• Home
  • »
  • News
  • »
  • entertainment
  • »
  • Bigg boss Guruji Aryavardhan: ನಾನೂ ಕ್ಯಾಪ್ಟನ್ ಆಗ್ಬೇಕು ಅಂತವ್ರೆ ಆರ್ಯವರ್ಧನ್!

Bigg boss Guruji Aryavardhan: ನಾನೂ ಕ್ಯಾಪ್ಟನ್ ಆಗ್ಬೇಕು ಅಂತವ್ರೆ ಆರ್ಯವರ್ಧನ್!

ಕಾಣದ ಕಡಲಿಗೆ ಹಂಬಲಿಸಿದೆ ಗುರೂಜಿ ಮನ

ಕಾಣದ ಕಡಲಿಗೆ ಹಂಬಲಿಸಿದೆ ಗುರೂಜಿ ಮನ

ಗುರೂಜಿ ಆರ್ಯವರ್ಧನ್ ತಮ್ಮ ಹಂಬಲಕ್ಕೆ ತಾವೇ ಬಲಿಯಾದ್ರು. ಮನೆಯ ಸದಸ್ಯರೆಲ್ಲ ಸೇರಿ ಗುರೂಜಿಯನ್ನ ಸಿಕ್ಕಾಪಟ್ಟೆ ಕಾಡಿದರು. ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯ ಫ್ರ್ಯಾಂಕ್ ಆಟವನ್ನೇ ಎಲ್ಲರೂ ಸೇರಿ ಆಡಿಯೇ ಬಿಟ್ಟರು.

  • Share this:

ಬಿಗ್ ಬಾಸ್ (Big Boss) ಮನೆಯಲ್ಲಿ ಹಬ್ಬದ ಸಡಗರ ಜೋರಾಗಿಯೇ ಇತ್ತು. ಹಬ್ಬಕ್ಕಾಗಿಯೇ ಮನೆಯಂಗಳಕ್ಕೆ ಬಂದಿದ್ದ ಪೈಲ್ವಾನರ ಜೊತೆಗೆ ಗುದ್ದಾಡಿ ಖುಷಿಪಟ್ಟರು ಮನೆ ಸದಸ್ಯರು. ನಾವೇನೂ ಕಡಿಮೆ ಇಲ್ಲ ಅಂತ ಮನೆಯ ಮಹಿಳಾ ಮಣಿಯರು ಇಬ್ಬರು ಪೈಲ್ವಾನರನ್ನ ತಳ್ಳಲು ಸರ್ಕಸ್ ಮಾಡಿದರು. ಗುರೂಜಿ ಆರ್ಯವರ್ಧನ್ (Aryavardhan) ಏನೂ ಕಡಿಮೇನೆ? ನೋ ವೇ ಚಾನ್ಸೇ ಇಲ್ಲ ಬಿಡಿ. ಪೈಲ್ವಾನ್ ರನ್ನ ರೂಢ್ ಆಗಿಯೇ ಗುರೂಜಿ (Guruji) ತಳ್ಳಿ ಬಿಟ್ಟರು. ಹಿಂಗೆ "ತಳ್ಳುವ" ಆಟದಲ್ಲಿ ಎಲ್ಲರೂ ಬಿದ್ದರು,ಎದ್ದರು ಖುಷಿ ಪಟ್ಟರು. ಆದರೆ ಗುರೂಜಿ ಆರ್ಯವರ್ಧನ್ ಅಳಲೇ ಬೇರೆ ಇತ್ತು. ಹಂಬಲವೇ ಬೇರೆ ಇದೆ. ಇಲ್ಲಿದೆ ಓದಿ ಆ ಹಂಬಲದ ಕಥೆ. ಬಿಗ್ ಬಾಸ್ ಓಟಿಟಿಯಿಂದಲೇ ಬಿಗ್ ಮನೆಗೆ ಬಂದ ಗುರೂಜಿ ಆರ್ಯವರ್ಧನ್ ಮನೆಯ ಹಿರಿಯ ಸದಸ್ಯ. ಆಡೋ ಮಾತುಗಳು, ಆಡೋ ಆಟ ಯಾವುದೂ ಸೀರಿಯೆಸ್ ಅಲ್ಲವೆ ಅಲ್ಲ ನೋಡಿ.


ಇದನ್ನ ನಾವು ಹೇಳೋದಲ್ಲ, ಬಿಗ್ ಬಾಸ್ ಪ್ರಿಯರಿಗೆ ಇದು ಗೊತ್ತೇ ಇದೆ.
ಬಿಗ್ ಬಾಸ್ ಮನೆಯ ಸದಸ್ಯರೂ ಕೂಡ ಗುರೂಜಿ ಆರ್ಯವರ್ಧನ್ ರನ್ನ ಸೀರಿಯೆಸ್ ಆಗಿ ತೆಗೆದುಕೊಂಡಂತಿಲ್ಲ. ಎಲ್ಲರೂ ಇವರೊಟ್ಟಿಗೆ ಜೋಕ್ ಮಾಡ್ತಾರೆ. ಗುರೂಜಿ ಹೇಳೋ ಮಾತಿಗೆ ನಕ್ಕು ನಲಿಯುತ್ತಾರೆ.


ಗುರೂಜಿ ಈಗ ಫಾದರ್ ಫಿಗರ್
ಬಿಗ್ ಮನೆಯ ಹೆಣ್ಣುಮಕ್ಕಳೂ ಗುರೂಜಿಯನ್ನ ಫಾದರ್ ಅಂತಲೇ ಕರೆಯೋದು ಅನುಪಮಾ, ಕಾವ್ಯ ಗೌಡ ಎಲ್ಲರಿಗೂ ಈ ಗುರೂಜಿ ಫಾದರ್ ಫಿಗರೇ ಆಗಿದ್ದಾರೆ. ಆದರೆ ಈ ಗುರೂಜಿಗೆ ಈಗೊಂದು ಹೊಸ ಹಂಬಲ ಶುರು ಆಗಿದೆ. ಇದು ಸಾಧ್ಯ ಆಗುತ್ತದೆಯೋ ಇಲ್ವೋ ಗೊತ್ತಿಲ್ಲ. ಆದರೆ ಗುರೂಜಿಯ ಹಂಬಲ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.


Frank On Big Boss House Guruji Aryavardhan by House member
ಬಿಗ್ ಬಾಸ್ ಮನೆಯ ಗುರೂಜಿ ಆರ್ಯವರ್ಧನ್


ಬಿಗ್ ಬಾಸ್ ಮನೆಯಲ್ಲಿ ನಾನೂ ಕ್ಯಾಪ್ಟನ್ ಆಗ್ಬೇಕು
ಬಿಗ್ ಮನೆಯಲ್ಲಿ ಮೊದಲ ವಾರವೇ ವಿನೋದ್ ಗೊಬ್ಬರಗಾಲ ಕ್ಯಾಪ್ಟನ್ ಆಗಿದ್ದಾರೆ. ಇದನ್ನ ನೋಡಿಯೇ ಏನೋ, ಗುರೂಜಿ ಆರ್ಯವರ್ಧನ್​ಗೂ ಕ್ಯಾಪ್ಟನ್ ಆಗಬೇಕು ಅಂತಲೇ ಆಸೆ ಹುಟ್ಟುಕೊಂಡಿದೆ ಅನಿಸುತ್ತದೆ.


ಅದಕ್ಕೋ ಏನೋ ಗುರೂಜಿ ಈಗ ನಾನೂ ಕ್ಯಾಪ್ಟನ್ ಆಗಬೇಕು ಅಂತಲೇ ಎಲ್ಲರ ಮುಂದೆ ಹೇಳಿಕೊಂಡು ಓಡಾಡ್ತಿದ್ದಾರೆ. ಗುರೂಜಿಯ ಈ ಮಾತನ್ನ ಯಾರೂ ಸೀರಿಯೆಸ್ ಆಗಿ ತೆಗೆದುಕೊಂಡಂತೆ ಕಾಣೋದಿಲ್ಲ. ಅದಕ್ಕೇನೆ ಎಲ್ಲರೂ ಸೇರಿ ಫ್ರ್ಯಾಂಕ್ ಮಾಡಿಯೇ ಬಿಟ್ಟರು ನೋಡಿ.


ಕ್ಯಾಪ್ಟನ್ ಫ್ರ್ಯಾಂಕ್ ಆಯ್ಕೆ-ಗುರೂಜಿ ಏನಂದ್ರು?
ಗುರೂಜಿ ಆರ್ಯವರ್ಧನ್ ತಮ್ಮ ಹಂಬಲಕ್ಕೆ ತಾವೇ ಬಲಿಯಾದ್ರು. ಮನೆಯ ಸದಸ್ಯರೆಲ್ಲ ಸೇರಿ ಗುರೂಜಿಯನ್ನ ಸಿಕ್ಕಾಪಟ್ಟೆ ಕಾಡಿದರು. ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯ ಫ್ರ್ಯಾಂಕ್ ಆಟವನ್ನೇ ಎಲ್ಲರೂ ಸೇರಿ ಆಡಿಯೇ ಬಿಟ್ಟರು.


ಇದನ್ನೂ ಓದಿ: Kantara Hindi Trailer: ಬಾಲಿವುಡ್​ಗೂ ಕಾಲಿಟ್ಟ ಕನ್ನಡದ ಕಾಂತಾರ! ರಿಲೀಸ್ ಯಾವಾಗ?


ಮನೆಯ ಎಲ್ಲ ಸದಸ್ಯರು ಪಕ್ಕಾ ಬಿಗ್ ಬಾಸ್ ಹೇಳಿದ ರೀತಿಯಲ್ಲಿಯೇ ಕ್ಯಾಪ್ಟನ್ ಆಯ್ಕೆಯ ಪ್ರಕ್ರಿಯೆಯನ್ನ ಫಾಲೋ ಮಾಡಿದರು. ಅನುಪಮಾ ರೂಲ್ಸ್ ಅನ್ನ ಓದಿ ಹೇಳಿದರು. ಅದನ್ನ ಮನೆಯ ಇತರ ಸದಸ್ಯರು ಕೇಳಿದರು. ಫಾಲೋ ಮಾಡಿದರು.


ಫ್ರ್ಯಾಂಕ್ ಕ್ಯಾಪ್ಟನ್ ಆಯ್ಕೆಯಲ್ಲಿ ಗುರೂಜಿ ಹೆಸರೇ ಹೇಳಲಿಲ್ಲ
ಇದು ಮೊದಲೇ ಫ್ರ್ಯಾಂಕ್ ಅಲ್ವೇ? ಗುರೂಜಿಯನ್ನ ಕಾಡಲೇಬೇಕು ಅಂತಲೇ ಈ ಒಂದು ಫ್ರ್ಯಾಂಕ್ ಮಾಡಿದ್ದರು. ಎಲ್ಲರೂ ಎಲ್ಲರ ಹೆಸರನ್ನ ತೆಗೆದುಕೊಂಡರು. ಹಾಗೆ ಬಂದ ಅಮೂಲ್ಯ ಗೌಡ, ರಾಕೇಶ್, ಅನುಪಮಾ ಹೀಗೆ ಎಲ್ಲರೂ ಗುರೂಜಿ ಹೆಸರು ಬಿಟ್ಟು ಬೇರೆ ಎಲ್ಲರ ಹೆಸರನ್ನೂ ತೆಗೆದುಕೊಂಡರು ನೋಡಿ.


Frank On Big Boss House Guruji Aryavardhan by House member
ಗುರೂಜಿ ಆರ್ಯವರ್ಧನ್ ಹಳೆ ಫೋಟೋ


ಗುರೂಜಿ ತಬ್ಬಿಬ್ಬು-ಅರೆಕ್ಷಣದಲ್ಲಿ ಕಣ್ಣೀರು
ಹೌದು, ಗುರೂಜಿ ಆರ್ಯವರ್ಧನ್ ಬಿಟ್ರೆ, ತಮ್ಮ ಇವತ್ತಿನ ಈ ಆಟ ಫ್ರ್ಯಾಂಕ್ ಅಂತಲೇ ಎಲ್ಲರಿಗೂ ಗೊತ್ತಿತ್ತು. ಅದಕ್ಕೇನೆ ಎಲ್ಲರೂ ತಮ್ಮಷ್ಟಕ್ಕೆ ತಾವೇ ನಗ್ತಾ ಇದ್ರು. ಸಾನ್ಯಾ ಅಯ್ಯರ್ ಅಂತೂ ಗುರೂಜಿ ಮುಂದೇನೆ ಮುಸಿಮುಸಿ ನಗ್ತಾನೇ ಇದ್ದರು.


ಇದೇ ವೇಳೆನೆ ಗುರೂಜಿಗೆ ಎಲ್ಲರೂ ಸೇರಿ ತಮ್ಮ ಮೇಲೆ ಫ್ರ್ಯಾಂಕ್ ಮಾಡಿದ್ದಾರೆ ಅನ್ನೋ ವಿಷಯ ಕೂಡ ತಿಳಿದೇ ಬಿಡ್ತು. ಆಗಲೇ ಒಂಚೂರು ಎಮೋಷ್ನಲ್ ಆಗಿದ್ದರು ಗುರೂಜಿ, ಕಣ್ಣೀರು ಕೂಡ ಕಣ್ಣಲ್ಲಿ ಬಂದು ಹೋಗಿರೋದು ಕೂಡ ಅಷ್ಟೇ ಸತ್ಯ.


ನಾನು ಕ್ಯಾಪ್ಟನ್ ಆಗಬೇಕು-ನಾನು ಮನೆಯ ಹಿರಿಯ ಸದಸ್ಯ
ಗುರೂಜಿ ಆರ್ಯವರ್ಧನ್ ಕ್ಯಾಪ್ಟನ್ ಆಗ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಗುರೂಜಿ ಆಸೆ ಅಂತೂ ಇದ್ದೇ ಇದೆ. ನಾನು ಮನೆಯ ಹಿರಿಯ ವ್ಯಕ್ತಿ. ಅನುಭವ ಇದೆ. ಅದಕ್ಕೆ ಕ್ಯಾಪ್ಟನ್ ಆಗಬೇಕು ಅಂತಲೂ ಫ್ರ್ಯಾಂಕ್ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಸ್ವತಃ ಗುರೂಜಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Puneeth Rajkumar-Gandhada Gudi: ಗಂಧದ ಗುಡಿ ಟ್ರೈಲರ್​ ರಿಲೀಸ್ ಡೇಟ್ ಫಿಕ್ಸ್! ಅಪ್ಪು ಫ್ಯಾನ್ಸ್ ಥ್ರಿಲ್


ಆದರೆ ಮನೆಯ ಸದಸ್ಯರೆಲ್ಲ ಗುರೂಜಿ ಮೇಲೆ ಕ್ಯಾಪ್ಟನ್ ಆಯ್ಕೆಯ ಪ್ರಕ್ರಿಯೆ ಫ್ರ್ಯಾಂಕ್ ಮಾಡಿ ಸಖತ್ ಮಜಾ ತೆಗೆದುಕೊಂಡ್ರು. ಹಾಗೇನೆ ಅನುಪಮಾ ಇನ್ಮುಂದೆ ನಾನು ಫ್ರ್ಯಾಂಕ್ ಮಾಡೋದಿಲ್ಲ ಅಂತಲೂ ಹೇಳಿಕೊಂಡರು.

First published: