Bigg Boss Season 9: ಬಿಗ್​ಬಾಸ್ ಮನೆ ರೆಡಿ, ಹೀಗಿದೆ ನೋಡಿ ಒಳಗಿನ ನೋಟ!

ಬಿಗ್​ಬಾಸ್ ಮನೆ ಎಂದ ಮೇಲೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ. ಹಾಲ್​ನಿಂದ ಹಿಡಿದು ಡ್ರೆಸ್ಸಿಂಗ್ ರೂಂ ತನಕ ಎಲ್ಲವೂ ವ್ಯವಸ್ಥಿತವಾಗಿರುತ್ತದೆ. ಆಕರ್ಷಕ ವಿನ್ಯಾಸಗಳು, ಫರ್ನೀಚರ್​ಗಳು, ಅಡುಗೆ ಮನೆ, ಎಲ್ಲವೂ ಸುಂದರವಾಗಿ ಸಿದ್ಧವಾಗಿರುತ್ತವೆ. ಈಗ ಶೇರ್ ಮಾಡಿರುವ ಫೊಟೋ ಕೂಡಾ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಬಿಗ್​ ಬಾಸ್ ಸೀಸನ್ 9

ಬಿಗ್​ ಬಾಸ್ ಸೀಸನ್ 9

  • Share this:
ಬಿಗ್​ ಬಾಸ್ ರಿಯಾಲಿಟಿ ಶೋನಲ್ಲಿ ಪ್ರತಿಬಾರಿಯೂ ಮನೆ ದೊಡ್ಡ ಆಕರ್ಷಣೆ. ಬಿಗ್ ಬಾಸ್​ ಮನೆ (Bigg Boss house) ಸೌಂದರ್ಯ, ಇಂಟೀರಿಯರ್ ಸೆಟಪ್​​ಗಳಿಗೆ ಪ್ರೇಕ್ಷಕರು ಫಿದಾ ಆಗುತ್ತಾರೆ. ಹಿಂದಿ, ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಶೊ ನಡೆಸುವಾಗ ಅದಕ್ಕಾಗಿ ಆಕರ್ಷಕ ಮನೆಯನ್ನೂ ನಿರ್ಮಿಸಲಾಗುತ್ತೆ. ಇದಕ್ಕಾಗಿ ತಿಂಗಳುಗಟ್ಟಲೆ ತಯಾರಿಯನ್ನು ನಡೆಸಲಾಗುತ್ತದೆ. ಈಗ ಕನ್ನಡ ಬಿಗ್​ ಬಾಸ್ ಸೀಸನ್ 9ರ ಮನೆಯ ಫೋಟೋ ವೈರಲ್ (Viral) ಆಗಿದೆ. ಹೌದು ಸೀಸನ್ 9ಕ್ಕೆ (Season 9) ದೊಡ್ಮನೆ ಸಜ್ಜಾಗಿದೆ. ಸ್ಪರ್ಧಿಗಳು ಬಂದು ಮನೆಯೊಳಗೆ ಸೇರಿಕೊಳ್ಳುವುದಷ್ಟೇ ಬಾಕಿ ಇದೆ. ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada Season 9) ಶುರುವಾಗಲು ದಿನಗಣನೆ ಶುರುವಾಗಿದೆ. ಬಿಗ್ ಬಾಸ್ ಕನ್ನಡ ಓಟಿಟಿ ಶೋ ಯಶಸ್ವಿಯಾಗಿದ್ದು ಪ್ರೇಕ್ಷಕರನ್ನು ರಂಜಿಸಿದೆ. ಒಟಿಟಿ ಸಂಚಿಕೆ ಮುಗಿಯುತ್ತಿದ್ದಂತೆ ಟಿವಿ ಸೀಸನ್ ಆರಂಭವಾಗುತ್ತಿದೆ. ಇದಕ್ಕೀಗ ದೊಡ್ಮನೆ ಸಜ್ಜಾಗಿದೆ. ಟಿವಿ ಸೀಸನ್‌ಗೆ ಸಜ್ಜಾಗಿರುವ ಮನೆಯ ಫೋಟೋವೊಂದನ್ನು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬಿಗ್​ಬಾಸ್ ಮನೆ ಎಂದ ಮೇಲೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ. ಹಾಲ್​ನಿಂದ ಹಿಡಿದು ಡ್ರೆಸ್ಸಿಂಗ್ ರೂಂ ತನಕ ಎಲ್ಲವೂ ವ್ಯವಸ್ಥಿತವಾಗಿರುತ್ತದೆ. ಆಕರ್ಷಕ ವಿನ್ಯಾಸಗಳು, ಫರ್ನೀಚರ್​ಗಳು, ಅಡುಗೆ ಮನೆ, ಎಲ್ಲವೂ ಸುಂದರವಾಗಿ ಸಿದ್ಧವಾಗಿರುತ್ತವೆ. ಈಗ ಶೇರ್ ಮಾಡಿರುವ ಫೊಟೋ ಕೂಡಾ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.






5 ಹಳೆಯ ಸ್ಪರ್ಧಿಗಳು

ಈ ಬಾರಿಯ ಬಿಗ್ ಬಾಸ್ 9ರ ಸೀಸನ್‍ಗೆ ಹಳೆಯ 5 ಸ್ಪರ್ಧಿಗಳು ಬರಲಿದ್ದಾರಂತೆ. ಇದು ಬಿಗ್ ಬಾಸ್ ನಿರ್ಮಾಪಕರ ಹೊಸ ಥೀಮ್ ಆಗಿದೆ. ವಿವಾದಾತ್ಮಕ ಸ್ಪರ್ಧಿಗಳನ್ನು ಮರಳಿ ಈ ಸೀಸನ್‍ಗೆ ಕರೆತರುತ್ತಿದ್ದಾರೆ. ಈಗಾಗಲೇ ಅನುಪಮಾ ಗೌಡ, ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ ಪ್ರೋಮೋ ಬಿಟ್ಟಿದ್ದಾರೆ.

ಇದನ್ನೂ ಓದಿ: Bigg Boss: ಬಿಗ್​​ಬಾಸ್ ಸೀಸನ್ 9ಕ್ಕೆ ಹೋಗ್ತಾರಾ ಕಮಲಿ ಖ್ಯಾತಿಯ ಅಮೂಲ್ಯ ಗೌಡ?

ಪ್ರೇಕ್ಷಕರ ವಿಭಾಗದಲ್ಲಿ ಆಯ್ಕೆ

ಕಲರ್ಸ್ ಕನ್ನಡ ಟ್ವಿಟರ್ ಪುಟದಲ್ಲಿ, ಪ್ರೇಕ್ಷಕರ ಒಂದು ವಿಭಾಗ ಮಾಡಲಾಗಿದೆ. ಅದರಲ್ಲಿ ಸ್ಪರ್ಧಿಗಳ ಆಯ್ಕೆಯ ಕುರಿತು ತಯಾರಕರಿಗೆ ಸಲಹೆಗಳನ್ನು ನೀಡುತ್ತಿದೆ. ಪ್ರೇಕ್ಷಕರು ಹೇಳಿದ ಸ್ಪರ್ಧಿಗಳು ಹಸ ಈ ಬಾರಿ ಬಿಗ್ ಬಾಸ್ ಸೀಸನ್ 9 ರಲ್ಲಿ ಇರಲಿದ್ದಾರೆ.



ನಿಯಮ ಉಲ್ಲಂಘಿಸಿದವರಿಗೆ ವಿಭಿನ್ನ ಶಿಕ್ಷೆ

ಬಿಗ್ ಬಾಸ್‍ನಲ್ಲಿ ನಿಯಮಗಳನ್ನು ಮಾಡಿರುತ್ತಾರೆ. ಅವನ್ನು ಯಾರೂ ಉಲ್ಲಂಘಿಸುವಂತಿಲ್ಲ. ಒಂದು ವೇಳೆ ಉಲ್ಲಂಘಿಸಿದ್ರೆ, ಅವರಿಗೆ ಶಿಕ್ಷೆ ನೀಡಲಾಗುತ್ತೆ. ಈ ಬಾರಿ ಶಿಕ್ಷೆಯೂ ಸಹ ವಿಭಿನ್ನವಾಗಿರಲಿದೆಯಂತೆ. ಕಲರ್ಸ್ ಕನ್ನಡ ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧವಾಗಿದೆಯಂತೆ.

ಕಠಿಣ ಟಾಸ್ಕ್

ಬಿಗ್ ಬಾಸ್ ಸೀಸನ್ 9ರಲ್ಲಿ ಹಳೇ ಸೀಸನ್‍ಗಳಿಗಿಂದ ವಿಭಿನ್ನ ಮತ್ತು ಕಷ್ಟಕರ ಟಾಸ್ಕ್‍ಗಳು ಇರಲಿವೆಯಂತೆ. ಈಗಾಗಲೇ OTT ಯಿಂದ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್ ಮತ್ತು ಆರ್ಯವರ್ಧನ್ ಗುರೂಜಿ ಪ್ರವೇಶವನ್ನು ಪಡೆದಿದ್ದಾರೆ.

ಇದನ್ನೂ ಓದಿ: Bigg Boss Season 9: ಇವ್ರೆಲ್ಲಾ ಈ ಬಾರಿ ಬಿಗ್​ಬಾಸ್​​ ಮನೆಗೆ ಹೋಗೋದು ಕನ್ಫರ್ಮ್​ ಅಂತೆ, ಅಸಲಿ ಆಟ ಈಗ ಶುರು!

ಕಲರ್ಸ್ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ಕನ್ನಡಕ್ಕೆ ದಿನಗಣನೆ ಶುರುವಾಗಿದೆ. ಇದೇ 9 ಸೆಪ್ಟೆಂಬರ್ 24 ರಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ಪಾರಂಭವಾಗಲಿದೆ. ಈಗಾಗಲೇ ಬಿಗ್‍ಬಾಸ್ ಒಟಿಟಿಯಿಂದ (OTT) ನಾಲ್ಕು ಟಾಪ್ ಕಂಟೆಸ್ಟೆಂಟ್‍ಗಳು ಈಗಾಗಲೇ ಟಿವಿ ಬಿಗ್‍ಬಾಸ್‍ಗೆ ಸೆಲೆಕ್ಟ್ ಆಗಿದ್ದಾರೆ.
Published by:Divya D
First published: