Bigg Boss Season 9: ಬಿಗ್ ಬಾಸ್ ಮನೆಯಲ್ಲಿ ಹೊಸ ರೂಲ್ಸ್ ಘೋಷಿಸಿದ ಕಿಚ್ಚ ಸುದೀಪ್‍, ಮತ್ತೆ ಬರ್ತಿದ್ದಾರಾ ಅರವಿಂದ್-ದಿವ್ಯಾ ಉರುಡುಗ?

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೊಸ ರೂಲ್ಸ್ ಜಾರಿ ಮಾಡಲಿದ್ದಾರಂತೆ. ಈ ಬಾರಿಯ ಬಿಗ್ ಬಾಸ್ 9ರ ಸೀಸನ್‍ಗೆ ಹಳೆಯ 5 ಸ್ಪರ್ಧಿಗಳು ಬರಲಿದ್ದಾರಂತೆ. ಇದು ಬಿಗ್ ಬಾಸ್ ನಿರ್ಮಾಪಕರ ಹೊಸ ಥೀಮ್ ಆಗಿದೆ. ವಿವಾದಾತ್ಮಕ ಸ್ಪರ್ಧಿಗಳನ್ನು ಮರಳಿ ಈ ಸೀಸನ್‍ಗೆ ಕರೆತರುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹೊಸ ರೂಲ್ಸ್?

ಬಿಗ್ ಬಾಸ್ ಮನೆಯಲ್ಲಿ ಹೊಸ ರೂಲ್ಸ್?

 • Share this:
  ಕಲರ್ಸ್ ಕನ್ನಡದ  (Colors Kannada) ಅತಿ ದೊಡ್ಡ ರಿಯಾಲಿಟಿ ಶೋ (Reality Show) ಬಿಗ್ ಬಾಸ್ ಸೀಸನ್ 9 (Bigg Boss Season 9) ಕನ್ನಡಕ್ಕೆ ದಿನಗಣನೆ ಶುರುವಾಗಿದೆ. ಇದೇ 9 ಸೆಪ್ಟೆಂಬರ್ 24 (September 24) ರಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ಪಾರಂಭವಾಗಲಿದೆ. ಈಗಾಗಲೇ ಬಿಗ್‍ಬಾಸ್ ಒಟಿಟಿಯಿಂದ (OTT) ನಾಲ್ಕು ಟಾಪ್ ಕಂಟೆಸ್ಟೆಂಟ್‍ಗಳು ಈಗಾಗಲೇ ಟಿವಿ ಬಿಗ್‍ಬಾಸ್‍ಗೆ ಸೆಲೆಕ್ಟ್ ಆಗಿದ್ದಾರೆ. ಇವರ ಜೊತೆ ಬೇರೆ ಸೆಲೆಬ್ರಿಟಿಗಳು ದೊಡ್ಮನೆ ಸೇರುತ್ತಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ (Social Media) ಚರ್ಚೆಯಾಗುತ್ತಿದೆ. ಅಲ್ಲದೇ ಹಳೇ ಸ್ಪರ್ಧಿಗಳು ಸಹ ಬಿಗ್ ಬಾಸ್‍ಗೆ ಬರಲಿದ್ದಾರಂತೆ. ಅಲ್ಲದೇ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೊಸ ರೂಲ್ಸ್ ನ್ನು (News RULES) ಜಾರಿ ಮಾಡಲಿದ್ದಾರಂತೆ.

  5 ಹಳೆಯ ಸ್ಪರ್ಧಿಗಳು
  ಈ ಬಾರಿಯ ಬಿಗ್ ಬಾಸ್ 9ರ ಸೀಸನ್‍ಗೆ ಹಳೆಯ 5 ಸ್ಪರ್ಧಿಗಳು ಬರಲಿದ್ದಾರಂತೆ. ಇದು ಬಿಗ್ ಬಾಸ್ ನಿರ್ಮಾಪಕರ ಹೊಸ ಥೀಮ್ ಆಗಿದೆ. ವಿವಾದಾತ್ಮಕ ಸ್ಪರ್ಧಿಗಳನ್ನು ಮರಳಿ ಈ ಸೀಸನ್‍ಗೆ ಕರೆತರುತ್ತಿದ್ದಾರೆ. ಈಗಾಗಲೇ ಅನುಪಮಾ ಗೌಡ, ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ ಪ್ರೋಮೋ ಬಿಟ್ಟಿದ್ದಾರೆ.

  ಪ್ರೇಕ್ಷಕರ ವಿಭಾಗದಲ್ಲಿ ಆಯ್ಕೆ
  ಕಲರ್ಸ್ ಕನ್ನಡ ಟ್ವಿಟರ್ ಪುಟದಲ್ಲಿ, ಪ್ರೇಕ್ಷಕರ ಒಂದು ವಿಭಾಗ ಮಾಡಲಾಗಿದೆ. ಅದರಲ್ಲಿ ಸ್ಪರ್ಧಿಗಳ ಆಯ್ಕೆಯ ಕುರಿತು ತಯಾರಕರಿಗೆ ಸಲಹೆಗಳನ್ನು ನೀಡುತ್ತಿದೆ. ಪ್ರೇಕ್ಷಕರು ಹೇಳಿದ ಸ್ಪರ್ಧಿಗಳು ಹಸ ಈ ಬಾರಿ ಬಿಗ್ ಬಾಸ್ ಸೀಸನ್ 9 ರಲ್ಲಿ ಇರಲಿದ್ದಾರೆ.

  Bigg Boss Kannada season 9, Bigg boss Kannada season 9 contestants, Kiccha Sudeep Bigg boss, New Rules in Bigg Boss House, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಕಿಚ್ಚ ಸುದೀಪ್ ಬಿಗ್ ಬಾಸ್, ಬಿಗ್ ಬಾಸ್ ಮನೆಯಲ್ಲಿ ಹೊಸ ರೂಲ್ಸ್, ಹೊಸಬರ ಜೊತೆ ಹಳಬರು ಇರಲಿದ್ದಾರಂತೆ, Kannada news, Karnataka news,
  ಅನುಪಮಾ ಗೌಡ
  ಅರವಿಂದ್ ಮತ್ತು ದಿವ್ಯಾ ಕರೆಸಿ
  ಪ್ರೇಕ್ಷಕರ ವಿಭಾಗದಲ್ಲಿ ಹೆಚ್ಚಿನವರು ಬಿಗ್ ಬಾಸ್ ಕನ್ನಡ ಸೀಸನ್ 8 ರ ಅತ್ಯುತ್ತಮ ಜೋಡಿ ಅರವಿಂದ್ ಕೆಪಿ ಹಾಗೂ ದಿವ್ಯಾ U. ಅವರನ್ನು ಮತ್ತೆ ಬಿಗ್ ಬಾಸ್‍ಗೆ ಕರೆಸಿ ಎನ್ನುತ್ತಿದ್ದಾರಂತೆ. ಪ್ರೇಕ್ಷಕರ ಆಸೆಯಂತೆ ಮತ್ತೆ ಈ  ಜೋಡಿ ಬಿಗ್ ಬಾಸ್‍ಗೆ ಬರುತ್ತಾ ಅಂತ ಕಾದು ನೋಡಬೇಕು.

  ಇದನ್ನೂ ಓದಿ: Brahmastra: ಟ್ರಾಫಿಕ್ ನಿಯಮ ಪಾಲನೆ ಪೋಸ್ಟ್​​​ಗೆ ಬ್ರಹ್ಮಾಸ್ತ್ರದ ಟಚ್ 

  ನಿಯಮ ಉಲ್ಲಂಘಿಸಿದವರಿಗೆ ವಿಭಿನ್ನ ಶಿಕ್ಷೆ
  ಬಿಗ್ ಬಾಸ್‍ನಲ್ಲಿ ನಿಯಮಗಳನ್ನು ಮಾಡಿರುತ್ತಾರೆ. ಅವನ್ನು ಯಾರೂ ಉಲ್ಲಂಘಿಸುವಂತಿಲ್ಲ. ಒಂದು ವೇಳೆ ಉಲ್ಲಂಘಿಸಿದ್ರೆ, ಅವರಿಗೆ ಶಿಕ್ಷೆ ನೀಡಲಾಗುತ್ತೆ. ಈ ಬಾರಿ ಶಿಕ್ಷೆಯೂ ಸಹ ವಿಭಿನ್ನವಾಗಿರಲಿದೆಯಂತೆ. ಕಲರ್ಸ್ ಕನ್ನಡ ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧವಾಗಿದೆಯಂತೆ.

  ಕಠಿಣ ಟಾಸ್ಕ್
  ಬಿಗ್ ಬಾಸ್ ಸೀಸನ್ 9ರಲ್ಲಿ ಹಳೇ ಸೀಸನ್‍ಗಳಿಗಿಂದ ವಿಭಿನ್ನ ಮತ್ತು ಕಷ್ಟಕರ ಟಾಸ್ಕ್‍ಗಳು ಇರಲಿವೆಯಂತೆ. ಈಗಾಗಲೇ OTT ಯಿಂದ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್ ಮತ್ತು ಆರ್ಯವರ್ಧನ್ ಗುರೂಜಿ ಪ್ರವೇಶವನ್ನು ಪಡೆದಿದ್ದಾರೆ.

  ಇದನ್ನೂ ಓದಿ: Ramachari: ಕುಡಿದ ನಶೆಯಲ್ಲಿ ಮದುವೆ ಆಗು ಎಂದು ಕೇಳಿದ ಚಾರು!

  ಇವರ ಜೊತೆ ಈ ಎಲ್ಲಾ ಸೆಲೆಬ್ರಿಟಿಗಳು ದೊಡ್ಮನೆ ಸೇರುತ್ತಾರೆ ಅಂತ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಸಿನಿಮಾದಿಂದ ದೂರ ಹೋಗಿರುವ ಪ್ರೇಮ ಬಿಗ್​ಬಾಸ್​ ಮನೆಗೆ ಬರುತ್ತಾರೆ ಅಂತ ಹೇಳಲಾಗುತ್ತಿದೆ.

  Bigg Boss Kannada season 9, Bigg boss Kannada season 9 contestants, Kiccha Sudeep Bigg boss, New Rules in Bigg Boss House, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಕಿಚ್ಚ ಸುದೀಪ್ ಬಿಗ್ ಬಾಸ್, ಬಿಗ್ ಬಾಸ್ ಮನೆಯಲ್ಲಿ ಹೊಸ ರೂಲ್ಸ್, ಹೊಸಬರ ಜೊತೆ ಹಳಬರು ಇರಲಿದ್ದಾರಂತೆ, Kannada news, Karnataka news,
  ದೀಪಿಕಾ ದಾಸ್


  ಸ್ಯಾಂಡಲ್​ವುಡ್​ ನಟ ಹಾಗೂ ನಿರ್ದೇಶಕ ನವೀನ್​ ಕೃಷ್ಣ ಕೂಡ ಈ ಬಾರಿ ಬಿಗ್​ಬಾಸ್​ ಮನೆಗೆ ಹೋಗಲಿದ್ದಾರಂತೆ. ಪ್ರತೀ ಸೀಸನ್​ ಬಂದಾಗಲೂ ಇವರ ಹೆಸರು ಚಾಲ್ತಿಯಲ್ಲಿರುತ್ತೆ.ಭಾರತ ತಂಡದ ಮಾಜಿ ಆಟಗಾರ ವಿನಯ್​ ಕುಮಾರ್​ ಕೂಡ ಬಿಗ್​ಬಾಸ್​ ಮನೆಗೆ ಬರಲಿದ್ದಾರಂತೆ.

  Bigg Boss Kannada season 9, Bigg boss Kannada season 9 contestants, Kiccha Sudeep Bigg boss, New Rules in Bigg Boss House, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಕಿಚ್ಚ ಸುದೀಪ್ ಬಿಗ್ ಬಾಸ್, ಬಿಗ್ ಬಾಸ್ ಮನೆಯಲ್ಲಿ ಹೊಸ ರೂಲ್ಸ್, ಹೊಸಬರ ಜೊತೆ ಹಳಬರು ಇರಲಿದ್ದಾರಂತೆ, Kannada news, Karnataka news,
  ಪ್ರಶಾಂತ್ ಸಂಬರ್ಗಿ


  ಇದು ನಿಜವಾದರೆ ಈ ಬಾರಿ ಬಿಗ್​ಬಾಸ್​ ಮತ್ತಷ್ಟು ಮಜಾ ಇರುತ್ತೆ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ. ಸ್ಯಾಂಡಲ್​ವುಡ್ ಹಿರಿಯ ನಟ ಟೆನ್ನಿಸ್​ ಕೃಷ್ಣ ಹೆಸರು ಈ ಹಿಂದಿನ ಸೀಸನ್​ಗಳು ಬಂದಾಗಲೂ ಕೇಳಿಬಂದಿತ್ತು. ಈ ಬಾರಿಯೂ ಅವರ ಹೆಸರು ಚಾಲ್ತಿಯಲ್ಲಿದೆ.
  Published by:Savitha Savitha
  First published: