Bigg Boss 9: ಬರ್ತಿದೆ ಬಿಗ್​ ಬಾಸ್​ ಸೀಸನ್​​ 9; ಟಿವಿ ಪರದೆ ಮೇಲೆ ಮಸ್ತ್​ ಮನರಂಜನೆ

ಮೊದಲ ಬಾರಿಗೆ ಬಿಗ್ ಬಾಸ್ ಶೋ ಓಟಿಟಿನಲ್ಲಿ (Bigg boss ott) ಪ್ರಸಾರವಾಗಿದ್ದು, ಈ ಶೋ ಮುಕ್ತಾಯಗೊಳ್ಳಲು ಇನ್ನು ಎರಡು ವಾರ ಬಾಕಿಯಿದೆ. ಶೀಘ್ರದಲ್ಲೇ ಕಲರ್ಸ್​ ಕನ್ನಡದಲ್ಲಿ ಬಿಗ್​ಬಾಸ್​ ಸೀಸನ್​ 9 ಶುರುವಾಗಲಿದೆ.

ಬಿಗ್​ ಬಾಸ್​ ಸೀಸನ್​ 9

ಬಿಗ್​ ಬಾಸ್​ ಸೀಸನ್​ 9

  • Share this:
ಬಿಗ್​ಬಾಸ್​​ ಸೀಸನ್​​ ಒಂಭತ್ತು (Bigg Boss Session 9) ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಓಟಿಟಿಯಲ್ಲಿ ಭಾರೀ ಜನಪ್ರಿಯರಾಗಿರೋ ಬಿಗ್​ ಬಾಸ್​ ಮುಕ್ತಾಯಗೊಳ್ಳಲು ಇನ್ನೂ ಎರಡು ವಾರ ಬಾಕಿ ಇದೆ.​ ಕಲರ್ಸ್​ ಕನ್ನಡ ವಾಹಿನಿ (Colours Kannada) ಪ್ರೇಕ್ಷಕರಿಗೆ ಗುಡ್​ ನ್ಯೂಸ್​ ಕೊಟ್ಟಿದೆ. ಅತಿ ಶೀಘ್ರದಲ್ಲೇ ನಿಮ್ಮ ಟಿವಿ ಪರದೆ ಮೇಲೆ ಪ್ರೇಕ್ಷಕರು ಬಿಗ್ ಬಾಸ್​ ಹೊಸ ಸೀಸನ್ ನೋಡಬಹುದಾಗಿದೆ. ಓಟಿಟಿಯಲ್ಲಿ (OTT) ಎಲ್ಲರೂ ಬಿಗ್​ ಬಾಸ್​ ಸೀಸನ್ ನೋಡಲು ಸಾಧ್ಯವಾಗಿಲ್ಲ. ಇದೀಗ  ನಿಮ್ಮ ಮನೆಯ ಟಿವಿ ಪರದೆ ಮೇಲೆಯೇ ಸಖತ್ ಮನರಂಜನೆ (Entertainment) ಸಿಗಲಿದೆ. 

​ಬಿಗ್ ಬಾಸ್ ಕನ್ನಡ ಸೀಸನ್ 9 ಟಿವಿ ಪರದೆಯಲ್ಲಿ ಬರಲು ಈಗಾಗಲೇ ದಿನಗಣನೆ ಶುರುವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 9 ಸೆಪ್ಟೆಂಬರ್​ ಎರಡು ಹಾಗೂ 3ನೇ ವಾರದಲ್ಲಿ ಬಿಗ್​ ಬಾಸ್​ ಶುರುವಾಗೋ ಸಾಧ್ಯತೆ ಇದೆ. ಒಂದಲ್ಲ ಎರಡು ಬಿಗ್ ಬಾಸ್ ಶೋ ನಡೆಯುವುದು. ಆಗಸ್ಟ್‌ನಲ್ಲಿ ಶುರುವಾದ ಮಿನಿ ಸೀಸನ್ ಅಕ್ಟೋಬರ್‌ನಲ್ಲಿ ಮುಕ್ತಾಯವಾಗುವುದು.  ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಸೀಸನ್ ಪ್ರಸಾರವಾಗ್ತಿದ್ದು ದೊಡ್ಡ ಸೀಸನ್ 100 ದಿನಗಳ ಕಾಲ ನಡೆಯುತ್ತದೆ.

ಕಿಚ್ಚ ಸುದೀಪ್​ ನಿರೂಪಣೆ

ಓಟಿಟಿಯಲ್ಲಿ ಪ್ರಸಾರವಾಗುವ ಮಿನಿ ಸೀಸನ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದ ಕೆಲ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಅವರು ಆಮೇಲೆ ಟಿವಿ ಶೋಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ರಾಜ್ಯದ ವಿವಿಧ ರಂಗದ ಕೆಲ ಸೆಲೆಬ್ರಿಟಿಗಳು ಕೂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಈ ಎರಡೂ ಸೀಸನ್‌ನ್ನು ಕಿಚ್ಚ ಸುದೀಪ್ (Kiccha Sudeep) ಅವರೇ ನಿರೂಪಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ಪುಷ್ಪ 2 ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ರಶ್ಮಿಕಾ ಮಂದಣ್ಣ!

ಬಿಗ್​ಬಾಸ್​ ಓಟಿಟಿಯಲ್ಲಿ 16 ಸ್ಪರ್ಧಿಗಳು

ಈ ಹಿಂದೆ ಓಟಿಟಿ ರಿಲಿಯಾಟಿ ಶೋಗೆ ಅದ್ಧೂರಿ ಚಾಲನೆ ಸಿಕ್ಕಿತ್ತು. ಕಿಚ್ಚ ಸುದೀಪ್ 16 ಸ್ಪರ್ಧಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ರು. ಈ ಸ್ಪರ್ಧಿಗಳಲ್ಲಿ ಸಂಖ್ಯಾಶಾಸ್ತ್ರ ಗುರೂಜಿ ಆರ್ಯವರ್ಧನ್ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರೆ, 2ನೇ ಸ್ಪರ್ಧಿಯಾಗಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸೋನು ಗೌಡ ಬಂದ್ರು. ಇನ್ನುಳಿದಂತೆ ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸ್ಪೂರ್ತಿ ಗೌಡ, ಹಾಸ್ಯ ಕಲಾವಿದ ಲೋಕೇಶ್, ನಟಿ ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ, ಉದಯ್ ಸೂರ್ಯ, ಸೋಮಣ್ಣ ಮಾಚಿಮಾಡ, ನಂದಿನಿ, ಜಸ್ವಂತ್ ಬೋಪಣ್ಣ, ಅರ್ಜುನ್ ರಮೇಶ್ ಮತ್ತು ಜಯಶ್ರೀ ಆರಾಧ್ಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ರು.



ಓಟಿಟಿಯಲ್ಲಿ ಯಾರು ವಿನ್ನರ್ ಆಗಬಹುದು!?

ಮೊದಲ ಬಾರಿಗೆ ಬಿಗ್ ಬಾಸ್ ಶೋ ಓಟಿಟಿನಲ್ಲಿ (Bigg boss ott) ಪ್ರಸಾರವಾಗಿದ್ದು, ಈ ಶೋ ಮುಕ್ತಾಯಗೊಳ್ಳಲು ಇನ್ನು ಎರಡು ವಾರ ಬಾಕಿಯಿದೆ. ಓಟಿಟಿಯಲ್ಲಿ ಯಾರು ವಿನ್ನರ್ ಆಗಬಹುದು ಎಂಬುದರ ಬಗ್ಗೆ ನೋಡುಗರಿಗೆ ಕುತೂಹಲವಿದೆ. ಓಟಿಟಿಯಲ್ಲಿ ಗಮನ ಸೆಳೆದ ಕೆಲ ಸ್ಪರ್ಧಿಗಳಿಗೆ ಬಿಗ್ ಬಾಸ್ ಸೀಸನ್ 9ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Sai Pallavi: ಫ್ಯಾಮಿಲಿ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ; ಕುಟುಂಬ ಜೊತೆ ಸಖತ್ ಪೋಸ್

ಸುದೀಪ್ ನೇತೃತ್ವದಲ್ಲಿ ಮೂಡಿಬರಲಿರುವ `ಬಿಗ್ ಬಾಸ್ ಕನ್ನಡ ಸೀಸನ್ 9′ ಬರಲಿದೆ ಎಂಬುದನ್ನ ಖಾಸಗಿ ವಾಹಿನಿ ಅಧಿಕೃತವಾಗಿ ತಿಳಿಸಿದ್ದಾರೆ. ಹಾಗಾದ್ರೆ ಸೀಸನ್ 9ರ ಬಿಗ್ ಬಾಸ್‌ನಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.
Published by:Pavana HS
First published: