• Home
  • »
  • News
  • »
  • entertainment
  • »
  • Bigg Boss Season 9: ಬಿಗ್​ಬಾಸ್ ಮನೆಗೆ ಅನುಪಮಾ ಗೌಡ, ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್ ಎಂಟ್ರಿ

Bigg Boss Season 9: ಬಿಗ್​ಬಾಸ್ ಮನೆಗೆ ಅನುಪಮಾ ಗೌಡ, ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್ ಎಂಟ್ರಿ

ಬಿಗ್​ ಬಾಸ್​ ಸೀಸನ್​ 9

ಬಿಗ್​ ಬಾಸ್​ ಸೀಸನ್​ 9

ಬಿಗ್​ಬಾಸ್ ಮನೆಯೊಳಗೆ ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್, ಅನುಪಮಾ ಗೌಡ ಹಾಗೂ ದೀಪಿಕಾ ದಾಸ್ ಎಂಟ್ರಿ ಕೊಡುತ್ತಿದ್ದಾರೆ. ಅವರ ಕುರಿತು ಕಿರು ಪರಿಚಯ ಇಲ್ಲಿದೆ.

  • Share this:

ಬಿಗ್ ಬಾಸ್ ಸೀಸನ್ 9ರ (Bigg Boss Season 9) ಪ್ರೋಮೋ (Promo) ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಅದ್ಧೂರಿ ಕಾರ್ಯಕ್ರಮದ ಒಂದು ಕಿರುನೋಟ ಲಭ್ಯವಾಗಿದೆ. ಹೌದು ಬಹಳಷ್ಟು ಅದ್ಧೂರಿತನ, ಗ್ರ್ಯಾಂಡ್ ಆಗಿ ನಡೆಯಲಿರುವ ಕನ್ನಡ ಬಿಗ್​ಬಾಸ್ ಸೀಸನ್ 9ರ ಪ್ರೋಮಗಳನ್ನು ಈಗಾಗಲೇ ಬಿಡಲಾಗಿದೆ.  ಬಿಗ್​ ಬಾಸ್ ಸೀಸನ್ 9 ಇಂದಿನಿಂದ ಶುರುವಾಗುತ್ತಿದ್ದು ಕಲರ್ಸ್ ಕನ್ನಡ (Colors Kannada) ಮತ್ತೊಂದು ಪ್ರೋಮೋ (Promo) ರಿಲೀಸ್ ಮಾಡಿದೆ. ಪ್ರೋಮೋ ಅಪ್​ಲೋಡ್ ಮಾಡಿದ್ದು ಇದರಲ್ಲಿ ಇಂಟ್ರೆಸ್ಟಿಂಗ್ ವಿಚಾರಗಳು ರಿವೀಲ್ ಆಗಿದೆ. ಒಂಭತ್ತು ಜನರ ಪ್ರವೀಣರ ಜೊತೆಗೆ ಮತ್ತೆ 9 ಜನ ಕಂಟೆಸ್ಟೆಂಟ್ ಸೇರಿಕೊಳ್ಳಲಿದ್ದು ಇದು ಸಖತ್ ಇಂಟ್ರೆಸ್ಟಿಂಗ್ ಆಗಿರಲಿದೆ.


ಅನುಪಮಾ ಗೌಡ ಎಂಟ್ರಿ


ನಟಿ ಅನುಪಮಾ ಗೌಡ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಈ ಹಿಂದೆ ಶೋನಲ್ಲಿ ಭಾಗವಹಿಸಿ ಕನ್ನಡಿಗರ ಮನ ಗೆದ್ದಿದ್ದರು. ಅಕ್ಕ ಸೀರಿಯಲ್ ಮೂಲಕ ಕನ್ನಡ ಕಿರುತೆರೆಯ ವೀಕ್ಷರನ್ನು ರಂಜಿಸಿದ ನಟಿ ಈಗ ನಿರೂಪಕಿಯಾಗಿ ಸಖತ್ತಾಗಿ ಮಿಂಚುತ್ತಿದ್ದಾರೆ. ಈಗ ಅವರು ಸೀಸನ್ ಒಂಭತ್ತರಲ್ಲಿ ಹಳೆಯ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.


Colors Kannada reality Raja rani season 2 Anupama Gowda came Instagram live to give clarification about anchoring
ಅನುಪಮಾ ಗೌಡ


ಅರುಣ್ ಸಂಬರ್ಗಿ


ಅರುಣ್ ಸಂಬರ್ಗಿ ಬಿಗ್​ಬಾಸ್ ಮನೆಯಲ್ಲಿ ಹೆಚ್ಚು ಸೌಂಡ್ ಮಾಡಿದ ವ್ಯಕ್ತಿಗಳ ಪೈಕಿ ಒಬ್ಬರು. ಅವರ ವಿಶೇಷ ಸ್ವಭಾವದಿಂದಾಗಿ ಮನೆಯಲ್ಲಿ ಹೈಲೈಟಾಗಿದ್ದರು. ಅದೇ ರೀತಿ ಸಾಕಷ್ಟು ಸಲ ವಿವಾದವಾಗುವಂತೆಯೂ ಮಾಡಿದ್ದರು. ಒಂದಷ್ಟು ಜಗಳ, ವಿವಾದಗಳಲ್ಲಿಯೂ ಸುದ್ದಿಯಾದರು.


Prashanth sambaragi speaks about halal product ban campaign
ಪ್ರಶಾಂತ್ ಸಂಬರಗಿ


ಇದನ್ನೂ ಓದಿ: Bigg Boss Season 9: ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡೋಕೆ 18 ಕಂಟೆಸ್ಟೆಂಟ್ಸ್ ರೆಡಿ! ಕೆಲವ್ರಿಗೆ ಸಿಕ್ಕಾಪಟ್ಟೆ ಟೆಂಪರ್ ಇಶ್ಯೂ ಇದ್ಯಂತೆ


ಅರುಣ್ ಸಾಗರ್


ಅರುಣ್ ಸಾಗರ್ ಬಿಗ್​ ಬಾಸ್ ಸೀಸನ್​ನಲ್ಲಿ ಮತ್ತೆ ಎಂಟ್ರಿ ಕೊಟ್ಟಿದ್ದು ಹಿಂದಿಗಿಂತ ಬಹಳಷ್ಟು ಭಿನ್ನವಾಗಿ ಅವರು ಕಾಣಿಸಿಕೊಂಡಿದ್ದಾರೆ. ಗಾಯಕರಾಗಿ ಫೇಮಸ್ ಆಗಿರುವ ಅರುಣ್ ಸಾಗರ್ ಸೂಪರ್ ಬ್ಯ್ಲಾಕ್ ಡ್ರೆಸ್​ನಲ್ಲಿ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹಳೆಯ ಸೀಸನ್​ನಲ್ಲಿ ಅವರ ಹಾಡು, ಮಾತು, ಎಲ್ಲವನ್ನೂ ಪ್ರೇಕ್ಷಕರು ಕಂಡಿದ್ದಾರೆ. ಈಗ ಅವರು 9ನೇ ಸೀಸನ್​​ನಲ್ಲಿ ಹೇಗಿರಲಿದ್ದಾರೆ ಎಂಬುದನ್ನು ಎಲ್ಲರೂ ಕಾದು ನೋಡಬೇಕಾಗಿದೆ.


Bigg Boss season 9 kannada Arun Sagar entered the house as first Contestant
ಕಿಚ್ಚ ಸುದೀಪ್​


ಕಿಚ್ಚ ಸುದೀಪ್ ಅವರ ಮಾತಿನ ಕೆಲವೊಂದು ವಿಚಾರಗಳು ರಿವೀಲ್ ಆಗಿವೆ. ಕಿಚ್ಚ ಸುದೀಪ್ (Kichcha Sudeep) ಅವರು ಕೆಲವರಿಗೆ ಸಿಕ್ಕಾಪಟ್ಟೆ ಟೆಂಪರ್ ಇಶ್ಯೂ ಇದೆ ಎಂದು ಹೇಳಿದ್ದನ್ನು ಕೇಳಬಹುದು. ಹಣೆಬರಹಕ್ಕೆ ಹೊಣೆ ಯಾರು? ಒಳಗೆ ಹೋಗಿ ಇಲ್ಲಿ ಬೊಂಬೆ ಎಲ್ಲರು ಎಂದು ಕಿಚ್ಚ ಸುದೀಪ್ ಹೇಳುವುದನ್ನು ಕೇಳಬಹುದು.


ಇದನ್ನೂ ಓದಿ: Bigg Boss Season 9: ಬಿಗ್​ಬಾಸ್​ ಸೀಸನ್​ 9ರ ಫಸ್ಟ್​ ಕಂಟೆಸ್ಟೆಂಟ್​ ಇವ್ರೇ, ಮತ್ತೆ ದೊಡ್ಮನೆ ಸೇರಿದ ಕಿಚ್ಚನ ಕ್ಲೋಸ್ ಫ್ರೆಂಡ್​!


ಕಂಟೆಸ್ಟೆಂಟ್ ಒಬ್ಬರು ನನಗೆ ಬಿಪಿ, ಶುಗರ್ ಏನೂ ಇಲ್ಲ ಎಂದು ಹೇಳುವುದನ್ನು ಕೇಳಬಹುದು, ಆಗ ಅದಕ್ಕೆ ಉತ್ತರಿಸಿ ಕಿಚ್ಚ ಸುದೀಪ್ ಅದೆಲ್ಲಾ ನೀವಿದ್ರೆ ಉಳಿದವರಿಗೆ ಬರುತ್ತೆ ಎಂದು ಕಾಮಿಡಿ ಮಾಡಿದ್ದಾರೆ. ಇನ್ನೊಬ್ಬರು ಸ್ಪರ್ಧಿ ತಾನು ಅಪ್ಪನ ಬಳಿ ಹೋಗಿ 100 ದಿನ ಇರುತ್ತೇನೆ, 100 ಚಡ್ಡಿ ಕೊಡಿಸಿ ಎಂದು ಕೇಳಿದ್ದೆ. ಅಪ್ಪ 6 ಚಡ್ಡಿ ಕೊಡಿಸಿ ಹೋಗಿ ಬಾರಪ್ಪ ಎಂದ್ರು ಎಂದಿದ್ದಾರೆ. ಅಂತೂ ಮೊದಲ ದಿನ ಸಖತ್ ಇಂಟ್ರೆಸ್ಟಿಂಗ್ ಓಪನಿಂಗ್ ಇಂದು ಇರಲಿದೆ.

Published by:Divya D
First published: