• Home
 • »
 • News
 • »
 • entertainment
 • »
 • Actress Mayuri: ಬಿಗ್ ಬಾಸ್‍ನಿಂದ ಆಚೆ ಬಂದ ಮಯೂರಿ ಪರಪಂಚವೇ ನೀನು ಅಂದ್ರು!

Actress Mayuri: ಬಿಗ್ ಬಾಸ್‍ನಿಂದ ಆಚೆ ಬಂದ ಮಯೂರಿ ಪರಪಂಚವೇ ನೀನು ಅಂದ್ರು!

ಮಯೂರಿ

ಮಯೂರಿ

ಬಿಗ್ ಬಾಸ್ ಮನೆಯಿಂದ ಮನೆಗೆ ಹೋದ ಮಯೂರಿ ಮಗನನ್ನು ಮುದ್ದಾಡಿದ್ದಾರೆ. ಪರಪಂಚ ನೀನೇ ನನ್ನ ಪರಪಂಚ ನೀನೇ ಎಂಬ ಹಾಡಿಗೆ ರೀಲ್ಸ್ ಹಾಕಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಈಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀಸನ್ 09  (Bigg Boss Season 09) ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಈಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದಾರೆ. ಅಲ್ಲದೇ ಈ ಬಾರಿ 9 ವಿಶೇಷವಾಗಿದೆ. ಯಾಕಂದ್ರೆ 9 ಜನ ಹೆಣ್ಣು ಮಕ್ಕಳು, 9 ಜನಪುರುಷರು ಬಂದಿದ್ದಾರೆ. ಆದ್ರೆ ಈಗಾಗಲೇ ನಾಲ್ಕು ಜನ ನವೀನರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಐಶ್ವರ್ಯ ಪಿಸೆ, ನವಾಜ್, ದರ್ಶ್ ಚಂದ್ರಪ್ಪ ನಂತರ ಮಯೂರಿ (Mayuri) ಮನೆಯಿಂದ ಹೊರ ನಡೆದಿದ್ದಾರೆ.


  ಮಯೂರಿ ಬಿಗ್ ಬಾಸ್‍ನಿಂದ ಔಟ್
  ನಟಿ ಮಯೂರಿ ಅವರು ಮೊದಲನೇ ವಾರದಿಂದ ನಾಮಿನೇಟ್ ಆಗ್ತಾ ಬಂದಿದ್ದರು. ಮೂರು ವಾರಗಳ ಕಾಲ ಜನ ಅವರನ್ನು ಸೇವ್ ಮಾಡಿದ್ರು. ಈ ವಾರ ಮನೆಯಿಂದ ಹೊರ ಹೋಗಿದ್ದಾರೆ. ಬಿಗ್ ಬಾಸ್ ಸೀಸನ್ 09ರಲ್ಲಿ ಕಿಚ್ಚ ಸುದೀಪ್ ಇಲ್ಲದೇ ನಡೆದಿರುವ ಮೊದಲ ಎಲಿಮಿನೇಷನ್ ಇದು.


  ಬೈಕರ್ ಮೂಲಕ ಹೊರ ನಡೆದ ಮಯೂರಿ
  ಕಿಚ್ಚ ಸುದೀಪ್ ಇಲ್ಲದೇ ನಡೆದಿರುವ ಮೊದಲ ಎಲಿಮಿನೇಷನ್ ಇದು. ಬೇರೆ ಬೇರೆ ರೀತಿಯ ಟಾಸ್ಕ್​ಗಳನ್ನು ನೀಡುವ ಮೂಲಕ ಒಬ್ಬಬ್ಬ ಅಭ್ಯರ್ಥಿಯನ್ನು ಸೇವ್ ಮಾಡುತ್ತಾ ಹೋದ್ರು. ಕೊನೆಯದಾಗಿ ನೇಹ ಗೌಡ ಮತ್ತು ಮಯೂರಿ ಉಳಿದುಕೊಂಡಿದ್ರು. ಆಗ ಮನೆಗೆ ಇಬ್ಬರು ಬೈಕರ್‍ಗಳು ಬರುತ್ತಾರೆ. ಇಬ್ಬರು ಬೈಕ್ ಮೇಲೆ ಕೂರುತ್ತಾರೆ. ಬೈಕರ್​ಗಳ ಜೊತೆ ಸವಾರಿ ಮಾಡುವ ಮೂಲಕ ಮಯೂರಿ ಕ್ಯಾತರಿ ಮನೆಯಿಂದ ಹೊರ ನಡೆದಿದ್ದಾರೆ.


  ಇದನ್ನೂ ಓದಿ: Jothe jotheyali: ಆರ್ಯನಿಲ್ಲದೇ ಝೇಂಡೆಗೆ ಮರ್ಯಾದೆ ಇಲ್ವಾ? ಜೊತೆ ಜೊತೆಯಲಿ ಸೀರಿಯಲ್ ಟೈಮೇ ಚೇಂಜಾಯ್ತು! 


  ಮಯೂರಿ ಹೇಳಿದ್ದೇನು?
  ತುಂಬಾ ಖುಷಿಯಾಗುತ್ತಿದೆ. ಒಂದು ತಿಂಗಳ ನೆನಪುಗಳು ಈ ಮನೆಯಲ್ಲಿ ಹೆಚ್ಚಿದೆ. ಇಲ್ಲಿ ಇರ್ಬೇಕು ಅಂತ ಎಷ್ಟು ಆಸೆ ಆಗುತ್ತಿದೆ. ಅದಕ್ಕಿಂತ ನೂರು ಪಟ್ಟು ಜಾಸ್ತಿ ನನ್ನ ಮಗನನ್ನು ನೋಡಬೇಕು ಅಂತ ಆಸೆ ಆಗುತ್ತಿದೆ ಎಂದಿದ್ದರು. ಮಯೂರಿ ಅವರು ಅಶ್ವಿನಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದರು. ಇಷ್ಟಕಾಮ್ಯ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.


  Bigg Boss season contestant Mayuri eliminate she meet her son and happy see here
  ಮಯೂರಿ


  ಮಗನನ್ನು ಮುದ್ದಾಡಿದ ಮಯೂರಿ
  ಬಿಗ್ ಬಾಸ್ ಮನೆಯಿಂದ ಮನೆಗೆ ಹೋದ ಮಯೂರಿ ಮಗನನ್ನು ಮುದ್ದಾಡಿದ್ದಾರೆ. ಒಂದೂವರೆ ವರ್ಷದ ಮಗುವನ್ನು ಬಿಟ್ಟು ಬಿಗ್ ಬಾಸ್​ಗೆ ಬಂದಿದ್ದರು. ಈಗ ಮಗನನ್ನು ನೋಡಿ ತುಂಬಾ ಖುಷಿ ಆಗಿದ್ದಾರೆ. ಪರಪಂಚ ನೀನೇ ನನ್ನ ಪರಪಂಚ ನೀನೇ ಎಂಬ ಹಾಡಿಗೆ ರೀಲ್ಸ್ ಹಾಕಿದ್ದಾರೆ.


  https://www.instagram.com/p/CkGV7snBZtO/?hl=en


  ಇದನ್ನೂ ಓದಿ: Deepavali Celebration: ವಾಸುಕಿ ವೈಭವ್ ಮತ್ತು ಚಂದನಾ ಅವರ ಸಂಭ್ರಮದ ದೀಪಾವಳಿ ನೋಡಿ 


  ಮಯೂರಿ ಅವರು ಬಿಗ್ ಬಾಸ್ ಮನೆಗೆ ಬಂದ ಮೇಲೆ ಅಷ್ಟೊಂದು ಚೆನ್ನಾಗಿ ಆಟ ಆಡಿಲ್ಲ. ಮೊದಲ 2 ವಾರ ತುಂಬಾ ಡಲ್ ಆಗಿ ಇರುತ್ತಿದ್ರು. ಆದ್ರೆ ಕಳೆದ 2 ವಾರದಿಂದ ಸ್ಪಲ್ಪ ಸುಧಾರಿಸಿಕೊಂಡಿದ್ರು. ನಾನು ಆಟ ಆಡೋಕೆ ಬಂದಿರೋದು ಎಂದು ಹೇಳಿದ್ರು. ಆದ್ರೂ ಇನ್ನೂ ಚೆನ್ನಾಗಿ ಆಡಬೇಕಿತ್ತು ಎಂದು ಅಭಿಮಾನಿಗಳು ಹೇಳಿದ್ದಾರೆ.

  Published by:Savitha Savitha
  First published: