ಬಿಗ್​ ಬಾಸ್​ ವಿನ್ನರ್​ ಶಶಿ ಕುಮಾರ್: ಜನರ ಹೃದಯ ಗೆದ್ದಿರುವುದು ನವೀನ್ ಸಜ್ಜು!

ಬಿಗ್​ ಬಾಸ್ ಮೊದಲ ಆವೃತ್ತಿಯಲ್ಲಿ ಅತೀ ಹೆಚ್ಚು ಮನರಂಜನೆ ನೀಡಿದ ಅರುಣ್ ಸಾಗರ್​ ಬದಲಾಗಿ ವಿಜಯ ರಾಘವೇಂದ್ರರನ್ನು ಆರಿಸಿದ್ದೀರಿ. ಎರಡನೇ ಸೀಸನ್​ನಲ್ಲೂ ಮಾತಿನ ಮೋಡಿಗಾರ ಸೃಜನ್ ಲೊಕೇಶ್​ಗೆ ರನ್ನರ್​ ಅಪ್​ ನೀಡಿ ಅಕುಲ್ ಬಾಲಾಜಿ ಅವರನ್ನು ಗೆಲ್ಲಿಸಿದ್ದೀರಿ.

zahir | news18
Updated:January 27, 2019, 10:19 PM IST
ಬಿಗ್​ ಬಾಸ್​ ವಿನ್ನರ್​ ಶಶಿ ಕುಮಾರ್: ಜನರ ಹೃದಯ ಗೆದ್ದಿರುವುದು ನವೀನ್ ಸಜ್ಜು!
ನವೀನ್ ಸಜ್ಜು
  • News18
  • Last Updated: January 27, 2019, 10:19 PM IST
  • Share this:
ಕನ್ನಡದ ಬಿಗ್​ ಬಾಸ್​ ರಿಯಾಲಿಟಿ ಶೋಗೆ ಭಾನುವಾರ ತೆರೆ ಬಿದ್ದಿದೆ. ಬೆಂಗಳೂರಿನ ಬಿಡದಿ ಬಳಿಯ ಇನ್ನೊವೇಟೀವ್‌ ಫಿಲಂ ಸಿಟಿಯಲ್ಲಿ ನಡೆದ ಗ್ರ್ಯಾಂಡ್‌ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಮಾಡರ್ನ್​ ರೈತ ಶಶಿಕುಮಾರ್ ಅವರನ್ನು​ ವಿನ್ನರ್​ ಎಂದು ಘೋಷಿಸಿದ್ದಾರೆ. ಈ ಮೂಲಕ ನೇರ ಸ್ಪರ್ಧೆಯಂತಿದ್ದ ಫಿನಾಲೆಯಲ್ಲಿ ನವೀನ್ ಸಜ್ಜು ರನ್ನರ್​ ಆಗಿ ಹೊರಹೊಮ್ಮಿದರು.

ಫಿನಾಲೆಯಲ್ಲಿ ಕವಿತಾ ಗೌಡ, ಶಶಿಕುಮಾರ್​ ಮತ್ತು ನವೀನ್​ ಸಜ್ಜು ನಡುವೆ ತ್ರಿಕೋನ ಸ್ಪರ್ಧೆ ಇದ್ದರೂ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ನವೀನ್ ಹಾಗೂ ಶಶಿ ಇವರಿಬ್ಬರಲ್ಲಿ ಯಾರಾಗಲಿದ್ದಾರೆ ಬಿಗ್​ ಬಾಸ್ ಕುತೂಹಲಕಾರಿ ಪ್ರಶ್ನೆಗಳು ಹರಿದಾಡಿದ್ದವು. ಅದರಂತೆ ಫಿನಾಲೆಯಲ್ಲೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ರೊಂದಿಗೆ ಎಡ-ಬಲದಲ್ಲಿ ಇವರಿಬ್ಬರೇ ಕಾಣಿಸಿಕೊಂಡಿದ್ದರು. ಆದರೆ ಈಗ ವಿನ್ನರ್ ಘೋಷಣೆ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಾದ ಪ್ರತಿವಾದಗಳು ಹುಟ್ಟಿಕೊಂಡಿದೆ.

ಈ ನಡುವೆ ಸೋಷಿಯಲ್ ಮೀಡಿಯಾ ಪ್ರತಿಕ್ರಿಯೆಯಲ್ಲಿ ನವೀನ್​ ಸಜ್ಜು ಪರ ವ್ಯಾಪಕ ಬೆಂಬಲವು ವ್ಯಕ್ತವಾಗಿದ್ದವು. ತನ್ನ ಗಾಯನ ಮತ್ತು ನಡತೆಯ ಮೂಲಕ ಪ್ರೇಕ್ಷಕರ ಮಾತ್ರವಲ್ಲದೆ, ಮನೆಯೊಳಗಿನ ಪ್ರತಿಸ್ಫರ್ಧಿಗಳ ಮನಸ್ಸು ಗೆಲ್ಲುವಲ್ಲಿ ನವೀನ್ ಯಶಸ್ವಿಯಾಗಿದ್ದರು.

ಮನೆಯಿಂದ ಹೊರ ಬಿದ್ದ ಸ್ಪರ್ಧಿಗಳು ಕೂಡ ನವೀನ್​ ಪರವಾಗಿ ಮತಯಾಚಿಸಿರುವುದು ಇದಕ್ಕೆ ಸಾಕ್ಷಿ. ಅಷ್ಟೇ ಅಲ್ಲದೆ ಸಿನಿರಂಗದ ಹುಡುಗನಾಗಿದ್ದರಿಂದ ನಿರ್ದೇಶಕ ನಂದ ಕಿಶೋರ್​ , ನಟ ನೀನಾಸಂ ಸತೀಶ್, ನಟಿ ನಯನಾ​ ಸೇರಿದಂತೆ ಹಲವರು ನವೀನ್​ಗೆ ವೋಟ್​ ಮಾಡುವಂತೆ ಕೇಳಿಕೊಂಡಿದ್ದರು. ಈ ವಿಡಿಯೋಗಳು ವೈರಲ್​ ಆಗಿದ್ದರಿಂದ ಈ ಬಾರಿಯ ಬಿಗ್​ ಬಾಸ್​ ಕಿರೀಟ ಯುವ ಗಾಯಕನಿಗೆ ಎನ್ನಲಾಗಿತ್ತು.

ಬಿಗ್​ ಬಾಸ್​ ಮನೆಯಲ್ಲಿ ​ಎಲ್ಲರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿದ್ದ, ನಡೆ ನುಡಿಗಳಿಂದ ಗಮನ ಸೆಳೆದಿದ್ದ ನವೀನ್​ ರನ್ನು ರನ್ನರ್​ ಆಗಿ ಆಯ್ಕೆ ಮಾಡಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಈ ಹಿಂದೆ ಕೂಡ ಬಿಗ್​ ಬಾಸ್ ಇದೇ ರೀತಿಯ ತೀರ್ಪು ನೀಡಿತ್ತು ಎಂದು ಕೆಲವರು ಆರೋಪಿಸುತ್ತಿದ್ದಾರೆ.
ಶಶಿ ಕುಮಾರ್​ಗಿಂತಲೂ ಪ್ರತಿಯೊಂದು ಟಾಸ್ಕ್​ನಲ್ಲೂ ನವೀನ್ ಶ್ರೇಷ್ಠ ಪ್ರದರ್ಶನ ನೀಡಿದ್ದರು ಎಂದು ಕೆಲವರು ವಾದಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅದ್ಭುತ ಗಾಯನದ ಮೂಲಕ ಜನರ ಮನರಂಜಿಸಿದ ಸ್ಪರ್ಧಿಗಳಲ್ಲಿ ನವೀನ್ ಮೊದಲಿಗರು. ಅವರೇಗೆ ರನ್ನರ್​ ಅಪ್ ಆಗಿದ್ದಾರೆ ಎಂಬ ಪ್ರಶ್ನೆಗಳು ಬಿಗ್​ ಬಾಸ್ ವಿರುದ್ಧ ಎದ್ದಿದೆ.


ಬಿಗ್​ ಬಾಸ್ ಮೊದಲ ಆವೃತ್ತಿಯಲ್ಲಿ ಅತೀ ಹೆಚ್ಚು ಮನರಂಜನೆ ನೀಡಿದ ಅರುಣ್ ಸಾಗರ್​ ಬದಲಾಗಿ ವಿಜಯ ರಾಘವೇಂದ್ರರನ್ನು ಆರಿಸಿದ್ದೀರಿ. ಎರಡನೇ ಸೀಸನ್​ನಲ್ಲೂ ಮಾತಿನ ಮೋಡಿಗಾರ ಸೃಜನ್ ಲೊಕೇಶ್​ಗೆ ರನ್ನರ್​ ಅಪ್​ ನೀಡಿ ಅಕುಲ್ ಬಾಲಾಜಿ ಅವರನ್ನು ಗೆಲ್ಲಿಸಿದ್ದೀರಿ. ಈ ಸಾಲಿಗೆ ಇದೀಗ ನವೀನ್​ ರನ್ನು ಸೇರಿಸಿದ್ದೀರಾ ಎಂದು ಕೆಲ ಅಭಿಮಾನಿಗಳು ನೋವನ್ನು ತೋಡಿಕೊಳ್ಳುತ್ತಿದ್ದಾರೆ.

​ಆರಂಭದಿಂದಲೇ ನವೀನ್ ಸಜ್ಜು ಎಲ್ಲರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ ಈ ಹಿಂದೆ ಬಿಗ್​ ಬಾಸ್​ ಗೆದ್ದರೆ ಏನು ಮಾಡುವಿರಾ ಎಂಬ ಪ್ರಶ್ನೆಗೆ ಹಳ್ಳಿಯೊಂದನ್ನು ದತ್ತು ತೆಗೆದುಕೊಳ್ಳುವುದಾಗಿ ತಿಳಿಸಿ ಸಾಮಾಜಿಕ ಕಳಕಳಿ ತೋರಿಸಿದ್ದಾರೆ. ಇಂತಹ ಸ್ಫರ್ಧಿಯನ್ನು ಬಿಗ್​ ಬಾಸ್​ ಬೇಕಂತಲೇ ಸೋಲಿಸಿದ್ದಾರೆ ಎಂದು ಕೆಲವರು ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದಾರೆ.

ಶಶಿ ಕುಮಾರ್​ ಮನೆಯೊಳಗೆ ರೈತರ ಪರವಾಗಿ ಯಾವುದೇ ಹೇಳಿಕೆಗಳನ್ನು ಕೂಡ ನೀಡಿಲ್ಲ. ಆದರೂ ರೈತ ಹೆಸರಿನಲ್ಲಿ ಗೆದ್ದಿದ್ದಾರೆ. ವಿನ್ನರ್​ ಆದ್ರೆ ಹಳ್ಳಿಯನ್ನು ದತ್ತು ತೆಗೆದುಕೊಳ್ಳುವುದಾಗಿ ತಿಳಿಸಿದ ನವೀನ್​ ಸೋತಿದ್ದಾರೆ. ಇಲ್ಲಿ ಒಳ್ಳೆತನಕ್ಕೆ ಒಳ್ಳೆ ಮನುಷ್ಯರಿಗೆ ಕಾಲವಿಲ್ಲ. ಜನ ಬೆಂಬಲ ಇದ್ದರೂ, ಬಿಗ್ ಬಾಸ್​ ಸೋತ ನವೀನ್​ ಸಜ್ಜು. ನೀವು ಕೋಟಿ ಜನರ ಹೃದಯ ಗೆದ್ದಿದ್ದೀರಿ ಬಿಡಿ, ಅದುವೇ ಶಾಶ್ವತ ಎಂಬ ಅಭಿಮಾನಿಗಳ ನೋವಿನ ಪೋಸ್ಟರ್​ಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
First published:January 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ