ಕೈ ಹಿಡಿದಿರುವ ಚೆಲುವೆ ಯಾರು ಎಂಬ ಬಗ್ಗೆ ಅಭಿಮಾನಿಗಳಲ್ಲಿಯೂ ಸಾಕಷ್ಟು ಕುತೂಹಲ ಮೂಡಿತು. ಅಲ್ಲದೇ, ಮುಖ ತೋರಿಸದ ಚೆಲುವೆ ಯಾರು ಎಂಬ ಬಗ್ಗೆ ಕೂಡ ಊಹೆಗಳು ಮೂಡಿದ್ದವು. ಸದ್ಯ ಅದಕ್ಕೆಲ್ಲಾ ಈಗ ತೆರೆಬಿದ್ದಿದೆ. ಅವರ ಕೈ ಹಿಡಿದಿರುವ ಚೆಲುವೆ ಸಂಗೀತಾ ರಾಜೀವ್.
ಹೌದು ಇದು ಸ್ಪಷ್ಟವಾಗಲೂ ಕಾರಣ. ಸಂಗೀತಾ ರಾಜೀವನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರ. ಶೈನ್ ಶೆಟ್ಟಿ ಕೈ ಹಿಡಿದಿರುವ ಹುಡುಗಿ ತೊಟ್ಟಿರುವ ಆಭರಣ, ಸಂಗೀತಾ ಕೈಯಲ್ಲಿದೆ. ಅಲ್ಲದೇ ಕಾಫಿ ಶಾಪ್ ಕೂಡ ಅದೇ ಆಗಿರುವುದು. ಶೈನ್ ಕೈ ಹಿಡಿದಿರುವ ಆ ಹುಡುಗಿ ಸಂಗೀತಾ ಎಂಬುದು ಖಚಿತವಾಗಿದೆ.
ಸಂಗೀತಾ ರಾಜೀವ್ ಆಲಿಯಾಸ್ ಸಾರಾ ಎಂದು ಕರೆಯುವ ಇವರು ಬಹುಭಾಷಾ ಗಾಯಕಿ. ಪಾಪ್ ಹಾಡುಗಾರ್ತಿ ಕೂಡ. ಸರಿಗಮಪ 12, 13,14 ಮತ್ತು 15ರ ಸೀಸನ್ ನಲ್ಲಿ ತೀರ್ಪುಗಾರ್ತಿಯಾಗಿ ಕೂಡ ಇವರು ಭಾಗಿಯಾಗಿದ್ದರು. ಸಂಯೋಜಕಿಯಾಗಿಯು ಗುರುತಿಸಿಕೊಂಡಿರುವ ಸಂಗೀತಾ ಹಿಂದಿಯಲ್ಲಿ ಪಾಪ್ ಐಕಾನ್ ಆಗಿಯೂ ಮಿಂಚಿದ್ದಾರೆ. 2019ರ ದಿ ಬೆಸ್ಟ್ ಇಂಟರ್ನ್ಯಾಷನಲ್ ಪಾಪ್ ಸಾಂಗ್ ಆಫ್ ದ ಇಯರ್ ಹಾಗೂ ಜಾಗತಿಕ ವಿಮಾ ಮ್ಯೂಸಿಕ್ ಪ್ರಶಸ್ತಿ ಕೂಡ ಲಭಿಸಿದೆ.
ಈ ಬಗ್ಗೆ ಈಗಾಗಲೇ ರಿವೀಲ್ ಮಾಡಿರುವ ಸಂಗೀತಾ ನಾಳೆ ಮತ್ತೊಂದು ಸರ್ಪ್ರೈಸ್ ಇದೆ ಎಂದು ಹೇಳಿದ್ದು, ಏನದು ಎಂಬ ಕುತೂಹಲ ಮೂಡಿದೆ.
Published by:
Seema R
First published:
September 26, 2020, 7:43 PM IST