• Home
  • »
  • News
  • »
  • entertainment
  • »
  • Vaishnavi Gowda: ವಿಚಿತ್ರ ರೋಗದಿಂದ ಬಳಲುತ್ತಿದ್ದಾರಂತೆ ವೈಷ್ಣವಿ ಗೌಡ.. ಎಲ್ಲದಕ್ಕೂ ಕಾರಣ `ಬಹುಕೃತ ವೇಷಂ’ ಎಂದ ನಟಿ!

Vaishnavi Gowda: ವಿಚಿತ್ರ ರೋಗದಿಂದ ಬಳಲುತ್ತಿದ್ದಾರಂತೆ ವೈಷ್ಣವಿ ಗೌಡ.. ಎಲ್ಲದಕ್ಕೂ ಕಾರಣ `ಬಹುಕೃತ ವೇಷಂ’ ಎಂದ ನಟಿ!

ವೈಷ್ಣವಿ ಗೌಡ, ಶಶಿಕಾಂತ್​

ವೈಷ್ಣವಿ ಗೌಡ, ಶಶಿಕಾಂತ್​

ವೈಷ್ಣವಿ ಗೌಡ ಮತ್ತೆ ಬಣ್ಣ ಗಾಂಧಿನಗರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹೌದು, ವೈಷ್ಣವಿ ‘ಬಹುಕೃತ ವೇಷಂ’ ಅನ್ನುವ ಚಿತ್ರದ ಮೂಲಕ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ವಿಶೇಷ ಅಂದರೆ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು ರಿಲೀಸ್​ಗೆ ರೆಡಿಯಾಗಿದೆ.

  • Share this:

ಅಗ್ನಿಸಾಕ್ಷಿ ಹುಡಗಿ ವೈಷ್ಣವಿ ಗೌಡ(Vaishnavi Gowda) ಬಿಗ್ ಬಾಸ್(Bigg Boss) ಹೋಗಿ ಬಂದ್ಮೇಲೆ ಎಲ್ಲೋದ್ರು ಅನ್ನೊ ಪ್ರಶ್ನೆ ಅವರ ಅಭಿಮಾನಿ ಗಳಲ್ಲಿತ್ತು. ಸಿನಿಮಾ ಮಾಡ್ತಾರ ಇಲ್ಲ ಮದ್ವೆ ಆಗಿ ಸೆಟಲ್ ಆಗ್ತಾರ ಅನ್ನೋ ಕನ್ಪೂಸ್ ಕೂಡ ಕಾಡಿತ್ತು. ಆದರೆ, ಈಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ವೈಷ್ಣವಿ ಗೌಡ ಮತ್ತೆ ಬಣ್ಣ ಗಾಂಧಿನಗರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹೌದು, ವೈಷ್ಣವಿ ‘ಬಹುಕೃತ ವೇಷಂ’(Bahukrita Vesham) ಅನ್ನುವ ಚಿತ್ರದ ಮೂಲಕ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ವಿಶೇಷ ಅಂದರೆ ಈ ಚಿತ್ರದ ಶೂಟಿಂಗ್ ಕಂಪ್ಲೀಟ್(Shooting Complete) ಆಗಿದ್ದು ರಿಲೀಸ್​ಗೆ ರೆಡಿಯಾಗಿದೆ. ‘ಬಹುಕೃತ ವೇಷಂ’ ಸೈಕಲಾಜಿಕಲ್ ಥ್ರಿಲ್ಲರ್(Psychological Thriller)  ಕಥಾಹಂದರ  ಚಿತ್ರವಾಗಿದ್ದು, ‘ಗೌಡ್ರುಸೈಕಲ್’ ನಾಯಕ  ಶಶಿಕಾಂತ್  ನಾಯಕನಾಗಿ ಕಾಣಿಸಿದರೆ, ವೈಷ್ಣವಿ ನಾಯಕಿಯಾಗಿ ಕಂಗೊಳಿಸಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ಕೆ. ಎಳ್ಳಂಪಳ್ಳಿ  ನಿರ್ದೇಶನ ಮಾಡಿದ್ದಾರೆ. ಇನ್ನು ಈ ಚಿತ್ರದ ಕಥೆ ಢಿಫರೆಂಟ್ ಆಗಿದ್ದು, ಡಿಲೇರಿಯಂ ಫೋಬಿಯಾ ಎನ್ನುವ ಖಾಯಿಲೆ ಮೇಲೆ ಮಾಡಿರುವ ಚಿತ್ರವಾಗಿದೆ. 


ಬಹುಕೃತ ವೇಷದ ಮೂಲಕ ಮತ್ತೆ ಕಮ್​ಬ್ಯಾಕ್!


ವೈಷ್ಣವಿ ಗೌಡ ಸಾಕಷ್ಟು ಅಳೆದು ತೂಗಿ ಈ ಚಿತ್ರವನ್ನು ಕಮಿಟ್ ಆಗಿದ್ದಾರೆ. ಚಿತ್ರದಲ್ಲಿ ನಟನೆಗೆ ಸಾಕಷ್ಟು ಸ್ಪೇಸ್ ಇದ್ದ ಕಾರಣ  ವೈಷ್ಣವಿಗೌಡ ‘ಬಹುಕೃತ ವೇಷಂ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಚಿತ್ರದಲ್ಲಿ  ವೈಷ್ಣವಿ ಗೌಡ ನಾಲ್ಕುವರೆ ನಿಮಿಷಗಳು ಇರುವ ಒಂದು ಸೀನ್ ಅನ್ನು ಒ‌ಂದೇ ಶಾಟ್​ನಲ್ಲಿ ಅಭಿನಯ ಮಾಡಿದ್ದಾರೆ. ನಗು ಅಳು ಎರಡು ಸನ್ನಿವೇಶವನ್ನು ಒಂದೇ ಸೀನ್​ನಲ್ಲಿ ತುಂಬಾ ಅಚ್ಚುಕಟ್ಟಾಗಿ ವೈಷ್ಣವಿ ಅಭಿನಯಿಸಿ ದ್ದಾರೆ. ಹೈಲೆಟ್ ಅಂದರೆ ಈ ಸೀನ್​​ನಲ್ಲಿ ವೈಷ್ಣವಿ ಅವರಿಗೆ ಅವರೇ ಟಾರ್ಗೆಟ್ ಅನ್ನೋ ರೀತಿ ತುಂಬಾ ಅದ್ದುತವಾಗಿ ಚಾಲೆಂಜಿಗ್ ಆಗಿದ್ದ ಈ ಸನ್ನೀವೇಶದಲ್ಲಿ ನಟಿಸಿದ್ದಾರೆ ಎಂದು ಚಿತ್ರದ ನಾಯಕ  ಶಶಿಕಾಂತ್ ವೈಷ್ಣವಿ ಪಾತ್ರದ ಬಗ್ಗೆ ಹಾಗೂ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಮತ್ತೆ ಬರ್ತಿದ್ದಾರೆ ಪ್ರಭುದೇವ.. ಯಾವ್ ಸಿನಿಮಾ? ಏನ್​ ಕಥೆ? ಇಲ್ಲಿದೆ ನೋಡಿ ಡೀಟೆಲ್ಸ್​


ಎರಡು ಶೇಡ್​ನಲ್ಲಿ ಕಾಣಿಸಿಕೊಂಡ ನಾಯಕ ಶಶಿಕಾಂತ್​!


ಇನ್ನು ಚಿತ್ರದ ನಾಯಕನ ಪಾತ್ರವು ಎರಡು ಶೇಡ್ ನಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುವ ಸನ್ನೀವೇಶ ಚಿತ್ರದಲ್ಲಿದೆ ಎಂಬುದು ಚಿತ್ರ ತಂಡದ ಮಾತು. ಇದಲ್ಲದೆ ‘ಬಹುಕೃತ ವೇಷಂ‘ ಚಿತ್ರ ನೈಜ ಘಟನೆಯಾದರಿತ ಚಿತ್ರ ವಾಗಿದೆ. ಚಿತ್ರಕ್ಕೆ ಕತೆ ಬರೆದಿರುವ  ತೇಜ್ ಸ್ನೇಹಿತನಿಗೆ ಈ ಥರದ ಖಾಯಿಲೆ ಇದ್ದು, ಪ್ರತಿದಿನ ಅವನ ಮೇಲೆ ಅವನೇ ಫೈಟ್ ಮಾಡುತ್ತಿರುತ್ತಾನೆ. ಇದನ್ನ ಸೂಕ್ಷವಾಗಿ ಗಮನಿಸಿ ತೇಜ್ ಚಿತ್ರದ ಕತೆ ರೆಡಿ ಮಾಡಿದ್ದಾರೆ. ಸದ್ಯ ಚಿತ್ರದ ಎಲ್ಲಾ ಕೆಲಸ ಮುಗಿಸಿರುವ  ಚಿತ್ರತಂಡ ಸೆನ್ಸಾರ್ ಬೋರ್ಡ್​ನಿಂದ ಗ್ರೀನ್ ಸಿಗ್ನಲ್ ಪಡೆದು  ಇದೇ ತಿಂಗಳ 18ಕ್ಕೆ  ಚಿತ್ರವನ್ನು ರಿಲೀಸ್ ಮಾಡಲು ಸಿದ್ಧವಾಗಿದೆ.


ಇದನ್ನೂ ಓದಿ:  ದಶಕದ ನಂತರ ತೆರೆಮೇಲೆ ರಾಮ್ ಕುಮಾರ್- ಶೃತಿ ಜೋಡಿ, ಕಿರುತೆರೆಯ ಹೊಸ ಸೀರಿಯಲ್​ನಲ್ಲಿ ಮಸ್ತ್ ಎಂಟ್ರಿ!


ಒಳ್ಳೆ ಕಂಟೆಂಟ್ ಸಿನಿಮಾವನ್ನು ಕನ್ನಡಿಗರು ಯಾವತ್ತು ಕೈ ಬಿಟ್ಟಿಲ್ಲ. ಅದೇ ರೀತಿ ಈ ಚಿತ್ರವನ್ನು ಖಂಡಿಯವಾಗಿ ಸ್ವೀಕರಿಸುತ್ತಾರೆ. ಯಾಕೆಂದರೆ ನಮ್ಮ ಚಿತ್ರದ ಕತೆಯೇ ನಾಯಕನಾಗಿದ್ದು ಖಂಡಿತ ನಮ್ಮ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಅನ್ನೋ ಭರವಸೆಯಲ್ಲಿದೆ ಚಿತ್ರತಂಡ. ಒಟ್ಟಿನಲ್ಲಿ ಬಿಗ್​ಬಾಸ್​ ಬಳಿಕ ಕಣ್ಮರೆಯಾಗಿದ್ದ, ವೈಷ್ಣವಿ ಗೌಡ ಈ ಸಿನಿಮಾ ಮೂಲಕ ಬೆಳ್ಳೆ ತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ.


(ವರದಿ- ಸತೀಶ್​ ಎಂ.ಬಿ)

Published by:Vasudeva M
First published: