ಬಿಗ್ ಬಾಸ್ ವಿನ್ನರ್ ರೂಪೇಶ್ (Bigg Boss Roopesh Shetty Movie) ಶೆಟ್ಟಿ ಲಕ್ ಚೆನ್ನಾಗಿದೆ. ದೊಡ್ಡ ಮನೆಯಲ್ಲಿದ್ದಾಗಲೂ ಪ್ರೇಕ್ಷಕರ ದಿಲ್ ಕದ್ದ ರೂಪೇಶ್, ಈಗ ಬೆಳ್ಳಿ ತೆರೆ ಮೇಲೆ ಮಿಂಚೊಕೆ ರೆಡಿ ಆಗಿದ್ದಾರೆ. ದೊಡ್ಡ ಪರದೆಯ ಕ್ರೇಜ್ ಬೇರೇನೆ ಇರುತ್ತದೆ. ಹಾಗಾಗಿಯೇ (Roopesh Shetty New Movie) ಈ ಮೂಲಕ ರೂಪೇಶ್ ಕನ್ನಡಿಗರ ಪ್ರೀತಿ ಗೆಲ್ಲಲು ಸಿದ್ದಗೊಂಡಿದ್ದಾರೆ. ಹಾಗೇನೆ ರೂಪೇಶ್ (Roopesh Shetty Movie Release Soon) ಬರ್ತಿರೋ ಆ ಸಿನಿಮಾದ ಹೆಸರು ವಿಶೇಷವಾಗಿಯೆ ಇದೆ. ಅದರ ಬಗ್ಗೆ ಹೇಳೋಕೆ ಟ್ರೈಲರ್ (Roopesh Shetty Film Trailer Release Soon) ಅನ್ನ ಕೂಡ ಸಿನಿಮಾ ತಂಡ ರಿಲೀಸ್ ಮಾಡುತ್ತಿದೆ. ಆ ಸಿನಿಮಾದ ಇನ್ನಿತರ ಮಾಹಿತಿ ಇಲ್ಲಿದೆ ಓದಿ.
ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಸಿನಿಮಾ ರೆಡಿ!
ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ದೊಡ್ಮನೆಯಲ್ಲಿ ಹಂಗಾಮ ಮಾಡಿದ್ದಾರೆ. ತುಂಬಾ ಬುದ್ದಿವಂತಿಕೆಯಿಂದಲೇ ಆಟವನ್ನೂ ಆಡಿದ್ದಾರೆ. ತಮ್ಮದೇ ಶೈಲಿಯಲ್ಲಿಯೇ ಜನರ ಮನದಲ್ಲೂ ಇದ್ದಾರೆ.
ರೂಪೇಶ್ ಶೆಟ್ಟಿ ಬಿಗ್ ಮನೆಗೆ ಹೋಗುವ ಮೊದಲೇ ಒಂದು ಸಿನಿಮಾ ಮಾಡಿದ್ದರು. ಇದರ ಹೆಸರು ಮಜವಾಗಿಯೇ ಇದೆ. ಈ ಮೂಲಕ ಆಗಲೇ ದೊಡ್ಡ ಪರದೆಗೆ ರೂಪೇಶ್ ಶೆಟ್ಟಿ ಕಾಲಿಟ್ಟಿದ್ದರು. ಆದರೆ ಸಿನಿಮಾ ಮಾತ್ರ ರಿಲೀಸ್ ಆಗಿರಲಿಲ್ಲ ಅಷ್ಟೆ.
ರೂಪೇಶ್ ಶೆಟ್ಟಿ ಅಭಿನಯದ ಚಿತ್ರದ ಹೆಸರೇನು?
ರೂಪೇಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರೋ ಸಿನಿಮಾದ ಹೆಸರು ವಿಶೇಷವಾಗಿಯೇ ಇದೆ. ಮಂಕು ಭಾಯ್ ಫಾಕ್ಸಿ ರಾಣಿ ಅನ್ನೋದೇ ಈ ಚಿತ್ರದ ಶೀರ್ಷಿಕೆ ಆಗಿದೆ.
ಈ ಚಿತ್ರದಲ್ಲಿ ರೂಪೇಶ್ ರೂಪವೇ ವಿಭಿನ್ನವಾಗಿಯೇ ಇದೆ. ಇದರ ಬೆನ್ನಲ್ಲಿಯೇ ಈ ಚಿತ್ರದಲ್ಲಿ ಇನ್ನೂ ಒಬ್ಬ ವಿಶೇಷ ಕಲಾವಿದರೂ ಇದ್ದಾರೆ. ಅವರು ಬೇರೆ ಯಾರೋ ಅಲ್ಲ. ಕನ್ನಡದ ಕಿರುತೆರೆಯಲ್ಲಿ ವಿಶೇಷವಾಗಿಯೇ ಹೆಸರು ಮಾಡಿದ ಗೀತಾ ಭಾರತಿ ಭಟ್ ಇಲ್ಲಿ ರೂಪೇಶ್ಗೆ ಸಾಥ್ ಕೊಟ್ಟಿದ್ದಾರೆ.
ಇದೇ 13 ಕ್ಕೆ ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರ ರಿಲೀಸ್
ರೂಪೇಶ್ ಶೆಟ್ಟಿ ಅಭಿನಯದ ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರ ರೆಡಿ ಆಗಿದೆ. ರೂಪೇಶ್ ಶೆಟ್ಟಿ ಬಿಗ್ ಮನೆಗೆ ಹೋಗುವ ಮೊದಲೇ, ಸಿನಿಮಾ ಬಹುತೇಕ ಕೆಲಸ ಕೂಡ ಪೂರ್ಣಗೊಂಡಿದೆ. ಹಾಡುಗಳು ರಿಲೀಸ್ ಆಗಿ ಆಗಲೇ ಗಮನ ಸೆಳೆಯೋ ಪ್ರಯತ್ನವನ್ನೂ ಮಾಡಿವೆ.
ಇದನ್ನೂ ಓದಿ: Megastar Chiranjeevi: ಮೂರನೇ ಮದುವೆಗೆ ರೆಡಿಯಾದ್ರಾ ಚಿರಂಜೀವಿ ಪುತ್ರಿ ಶ್ರೀಜಾ?
ಚಿತ್ರ ತಂಡ ಈಗ ಸಿನಿಮಾ ಟ್ರೈಲರ್ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಈ ಮೂಲಕ ಸಿನಿಮಾ ರಿಲೀಸ್ ಡೇಟ್ ಅನ್ನೂ ಅನೌನ್ಸ್ ಮಾಡಲಿದೆ. ಇದೇ ತಿಂಗಳ 13 ರಂದು ಚಿತ್ರವನ್ನ ತೆರೆಗೆ ತರಬೇಕು ಅನ್ನುವ ಪ್ಲಾನ್ ಅನ್ನೇ ಸಿನಿಮಾ ತಂಡ ಹಾಕಿಕೊಂಡಿದೆ.
ಮಂಕು ಭಾಯ್ ಫ್ರಾಕ್ಸಿ ರಾಣಿ ಚಿತ್ರದ ಟ್ರೈಲರ್ ರಿಲೀಸ್
ಜನವರಿ-5 ರಂದು ಚಿತ್ರದ ಟ್ರೈಲರ್ ಅನ್ನ ಬೆಳಗ್ಗೆ 10.30ಕ್ಕೆ ರಿಲೀಸ್ ಮಾಡಲು ಸಿನಿಮಾ ಟೀಮ್ ಡಿಸೈಡ್ ಮಾಡಿದೆ. ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಮಾಡಲಾಗುತ್ತಿದೆ.
ಮಂಕು ಭಾಯ್ ಫ್ರಾಕ್ಸಿ ರಾಣಿ ಚಿತ್ರವನ್ನ ಗಗನ್ ಎಂ ಡೈರೆಕ್ಟ್ ಮಾಡಿದ್ದಾರೆ. ಶಮೀರ್ ಮುಡಿಪು ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ರೂಪೇಶ್ ಶೆಟ್ಟಿ ಮತ್ತು ಗೀತಾ ಭಾರತಿ ಭಟ್ ಅಭಿನಯದ ಈ ಚಿತ್ರದಲ್ಲಿ ಹಾಡುಗಳೂ ಚೆನ್ನಾಗಿರೋ ಹಾಗೆ ಕಾಣುತ್ತಿದೆ.
ಚಿತ್ರದ ಟ್ರೈಲರ್ ನಲ್ಲಿ ಏನಿರುತ್ತದೆ ಅನ್ನೋದೇ ಈಗೀನ ಕುತೂಹಲವಾಗಿದೆ. ಇನ್ನುಳಿದಂತೆ ಸಿನಿಮಾ ಹೇಗಿರುತ್ತದೆ ಅನ್ನೋದು ಸಹ ಈಗಲೇ ಮೂಡಿರೋ ಪ್ರಶ್ನೆ ಕೂಡ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ