HOME » NEWS » Entertainment » BIGG BOSS TELUGU 4 KICCHA SUDEEP SHARES THE STAGE WITH NAGARJUNA AS A GUEST HG

Bigg Boss: ಬಿಗ್​​ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಪ್ರತ್ಯಕ್ಷ: ಸ್ಪರ್ಧಿಗಳು ಶಾಕ್!

Kiccha Sudeep: ತೆಲುಗು ಖ್ಯಾತ ನಟ ಅಕ್ಕಿನೇನಿ ನಾಗರ್ಜುನ ಅವರು ತೆಲುಗು ಬಿಗ್​ಬಾಸ್​  ಸೀಸನ್​ 4 ನಿರೂಪಕರಾಗಿದ್ದಾರೆ. ಇಂದಿನ (ರವಿವಾರದ) ಕಾರ್ಯಕ್ರಮಕ್ಕಾಗಿ ಕನ್ನಡದ ಕಿಚ್ಚ ಸುದೀಪ್​ ಅವರನ್ನು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

news18-kannada
Updated:November 30, 2020, 8:15 AM IST
Bigg Boss: ಬಿಗ್​​ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಪ್ರತ್ಯಕ್ಷ: ಸ್ಪರ್ಧಿಗಳು ಶಾಕ್!
ಕಿಚ್ಚ ಸುದೀಪ್​
  • Share this:
ಕನ್ನಡ ಬಿಗ್​ಬಾಸ್​​ ಸೀಸನ್​ 8 ಪ್ರಾರಂಭಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಇತ್ತೀಚೆಗೆ ಕಲರ್ಸ್​ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್ ಕಿಚ್ಚ ಸುದೀಪ್​ ಜೊತೆಗೆ ಮಾತನಾಡುವ ಫೋಟೋವನ್ನು ಹಂಚಿಕೊಂಡಿದ್ದರು. ಈ ವೇಳೆ ಬಿಗ್​ಬಾಸ್​ ಮುಂದಿನ ಸೀಸನ್​ಗಾಗಿ ಸಿದ್ಧತೆ ನಡೆಯುತ್ತಿದೆ ಎನ್ನುವ ಮೂಲಕ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದರು. ಆದರೀಗ ಕಿಚ್ಚ ಬಿಗ್​ಬಾಸ್​ ವೇದಿಕೆಯ ಮೇಳೆ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಈ ವಿಡಿಯೋ ಸಾಕ್ಷಿ!.ಹೌದು. ಇದ್ದಕ್ಕಿಂದ್ದತೆಯೇ ಕಿಚ್ಚ ಬಿಗ್​ಬಾಸ್​ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಇವರನ್ನು ಕಂಡ ಅಭಿಮಾನಿಗಳು ಶಾಕ್​​ ಆಗಿದ್ದಾರೆ. ಅಂದಹಾಗೆಯೇ ಕಿಚ್ಚ ಸುದೀಪ್​ ಕನ್ನಡದ ಬಿಗ್​ಬಾಸ್​ ವೇದಿಕೆ ಮೇಲೆ ಕಾಣಿಸಿಕೊಂಡಿದಲ್ಲ. ಬದಲಾಗಿ ತೆಲುಗು ಬಿಗ್​ಬಾಸ್​ 4 ವೇದಿಕೆಯಲ್ಲಿ ಅತಿಥಿಯಾಗಿ ಪ್ರತ್ಯಕ್ಷರಾಗಿದ್ದಾರೆ. ಸ್ಪರ್ಧಿಗಳು ವೇದಿಕೆಯ ಮೇಲೆ ಕಿಚ್ಚನನ್ನು ಕಂಡು ಅಚ್ಚರಿಗೊಂಡಿದ್ದಾರೆ.
ತೆಲುಗು ಖ್ಯಾತ ನಟ ಅಕ್ಕಿನೇನಿ ನಾಗರ್ಜುನ ಅವರು ತೆಲುಗು ಬಿಗ್​ಬಾಸ್​  ಸೀಸನ್​ 4 ನಿರೂಪಕರಾಗಿದ್ದಾರೆ. ಇಂದಿನ (ರವಿವಾರದ) ಕಾರ್ಯಕ್ರಮಕ್ಕಾಗಿ ಕನ್ನಡದ ಕಿಚ್ಚ ಸುದೀಪ್​ ಅವರನ್ನು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ವೇದಿಕೆಯ ಮೇಲೆ ಕಿಚ್ಚ ಮತ್ತು ನಾಗರ್ಜುನ ಅವರ ಮಾತು, ತಮಾಷೆಯ ವಿಡಿಯೋವನ್ನು ಸ್ಟಾರ್​ ಮಾ ಚಾನೆಲ್​ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದೆ.
Published by: Harshith AS
First published: November 29, 2020, 6:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading