• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Shashi Kumar: ಮಾರ್ಡನ್ ರೈತ ಶಶಿಕುಮಾರ್‌ಗೆ ಕಂಕಣ ಭಾಗ್ಯ, ಬಿಗ್ ಬಾಸ್‌ ವಿನ್ನರ್‌ ಕೈ ಹಿಡಿಯುವ ಹುಡುಗಿ ಯಾರು?

Shashi Kumar: ಮಾರ್ಡನ್ ರೈತ ಶಶಿಕುಮಾರ್‌ಗೆ ಕಂಕಣ ಭಾಗ್ಯ, ಬಿಗ್ ಬಾಸ್‌ ವಿನ್ನರ್‌ ಕೈ ಹಿಡಿಯುವ ಹುಡುಗಿ ಯಾರು?

ಶಶಿ ಕುಮಾರ್

ಶಶಿ ಕುಮಾರ್

Bigg Boss Season 6: ಕೃಷಿಯಲ್ಲಿ ಪದವಿ ಪಡೆದಿರುವ ಶಶಿಕುಮಾರ್​ ರೈತ ಎಂಬ ಮಾನದಂಡದ ಮೇಲೆಯೇ ಬಿಗ್​ಬಾಸ್​ಗೆ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದರು. ಶೋನಿಂದ ಹೊರ ಬಂದ ಮೇಲೆ ರೈತನಾಗಿ ಮುಂದುವರೆಯುತ್ತೇನೆ ಎಂದಿದ್ದರು.  

  • Share this:

 ಬಿಗ್ ಬಾಸ್ (Bigg boss) ರಿಯಾಲಿಟಿ ಶೋ (Reality Show) ಎಂದರೆ ಜನರಿಗೆ ಬಹಳ ಇಷ್ಟ. ಈ ಶೋ ಜನರಿಗೆ ಮನರಂಜನೆ ನೀಡುವುದು ಮಾತ್ರವಲ್ಲದೇ, ಇದರಲ್ಲಿ ಭಾಗವಹಿಸಿರುವವರ ಜೀವನವನ್ನು ಸಹ ಬದಲಾಯಿಸಿದೆ ಎಂದರೆ ತಪ್ಪಲ್ಲ. ಹಲವಾರು ಸ್ಪರ್ಧಿಗಳಿಗೆ ಈ ಶೋ ಮೂಲಕ ಲೈಮ್​ ಲೈಟ್​ ಸಿಕ್ಕಿದ್ದು ಅವಕಾಶಗಳು ಸಹ ಹೆಚ್ಚು ಲಭಿಸಿದೆ. ಉದಾಹರಣೆಗೆ ನಿವೇದಿತಾ ಗೌಡ (Niveditha Gowda) ಬಿಗ್​ಬಾಸ್​ ಶೋ ನಂತರ ಬಹಳ ಫೇಮಸ್​ ಆಗಿದ್ದಾರೆ. ಹಾಗೆಯೇ ಪ್ರಸಿದ್ದತೆ ಪಡೆದವರು ಬಿಗ್ ಬಾಸ್ ಕನ್ನಡ ಸೀಸನ್ 6ನ ವಿಜೇತ ಶಶಿ ಕುಮಾರ್ (Shashi Kumar)​.  


ಮದುವೆಯಾಗುತ್ತಿದ್ದಾರೆ ಶಶಿ ಕುಮಾರ್


ಮಾರ್ಡನ್ ರೈತ ಎಂದು ಪ್ರಸಿದ್ದಿ ಪಡೆದಿದ್ದ ಈ ಶಶಿ ಕುಮಾರ್ ಸ್ಪರ್ಧೆಯ ನಂತರ ಬಹಳ ಸುದ್ದಿಯಲ್ಲಿದ್ದರು. ಆದರೆ ನಂತರ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಂತರ ಒಂದು ಸಿನಿಮಾ ಮಾಡುತ್ತಿದ್ದ ಬಗ್ಗೆ ಸಹ ವಿಚಾರ ಕೇಳಿ ಬಂದಿತ್ತು. ಆದರೆ ನಂತರ ಆ ಬಗ್ಗೆ ಸಹ ಮಾಹಿತಿ ಇಲ್ಲ. ಆದರೆ ಸದ್ಯಕ್ಕೆ ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಅದು ಅವರ ಮದುವೆಯ ಸುದ್ದಿ.


ಹೌದು, ಶಶಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ಸದ್ಯದಲ್ಲೇ ಶಶಿ ಕುಮಾರ್ ಅವರು ಮದುವೆಯಾಗಲಿದ್ದಾರೆ. ಮುಂದಿನ ತಿಂಗಳು ಅಂದರೆ ಆಗಸ್ಟ್ 6 ಮತ್ತು 7 ರಂದು ಶಶಿ ಕುಮಾರ್ ಮದುವೆ ನಡೆಯಲಿದೆ ಎಂಬ ಮಾಹಿತಿ ತಿಳಿದು ಬಂದಿದ್ದು, ಈ ಬಗ್ಗೆ ಶಶಿ ಕುಮಾರ್ ಅಧಿಕೃತವಾಗಿ ಹೇಳಬೇಕಿದೆ.  ಇನ್ನು ಸದ್ಯ ಲಭಿಸಿರುವ ಮಾಹಿತಿ ಪ್ರಕಾರ ದೊಡ್ಡಬಳ್ಳಾಪುರ ಮೂಲದ ಸ್ವಾತಿ ಎನ್ನುವವರನ್ನು ಶಶಿ ಕುಮಾರ್ ಮದುವೆಯಾಗಲಿದ್ದಾರೆ.


ಇದನ್ನೂ ಓದಿ: ರಣವೀರ್ ಸಿಂಗ್ ಓಕೆ ಅಂದ್ರೆ ನಾನ್​ ರೆಡಿ ಅಂದ ಉರ್ಫಿ ಜಾವೇದ್​, ನಾಚಿ ನೀರಾದ ಫ್ಯಾಷನ್​ ಕ್ವೀನ್!
ಕೃಷಿಯಲ್ಲಿ ಪದವಿ ಪಡೆದಿರುವ ಶಶಿಕುಮಾರ್​ ರೈತ ಎಂಬ ಮಾನದಂಡದ ಮೇಲೆಯೇ ಬಿಗ್​ಬಾಸ್​ಗೆ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದರು. ಶೋನಿಂದ ಹೊರ ಬಂದ ಮೇಲೆ ರೈತನಾಗಿ ಮುಂದುವರೆಯುತ್ತೇನೆ ಎಂದಿದ್ದರು.  ಶಶಿ ಕುಮಾರ್​ ತಾನೋರ್ವ ಪಕ್ಕಾ ರೈತ ಎಂದು ಕಾರ್ಯಕ್ರಮದುದ್ದಕ್ಕೂ ಹೇಳಿಕೊಂಡು ಬಂದಿದ್ದರು. ‘ಬಿಗ್​ ಬಾಸ್​’ ಮನೆಯಲ್ಲಿ ನಾನು ರೈತ. ನಾನು ಮಣ್ಣಿನ ಮಗ. ಮಣ್ಣಿನ ಮಗನಾಗಿಯೇ ಮುಂದುವರಿಯುತ್ತೇನೆ ಎಂದು ಹೇಳಿದ್ದರು. ಈ ವಿಚಾರಕ್ಕೆ ಅನೇಕರು ಶಶಿಯನ್ನು ಬೆಂಬಲಿಸಿದ್ದರು. ಅವರ ಈ ಮಾತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.


ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ ನಟ


ಇನ್ನು ಶಶಿ ಕುಮಾರ್ ಅವರು ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರು. ಬೆಂಗಳೂರಿನ ಜಿಕೆವಿಕೆ ಕೃಷಿ ವಿದ್ಯಾಲಯದಲ್ಲಿ ಶಶಿ ಕುಮಾರ್ ಪದವಿ ಪಡೆದಿದ್ದು, ಕೃಷಿಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸುವ ಬಗ್ಗೆ ಚಿಂತನೆ ಮಾಡುತ್ತಿರುತ್ತಾರೆ. ಅವರು ವಿನೂತನ ಪ್ರಯೋಗಗಳ ಮೂಲಕ ಕೃಷಿ ಮಾಡುವ ಬಗ್ಗೆ  ಯಾವಾಗಲೂ ಯೋಚಿಸುತ್ತಿದ್ದರು.


ಇದನ್ನೂ ಓದಿ: ಅಭಿಮಾನಿಗಳ ಮನದಲ್ಲಿ ರಾಜರತ್ನ ಅಜರಾಮರ, ಜಾತ್ರೆಯಲ್ಲೂ ಮಿಂಚಿದ ಪುನೀತ್ ರಾಜ್​ಕುಮಾರ್ ಫೋಟೋ


ಹಾಗೆಯೇ ಸದ್ಯ ಅವರು ಸಿನಿಮಾಗಳಲ್ಲಿ ಸಹ ಬ್ಯುಸಿ ಇದ್ದಾರೆ.  ಶುಗರ್ ಫ್ಯಾಕ್ಟರಿ’ ಹಾಗೂ ‘ಮೆಹಬೂಬ’ ಸಿನಿಮಾಗಳಲ್ಲಿ ಶಶಿ ನಟಿಸುತ್ತಿದ್ದು, ಅದಕ್ಕಾಗಿ ಸಖತ್ ತಯಾರಿ ಮಾಡಿಕೊಂಡಿದ್ದು, ಸಿಕ್ಸ್​ ಪ್ಯಾಕ್​ ಸನ್ನು ಮಾಡಿಕೊಂಡಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಇರುವ ಶಶಿ ಆಗಾಗ ಅಭಿಮಾನಿಗಳ ಜೊತೆ ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು