Bigg Boss Season 9: ಯಕ್ಷಗಾನ, ಚೆಂಡೆಮೇಳ! ಅದ್ಧೂರಿಯಾಗಿರಲಿದೆ ಬಿಗ್​ ಬಾಸ್ ಆರಂಭ

Bigg Boss Season 9: ಬಿಗ್​​ ಬಾಸ್ ಸೀಸನ್ 9ರ ಪ್ರೋಮೋ ಕಲರ್ಸ್​ ಇನ್​ಸ್ಟಾಗ್ರಾಮ್ ಪೇಜ್​​ನಲ್ಲಿ ಕೈಬಿಡಲಾಗಿದೆ. ವಿಶೇಷ ಎಂದರೆ ಸುಂದರವಾದ ಬಣ್ಣದ ವೇಷ, ಕಲೆ, ಚೆಂಡೆ ಮೇಳ ಸೇರಿದ ಅದ್ಧೂರಿ ಆರಂಭವನ್ನು ಕನ್ನಡಿಗರನ್ನು ವೀಕ್ಷಿಸಲಿದ್ದಾರೆ.

ಬಿಗ್​ ಬಾಸ್ ಸೀಸನ್ 9

ಬಿಗ್​ ಬಾಸ್ ಸೀಸನ್ 9

  • Share this:
ಬಿಗ್ ಬಾಸ್ ಸೀಸನ್ 9ರ (Bigg Boss Season 9) ಪ್ರೋಮೋ (Promo) ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಅದ್ಧೂರಿ ಕಾರ್ಯಕ್ರಮದ ಒಂದು ಕಿರುನೋಟ ಲಭ್ಯವಾಗಿದೆ. ಹೌದು ಬಹಳಷ್ಟು ಅದ್ಧೂರಿತನ, ಗ್ರ್ಯಾಂಡ್ ಆಗಿ ನಡೆಯಲಿರುವ ಕನ್ನಡ ಬಿಗ್​ಬಾಸ್ ಸೀಸನ್ 9ರ ಪ್ರೋಮಗಳನ್ನು ಈಗಾಗಲೇ ಬಿಡಲಾಗಿದ್ದು ಇವು ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗಿದೆ. ಇತ್ತೀಚೆಗೆ ಇನ್ನೊಂದು ಪ್ರೋಮೋ ಶೇರ್ ಮಾಡಲಾಗಿದ್ದು ಇದರಲ್ಲಿ ಕಾರ್ಯಕ್ರಮದ ಸಂಪೂರ್ಣ ವೈಭದ ಕ್ವಿಕ್ ಆದ ದೃಶ್ಯ ನೀವು ಕಾಣಬಹುದು. ಡ್ಯಾನ್ಸ್, ಮಾತು, ಮನರಂಜನೆ, ಫನ್, ನಗು, ತಮಾಷೆ ಎಲ್ಲವೂ ಒಳಗೊಂಡಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಸ್ಟೈಲಿಷ್ ಲುಕ್ (Stylish Look) ಕೂಡಾ ನೀವು ಕಾಣಬಹುದು. ಅದೇ ರೀತಿಯಾಗಿ ಪ್ರೋಮೋದಲ್ಲಿ ನಮ್ಮ ನೆಲದ ಕಲೆಗಳನ್ನು ಕೂಡಾ ವೇದಿಕೆಯಲ್ಲಿ ತೋರಿಸಲಾಗಿದ್ದು, ಚೆಂಡೆ ಮೇಳವನ್ನು ಕೂಡಾ ಕಾಣಬಹುದು.

ಅರವಿಂದ್ ಸ್ಪೆಷಲ್ ಎಂಟ್ರಿ, ಸಖತ್ ಡ್ಯಾನ್ಸ್

ಕಳೆದ ಸೀಸನ್​​ನಲ್ಲಿ ಮಿಂಚಿದ್ದ ಕರಾವಳಿ ಯುವಕ ಅರವಿಂದ್ ಈ ಬಾರಿ ಕಾರ್ಯಕ್ರಮದ ಆರಂಭದಲ್ಲಿ ಬೈಕ್​ನಲ್ಲಿ ಸ್ಟೈಲಾಗಿ ಬಂದು ಶೈನ್ ಆಗಿದ್ದಾರೆ. ಅದೇ ರೀತಿ ಅರವಿಂದ್ ಅವರ ಡ್ಯಾನ್ಸ್ ಕೂಡಾ ಈ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿರಲಿದೆ.






ವೀಕ್ಷಕರು ಖುಷ್

ಪ್ರೋಮೋ ಶೇರ್ ಮಾಡಿದ ಒಂದು ಗಂಟೆಯೊಳಗಾಗಿ ಇದು ಸುಮಾರು 181 ಸಾವಿರ ವ್ಯೂಸ್ ಗಳಿಸಿದ್ದು 619ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ. ಬಹಳಷ್ಟು ಜನರು ಅರವಿಂದ್ ಅವರ ವಿಶೇಷ ಡ್ಯಾನ್ಸ್ ನೋಡೋಕೆ ಕಾಯುತ್ತಿರುವುದಾಗಿ ಕಮೆಂಟ್​​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Bigg Boss Season 9: ಬಿಗ್​ಬಾಸ್ ಮನೆ ರೆಡಿ, ಹೀಗಿದೆ ನೋಡಿ ಒಳಗಿನ ನೋಟ!

5 ಹಳೆಯ ಸ್ಪರ್ಧಿಗಳು

ಈ ಬಾರಿಯ ಬಿಗ್ ಬಾಸ್ 9ರ ಸೀಸನ್‍ಗೆ ಹಳೆಯ 5 ಸ್ಪರ್ಧಿಗಳು ಬರಲಿದ್ದಾರಂತೆ. ಇದು ಬಿಗ್ ಬಾಸ್ ನಿರ್ಮಾಪಕರ ಹೊಸ ಥೀಮ್ ಆಗಿದೆ. ವಿವಾದಾತ್ಮಕ ಸ್ಪರ್ಧಿಗಳನ್ನು ಮರಳಿ ಈ ಸೀಸನ್‍ಗೆ ಕರೆತರುತ್ತಿದ್ದಾರೆ. ಈಗಾಗಲೇ ಅನುಪಮಾ ಗೌಡ, ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ ಪ್ರೋಮೋ ಬಿಟ್ಟಿದ್ದಾರೆ.

ಪ್ರೇಕ್ಷಕರ ವಿಭಾಗದಲ್ಲಿ ಆಯ್ಕೆ

ಕಲರ್ಸ್ ಕನ್ನಡ ಟ್ವಿಟರ್ ಪುಟದಲ್ಲಿ, ಪ್ರೇಕ್ಷಕರ ಒಂದು ವಿಭಾಗ ಮಾಡಲಾಗಿದೆ. ಅದರಲ್ಲಿ ಸ್ಪರ್ಧಿಗಳ ಆಯ್ಕೆಯ ಕುರಿತು ತಯಾರಕರಿಗೆ ಸಲಹೆಗಳನ್ನು ನೀಡುತ್ತಿದೆ. ಪ್ರೇಕ್ಷಕರು ಹೇಳಿದ ಸ್ಪರ್ಧಿಗಳು ಹಸ ಈ ಬಾರಿ ಬಿಗ್ ಬಾಸ್ ಸೀಸನ್ 9 ರಲ್ಲಿ ಇರಲಿದ್ದಾರೆ.

ಇದನ್ನೂ ಓದಿ: Bigg Boss Season 9: ಕೆಂಡಸಂಪಿಗೆಯಲ್ಲಿ ರಾಜೇಶ್ ಸಾವು, ಬಿಗ್ ಬಾಸ್​ ಮನೆಗೆ 'ಶನಿ' ಖ್ಯಾತಿಯ ಸುನೀಲ್ ಎಂಟ್ರಿ?

ನಿಯಮ ಉಲ್ಲಂಘಿಸಿದವರಿಗೆ ವಿಭಿನ್ನ ಶಿಕ್ಷೆ

ಬಿಗ್ ಬಾಸ್‍ನಲ್ಲಿ ನಿಯಮಗಳನ್ನು ಮಾಡಿರುತ್ತಾರೆ. ಅವನ್ನು ಯಾರೂ ಉಲ್ಲಂಘಿಸುವಂತಿಲ್ಲ. ಒಂದು ವೇಳೆ ಉಲ್ಲಂಘಿಸಿದ್ರೆ, ಅವರಿಗೆ ಶಿಕ್ಷೆ ನೀಡಲಾಗುತ್ತೆ. ಈ ಬಾರಿ ಶಿಕ್ಷೆಯೂ ಸಹ ವಿಭಿನ್ನವಾಗಿರಲಿದೆಯಂತೆ. ಕಲರ್ಸ್ ಕನ್ನಡ ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧವಾಗಿದೆಯಂತೆ.

ಕಠಿಣ ಟಾಸ್ಕ್

ಬಿಗ್ ಬಾಸ್ ಸೀಸನ್ 9ರಲ್ಲಿ ಹಳೇ ಸೀಸನ್‍ಗಳಿಗಿಂದ ವಿಭಿನ್ನ ಮತ್ತು ಕಷ್ಟಕರ ಟಾಸ್ಕ್‍ಗಳು ಇರಲಿವೆಯಂತೆ. ಈಗಾಗಲೇ OTT ಯಿಂದ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್ ಮತ್ತು ಆರ್ಯವರ್ಧನ್ ಗುರೂಜಿ ಪ್ರವೇಶವನ್ನು ಪಡೆದಿದ್ದಾರೆ.
Published by:Divya D
First published: