Bigg Boss Season 9: ಬಿಗ್​ ಬಾಸ್ ಮನೆಯೊಳಗೆ ಇಬ್ಬಿಬ್ಬರು ಗುರೂಜಿ! ಇತರ ಸ್ಪರ್ಧಿಗಳ ಕಥೆ ಏನು?

ಬಿಗ್​ಬಾಸ್ ಮನೆಯೊಳಗೆ ಆರ್ಯವರ್ಧನ್ ಗುರೂಜಿ ಹಾಗೂ ಬ್ರಹ್ಮಾಂಡ ಗುರೂಜಿ ಅವರೂ ಸೇರಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಈಗ ವೈರಲ್ ಆಗಿದೆ. ಇಬ್ಬಿಬ್ಬರು ಗುರೂಜಿ ಒಂದೇ ಮನೆಯೊಳಗೆ ಹೇಗಿರಬಹುದು?

ಬಿಗ್​ಬಾಸ್ ಮನೆಯೊಳಗೆ ಆರ್ಯವರ್ಧನ್ ಗುರೂಜಿ ಹಾಗೂ ಬ್ರಹ್ಮಾಂಡ ಗುರೂಜಿ ಅವರೂ ಸೇರಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಈಗ ವೈರಲ್ ಆಗಿದೆ. ಇಬ್ಬಿಬ್ಬರು ಗುರೂಜಿ ಒಂದೇ ಮನೆಯೊಳಗೆ ಹೇಗಿರಬಹುದು?

ಬಿಗ್​ಬಾಸ್ ಮನೆಯೊಳಗೆ ಆರ್ಯವರ್ಧನ್ ಗುರೂಜಿ ಹಾಗೂ ಬ್ರಹ್ಮಾಂಡ ಗುರೂಜಿ ಅವರೂ ಸೇರಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಈಗ ವೈರಲ್ ಆಗಿದೆ. ಇಬ್ಬಿಬ್ಬರು ಗುರೂಜಿ ಒಂದೇ ಮನೆಯೊಳಗೆ ಹೇಗಿರಬಹುದು?

  • Share this:
ಬಿಗ್​ ಬಾಸ್ ಒಟಿಟಿಯಲ್ಲಿ ಆರ್ಯವರ್ಧನ್ ಗುರೂಜಿ (Aryavardhan Guruji) ಫುಲ್ ಫೇಮಸ್ ಆಗಿದ್ದಾರೆ. ಲೈಟ್ ಕಾಮೆಡಿ, ಇತರ ಸ್ಪರ್ಧಿಗಳೊಂದಿಗಿನ ಒಡನಾಟ, ಆಟ ಆಡುವ ಸ್ಪಿರಿಟ್ ಎಲ್ಲವೂ ರಾಜ್ಯದಲ್ಲಿ ಈಗ ಫೇಮಸ್ ಆಗಿದೆ. ಇದಾದ ನಂತರ ಈಗ ಬಿಗ್ ಬಾಸ್ ಸೀಸನ್ 9 ಕೂಡಾ ಶುರುವಾಗಲಿದ್ದು ಮನೆಯೊಳಗೆ ಇಬ್ಬರು ಗುರೂಜಿ ಸೇರಿಕೊಳ್ಳುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ. ಹೌದು ಬಿಗ್​ಬಾಸ್  (Bigg Boss)ಮನೆಯೊಳಗೆ ಆರ್ಯವರ್ಧನ್ ಗುರೂಜಿ (Aryavardhan Guruji) ಹಾಗೂ ಬ್ರಹ್ಮಾಂಡ ಗುರೂಜಿ (Brahmanda Guruji) ಅವರೂ ಸೇರಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಈಗ ವೈರಲ್  (Viral) ಆಗಿದೆ. ಇಬ್ಬಿಬ್ಬರು ಗುರೂಜಿ ಒಂದೇ ಮನೆಯೊಳಗೆ ಹೇಗಿರಬಹುದು? ಅವರ ನಡುವಿನ ಒಡನಾಟ ಹೇಗಿರಬಹುದು ಎಂಬೆಲ್ಲ ಕುತೂಹಲ ಶುರುವಾಗಿದೆ. ಬಿಗ್​ ಬಾಸ್ ಸೀಸನ್ 9 (Bigg Boss Season 9) ಶನಿವಾರ ಸೆಪ್ಟೆಂಬರ್ 23ರಂದು ಸಂಜೆ 6 ಗಂಟೆಗೆ ಆರಂಭವಾಗಲಿದ್ದು ಈಗಾಗಲೇ ಬಿಗ್​ ಬಾಸ್ ಒಟಿಟಿಯಿಂದ ಬಂದ 4 ಜನರು ದೊಡ್ಡಮನೆಗೂ ಪ್ರವೇಶ ಪಡೆಯಲಿದ್ದಾರೆ.


ಈಗಾಗಲೇ 4 ಸ್ಪರ್ಧಿಗಳು ಕನ್ಫರ್ಮ್ ಆಗಿದ್ದು ಬಿಗ್ ಬಾಸ್ ಕನ್ನಡ ಓಟಿಟಿ 1 ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ ಹಾಗೂ ಸಾನ್ಯ ಅಯ್ಯರ್ ನೇರವಾಗಿ ಮನೆಯೊಳಗೆ ಎಂಟ್ರಿ ಪಡೆದಿದ್ದಾರೆ.

ಒಟಿಟಿಯಲ್ಲಿ ಸೂಪರ್ ಪರ್ಫಾಮೆನ್ಸ್

ಆರ್ಯವರ್ಧನ್ ಗುರೂಜಿ ಬಿಗ್​ಬಾಸ್ ಒಟಿಟಿಯಲ್ಲಿ ಒಳ್ಳೆಯ ಪರ್ಫಾಮೆನ್ಸ್ ಕೊಟ್ಟಿದ್ದರು. ಮನೆಯೊಳಗೆ ತಿನ್ನುವುದಕ್ಕೆ ಏನಾದರೂ ಬೇಕು ಎಂದು ಸಮಸ್ಯೆ ಎದುರಿಸಿದ ಗುರೂಜಿ ಅದನ್ನು ಬಿಟ್ಟು ಮತ್ತೆಲ್ಲ ವಿಚಾರದಲ್ಲಿ ಆ್ಯಕ್ಟಿವ್ ಆಗಿದ್ದರು. ಸಹ ಸ್ಪರ್ಧಿಗಳೊಂದಿಗೂ ಫುಲ್ ಕಾಂಪಿಟೇಷನ್ ಕೊಟ್ಟು ಹೈಲೈಟ್ ಆಗಿದ್ದರು.

ಹೊಸಬರಿಗೆ ಹಳಬರ ಸಾಥ್​

ಈ ಬಾರಿ ಮನೆಯೊಳಗೆ ಕೆಲವು ಸೀನಿಯರ್ಸ್ ಕೂಡಾ ಜೂನಿಯರ್ಸ್ ಜೊತೆ ಸೇರಿ ಆಡಲಿದ್ದಾರೆ. ಹಾಗಾಗಿ ಹಳೆ ಸ್ಪರ್ಧಿಗಳನ್ನು ನಾವು ಮನೆಯೊಳಗೆ ಪಕ್ಕಾ ನಿರೀಕ್ಷಿಸಬಹುದು. ಬಿಗ್ ಬಾಸ್ ಕನ್ನಡ 1ಶೋನಲ್ಲಿ ಭಾಗವಹಿಸಿದ್ದ ಬ್ರಹ್ಮಾಂಡ ಗುರೂಜಿ ಈ ಬಾರಿ ಆರ್ಯವರ್ಧನ್ ಅವರ ಜೊತೆ ಮನೆ ಪ್ರವೇಶಿಸುವ ನಿರೀಕ್ಷೆ ಇದೆ. ತಮ್ಮದೇ ಸ್ಟೈಲ್‌ನಲ್ಲಿ ಜ್ಯೋತಿಷ್ಯ, ಭವಿಷ್ಯ ಹೇಳುವ ಬ್ರಹ್ಮಾಂಡ ಗುರೂಜಿ ಫೇಮಸ್. ಈಗ ಮತ್ತೊಮ್ಮೆ ಫೇಮಸ್ ಆಗುವ ಎಲ್ಲಾ ಸೂಚನೆ ಸಿಗುತ್ತಿದೆ.

ಇದನ್ನೂ ಓದಿ: Bigg Boss Season 9: ಯಕ್ಷಗಾನ, ಚೆಂಡೆಮೇಳ! ಅದ್ಧೂರಿಯಾಗಿರಲಿದೆ ಬಿಗ್​ ಬಾಸ್ ಆರಂಭ

ಆರ್ಯವರ್ಧನ್ ಅವರು ಹಲವು ವಿಚಾರಗಳಲ್ಲಿ ಹೆಚ್ಚು ಚರ್ಚೆಯಲ್ಲಿದ್ದಾರೆ. ತಾವು ನಿಜ ಜೀವನದಲ್ಲಿ ದೆವ್ವ ನೋಡಿರುವ ಬಗ್ಗೆ ಅವರು ಹೇಳಿದ್ದರು. ಜತೆಗೆ ಅವರ ಆಸ್ತಿ ಮೌಲ್ಯ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದರು. ಹಾಸನ ಮತ್ತು ಬೇಲೂರು ಮಧ್ಯೆ ನಮ್ಮದು 40 ಎಕರೆ ಜಮೀನು ಇದೆ.

ಸುತ್ತಲೂ ಕಾಡು-ಬೆಟ್ಟ ಇದೆ. ಮೂರು ಕೆರೆ ಇದೆ. ಸುತ್ತ ಮುತ್ತ ಯಾವುದೇ ಮನೆ ಇಲ್ಲ. ಇಂದು ಎಲ್ಲರೂ ಸಿಟಿಯಲ್ಲಿ ದುಡ್ಡು ಸಂಪಾದನೆ ಮಾಡಿ ಹಳ್ಳಿಗೆ ಹೋಗುತ್ತಾರೆ. ಆದರೆ ನಾವು ಹಳ್ಳಿಯಲ್ಲಿ ಇದ್ದು ಬೆಂಗಳೂರಿಗೆ ಬಂದವರು. ನಮಗೆ ಹಳ್ಳಿ ಎಂದರೆ ಬೋರು. ಸಾಕಷ್ಟು ಜಮೀನು ನಮಗೆ ಇದೆ. ನಾನು ಸುಳ್ಳು ಹೇಳಲ್ಲ. ನಮ್ಮ ಅಜ್ಜನ ಆಸ್ತಿ ಏನಿಲ್ಲವೆಂದರೂ 5 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ಆರ್ಯವರ್ಧನ್​ ಗುರೂಜಿ ಹೇಳಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ.

ಇದನ್ನೂ ಓದಿ: Bigg Boss Season 9: ಬಿಗ್​ ಬಾಸ್​ ಮನೆ ಸೇರಲಿರೋ ಸ್ಪರ್ಧಿಗಳು ಇವರೇ, ಹಳಬರ ಜೊತೆ ಹೊಸಬರ ಆಟ!

ಐಪಿಎಲ್​ ಭವಿಷ್ಯದ ಮೂಲಕ ಗುರೂಜಿ ಟ್ರೋಲ್​

ಕಳೆದ ಬಾರಿಯ ಐಪಿಎಲ್ ಸಮಯದಲ್ಲಿ ಇವರು ಹೇಳಿತ್ತಿದ್ದ ಭವಿಷ್ಯ ಬಹಳಷ್ಟು ಸದ್ದು ಮಾಡಿತ್ತು. ಏಕೆಂದರೆ ತಮ್ಮ ಸಂಖ್ಯಾಶಾಸ್ತ್ರದ ಮೂಲಕವೇ ಯಾವ ತಂಡ ಪಂದ್ಯ ಗೆಲ್ಲಲಿದೆ ಯಾವ ಆಟಗಾರರು ಅಂದು ಚೆನ್ನಾಗಿ ಆಡಲಿದ್ದಾನೆ ಎನ್ನುವ ಬಗ್ಗೆ ಭವಿಷ್ಯ ನುಡಿಯುತ್ತಿದ್ದರು.
Published by:Divya D
First published: